ಬೆಂಗಳೂರು 'ಮಲಯಾಳಿಗಳ ಹಬ್' ಎಂದ ಕೇರಳಿಗರು; ವಿಡಿಯೊ ವೈರಲ್, ಕನ್ನಡಿಗರ ಆಕ್ರೋಶ
Viral video: ಈ ವಿಡಿಯೋ ಹಂಚಿಕೊಂಡಿರುವ ಕನ್ನಡಿಗರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಬೇರೆ. ರಾಜ್ಯಗಳಿಂದ ಬಂದು ಇಲ್ಲಿ ನೆಲೆಸುವವರು ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಗೌರವಿಸುವುದನ್ನು ಬಿಟ್ಟು, ಪ್ರದೇಶಗಳ ಹೆಸರನ್ನೇ ಬದಲಾಯಿಸಲು ಹೊರಟಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿನ ಕೇರಳಿಗರು. -
ಬೆಂಗಳೂರು: ಇತ್ತೀಚೆಗಷ್ಟೇ ಆಂಧ್ರದ ಯುವತಿಯೊಬ್ಬಳು ಮಾರತ್ತಹಳ್ಳಿಯನ್ನು 'ಮಿನಿ ಆಂಧ್ರ' ಎಂದು ಕರೆದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಬೆನ್ನಲ್ಲೇ, ಈಗ ಕೇರಳಿಗರು ಬೆಂಗಳೂರನ್ನು 'ಮಲಯಾಳಿಗಳ ಹಬ್' (Malayalis hub) ಎಂದು ಕರೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral video) ಆಗಿದೆ. ಇದಕ್ಕೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಮಲಯಾಳಿಗಳು ಬೆಂಗಳೂರಿನ ಮಡಿವಾಳ ಪ್ರದೇಶವನ್ನು ʼಮಲ್ಲುಗಳ ಹಬ್ʼ ಎಂದು ಬಣ್ಣಿಸಿರುವುದು ಕನ್ನಡಿಗರನ್ನು ಕೆರಳಿಸಿದೆ. ಈ ಬಗ್ಗೆ ನೆಟ್ಟಿಗರು ಹರಿಹಾಯ್ದಿದ್ದು, ಕೇರಳದಲ್ಲಿ 100 ಪರ್ಸೆಂಟ್ ಸಾಕ್ಷರತೆ ಇದೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ಬದುಕು ಕಟ್ಟಿಕೊಳ್ಳಲು ಮಾತ್ರ ಸಾಲು ಸಾಲಾಗಿ ಬೆಂಗಳೂರಿಗೆ ಬರುತ್ತಾರೆ. ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳಲಾಗದವರು ಇಲ್ಲಿ ಬಂದು ನಮ್ಮ ನೆಲವನ್ನೇ ತಮ್ಮ ಹಬ್ ಎಂದು ಕರೆಯುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋ ಹಂಚಿಕೊಂಡಿರುವ ಕನ್ನಡಿಗರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಬೇರೆ. ರಾಜ್ಯಗಳಿಂದ ಬಂದು ಇಲ್ಲಿ ನೆಲೆಸುವವರು ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಗೌರವಿಸುವುದನ್ನು ಬಿಟ್ಟು, ಪ್ರದೇಶಗಳ ಹೆಸರನ್ನೇ ಬದಲಾಯಿಸಲು ಹೊರಟಿರುವುದು ಸಹಿಸಲು ಸಾಧ್ಯವಿಲ್ಲ. ಕೇರಳದಲ್ಲಿ ಹೇಳಿಕೊಳ್ಳುವಂತಹ ಸೌಲಭ್ಯಗಳಿಲ್ಲ, ಡ್ರಗ್ಸ್ ಮಾಫಿಯಾದ ಹಾವಳಿ ಹೆಚ್ಚಾಗಿದೆ. ಗಲ್ಫ್ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿಂದ ಜನ ಬರುತ್ತಿದ್ದಾರೆ, ಆದರೆ ಇಲ್ಲಿ ಬಂದು ನಮ್ಮ ಊರನ್ನು ಅವರದ್ದೆಂದು ಕರೆಯುವುದು ಉದ್ಧಟತನ" ಎಂದು ಖಂಡಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ʼʼಮಡಿವಾಳ ಮಲೆಯಾಳಿಗಳ ಅಡ್ಡ ಆಗಲು ಆರಂಭವಾಗಿದ್ದು ಸುಮಾರು 2000 ಇಸವಿಯಲ್ಲಿ. 