ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕನ್‌ ಪ್ರಿಯರೇ ಗಮನಿಸಿ; ಇಂದು, ನಾಳೆ ಬೆಂಗಳೂರಿನಲ್ಲಿ ಕೋಳಿ ಮಾಂಸ ಮಾರಾಟ ಬಂದ್‌!

Bengaluru Chicken Shops Strike:‌ ಕೋಳಿ ತ್ಯಾಜ್ಯದ ಮೇಲೆ ಕೆ.ಜಿಗೆ 5 ರೂ. ತೆರಿಗೆ ವಿಧಿಸಿರುವ ಜಿಬಿಎ ಕ್ರಮವನ್ನು ವಿರೋಧಿಸಿ ಕರ್ನಾಟಕ ಕೋಳಿ ಮಾರಾಟಗಾರರ ಸಂಘ ಗುರುವಾರ ಮತ್ತು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದು, ಇಂದು (ಸೆ. 03) ಹಾಗೂ ನಾಳೆ (04) ಕೋಳಿ ಮಾರಾಟ ರದ್ದು ಮಾಡಿದೆ.

ಇಂದು ನಾಳೆ ಬೆಂಗಳೂರಿನಲ್ಲಿ ಕೋಳಿ ಮಾಂಸ ಮಾರಾಟ ಬಂದ್‌!

ಇಂಟರ್ ನೆಟ್ ಚಿತ್ರ -

Vishakha Bhat Heggar
Vishakha Bhat Heggar Sep 3, 2026 10:42 AM

ಬೆಂಗಳೂರು: ಕೋಳಿ ತ್ಯಾಜ್ಯದ ಮೇಲೆ ಕೆ.ಜಿಗೆ 5 ರೂ. ತೆರಿಗೆ ವಿಧಿಸಿರುವ ಜಿಬಿಎ ಕ್ರಮವನ್ನು ವಿರೋಧಿಸಿ ಕರ್ನಾಟಕ ಕೋಳಿ ಮಾರಾಟಗಾರರ ಸಂಘ (Bengaluru Chicken Shops Strike) ಗುರುವಾರ ಮತ್ತು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದು, ಇಂದು (ಸೆ. 03) ಹಾಗೂ ನಾಳೆ (04) ಕೋಳಿ ಮಾರಾಟ ರದ್ದು ಮಾಡಿದೆ. ಸಗಟು ದರದಲ್ಲಿ ಕೋಳಿ ಫಾರಂಗಳಿಂದ ಕೋಳಿಗಳನ್ನು ಖರೀದಿಸದಿರಲು ಮಾಂಸ ಮಾರಾಟಗಾರರು ನಿರ್ಧರಿಸಿದ್ದಾರೆ.

ಈ ಮೊದಲು ಕೋಳಿ ತ್ಯಾಜ್ಯಕ್ಕೆ ಶುಲ್ಕ ಏನೂ ಪಡೆಯುತ್ತಿರಲಿಲ್ಲ. ಇದೀಗ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ 5 ರೂ. ನಿಗದಿಪಡಿಸಲಾಗಿದೆ. 100 ಕೆ.ಜಿ. ಕೋಳಿ ಮಾರಾಟ ಮಾಡಿದರೆ ಸುಮಾರು 15 ಕೆ.ಜಿ. ತ್ಯಾಜ್ಯ ಸಂಗ್ರಹವಾಗುತ್ತದೆ. ಇದು ದುಬಾರಿಯಾಗಲಿದ್ದು, ಕೋಳಿ ಮಾರಾಟಗಾರರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 6,000 ರಿಂದ 7,000 ಚಿಕನ್ ಅಂಗಡಿಗಳಿದೆ ಎಂದು ಅಂದಾಜಿಸಲಾಗಿದ್ದು, ಇದರಿಂದ ನಗರದಲ್ಲಿ ಪ್ರತಿದಿನ ಬರೋಬ್ಬರಿ 7 ಲಕ್ಷ ಕೆಜಿ ಚಿಕನ್‌ ಮಾರಾಟವಾಗುತ್ತದೆ.

ಇದರಿಂದ ದಿನಕ್ಕೆ ಸುಮಾರು 2–3 ಲಕ್ಷ ಕೆಜಿ ಕೋಳಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಹೀಗೆ ಉತ್ಪತ್ತಿಯಾಗುವ ಕೋಳಿ ತಾಜ್ಯದ ಮೇಲಿನ ತೆರಿಗೆ ವಿರೋಧಿಸಿ 2 ದಿನಗಳ ಕಾಲ ಕೋಳಿ ಮಾರಾಟಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಇದು ನಗರದಲ್ಲಿ ಹಲವು ಹೊಟೇಲ್‌ ಉದ್ಯಮಗಳು ಹಾಗೂ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರಿನ ಸರಾಸರಿ ಒಂದು ಕೋಳಿ ಅಂಗಡಿಯಲ್ಲಿ ದಿನಕ್ಕೆ 32 ರಿಂದ 35 ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಹೊಸ ನಿಯಮದಿಂದಾಗಿ ಪ್ರತಿಯೊಬ್ಬ ಸಣ್ಣ ವ್ಯಾಪಾರಿಯೂ ದಿನಕ್ಕೆ ಸುಮಾರು 150 ರಿಂದ 200 ರೂಪಾಯಿ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ, ಇದು ಸಣ್ಣ ಚಿಲ್ಲರೆ ವ್ಯಾಪಾರಿಗಳ ಜೀವನೋಪಾಯಕ್ಕೆ ಹೊಡೆತ ನೀಡುತ್ತದೆ ಎಂದು ವ್ಯಾಪಾರಿಗಳ ಆಗ್ರಹವಾಗಿದೆ.

Bird flu: ಚಿಕನ್‌ ಪ್ರಿಯರೇ ಎಚ್ಚರ! ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಣೆಗಾರರಿಗೆ ಕ್ವಾರಂಟೈನ್

ಆನ್‌ಲೈನ್‌ನಲ್ಲಿ ಲಭ್ಯವಿದೆಯೆ?

ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಮತ್ತು ಚಿಲ್ಲರೆ ಕೋಳಿ ಮಾಂಸದ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿದ್ದರೂ, ಆನ್‌ಲೈನ್ ಸಂಸ್ಥೆಗಳಲ್ಲಿ ಲಭ್ಯವಿದೆ. ದೊಡ್ಡ ಕಂಪನಿಗಳು ನೇರವಾಗಿ ದೊಡ್ಡ ಫಾರ್ಮ್‌ಗಳಿಂದ (ಕೋಳಿ ಫಾರಂಗಳು) ಮಾಂಸವನ್ನು ಪಡೆದು ತಮ್ಮದೇ ಆದ ಸ್ವಂತ ಕೋಲ್ಡ್ ಸ್ಟೋರೇಜ್ ಮತ್ತು ಸಂಸ್ಕರಣಾ ಘಟಕಗಳನ್ನು ಹೊಂದಿರುತ್ತವೆ. ಇವರು ಈ ಮುಷ್ಕರದಲ್ಲಿ ನೇರವಾಗಿ ಭಾಗವಹಿಸದ ಕಾರಣ, ಆಪ್‌ಗಳಲ್ಲಿ ಸ್ಟಾಕ್ ಲಭ್ಯವಿರುತ್ತದೆ.