ಗ್ರೀನಾ ಕಾರಿಡಾರ್ ಆಗಿ ಬದಲಾದ ಬೆಂಗಳೂರು ಮೆಟ್ರೋ; ಶೇಷಾದ್ರಿಪುರಂ ಅಪೋಲೋ ಹಾಸ್ಪಿಟಲ್ ಗೆ ಸೂಕ್ತ ಸಮಯದಲ್ಲಿ ತಲುಪಿದ ಹೃದಯ
ಬಿಎಂಆರ್‌ಸಿಎಲ್, ನಗರ ಪೊಲೀಸರು ಮತ್ತು ಆಸ್ಪತ್ರೆಯ ಹೃದಯ ಕಸಿ ತಂಡದ ನಡುವಿನ ಸಮನ್ವ ಯತೆಯಿಂದಾಗಿ ದಾನಿಯ ಹೃದಯವನ್ನು 18 ನಿಮಿಷಗಳಲ್ಲಿ ತಲುಪಿಸಲಾಗಿದ್ದು, ದಾಖಲೆ ಸಮಯ ದಲ್ಲಿ ಹೃದಯವನ್ನು ತಲುಪಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ “ಗೋಲ್ಡನ್ ವಿಂಡೋ” ಎಂದು ಕರೆಯಲ್ಪಡುವ ಸಮಯದೊಳಗೆ ಹೃದಯವನ್ನು ರವಾನಿಸಲಾಯಿತು. ಈ ಅಪೂರ್ವ ಪ್ರಯತ್ನವು ಅಸ್ಸಾಂನ 33 ವರ್ಷದ ವೈದ್ಯರಿಗೆ ಹೊಸ ಜೀವನವನ್ನು ನೀಡಿದೆ.

-

ಬೆಂಗಳೂರುಗಳೂರಿನಲ್ಲಿ ನಡೆದಿದೆ. ಹೃದಯ ಸಾಗಿಸಲು ಮೆಟ್ರೋ ಬಳಸಿದ್ದು ಇದೇ ಮೊದಲನೇ ಸಲವಾಗಿದೆ. ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮತ್ತು ರಾಜ್ಯ ಆರೋಗ್ಯ ಇಲಾಖೆ, ಜೀವ ಸಾರ್ಥಕತೆ (ಜೆಎಸ್ಕೆ) ತಂಡಗಳ ಸಹಕಾರದಲ್ಲಿ ಈ ಕಾರ್ಯ ನಡೆದಿದ್ದು, ಮೆಟ್ರೋ ರೈಲಿನ ಮೂಲಕ ಯಶಸ್ವಿಯಾಗಿ ಮಾನವ ಹೃದಯವನ್ನು ಸಾಗಿಸಲಾಯಿತು. ಈ ಮೂಲಕ ಅಂಗಾಂಗ ಸಾಗಣೆಗೆ ತೊಡಕು ಉಂಟು ಮಾಡುವ ಟ್ರಾಫಿಕ್ ಸಮಸ್ಯೆಯನ್ನು ಯಶಸ್ವಿಯಾಗಿ ನಿವಾರಿಸಲಾಯಿತು.
ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿದ್ದ ದಾನಿಯಿಂದ ಪಡೆಯಲಾದ ಹೃದಯವನ್ನು ತುರ್ತು ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಬೇಕಿತ್ತು. ಅಲ್ಲಿ ಸಂಕೀರ್ಣವಾದ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಹೀಗಾಗಿ ಟ್ರಾಫಿಕ್ ನಿಂದ ತಪ್ಪಿಸಿಕೊಂಡು ವೇಗವಾಗಿ ಹೃದಯ ಸಾಗಣೆ ಮಾಡಲು ಮೆಟ್ರೋ ರೈಲನ್ನು ಬಳಸಾಗಿದ್ದು, ಯಶವಂತಪುರ ಮೆಟ್ರೋ ನಿಲ್ದಾಣದಿಂದ ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣ ದವರೆಗೆ ಪ್ರಯಾಣಿಕರಿಗೆ ಯಾವುದೋ ತೊಂದರೆ ಆಗದಂತೆ ನೋಡಿಕೊಂಡು ಮೆಟ್ರೋ ಕಾರಿಡಾರ್ ಬಳಸಿ ಹೃದಯವನ್ನು ಸಾಗಿಸಲಾಯಿತು.
