ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLC N Ravikumar: ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ; ಎನ್‌.ರವಿಕುಮಾರ್‌ಗೆ ಜಾಮೀನು

MLC N Ravikumar: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್‌ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. 1 ಲಕ್ಷ ಬಾಂಡ್, ಒಬ್ಬರು ಶ್ಯೂರಿಟಿ ಒದಗಿಸಲು ಕೋರ್ಟ್ ಸೂಚನೆ ನೀಡಿದೆ.

ಅವಹೇಳನಕಾರಿ ಹೇಳಿಕೆ ಪ್ರಕರಣ; ಎಂಎಲ್‌ಸಿ ಎನ್‌.ರವಿಕುಮಾರ್‌ಗೆ ಜಾಮೀನು

Profile Prabhakara R Jul 9, 2025 9:46 PM

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Chief Secretary Shalini Rajneesh) ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಬಿಜೆಪಿ ಎಂಎಲ್‌ಸಿ ಎನ್‌. ರವಿಕುಮಾರ್ (BJP MLC N Ravikumar) ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, 1 ಲಕ್ಷ ಬಾಂಡ್, ಒಬ್ಬರು ಶ್ಯೂರಿಟಿ ಒದಗಿಸಲು ಸೂಚನೆ ನೀಡಿದೆ. ಹಾಗೆಯೇ ತನಿಖೆಗೆ ಸಹಕರಿಸಬೇಕು, ಸಾಕ್ಷ್ಯಾಧಾರ ನಾಶಪಡಿಸದಂತೆ ಷರತ್ತುಗಳನ್ನು ವಿಧಿಸಿದೆ.

ಈ ಪ್ರಕರಣದಲ್ಲಿ ರವಿಕುಮಾರ್‌ ಅವರ ಮೇಲೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಸೂಚಿಸಿತ್ತು. ಇದರಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ಸಂಬಂಧಿಸಿ ರವಿಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಜೆ.ಪಿ.ನಗರದ ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 351(3), 75(3), 79 ಅಡಿ ಎಂಎಲ್‌ಸಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ರವಿಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಿಯೋಗ ಸಭಾಪತಿಗಳಿಗೂ ದೂರು ನೀಡಿದೆ. ರವಿಕುಮಾರ್ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳ ವಿರುದ್ಧವೂ ಇದೇ ರೀತಿ ಮಾತನಾಡಿದ್ದರು. ಅವರನ್ನು ಎಂಎಲ್ಸಿ ಸ್ಥಾನದಿಂದ ರವಿಕುಮಾರ್ ಅವರನ್ನು ವಜಾಗೊಳಿಸಿ ಎಂದು ಮನವಿ ಮಾಡಿದೆ.

ಈ ಸುದ್ದಿಯನ್ನೂ ಓದಿ | N Ravikumar: ಸಿಎಸ್‌ಗೆ ಅವಹೇಳನ: ಎಂಎಲ್‌ಸಿ ಎನ್ ರವಿಕುಮಾರ್‌ಗೆ ಹೈಕೋರ್ಟ್ ರಿಲೀಫ್, ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ

ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ಕೊಟ್ಟ ಪತ್ನಿ, ಪುತ್ರಿ

CP Yogeshwar

ಬೆಂಗಳೂರು: ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ (CP Yogeshwar) ವಿರುದ್ಧ ಪತ್ನಿ ಮತ್ತು ಪುತ್ರಿ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಬೆಂಗಳೂರಿನ ಕೆಪಿಸಿಸಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿಯಾದ ಯೋಗೇಶ್ವ‌ರ್ ಪತ್ನಿ ಮಾಳವಿಕಾ ಸೋಲಂಕಿ ಹಾಗೂ ಪುತ್ರಿ ನಿಶಾ ಸಿ.ಪಿ ಯೋಗೇಶ್ವ‌ರ್ ವಿರುದ್ಧ ದೂರು ನೀಡಿದ್ದಾರೆ.

