ಬೆಂಗಳೂರು ಟೆಕ್ ಸಮ್ಮಿಟ್ 2025: ಜಾಗತಿಕ ಪಾಲುದಾರಿಕೆ ಘೋಷಿಸಿದ ಕೆಡಿಇಎಂ
ರಾಜ್ಯದಾದ್ಯಂತ ಸಮುದಾಯಗಳು, ಉದ್ಯಮಗಳು ಮತ್ತು ಹೊಸ ನಾವೀನ್ಯತಾ ಕ್ಲಸ್ಟರ್ ಗಳಿಗೆ ಅತ್ಯುತ್ತಮ ಫಲಿತಾಂಶ ಒದಗಿ ಸುವ ತಂತ್ರಜ್ಞಾನ ಕರೂಪಿಸುವ ಜಾಗತಿಕ ಸಂಪರ್ಕ ಹೊಂದಿ ರುವ, ಉದ್ಯಮ-ನೇತೃತ್ವದ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಕಟ್ಟುವ ಕರ್ನಾಟಕದ ಗುರಿ ಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.
-
ಬೆಂಗಳೂರು: ಬೆಂಗಳೂರು ಟೆಕ್ ಸಮಿಟ್ 2025ರಲ್ಲಿ ಎಐ-ಚಾಲಿತ ಗ್ರಾಮೀಣಾಭಿವೃದ್ಧಿ ಮತ್ತು ಬಿಎಫ್ಎಸ್ಐ ನಾವೀನ್ಯತೆ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಎರಡು ಮಹತ್ವದ ಟಿಐಇ-ನೇತೃತ್ವದ ಸಹಯೋಗಗಳನ್ನು ಘೋಷಿ ಸಿದೆ. ಈ ಮೂಲಕ ಕರ್ನಾಟಕ ತನ್ನ ಜಾಗತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿ ಕೊಳ್ಳುತ್ತಿದೆ.
ಸ್ಟ್ರಾಟೆಜಿಕ್ ಫೆಸಿಲಿಟೇಟರ್ ಪಾತ್ರ ನಿಭಾಯಿಸುತ್ತಿರುವ ಕೆಡಿಇಎಂ ಸಂಸ್ಥೆಯು ಟಿಐಇ ನ್ಯೂಜೆರ್ಸಿ, ಟಿಐಇ ಬೆಂಗಳೂರು ಮತ್ತು ನ್ಯೂಟ್ರಿನೋಸ್ ಅನ್ನು ಒಟ್ಟುಗೂಡಿಸಿದೆ. ಈ ಮೂಲಕ ಜಾಗತಿಕ ಉದ್ಯಮ ಜಾಲಗಳನ್ನು ಎಐ-ನೇಟಿವ್ ಬಿಎಫ್ಎಸ್ಐ ತಂತ್ರಜ್ಞಾನ ಸಂಸ್ಥೆಯೊಂದಿಗೆ ಸಂಯೋಜಿಸಿ ಗ್ರಾಮೀಣ ನಾವೀನ್ಯತೆ, ಹವಾಮಾನ ಸ್ಥಿರತೆ ಮತ್ತು ಮುಂದಿನ ತಲೆಮಾರಿನ ಹಣಕಾಸು ತಂತ್ರಜ್ಞಾನಗಳನ್ನು ಆಧುನಿಕಗೊಳಿಸುವ ಉದ್ದೇಶ ಹೊಂದಿದೆ.
