#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bengaluru Power Cut: ಫೆ.14, 15ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ 66/11 ಕೆವಿ ಎಲಿಟಾ ಪ್ರೋಮೊನೇಡ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಫೆ. 14ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಫೆ.14, 15ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಸಾಂದರ್ಭಿಕ ಚಿತ್ರ.

Profile Siddalinga Swamy Feb 13, 2025 10:27 PM

ಬೆಂಗಳೂರು: 66/11 ಕೆವಿ ಎಲಿಟಾ ಪ್ರೋಮೊನೇಡ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ. 14, ಫೆ. 15ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಫೆ. 14ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ʼಎಲಿಟಾ ಪ್ರೋಮೊನೇಡ್ ಅಪಾರ್ಟ್‌ಮೆಂಟ್, ಕೆ.ಆರ್. ಲೇಔಟ್, ಶಾರದಾನಗರ, ಚುಂಚುನ್ ಘಟ್ಟ ಮತ್ತು ಉಪ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಇನ್ನು 66/11 ಕೆವಿ ಪ್ರೆಸ್ಟೀಜ್ ಶಾಂತಿನಿಕೇತನ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ 14ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪವರ್‌ ಕಟ್‌ ಇರಲಿದೆ.

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು: ಶಾಂತಿನಿಕೇತನ ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್‌, ಬ್ರಿಗೇಡ್ ಲೇಕ್ ಫ್ರಂಟ್ ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್‌, ಟೋಟಲ್ ಎನ್ವಿರಾನ್ ಮೆಂಟ್ ಅಪಾರ್ಟ್ಮೆಂಟ್, ಇಪಿಐಪಿ ಇಂಡಸ್ಟ್ರೀಯಲ್ ಏರಿಯಾ, ಸದರಮಂಗಳ ಇಂಡಸ್ಟ್ರೀಯಲ್ ಏರಿಯಾ, ನಲ್ಲರಹಳ್ಳಿ ವಿಲೇಜ್, ಪಟ್ಟಂದೂರು ಅಗ್ರಹಾರ, ಇಸಿಸಿ ರೋಡ್, ಸಿದ್ದಾಪುರ ರೋಡ್, ಐಟಿಪಿಎಲ್ ಮುಖ್ಯ ರಸ್ತೆ.

66/11 ಕೆವಿ ರೆಮ್ಕೋ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ 14ರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು: ಮೈಸೂರು ರೋಡ್‌ 7ನೇ ಅಡ್ಡರಸ್ತೆ, ಶ್ಯಾಮಣ್ಣ ಗಾರ್ಡನ್‌, ಮಂಜುನಾಥ ನಗರ, ಪೈಪಲೈನ್, ಸಂತೋ಼ಷ ಟೆಂಟ್‌, ಅನಂತ ರಾಮಯ್ಯ ಕಾಂಪೌಂಡ್‌, ಹೊಸ ಮತ್ತು ಹಳೆ ಗುಡ್ಡದ ಹಳ್ಳಿ, ಕುವೆಂಪುನಗರ, 6ನೇ ಮತ್ತು 4ನೇ ಮೈಸೂರು ರೋಡ್‌ ಅಡ್ಡರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

66/11 ಕೆವಿ ಬನಶಂಕರಿ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ 15ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು: ಶ್ರೀನಗರ, ಹೊಕೆರೆಹಳ್ಳಿ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ಸೀತಾ ವೃತ್ತ, ವಿದ್ಯಾಪೀಠ ವೃತ್ತ, ಪ್ರಮೋದ್ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರಸ್ತೆ, ಕತ್ತಿಗುಪ್ಪೆ, ಅವಲಹಳ್ಳಿ, ಸ್ಟರ್ಲಿಂಗ್ ಅಪಾರ್ಟ್‌ಮೆಂಟ್, ಎನ್‌ಟಿವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬನಶಂಕರಿ 3ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

66/11 ಕೆವಿ ಎಲ್ಕೆಟ್ರಾನ್ ಸಿಟಿ ಫೇಸ್ -2 ವಿ.ವಿ. ಕೇಂದ್ರ (ಮಾಲ್ಗುಡಿ ವಿ.ವಿ.ಕೇಂದ್ರ ಮತ್ತು ಚೊಕ್ಕಸಂದ್ರ ವಿ.ವಿ.ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ 15ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು: ಎಲೆಕ್ಟ್ರಾನಿಕ್‌ ಸಿಟಿ ಫೇಸ್ -2, ವೀರಸಂದ್ರ, ದೊಡ್ಡನಾಗಮಂಗಳ, ಟೆಕ್ಮಹಿಂದ್ರ, ಇ.ಎಚ್.ಟಿ. ಟಾಟಾ ಬಿ.ಪಿ.ಸೋಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