ಸಿ.ಪಿ.ಯೋಗೇಶ್ವ‌ರ್ ತಮ್ಮದೇ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಪದೇ ಪದೇ ಕೋರ್ಟ್ ಗಳಲ್ಲಿ ಕೇಸ್ ಹಾಕುತ್ತಿದ್ದಾರೆ. ಕಾನೂನಾತ್ಮಕವಾಗಿ ನಾವು ದೂರವಾಗಿಲ್ಲ. ಆದರೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದನ್ನು ಸರಿಪಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಈ ವೇಳೆ ಯೋಗೇಶ್ವರ್‌ ಪುತ್ರಿ ನಿಶಾ ಯೋಗೇಶ್ವರ್‌ ಮಾತನಾಡಿ, ನನ್ನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ನಮ್ಮ ತಂದೆ ಬಲಶಾಲಿ. ಒಬ್ಬ ಹೆಣ್ಣುಮಗಳಿಗೆ ಎಷ್ಟು ಕಷ್ಟ ಅನ್ನೋದು ಗೊತ್ತಿದೆ. ಕೋರ್ಟ್ ಹೋರಾಟ ನಡೆಯುತ್ತಿದೆ, ನಮಗೆ ಸಮಸ್ಯೆ ಆಗಬಾರದು ಎಂದು ಸಹಾಯ ಕೇಳಿದ್ದೇವೆ. ಸುರ್ಜೇವಾಲಾ ಸಮಯ ಕೊಟ್ಟು, ಮಾತಾಡಿ ಭರವಸೆ ಕೊಟ್ಟಿದ್ದಾರೆ. ನನಗೆ ಜೀವನದಲ್ಲಿ ಭಯ ಹೋಗಿದೆ, ಕಳೆದುಕೊಳ್ಳುವುದು ಏನಿಲ್ಲ. ನಾನು ತಂದೆ ವಿರುದ್ಧವೇ ಹೋರಾಡುವ ಸಂದೇಶ ಕೊಡಲು ನನಗೂ ಇಷ್ಟ ಇಲ್ಲ. ಇದು ಬರೀ ಆಸ್ತಿ ವಿಚಾರ ಅಲ್ಲ, ನ್ಯಾಯ ಮತ್ತು ಅಧಿಕಾರದ ವಿಚಾರ. ಅವರು ತಂದೆಯಾಗಿ ಮಾಡೋದು ಬಹಳ ಇದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Fraud Case: ಸಿಎಂ, ಡಿಸಿಎಂ ಹೆಸರಲ್ಲಿ ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದ ಮಹಿಳೆ ಅರೆಸ್ಟ್

ಇದೇ ವೇಳೆ ಯೋಗೇಶ್ವರ್ ಮೊದಲ ಪತ್ನಿ ಮಾಳವಿಕಾ ಸೋಲಂಕಿ ಮಾತನಾಡಿ, ಸುರ್ಜೇವಾಲಾ ಸಮಯ ಕೊಟ್ಟರು, ಅವರು ನಮ್ಮ ಮಾತನ್ನು ಕೇಳಿಸಿಕೊಂಡಿದ್ದಾರೆ. ನಮಗೆ ಭರವಸೆ ಕೊಟ್ಟಿದ್ದಾರೆ, ಸಿಎಂ, ಡಿಸಿಎಂ ಜತೆ ಮಾತನಾಡುತ್ತಾರೆ. ಸುಮಾರು ವರ್ಷದಿಂದ ಚೆನ್ನಾಗಿಯೇ ಇದ್ದೆವು. ಆದರೆ ಈಗ ನನ್ನ ಮಕ್ಕಳಿಗೆ ಉಸಿರಾಡಲು ಆಗುತ್ತಿಲ್ಲ. ಮಕ್ಕಳು ಬೀದಿಗೆ ಬಂದಿದ್ದಾರೆ, ಮಕ್ಕಳ ಮೇಲೆ ಕೇಸ್ ಹಾಕಿದ್ದಾರೆ. ತಾಯಿಯಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. 300 ಆಸ್ತಿಗಳ ಮೇಲೆ ನಾವು ಸ್ಟೇ ತಂದಿದ್ದೇವೆ. ನನ್ನ ಮಕ್ಕಳಿಗೂ ಇಷ್ಟ ಇಲ್ಲ, ತಂದೆ ವಿರುದ್ಧ ಹೋರಾಡಬೇಕಾದ ಸ್ಥಿತಿ ಬಂದಿದೆ. ಅವರ ವಿರುದ್ಧ ಹೋರಾಡುವ ಶಕ್ತಿಯೂ ಇಲ್ಲ. ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಇರುವ ವ್ಯಕ್ತಿ ಮನೆ ವಿಷಯವನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.