ಬಿಎಂಆರ್‌ಸಿಎಲ್, ನಗರ ಪೊಲೀಸರು ಮತ್ತು ಆಸ್ಪತ್ರೆಯ ಹೃದಯ ಕಸಿ ತಂಡದ ನಡುವಿನ ಸಮನ್ವಯತೆಯಿಂದಾಗಿ ದಾನಿಯ ಹೃದಯವನ್ನು 18 ನಿಮಿಷಗಳಲ್ಲಿ ತಲುಪಿಸಲಾಗಿದ್ದು, ದಾಖಲೆ ಸಮಯದಲ್ಲಿ ಹೃದಯವನ್ನು ತಲುಪಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ “ಗೋಲ್ಡನ್ ವಿಂಡೋ” ಎಂದು ಕರೆಯಲ್ಪಡುವ ಸಮಯದೊಳಗೆ ಹೃದಯವನ್ನು ರವಾನಿಸಲಾಯಿತು. ಈ ಅಪೂರ್ವ ಪ್ರಯತ್ನವು ಅಸ್ಸಾಂನ 33 ವರ್ಷದ ವೈದ್ಯರಿಗೆ ಹೊಸ ಜೀವನವನ್ನು ನೀಡಿದೆ.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಈ ವೈದ್ಯರು ಬಹಳ ಕಾಲದಿಂದ ಹೃದಯ ವೈಫಲ್ಯದಿಂದ ಬಳಲುತ್ತಿದ್ದರು. 2023 ರಿಂದಲೂ ಅವರು ಹೃದಯ ಕಸಿಗಾಗಿ ಹೃದಯ ಸಿಗುವ ಭರವಸೆಯಲ್ಲಿ ಕಾಯುತ್ತಿದ್ದರು. ಆದರೆ ಸೂಕ್ತ ಹೃದಯ ದಾನಿಗಳು ಸಿಕ್ಕಿರಲಿಲ್ಲ. ಅಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳಿಂದ ಮತ್ತು ರಾಜ್ಯದ ವಿವಿಧ ಆಸ್ಪತ್ರೆಗಳ ತಜ್ಞ ಕಸಿ ವೈದ್ಯರು ಹಾಗೂ ಜೆ ಎಸ್ ಕೆ ಮಾಡಿರುವ ಅದ್ಭುತ ಕೆಲಸದಿಂದ ಈಗ ಅಂಗ ದಾನವು ಅತ್ಯಂತ ಸಾಮಾನ್ಯವಾದ ಪ್ರಕ್ರಿಯೆಯಾಗಿದೆ. ಹೊಸ ಜೀವನಕ್ಕಾಗಿ ಕಾಯುತ್ತಿರುವ ಬಹಳಷ್ಟು ರೋಗಿಗಳಿಗೆ ಈ ಮೂಲಕ ವಿವಿಧ ಅಂಗಗಳು ಲಭ್ಯವಾಗಿವೆ. ಅದೇ ಭರವಸೆಯಲ್ಲಿ ಅಸ್ಸಾಂನ ವೈದ್ಯರು ಕಾಯುತ್ತಿದ್ದರು.
ಇತ್ತೀಚೆಗೆ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ತುರ್ತು ಕಾರಣಕ್ಕೆ ದಾಖಲಿಸ ಲಾಯಿತು. ಸೂಕ್ತ ದಾನಿ ಸಿಕ್ಕಿದ್ದರಿಂದ ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಅಪೋಲೋ ಗ್ರೂಪ್ ನ ತಜ್ಞ ವೈದ್ಯರ ತಂಡವು ಈ ಮಹತ್ವದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿತು.