66/11 ಕೆವಿ ಕಾಡುಗೋಡಿ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ 15ರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಸುದ್ದಿಯನ್ನೂ ಓದಿ | Hampi Utsav 2025: ವಿಶ್ವವಿಖ್ಯಾತ ಹಂಪಿ ಉತ್ಸವ ವಿಜೃಂಭಣೆಯ ಆಚರಣೆಗೆ ಭರದ ಸಿದ್ಧತೆ

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು: ಬೆಳತ್ತೂರು, ಅಯಪ್ಪ ದೇವಸ್ಥಾನ, ಕುಂಬೆನ ಅಗ್ರಹಾರ, ಪಟಾಲಮ್ಮ ಲೇಔಟ್, ವಿಎಸ್‌ಆರ್ ಲೇಔಟ್, ಕಾಡುಗೋಡಿ, ಚನ್ನಸಂದ್ರ, ಎಫ್‌ಸಿಐ ಗೌಡನ್, ಸಫಲ್, ವಿಎಸ್‌ಆರ್ ಲೇಔಟ್, ಕಾಡುಗೋಡಿ, ಶಂಕ್ರಪುರ, ಸಿದ್ದಾರ್ಥ ಲೇಔಟ್, ಸಾಯಿ ಆಶ್ರಮ, ಎಚ್‌ಡಿಎಫ್‌ಸಿ ಬ್ಯಾಂಕ್, ಅಲಂಬಿಕ್ ಆ್ಯಪ್ಟ್, ಮಾರ್ವೆಲ್ ಆಪ್ಟ್, ದಿನ್ನೂರು ಪೊಲೀಸ್ ಠಾಣೆ, ಮೈತ್ರಿ ಲೇಔಟ್, ಸರ್ಕಾರಿ ಪಾಲಿಟೆಕ್ನಿಕ್, ಚನ್ನಸಂದ್ರ ಮುಖ್ಯ ರಸ್ತೆ ನಾಗೊಂಡನಹಳ್ಳಿ, ನಾಗರಾಜ್ ಲೇಔಟ್, ದೊಮ್ಮರ ಪಾಳ್ಯ, ಪ್ರಶಾಂತ್ ಲೇಔಟ್, ಉಪಕಾರ್ ಲೇಔಟ್, ಪೃಥ್ವಿ ಲೇಔಟ್, ಸ್ವಾಮಿ ವಿವೇಕಾನಂದ ರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಇಸಿಸಿ ರಸ್ತೆ, ಪ್ರಶಾಂತ್ ಲೇಔಟ್, ಪ್ರಶಾಂತ್ ಲೇಔಟ್, ಪ್ರಶಾಂತ್ ಲೇಔಟ್, ಪ್ರಶಾಂತ್ ಲೇಔಟ್, ರಸ್ತೆ, ಒಳ ವೃತ್ತ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ವೈಟ್‌ಫೀಲ್ಡ್ ಮುಖ್ಯ ರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಆದರ್ಶ ಫಾರ್ಮ್ ಮೆಡೋಸ್, ಬೋರ್‌ವೆಲ್ ರಸ್ತೆ, ಬ್ರೋಕ್ ಸ್ಟ್ರೀಟ್, ಔಟರ್ ಸ್ಟ್ರೀಟ್ ಹಗದೂರು, ಹಗಡೂರು ಕೇನ್, ವಿನಾಯಕನಗರ, ಬ್ರಿಗೇಡ್ ಕಾಸ್ಪೊಲೀಸ್ ಆಪ್ಟ್, ಗೋಯಲ್ ಹರಿಯಾಣ ಆಪ್ಟ್, ವಿಜಯನಗರ, ಗಾಂಧಿಪುರ, ಇಮ್ಮಡಿಹಳ್ಳಿ ಮುಖ್ಯರಸ್ತೆ, ಹಗದೂರು, ನಗೊಂಡನಹಳ್ಳಿ, ನಾಗರಾಜ್ ಲೇಔಟ್, ದೊಬರಪಾಳ್ಯ, ಇಮ್ಮಡಿಹಳ್ಳಿ, ಸುಮಧುರ ಆಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್‌ ಕಟ್‌ ಇರಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.