ಈ ಯೋಜನೆಗಳು ಹೊಸ ಕರ್ನಾಟಕ- ಅಮೆರಿಕಾ ನಾವೀನ್ಯತಾ ಅವಕಾಶಗಳ ಬಾಗಿಲನ್ನು ತೆರೆಯಲಿದ್ದು, ಗ್ರಾಮೀಣ ಮತ್ತು ಹವಾಮಾನ ಆದ್ಯತೆಗಳಿಗೆ ಅನುಗುಣವಾಗಿ ಎಐ-ಚಾಲಿತ ಪರಿಹಾರಗಳ ಸೃಷ್ಟಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ ಮತ್ತು ಬಿಎಫ್ಎಸ್ಐ-ಕೇಂದ್ರಿತ ಉದ್ಯಮ ಸೃಷ್ಟಿಗೆ ಉತ್ತಮ ವೇದಿಕೆ ರೂಪಿಸಲಿವೆ. ರಾಜ್ಯದಾದ್ಯಂತ ಸಮುದಾಯಗಳು, ಉದ್ಯಮಗಳು ಮತ್ತು ಹೊಸ ನಾವೀನ್ಯತಾ ಕ್ಲಸ್ಟರ್ ಗಳಿಗೆ ಅತ್ಯುತ್ತಮ ಫಲಿತಾಂಶ ಒದಗಿ ಸುವ ತಂತ್ರಜ್ಞಾನ ಕರೂಪಿಸುವ ಜಾಗತಿಕ ಸಂಪರ್ಕ ಹೊಂದಿರುವ, ಉದ್ಯಮ-ನೇತೃತ್ವದ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಕಟ್ಟುವ ಕರ್ನಾಟಕದ ಗುರಿಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.
ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್
- ಗ್ರಾಮೀಣ ಉದ್ಯಮಶೀಲತೆ ಮತ್ತು ಸಾಮಾಜಿಕ ಒಳಿತಿಗಾಗಿ ಎಐ ಬಳಸಲು ಕೆಡಿಇಎಂ ಪಾಲುದಾರಿಕೆಯಲ್ಲಿ ಟಿಐಇ ನ್ಯೂಜರ್ಸಿ - ಟಿಐಇ ಬೆಂಗಳೂರು ಸಿಸ್ಟರ್ ಚಾಪ್ಟರ್ ಒಪ್ಪಂದ
ಇತ್ತೀಚೆಗೆ ಸ್ಥಾಪಿತವಾದ ನ್ಯೂಜೆರ್ಸಿ-ಕರ್ನಾಟಕ ಸಿಸ್ಟರ್ ಚಾಪ್ಟರ್ ಮತ್ತು ರಾಜ್ಯದ ಪಾಲು ದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಐತಿಹಾಸಿಕ ಸಿಸ್ಟರ್ ಚಾಪ್ಟರ್ ಒಪ್ಪಂದ ಔಪ ಚಾರಿಕವಾಗಿ ನಡೆದಿದೆ. ಈ ಸಹಯೋಗವು ಗಡಿಯಾಚೆಗಿನ ನಾವೀನ್ಯತಾ ಚಾನಲ್ ಗಳನ್ನು ಬಲಪಡಿಸುತ್ತದೆ ಮತ್ತು ಈ ಕೆಳಗಿನವುಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ:
● ಗ್ರಾಮೀಣ ಉದ್ಯಮಶೀಲತೆ
● ಎಐ-ಚಾಲಿತ ಹವಾಮಾನ ಸ್ಥಿರತೆ
● ಸಮುದಾಯ ಮಟ್ಟದ ಡಿಜಿಟಲ್ ಅಭಿವೃದ್ಧಿ
● ● ಸಾಂಸ್ಕೃತಿಕ ಮತ್ತು ಸೃಜನಶೀಲ ಉದ್ಯಮಶೀಲತೆ
● ಸ್ಟಾರ್ಟಪ್‌ಗಳಿಗೆ ದ್ವಿಪಕ್ಷೀಯ ಮಾರುಕಟ್ಟೆ ಪ್ರವೇಶ
ಎರಡೂ ಪ್ರದೇಶಗಳ ಚಾರ್ಟರ್ ಸದಸ್ಯರೊಂದಿಗೆ 10 ಸದಸ್ಯ ಬಳಗದ ಎಐ ಫಾರ್ ಸೋಷಲ್ ಗುಡ್ ಇನ್ನೋವೇಷನ್ ಕಮಿಟಿ ರಚನೆಯಾಗಿದೆ. ಇದು ಹವಾಮಾನ ಬದಲಾ ವಣೆ, ಸುಸ್ಥಿರ ಕೃಷಿ, ಗ್ರಾಮೀಣ ಜೀವನೋಪಾಯ ಮತ್ತು ಸಮುದಾಯ ಕಲ್ಯಾಣಕ್ಕೆ ವಿಸ್ತರಿಸ ಬಹುದಾದ ಪರಿಹಾರಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿದೆ.