ಈ ಕುರಿತು ಮಾತನಾಡಿರುವ ಪ್ರಕ್ರಿಯೆಯಲ್ಲಿ ಭಾಗವಾಗಿದ್ದ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕರೊಬ್ಬರು, "ಅಂಗ ಕಸಿಯ ವಿಷಯದಲ್ಲಿ ಪ್ರತಿ ನಿಮಿಷವೂ ಅಮೂಲ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಮತ್ತು ಜೆ ಎಸ್ ಕೆ ಒದಗಿಸಿದ ಸಹಕಾರದಿಂದ ಹೃದಯವನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಆಸ್ಪತ್ರೆಗೆ ತಲುಪಿಸ ಲಾಯಿತು. ಆ ಮೂಲಕ ರೋಗಿಯ ಜೀವ ಉಳಿಸಲಾಯಿತು. ತಂತ್ರಜ್ಞಾನ, ಮೂಲ ಸೌಕರ್ಯ ಮತ್ತು ವೈದ್ಯಕೀಯ ಪರಿಣತಿಯು ಒಂದು ಜೀವವನ್ನು ಉಳಿಸಲು ಹೇಗೆ ಒಗ್ಗೂಡ ಬಹುದು ಎಂಬುದಕ್ಕೆ ಇದೊಂದು ಪ್ರಕರಣ ಅತ್ಯುತ್ತಮ ಉದಾಹರಣೆಯಾಗಿದೆ. ಅಲ್ಲದೇ ಈ ಪ್ರಕರಣವು ಭಾರತದ ನಗರಗಳಲ್ಲಿನ ಭವಿಷ್ಯದ ಅಂಗ ಸಾಗಣೆ ಪ್ರಕ್ರಿಯೆಗಳಿಗೆ ಒಂದು ಹೊಸ ಮಾದರಿಯನ್ನು ಹಾಕಿಕೊಟ್ಟಿದೆ. ಬೆಂಗಳೂರಿನ ಗ್ರೀನ್ ಕಾರಿಡಾರ್ ಮತ್ತು ತ್ವರಿತ ಅಂಗಾಂಗ ಸಾಗಾಣೆ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನಗಳಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.
ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ ಮತ್ತೊಬ್ಬ ಹಿರಿಯ ವಕ್ತಾರರು ಮಾತನಾಡಿ, "ಇಂತಹ ಸಾಧನೆಗೆ ಸರಿಯಾದ ಉದ್ದೇಶ ಹೊಂದಿರುವ ನೂರಾರು ಜನರ ಸಮನ್ವಯ ಮತ್ತು ಸಹಕಾರ ಅಗತ್ಯವಿರುತ್ತದೆ. ಆಂಬುಲೆನ್ಸ್ ಚಾಲಕರು, ದಾದಿಯರು, ಆಪರೇಷನ್ ಥಿಯೇಟರ್ ಸಿಬ್ಬಂದಿ, ಪ್ಯಾರಾಮೆಡಿಕ್ಸ್, ವೈದ್ಯಕೀಯ ಸೇವೆಗಳು, ಭದ್ರತಾ ತಂಡಗಳು, ಆಡಳಿತ ಸಿಬ್ಬಂದಿ, ಜೊತೆಗೆ ಶಸ್ತ್ರಚಿಕಿತ್ಸಕರು ಮತ್ತು ಶಸ್ತ್ರಚಿಕಿತ್ಸಾ ತಜ್ಞರು ಎಲ್ಲರೂ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಸಂದರ್ಭದಲ್ಲಿ ವಿಶೇಷವಾಗಿ ದಾನಿಯ ಕುಟುಂಬದ ನಿಸ್ವಾರ್ಥ ಕೊಡುಗೆಗೆ ಮತ್ತು ಈ ಕಾರ್ಯ ವನ್ನು ಯಶಸ್ವಿಗೊಳಿಸಿದ ಎಲ್ಲಾ ಸಂಸ್ಥೆಗಳಿಗೆ ನಾವು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಸಮಯಕ್ಕೆ ಸರಿಯಾಗಿ ಮತ್ತು ಅದ್ಭುತವಾಗಿ ಸಹಕಾರ ನೀಡಿದ ಬಿಎಂಆರ್‌ಸಿಎಲ್ ಮತ್ತು ಜೀವ ಸಾರ್ಥಕತೆ ತಂಡಗಳಿಗೆ ಮನಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇವೆ. ಕೇವಲ ಎರಡು ಗಂಟೆಗಳ ಮುಂಗಡ ಸೂಚನೆ ಇದ್ದರೂ ಅವರ ತಂಡಗಳು ತಕ್ಷಣ ಸ್ಪಂದಿಸಿ, ಯಾವುದೇ ತೊಂದರೆ ಉಂಟಾಗ ದಂತೆ ಹೃದಯ ಸಾಗಣೆಗೆ ಅನುವು ಮಾಡಿಕೊಟ್ಟವು. ಇದರಿಂದ ಒಂದು ಜೀವ ಉಳಿಸುವ ಪ್ರಯತ್ನ ಮಾಡುವುದು ಸಾಧ್ಯವಾಯಿತು" ಎಂದು ಹೇಳಿದರು.