ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

VTU: ಗೇಟ್‌ಪಾಸ್ ವಿರೋಧಿಸಿ ದಿಢೀರ್ ಪ್ರತಿಭಟನೆಗಿಳಿದ ವಿಟಿಯು ವಿದ್ಯಾರ್ಥಿಗಳು

ತಾಲೂಕಿನ ಮುದ್ದೇನಹಳ್ಳಿ ಸಮೀಪವಿರುವ ವಿಟಿಯು ಕ್ಯಾಂಪಸ್‌ನಲ್ಲಿ ಯು.ಜಿ.ಸಿಇಟಿ ಮಂಥನ್ ಕಾರ್ಯಗಾರ ನಡೆಯುತ್ತಿರುವ ಹೊತ್ತಿನಲ್ಲಿಯೇ ಈ ಪ್ರತಿಭಟನೆ ನಡೆಸಿರುವುದು ಹಲವು ಚರ್ಚೆಗಳಿಗೆ ಆಸ್ಪದ ನೀಡಿದೆ. ವಿಟಿಯು ಕೇಂದ್ರದ ಕೋಆರ್ಡಿನೇಟರ್ ಡಾ. ರಂಗಪ್ಪ ಅವರ ಶಿಸ್ತು ಸಂಯಮದ ವಿರುದ್ಧ ವಿದ್ಯಾರ್ಥಿಗಳು ತಿರುಗಿ ಬಿದ್ದ ಪರಿಣಾಮವೇ ದಿಢೀರ್ ಪ್ರತಿಭಟನೆಗೆ ಕಾರಣ ಎನ್ನಲಾಗಿದೆ.

ಪೊಲೀಸರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯ ನಂತರ ಪ್ರತಿಭಟನೆ ವಾಪಸ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುದ್ದೇನಹಳ್ಳಿ ಕ್ಯಾಂಪಸ್‌ನ ವಿದ್ಯಾರ್ಥಿಗಳು ಗೇಟ್‌ಪಾಸ್ ನಿಯಮ ವಿರೋಧಿಸಿ ವಿಶ್ವವಿದ್ಯಾಲಯದ ಪ್ರಧಾನ ಬಾಗಿಲಿಗೆ ಬೀಜ ಜಡಿದು ವಾಹನಗಳು ಮತ್ತು ವಿದ್ಯಾರ್ಥಿಗಳನ್ನು ತಡೆದು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಗಮನ ಸೆಳೆದರು. -

Profile
Ashok Nayak May 27, 2026 9:44 PM

ಚಿಕ್ಕಬಳ್ಳಾಪುರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(VTU)ದ ಮುದ್ದೇನಹಳ್ಳಿ ಕ್ಯಾಂಪಸ್‌ನ ವಿದ್ಯಾರ್ಥಿಗಳು ಗೇಟ್‌ಪಾಸ್ ನಿಯಮ ವಿರೋಧಿಸಿ ವಿಶ್ವವಿದ್ಯಾಲಯದ ಪ್ರಧಾನ ಬಾಗಿಲಿಗೆ ಬೀಜ ಜಡಿದು ವಾಹನಗಳು ಮತ್ತು ವಿದ್ಯಾರ್ಥಿಗಳನ್ನು ತಡೆದು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ತಾಲೂಕಿನ ಮುದ್ದೇನಹಳ್ಳಿ ಸಮೀಪವಿರುವ ವಿಟಿಯು ಕ್ಯಾಂಪಸ್‌ನಲ್ಲಿ ಯು.ಜಿ.ಸಿಇಟಿ ಮಂಥನ್ ಕಾರ್ಯಗಾರ ನಡೆಯುತ್ತಿರುವ ಹೊತ್ತಿನಲ್ಲಿಯೇ ಈ ಪ್ರತಿಭಟನೆ ನಡೆಸಿರುವುದು ಹಲವು ಚರ್ಚೆಗಳಿಗೆ ಆಸ್ಪದ ನೀಡಿದೆ. ವಿಟಿಯು ಕೇಂದ್ರದ ಕೋಆರ್ಡಿನೇಟರ್ ಡಾ. ರಂಗಪ್ಪ ಅವರ ಶಿಸ್ತು ಸಂಯಮದ ವಿರುದ್ಧ ವಿದ್ಯಾರ್ಥಿಗಳು ತಿರುಗಿ ಬಿದ್ದ ಪರಿಣಾಮವೇ ದಿಢೀರ್ ಪ್ರತಿಭಟನೆಗೆ ಕಾರಣ ಎನ್ನಲಾಗಿದೆ.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿರುವ ಡಾ.ರಂಗಪ್ಪ ನಮ್ಮಲ್ಲಿ 1400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.ನಮ್ಮ ಕ್ಯಾಂಪಸ್ಸಿನಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ತರಗತಿಗಳು ನಡೆಯುವುದರಿಂದ ಈ ಅವಧಿಯಲ್ಲಿ ಕ್ಯಾಂಪಸ್‌ ನಲ್ಲಿಯೇ ವಿದ್ಯಾರ್ಥಿಗಳು ಉಳಿಯಲಿ ಎಂದು ಗೇಟ್ ಪಾಸ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರ ಮಹತ್ವವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಕೆಲ ವಿದ್ಯಾರ್ಥಿ ಗಳು ಇದನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಎಲ್ಲವನ್ನೂ ಸರಿ ಮಾಡಲಾಗು ವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Chikkaballapur News: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಎಸ್‌ಐಆರ್ ವಿರೋಧಿಸಿ ಮೆ.30ಕ್ಕೆ ಬೃಹತ್ ಪ್ರತಿಭಟನೆ : ಎದ್ದೇಳು ಕರ್ನಾಟಕದ ಶ್ರೀರಂಗಾಚಾರಿ