ಈ ಪಾಲುದಾರಿಕೆಯ ಭಾಗವಾಗಿ ಎರಡೂ ಚಾಪ್ಟರ್ ಗಳು ಏಟ್ರಿಯಾ ಯೂನಿವರ್ಸಿಟಿ ಯೊಂದಿಗೆ ಕೈಜೋಡಿಸಿ ಭಾರತದಲ್ಲಿ ಜೆಎಎನ್ ಎಐ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ಅನ್ನು ಬೆಂಬಲಿಸಲಿವೆ. ಇದು ಎಐ-ಸಹಾಯಕ ಹವಾಮಾನ ಬುದ್ಧಿಮತ್ತೆ, ಜೈವಿಕ ವೈವಿ ಧ್ಯತಾ ಮೇಲ್ವಿಚಾರಣೆ ಮತ್ತು ಗ್ರಾಮೀಣ ಸುಸ್ಥಿರತೆ ಪರಿಹಾರಗಳ ಮೇಲೆ ಕೇಂದ್ರೀಕೃತ ವಾಗಿರುವ ರಾಷ್ಟ್ರೀಯ ನಾವೀನ್ಯತಾ ಕೇಂದ್ರವಾಗಿದೆ.
ಕೆಡಿಇಎಂ, ಪಾಲುದಾರರನ್ನು ಒಗ್ಗೂಡಿಸುವ ಮೂಲಕ ರಾಜ್ಯದ ವಿಶಾಲ ನಾವೀನ್ಯತಾ ಗುರಿಯನ್ನು ಬಲಪಡಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.
- ಟಿಐಇ ಬೊಂಗಳೂರು ಸಹಯೋಗದಲ್ಲಿ ನ್ಯೂಟ್ರಿನೋಸ್ ವೆಂಚರ್ ಸ್ಟುಡಿಯೋ ಮತ್ತು “ರಿಇಮ್ಯಾಜಿನಿಂಗ್ ರಿಸ್ಕ್” ಗ್ಲೋಬಲ್ ಸ್ಟಾರ್ಟಪ್ ಚಾಲೆಂಜ್ ಉದ್ಘಾಟನೆ (ಕೆಡಿಇಎಂ ಬೆಂಬಲಿತ)
ನ್ಯೂಟ್ರಿನೋಸ್ ಜಾಗತಿಕ ಬಿಎಫ್ಎಸ್ಐ ಕ್ಷೇತ್ರಕ್ಕೆ ಎಐ-ನೇಟಿವ್ ವೆಂಚರ್ ಗಳನ್ನು ಜಂಟಿ ಯಾಗಿ ರಚಿಸಿ ದೊಡ್ಡದಾಗಿಸುವ ವಿಶೇಷ ಇನ್ನೋವೇಷನ್ ಎಂಜಿನ್ ನ್ಯೂಟ್ರಿನೋಸ್ ವೆಂಚರ್ ಸ್ಟುಡಿಯೋ ಘೋಷಿಸಿತು. ಹಣಕಾಸು ಸಂಸ್ಥೆಗಳು ಹೊಸ ತಂತ್ರಜ್ಞಾನಗಳನ್ನು ಹೇಗೆ ರೂಪಿಸಿ ಸ್ವೀಕರಿಸುತ್ತವೆ ಎಂಬುದನ್ನು ಇದು ಮರು ವ್ಯಾಖ್ಯಾನಿಸಲಿದೆ.