2008ರಲ್ಲಿ ಮಲಯಾಳಿಗಳ ಮೊದಲ ಲಾಡ್ಜ್ ಆರಂಭವಾಯಿತು. ಅದಾದ ಬಳಿಕ ಒಂದೊಂದಾಗಿ ಮಲೆಯಾಳಿಗಳ ಹೊಟೆಲ್, ಅಂಗಡಿ ಪಿಜಿ ಆರಂಭವಾಯ್ತು. ಮೆಜೆಸ್ಟಿಕ್ ಸುರಕ್ಷಿತವಲ್ಲ ಎಂದಾದ ಬಳಿಕ ಮಲಯಾಳಿಗಳು ಮಡಿವಾಳಕ್ಕೆ ಶಿಫ್ಟ್ ಆದರು. 2016ರಿಂದ ಮಡಿವಾಳದಲ್ಲಿ ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗತೊಡಗಿದರು. ಕನ್ನಡಿಗರ ಬೇಕರಿ, ಹೋಟೆಲ್‌ಗಳೆಲ್ಲ ಮಲಯಾಳಿಗಳ ಚಾ ಅಂಗಡಿಯಾಗತೊಡಗಿದವು. 25 ವರ್ಷಗಳಲ್ಲಿ ಈ ಎಲ್ಲ ಬದಲಾವಣೆ ಕಂಡು ಬಂದಿದೆ. 2003ರಲ್ಲಿ ಮಡಿವಾಳದಲ್ಲಿ ಸ್ಥಳಕ್ಕೆ 3-4 ಲಕ್ಷ ರುಪಾಯಿ ಇದ್ದರೆ ಈಗ 4-5 ಕೋಟಿ ರುಪಾಯಿಗೆ ಏರಿದೆ. ಇದಕ್ಕೆಲ್ಲ ಮುಖ್ಯ ಕಾರಣ ಸಚಿವ ರಾಮಲಿಂಗಾ ರೆಡ್ಡಿ, ಕೇರಳ ಸಮಾಜಂ ಮುಂತಾದ ಸಂಘ ಸಂಸ್ಥೆಗಳು. ಹಿಂದೆಲ್ಲ ಮಲಯಾಳಿಗಳ ಅಂಗಡಿ, ಹೋಟೆಲ್‌ಗಳಿಗೆ ಪ್ರತಿದಿನ ಏನಾದರೂ ಸಮಸ್ಯೆ ಎದುರಾಗುತ್ತಿತ್ತು. ಬಳಿಕ ಇವರು ಬಂದು ಈ ಸಮಸ್ಯೆಗಳನ್ನೆಲ್ಲ ಪರಿಹರಿಸಿದರುʼʼ ಎಂದು ಹೇಳಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ವೈರಲ್ ವಿಡಿಯೊ ಇಲ್ಲಿದೆ:
ಇಡೀ ಕೇರಳ ಮಲಯಾಳಿಗಳಿಗೆ ಗಬ್ಬು, ಬೇರೆಯೂರುಗಳೆಲ್ಲ ಹಬ್ಬು, ಅಲ್ಲಿ ಯಾವುದೇ ಸೌಲಭ್ಯಗಳಿಲ್ಲ, ಇರಾನಿ ಬಂಧುಗಳು, ಡ್ರಗ್ಸ್ ಇವೇ ನಿತ್ಯ ಜೀವನಕ್ಕೆ, ಅದಕ್ಕೆ ಅಲ್ಲಿoದ ಬಂದು ಸಾಯೋದು, ಗಲ್ಫ್ ರಾಜ್ಯಗಳ ಬಿಕ್ಕಟ್ಟಿನಿಂದ ಮತ್ತಷ್ಟು ವಲಸೆ ಖಂಡಿತ. pic.twitter.com/tiqkYqiU71
— ₘₒₜᵢᵥₐₜₑd!ₗᵢₗ!Dₑₘₒₙ (@AryakavyaA) March 7, 2026
ಜಾತ್ರೋತ್ಸವದ ವೇಳೆ ಮಾವುತನನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ: ಭಯಾನಕ ವಿಡಿಯೊ ವೈರಲ್
ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂಬ ಭಯ ಸ್ಥಳೀಯರಲ್ಲಿ ಹೆಚ್ಚಾಗಿದೆ. ವಲಸಿಗರ ಹಾವಳಿಯನ್ನು ಹತ್ತಿಕ್ಕಲು ಮತ್ತು ಕನ್ನಡಿಗರ ಹಿತರಕ್ಷಣೆ ಮಾಡಲು ಕನ್ನಡ ಹೋರಾಟಗಾರರು ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಹುಡುಕಬೇಕಾದ ಸ್ಥಿತಿ ಬರಬಹುದು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.