ಆದರೆ ಪ್ರತಿಭಟನೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳು ಹೇಳುವುದೇನೆಂದರೆ ಬೆಳಗ್ಗೆ 9 ರಿಂದ ಸಂಜೆ 4ರ ತನಕ ಕ್ಯಾಂಪಸ್‌ನಲ್ಲಿಯೇ ಇರಬೇಕು ಎನ್ನುವುದು ಎಷ್ಟು ಸರಿಯಲ್ಲ.ಮದ್ಯಾಹ್ನ ಊಟದ ಸಮಯ ದಲ್ಲಿ ಕ್ಯಾಂಪಸ್ ಪಕ್ಕದಲ್ಲಿಯೇ ಉಚಿತ ಊಟದ ವ್ಯವಸ್ಥೆಯಿದೆ.ಅಲ್ಲಿ ಹೋಗಿ ಊಟ ಮಾಡಿ ಬರಲೂ ಕೂಡ ಗೇಟ್ ಪಾಸ್ ಪಡೆಯಬೇಕು. ಗೇಟ್ ಪಾಸ್ ಪಡೆಯಲು ಯಮಯಾತನೆ ಪಡಬೇಕು. ಕ್ಯಾಂಟೀನ್‌ನಲ್ಲಿ ಚೀಟಿ ಪಡೆದು ಅದಕ್ಕೆ ವಿಭಾಗದ ಮುಖ್ಯಸ್ಥರ ಸಹಿ, ಹಾಸ್ಟಲ್ ಇನ್ಚಾರ್ಜ್ ಅವರಿಂದ ಸಹಿ ಹೀಗೆಲ್ಲಾ ತಿರುಗಾಡಿ ಪಾಸ್ ಪಡೆಯುವಷ್ಟರಲ್ಲಿ ಸಾಕುಬೇಕಾಗುತ್ತದೆ. ಅನಾರೋಗ್ಯ ವಿರಲಿ ಏನೇ ಇರಲಿ ಇಷ್ಟೆಲ್ಲಾ ಪ್ರಕ್ರಿಯೆ ನಡೆಸಲೇಬೇಕು.ಹೀಗಾಗಿ ಗೇಟ್‌ಪಾಸ್ ವ್ಯವಸ್ಥೆ ಬೇಡವೇ ಬೇಡ ಎನ್ನುತ್ತಾ ಪ್ರತಿಭಟನೆ ನಡೆಸಿದ್ದೇವೆ ಎನ್ನುತ್ತಾರೆ.

cbpm7t

ವಿದ್ಯಾರ್ಥಿಗಳು ಮನೆಗೆ ಹೋಗುವ ಸಂದರ್ಭದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ಪರಿಣಾಮ ದೂರದ ಹಳ್ಳಿಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದಂತೂ ಸತ್ಯ.ಗುರುಗಳ ಮಾತಿಗೆ ವಿದ್ಯಾರ್ಥಿಗಳು ಸೊಪ್ಪುಹಾಕದ ಪರಿಣಾಮ ಪೊಲೀಸರು ಸ್ಥಳಕ್ಕೆ ಬರಬೇಕಾಯಿತು. ಪೊಲೀಸರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ತಮ್ಮ ಅಹವಾಲು ಹೇಳಿಕೊಂಡರು. ಆಗ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ ನಂತರವೇ ಗೇಟ್ ಬಾಗಿಲು ತೆರೆದು ವಿದ್ಯಾರ್ಥಿಗಳು ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟರು.
ಏನೇ ಆಗಲಿ ಗುರುಗಳು ಮತ್ತು ವಿದ್ಯಾರ್ಥಿಗಳು ಸಮನ್ವಯತೆಯಿಂದ ನಡೆದುಕೊಳ್ಳುವುದು ಉಚಿತ.ಸಮನ್ವಯತೆಯ ಕೊರತೆಯಾದಲ್ಲಿ ಈರೀತಿಯ ಅಹಿತಕರ ಘಟನೆಗಳು ನಡೆಯುವ ಮೂಲಕ ವಿಶ್ವವಿದ್ಯಾಲಯದ ಘನತೆ ಗೌರವ ಹಾಳಾಗಲಿದೆ ಎನ್ನುವುದು ಯುಸಿ ಸಿಇಟಿ ತರಬೇತಿಗೆ ಬಂದಿದ್ದ ಪೋಷಕರೊಬ್ಬರ ಮಾತಾಗಿದೆ.
ಇನ್ನು ದಿಢೀರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಧ್ಯಮದವರನ್ನು ಕಂಡ ವಿದ್ಯಾರ್ಥಿಗಳು, ಕೆಲ ಬೋಧಕರು ಆಶ್ಚರ್ಯಕ್ಕೆ ಒಳಗಾದರು. ನಿಮ್ಮನ್ನು ಯಾರು ಕರೆಸಿದರು? ಎಂದು ಪ್ರಶ್ನೆಗಳನ್ನು ಹಾಕಿದರು. ಮಾಧ್ಯಮದಲ್ಲಿ ಹೆಸರು ಪೋಟೊ ಬಂದಲ್ಲಿ ಅಧ್ಯಾಪಕರ ಕೋಪಕ್ಕೆ ಬಲಿಯಾಗ ಬೇಕಾಗುತ್ತದೆ ಎಂಬುದೇ ಆವರ ಆತಂಕಕ್ಕೆ ಕಾರಣವಾಗಿತ್ತು.