ಜೊತೆಗೆ ನ್ಯೂಟ್ರಿನೋಸ್ ಮತ್ತು ಟಿಐಇ ಬೆಂಗಳೂರು “ರೀಇಮ್ಯಾಜಿನಿಂಗ್ ರಿಸ್ಕ್” ಎಂಬ ಜಾಗತಿಕ ಸ್ಟಾರ್ಟಪ್ ಚಾಲೆಂಜ್ ಆರಂಭಿಸಿವೆ. ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ತಂತ್ರ ಜ್ಞರನ್ನು ಆಹ್ವಾನಿಸಿ ಈ ಕ್ಷೇತ್ರಗಳಲ್ಲಿ ಮಹತ್ವದ ಪರಿಹಾರಗಳನ್ನು ರೂಪಿಸಲು ಪ್ರೇರೇ ಪಿಸುತ್ತಿದೆ:
● ಹವಾಮಾನ ಮತ್ತು ಪ್ಯಾರಾಮೆಟ್ರಿಕ್ ರಿಸ್ಕ್
● ಹಣಕಾಸು ಒಳಗೊಳ್ಳುವಿಕೆ ಮತ್ತು ಮೈಕ್ರೋಇನ್ಶೂರೆನ್ಸ್
● ಎಐ-ನೇಟಿವ್ ಅಂಡರ್‌ರೈಟಿಂಗ್ ಮತ್ತು ಫ್ರಾಡ್ ಡಿಟೆಕ್ಷನ್
● ಎಂಬೆಡೆಡ್ ಇನ್ಶೂರೆನ್ಸ್ ಮತ್ತು ಗಿಗ್ ಎಕಾನಮಿ ಉತ್ಪನ್ನಗಳು
● ಸೈಬರ್ ಮತ್ತು ಡಿಜಿಟಲ್ ರಿಸ್ಕ್
ಉನ್ನತ ಹಂತದ ಭಾಗಿಗಳಿಗೆ ಮೆಂಟರ್‌ಶಿಪ್, ನ್ಯೂಟ್ರಿನೋಸ್ ಎಐ-ನೇಟಿವ್ ಪ್ಲಾಟ್ ಫಾರ್ಮ್ ಪ್ರವೇಶ, ಜಾಗತಿಕ ಎಂಟರ್‌ಪ್ರೈಸ್ ನಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ವೆಂಚರ್ ಸ್ಟುಡಿಯೋ ಪೋರ್ಟ್‌ಫೋಲಿಯೋ ಸೇರ್ಪಡೆ ಅವಕಾಶ ದೊರೆಯಲಿದೆ.
ಕರ್ನಾಟಕದ ಡೀಪ್-ಟೆಕ್ ಮತ್ತು ಬಿಎಫ್ಎಸ್ಐ ನಾವೀನ್ಯತಾ ಕ್ಲಸ್ಟರ್ ಗಳಲ್ಲಿ ಉದ್ಯಮ–ಸ್ಟಾರ್ಟಪ್ ಸಹಯೋಗವನ್ನು ಸಾಧ್ಯಗೊಳಿಸುವ ಕೆಡಿಇಎಂ ಬೆಂಬಲದೊಂದಿಗೆ ಟಿಐಇ ಬೆಂಗಳೂರು ಮುಂದಿನ ತಲೆಮಾರಿನ ಸ್ಟಾರ್ಟಪ್ ಗಳನ್ನು ಬೆಳೆಸುವ ನಾಯಕತ್ವವನ್ನು ಮುಂದುವರಿಸಿದೆ.
ಈ ಕುರಿತು ಮಾತನಾಡಿದ ಟಿಐಇ-ಎನ್ ಜೆ ಮಾಜಿ ಅಧ್ಯಕ್ಷ ಮತ್ತು ಎನ್ ಜೆ-ಇಂಡಿಯಾ ಕಮಿಷನ್ ಸದಸ್ಯ ಡಾ. ಸುರೇಶ್ ಯು ಕುಮಾರ್ ಅವರು, “ಇದು ನ್ಯೂಜರ್ಸಿ ಮತ್ತು ಬೆಂಗಳೂರಿನ ನಾವೀನ್ಯತಾ ಪರಿಸರವನ್ನು ಸಂಪನ್ಮೂಲ, ಜ್ಞಾನ ಮತ್ತು ಪ್ರತಿಭೆಯ ಸಂಯೋಜನೆಯ ಮೂಲಕ ವಿಸ್ತರಿಸುವ ಮಹತ್ವದ ಬೆಳವಣಿಗೆಯಾಗಿದೆ.
