ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ಮೊದಲ ಟನಲ್‌ ರಸ್ತೆ ಕಾಮಗಾರಿ ಉದ್ಘಾಟನೆ ಇಂದು; ಟ್ರಾಫಿಕ್‌ನಿಂದ ಸಿಗುತ್ತಾ ಮುಕ್ತಿ?

D.K.Shivakumar: ಬೆಂಗಳೂರು ನಗರದಲ್ಲಿ ನಿರ್ಮಾಣವಾದ ಮೊದಲ ಟನಲ್ ರಸ್ತೆ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಲಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗೆ ನಿರ್ಮಾಣವಾಗುತ್ತಿರುವ ಟನಲ್ ರಸ್ತೆಗೆ ಬೆಳಗ್ಗೆ 9:30 ಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಲಿದ್ದಾರೆ.

ಬೆಂಗಳೂರಿನ ಮೊದಲ ಟನಲ್‌ ರಸ್ತೆ ಕಾಮಗಾರಿಗೆ ಇಂದು ಸಿಎಂ ಭೂಮಿಪೂಜೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 28, 2026 9:03 AM

ಬೆಂಗಳೂರು: ನಗರದಲ್ಲಿ ನಿರ್ಮಾಣವಾದ ಮೊದಲ ಟನಲ್ ರಸ್ತೆ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಲಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗೆ ನಿರ್ಮಾಣವಾಗುತ್ತಿರುವ ಟನಲ್ ರಸ್ತೆಗೆ ಬೆಳಗ್ಗೆ 9:30 ಕ್ಕೆ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಭೂಮಿಪೂಜೆ ನೆರವೇರಿಸಲಿದ್ದಾರೆ. ನಿನ್ನೆ ಕಾರ್ಯಕ್ರಮ ಸ್ಥಳಕ್ಕೆ ಸಾರಿಗೆ ಸಚಿವ ಬೈರತಿ ಸುರೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, , 2.2 ಕಿ.ಮೀ ಉದ್ದದ ಟನಲ್ ರಸ್ತೆ ಕಾಮಗಾರಿಗೆ ಭಾನುವಾರ ಸಿಎಂ ಭೂಮಿ ಪೂಜೆ ಮಾಡಲಿದ್ದಾರೆ. ಇದು ಒಂದು ರೀತಿ ಪೈಲೆಟ್ ಪ್ರಾಜೆಕ್ಟ್ ಮಾದರಿ. ಅತೀ ಜರೂರಾಗಿ ಆಗುತ್ತೆ. ಈ ಕಾಮಗಾರಿಯಿಂದ ಯಲಹಂಕ, ಹೆಬ್ಬಾಳ ಬ್ಯಾಟರಾಯನಪುರಕ್ಕೆ ಹೋಗುವವರಿಗೆ ಬಹಳ ಅನುಕೂಲವಾಗುತ್ತವೆ ಎಂದು ಹೇಳಿದರು. 18 ತಿಂಗಳಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಕಾಮಗಾರಿಗೆ 1199 ಕೋಟಿ ಮೀಸಲಿಡಲಾಗಿದೆ. ಹೈದರಾಬಾದ್ ಮೂಲದ ಖಾಸಗಿ ಕಂಪನಿ ಟೆಂಡರ್ ತೆಗೆದುಕೊಂಡಿದೆ.

ಈ ಟನಲ್ ರಸ್ತೆ ಮುಗಿದರೆ, ಅರ್ಧ ಟ್ರಾಫಿಕ್ ಜಾಮ್ ಕಡಿಮೆ ಆಗುತ್ತೆ. ಕಾಮಗಾರಿ ಮಾರ್ಗದಲ್ಲಿ ಯಾವುದೇ ಆಸ್ತಿ-ಪಾಸ್ತಿಗಳಿಗೆ ತೊಂದರೆ ಇಲ್ಲದೆ ಕಾಮಗಾರಿ ಜರುಗುತ್ತೆ. ಟನಲ್ ರಸ್ತೆ ಮಾಡೋದ್ರಿಂದ ಯಾವುದೇ ರೀತಿ ಸಮಸ್ಯೆ ಆಗೋದಿಲ್ಲ. ವಿರೋಧ ಪಕ್ಷದವರು ವಿರೋಧ ಮಾಡ್ತಾರೆ. ಜನರಿಗೆ ಅನುಕೂಲ ಆಗಲಿಕ್ಕೆ ನಾವು ಈ ಕಾಮಗಾರಿ ಮಾಡ್ತಿದ್ದೇವೆ. ವಿರೋಧ ಪಕ್ಷದ ಸ್ನೇಹಿತರ ಈ ಕೆಲಸಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.

ಹೆಬ್ಬಾಳ ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ

ಇನ್ನು ಅತ್ಯಂತ ಪ್ರಮುಖ ಜಂಕ್ಷನ್ ಆದ ಹೆಬ್ಬಾಳದಲ್ಲಿ ದಿನನಿತ್ಯ ಉಂಟಾಗುವ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಸ್ತಾಪಿಸಲಾಗಿರುವ 2.18 ಕಿಲೋಮೀಟರ್ ಉದ್ದದ ಕಿರು ಸುರಂಗ ರಸ್ತೆ (Short Tunnel Road) ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಭರದಿಂದ ಪೂರ್ವಸಿದ್ಧತಾ ಕೆಲಸಗಳನ್ನು ಆರಂಭಿಸಿದೆ. ಈ ಯೋಜನೆಯ ಭಾಗವಾಗಿ, ಸುರಂಗ ಹಾದುಹೋಗುವ ಮಾರ್ಗದಲ್ಲಿ ಗುರುತಿಸಲಾಗಿರುವ ಪ್ರಮುಖ ಸ್ಥಳಗಳಲ್ಲಿ ಒಂದಾದ ಹೆಬ್ಬಾಳದ 'ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಗುತ್ತಿಗೆದಾರರು ಮಣ್ಣು ಪರೀಕ್ಷೆ ಕಾರ್ಯವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.