ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Air Show: ನಾಳೆಯಿಂದ ಏರ್ ಶೋ-2025′ ಆರಂಭ ; ಟಿಕೆಟ್ ಬುಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ಫೆಬ್ರವರಿ 10ರಿಂದ 14 ರವರೆಗೆ ಬೆಂಗಳೂರಿನಲ್ಲಿ ಏರ್ ಶೋ ಕಾರ್ಯಕ್ರಮ ನಡೆಯಲಿದೆ.ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ. ಬೆಂಗಳೂರಿನಲ್ಲಿ ನಡೆಯುವ ಏರ್‌ ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಏರ್‌ ಶೋಗಾಗಿ ಟಿಕೆಟ್‌ ಬುಕ್‌ ಮಾಡುವುದು ಹೇಗೆ? ದರ ಎಷ್ಟು ಎಂಬ ಸಂಪೂರ್ಣ ಮಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ  ನಾಳೆಯಿಂದ ಏರ್ ಶೋ-2025′ ಆರಂಭ

Air Show

Profile Vishakha Bhat Feb 9, 2025 1:47 PM

ಬೆಂಗಳೂರು: ಫೆಬ್ರವರಿ 10ರಿಂದ 14 ರವರೆಗೆ ಬೆಂಗಳೂರಿನಲ್ಲಿ ಏರ್ ಶೋ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಎಲ್ಲ ತರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಏರ್‌ ಶೋ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಬೆಂಗಳೂರಿನ ಯಲಹಂಕದಲ್ಲಿ ಇದು ಇರಲಿದ್ದು, ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ. ಬೆಂಗಳೂರಿನಲ್ಲಿ ನಡೆಯುವ ಏರ್‌ ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಏರ್‌ ಶೋ ಪ್ರದರ್ಶನವನ್ನು ವೀಕ್ಷಿಸಲು ದೇಶ-ವಿದೇಶದ ಸಾವಿರಾರು ಜನರು ಆಗಮಿಸುತ್ತಾರೆ. ಏರ್‌ ಶೋಗಾಗಿ ಟಿಕೆಟ್‌ ಬುಕ್‌ ಮಾಡುವುದು ಹೇಗೆ? ದರ ಎಷ್ಟು ಎಂಬ ಸಂಪೂರ್ಣ ಮಹಿತಿ ಇಲ್ಲಿದೆ.

ಟಿಕೆಟ್‌ ದರ ಎಷ್ಟು?

ಏರ್‌ ಶೋಗೆ ಟಿಕೆಟ್‌ ದರವನ್ನು ನಿಗದಿ ಪಡಿಸಲಾಗಿದ್ದು, ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ 50 ಯುಎಸ್ ಡಾಲರ್ (4,389 ರೂ) ಇರಲಿದೆ. ಈ ಟಿಕೆಟ್‌ಗಳು ಏರೋ ಇಂಡಿಯಾದ ವೆಬ್‌ಸೈಟ್‌ಗಳಲ್ಲಿ ದೊರೆಯಲಿದ್ದು, aeroindia.gov.in ಅನ್ನು ಓಪನ್ ಮಾಡಬೇಕು. ನಂತರ ವೆಬ್‌ಸೈಟ್‌ನ ಹೋಮ್‌ ಪೇಜ್‌ನಲ್ಲಿ ಟಿಕೆಟ್ಸ್ ಅಂತ ಕಾಣಿಸುತ್ತೆ. ಅಲ್ಲಿ ವಿಸಿಟರ್ಸ್ ರಿಜಿಸ್ಟ್ರೇಶನ್‌ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು. ಯಾವ ಪಾಸ್‌ ಬೇಕು ಎಂದು ಆಯ್ಕೆ ಮಾಡಬೇಕು. ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್, ಅಗತ್ಯ ವಿವರಗಳನ್ನು ಆ್ಯಡ್ ಮಾಡಬೇಕು. ಬಳಿಕ ಹಣ ಪಾವತಿ ಮಾಡಿ. ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್‌ ಮಾಡಿದ್ರೆ ಟಿಕೆಟ್ ಬುಕ್ ಆಗಲಿದೆ.

ಏರ್ ಶೋ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಫೆ. 10 ರ ಬೆಳಗ್ಗೆ 5 ರಿಂದ ಫೆ.14 ರ ರಾತ್ರಿ 10 ರವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ನಗರದ ನಿಟ್ಟೆ ಮೀನಾಕ್ಷಿ ಕಾಲೇಜ್‌ ರಸ್ತೆ ಹಾಗೂ ಬಾಗಲೂರು ಮುಖ್ಯ ರಸ್ತೆಯನ್ನು ಏಕಮುಖ ರಸ್ತೆಯಾಗಿ ಬದಲಾವಣೆ ಮಾಡಲಾಗಿದೆ. ಜಿಕೆವಿಕೆ ಕ್ಯಾಂಪಸ್‌ನಲ್ಲಿ ಸಾರ್ವಜನಿಕರಿಗೆ ಉಚಿತ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಪಾರ್ಕಿಂಗ್‌ ಸ್ಥಳದಿಂದ ಬಸ್‌ ವ್ಯವಸ್ಥೆ ಕೂಡ ಇರಲಿದೆ.

ಈ ಸುದ್ದಿಯನ್ನೂ ಓದಿ: Aeroindia 2025: ಏರ್‌ ಶೋ ಹಿನ್ನೆಲೆ ಈ ದಿನಗಳಲ್ಲಿ ಬೆಂಗಳೂರು ಏರ್‌ಪೋರ್ಟ್‌ ವಿಮಾನ ಹಾರಾಟದಲ್ಲಿ ವ್ಯತ್ಯಯ

ಬೆಂಗಳೂರು ಪೂರ್ವ ದಿಕ್ಕಿನಿಂದ ಬರುವ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಮಾಹಿತಿ ನೀಡಿದ್ದು, ಕೆಆರ್ ಪುರ, ಬಾಗಲೂರು, ಹೆಣ್ಣೂರು ಕ್ರಾಸ್, ಕೊತ್ತನೂರು, ಕಣ್ಣೂರು, ಆರ್. ಪಾಳ್ಯ, ವಿದ್ಯಾನಗರ ಕ್ರಾಸ್, ಹುಣಸಮಾರನಹಳ್ಳಿ, ಗುಬ್ಬಿ ಕ್ಲಾಸ್, ಕಣ್ಣೂರು, ಆರ್ ಪಾಳ್ಯ ವಿದ್ಯಾನಗರ ಕ್ರಾಸ್, ಹುಣಸಮಾರನಹಳ್ಳಿ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವವರಿಗೆ ಗೊರಗುಂಟೆ ಪಾಳ್ಯ, ಉನ್ನಿನ್ ಕೃಷ್ಣನ್ ರಸ್ತೆ, ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಎಂ ಎಸ್ ಪಾಳ್ಯ ಸರ್ಕಲ್, ಮದರ್ ಡೈರಿ, ದೊಡ್ಡಬಳ್ಳಾಪುರ ರಸ್ತೆ, ನಾಗೇನಹಳ್ಳಿ ಗೇಟ್ ಮೂಲಕ ಗಂಟೆಗಾನಹಳ್ಳಿ ಸರ್ಕಲ್ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.