ಗ್ರಾಮೀಣ ಉದ್ಯಮಶೀಲತೆ ಮತ್ತು ಸಾಮಾಜಿಕ ಒಳಿತಿಗಾಗಿ ಎಐ ಮೇಲೆ ಗಮನ ಕೇಂದ್ರೀ ಕರಿಸುವ ಮೂಲಕ ತಾಂತ್ರಿಕ ನಾವೀನ್ಯತೆಯ ಲಾಭವನ್ನು ಅತ್ಯಂತ ಅಗತ್ಯವಿರು ವವರಿಗೆ ತಲುಪುವಂತೆ ಮಾಡುತ್ತಿದ್ದೇವೆ. ಇಂತಹ ಪಾಲುದಾರಿಕೆಗಳನ್ನು ಸಾಧ್ಯಗೊಳಿಸುವ ಮತ್ತು ವಿವಿಧ ಪ್ರದೇಶಗಳ ನಡುವೆ ಜಾಗತಿಕ ನಾವೀನ್ಯತಾ ಕಾರಿಡಾರ್ ವಿಸ್ತರಿಸುವ ಕೆಡಿಇಎಂನ ಕಾರ್ಯ ತಂತ್ರದ ಪಾತ್ರವನ್ನು ನಾವು ಗೌರವಿಸುತ್ತೇವೆ” ಎಂದು ಹೇಳಿದರು.
ಟಿಐಇ ಬೆಂಗಳೂರು ಅಧ್ಯಕ್ಷರು ಮತ್ತು ಟಿಐಇ ಗ್ಲೋಬಲ್ ಟ್ರಸ್ಟಿ ಮದನ್ ಪದಕಿ ಅವರು ಮಾತನಾಡಿ, “ಈ ಒಪ್ಪಂದವು ಉದ್ಯಮಶೀಲತೆಯನ್ನು ಜನಪ್ರಿಯಗೊಳಿಸಿ ಬೆಂಗಳೂರು ಮತ್ತು ನ್ಯೂಜೆರ್ಸಿಯ ಗ್ರಾಮೀಣ ಪ್ರದೇಶಗಳಿಗೆ ಎಐ-ಚಾಲಿತ ಪರಿಹಾರಗಳನ್ನು ತಲುಪಿಸ ಲಿದೆ.
ಎರಡೂ ಪ್ರದೇಶಗಳಲ್ಲೂ ಅತ್ಯುತ್ತಮ ತಾಂತ್ರಿಕ ಪರಿಸರ ಮತ್ತು ಒಳಗೊಳ್ಳುವಿಕೆಯ ಬೆಳವಣಿಗೆಗೆ ಆಳವಾದ ಬದ್ಧತೆ ಇದೆ. ನಮ್ಮ ಬಲವನ್ನು ಒಟ್ಟುಗೂಡಿಸಿ ಹವಾಮಾನ ಬದಲಾವಣೆ ನಿಭಾಯಿಸುವ, ಗ್ರಾಮೀಣ ಜೀವನೋಪಾಯ ಬೆಂಬಲಿಸುವ ಮತ್ತು ಸುಸ್ಥಿರ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ಪರಿಹಾರಗಳ ರಚನೆಯನ್ನು ವೇಗಗೊಳಿಸಬಹುದು. ಇದೇ ಟಿಐಇಯ ಉದ್ದೇಶದ ಕಾರ್ಯರೂಪವು ಕೆಡಿಇಎಂ ಜೊತೆಗಿನ ಸಹಯೋಗದ ಮೂಲಕ ಸಾಧ್ಯವಾಯಿತು. ಈ ಯೋಜನೆ ಮತ್ತು ಜಾಗತಿಕ ನಾಯಕತ್ವಕ್ಕೆ ಅವರಿಗೆ ಧನ್ಯ ವಾದಗಳು” ಎಂದರು.
ಏಟ್ರಿಯಾ ಯೂನಿವರ್ಸಿಟಿ ಬೋರ್ಡ್ ಆಫ್ ಟ್ರಸ್ಟೀಸ್ ಸದಸ್ಯರಾದ ಕೌಶಿಕ್ ರಾಜು ಮಾತ ನಾಡಿ, “ಮೊದಲು ಎಲ್ಲಾ ಪಾಲುದಾರರನ್ನು ಒಟ್ಟುಗೂಡಿಸಿದ ಕೆಡಿಇಎಂಗೆ ಧನ್ಯವಾದ ಗಳು. ಟಿಐಇ ನ್ಯೂಜರ್ಸಿ ಮತ್ತು ಟಿಐಇ ಬೆಂಗಳೂರಿನ ಈ ಪರಿವರ್ತನಾತ್ಮಕ ಪಾಲುದಾರಿಕೆ ಯ ಭಾಗವಾಗಿರುವುದು ಆಸಕ್ತಿಕರವಾಗಿದೆ. ಏಟ್ರಿಯಾ ಯೂನಿವರ್ಸಿಟಿಯಲ್ಲಿ ಅತ್ಯಾಧು ನಿಕ ಎಐ ತಂತ್ರಜ್ಞಾನ ಮತ್ತು ಗ್ರಾಮೀಣ ಉದ್ಯಮಶೀಲತೆಯ ಸಂಯೋ ಜನೆಯಲ್ಲಿ ಹವಾಮಾನ ಬದಲಾವಣೆಯಿಂದ ಗ್ರಾಮೀಣ ಆರ್ಥಿಕ ಅಭಿವೃದ್ಧಿಯವರೆಗಿನ ದೊಡ್ಡ ಸವಾಲುಗಳನ್ನು ಪರಿಹರಿಸುವ ಅಪಾರ ಸಾಮರ್ಥ್ಯವಿದೆ ಎಂದು ನಾವು ನಂಬುತ್ತೇವೆ.
ಭಾರತದಲ್ಲಿ ಜೆಎಎನ್ ಎಐ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ನಮ್ಮ ಬದ್ಧತೆಯ ಪ್ರತೀಕವಾಗಿದೆ. ಈ ಸಹಯೋಗವು ವಿಶ್ವದರ್ಜೆಯ ಉದ್ಯಮಿ ಮಾರ್ಗದರ್ಶನ, ತಾಂತ್ರಿಕ ತಜ್ಞತೆ ಮತ್ತು ಶೈಕ್ಷಣಿಕ ಚೌಕಟ್ಟನ್ನು ಒಟ್ಟುಗೂಡಿಸಿ ಗ್ರಾಮೀಣ ಭಾರತದಲ್ಲಿ ನಿಜವಾದ ಪ್ರಭಾವ ಬೀರಲಿದೆ. ಈ ಆಲೋಚನೆಗಳು ಬೆಳೆಯಲು ಮತ್ತು ವಿಸ್ತರಿಸಲು ವೇದಿಕೆ ಒದಗಿ ಸಲು ನಾವು ಉತ್ಸುಕರಾಗಿದ್ದೇವೆ” ಎಂದರು.
ಕೆಡಿಇಎಂನ ಸಿಇಒ ಸಂಜೀವ್ ಕುಮಾರ್ ಗುಪ್ತಾ ಅವರು ಮಾತನಾಡಿ, “ಈ ಯೋಜನೆಯು ಜಾಗತಿಕ ಪಾಲುದಾರಿಕೆಗಳು ನಿಜವಾದ ಸಮುದಾಯ ಅಗತ್ಯಗಳೊಂದಿಗೆ ಹೊಂದಿ ಕೊಂಡಾಗ ಅರ್ಥಪೂರ್ಣ ಫಲಿತಾಂಶಗಳನ್ನು ನೀಡಬಹುದು ಎಂಬುದನ್ನು ತೋರಿಸು ತ್ತದೆ. ಉದ್ಯಮ, ಶಿಕ್ಷಣ ಮತ್ತು ಅಂತಾರಾಷ್ಟ್ರೀಯ ಜಾಲಗಳ ನಾಯಕರನ್ನು ಒಟ್ಟುಗೂಡಿಸಿ ಎಐ-ಚಾಲಿತ ಗ್ರಾಮೀಣ ಆವಿಷ್ಕಾರ ಮತ್ತು ಹವಾಮಾನ ಸ್ಥಿರತೆ ಸಾಧಿಸಲು ಬಲಿಷ್ಠ ವೇದಿಕೆ ರೂಪಿಸಿದೆ. ಕರ್ನಾಟಕದ ಪರಿಸರ ಯಾವಾಗಲೂ ಇಂತಹ ಗಡಿಮೀರಿದ ತೊಡಗಿಸಿ ಕೊಳ್ಳುವಿಕೆಯಲ್ಲಿ ಮುಂಚೂಣಿಯಲ್ಲಿದೆ. ಇಂತಹ ಇನ್ನಷ್ಟು ಪಾಲುದಾರಿಕೆಗಳನ್ನು ಸಾಧ್ಯ ಗೊಳಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದರು.