ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Power Cut: ಗಮನಿಸಿ; ಜುಲೈ 18, 19ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Bengaluru Power Cut: 220/66/11 ಕೆ.ವಿ. ಐ.ಟಿ.ಐ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ-1 ಮತ್ತು 2 ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜುಲೈ 18ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಜುಲೈ 18, 19ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಸಾಂದರ್ಭಿಕ ಚಿತ್ರ. -

Profile
Siddalinga Swamy Jul 17, 2026 7:12 PM

ಬೆಂಗಳೂರು, ಜು.17: 220/66/11 ಕೆ.ವಿ. ಐ.ಟಿ.ಐ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ-1 ಮತ್ತು 2 ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜುಲೈ 18ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಜೈ ಭುವನೇಶ್ವರಿ ಲೇಔಟ್, ಕೆ.ಆರ್. ಪುರಂ ಮುಖ್ಯ ರಸ್ತೆ, ದೀಪಾ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ, ವಿನಾಯಕ ಲೇಔಟ್, ಅಜಿತ್ ಲೇಔಟ್, ಟಿ.ಸಿ. ಪಾಳ್ಯ ಸಿಗ್ನಲ್, ಭಟ್ಟರಹಳ್ಳಿ, ಚಿಕ್ಕಬಸವನಪುರ, ಎಸ್‌ಇಎ ಕಾಲೇಜು, ಆಲ್ಫಾ ಗಾರ್ಡನ್, ಸ್ವಾತಂತ್ರ ನಗರ, ರಾಜರಾಜೇಶ್ವರಿ ಲೇಔಟ್, ಮುನೇಶ್ವರ ಲೇಔಟ್, ಆಲ್ಫಾ ಗಾರ್ಡನ್ ಲೇಔಟ್, ಕೊಕೊನಟ್ ಗಾರ್ಡನ್, ಬೆಥೆಲ್ ನಗರ, ಬೃಂದಾವನ ಲೇಔಟ್, ಕೆ.ಆರ್.ಆರ್. ಲೇಔಟ್, ಕೇಂಬ್ರಿಡ್ಜ್ ಲೇಔಟ್, ಕೇಂಬ್ರಿಡ್ಜ್ ಗಾರ್ಡನ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಜುಲೈ 19ರಂದು ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

66/11ಕೆ.ವಿ ಲೀಲಾ ವೆಂಚ್ಯೂರ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜುಲೈ 19ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಏರ್‌ಪೋರ್ಟ್ ರಸ್ತೆ, ಕೊಡಿಹಳ್ಳಿ, 16ನೇ ಮುಖ್ಯ ರಸ್ತೆ, 19ನೇ ಮುಖ್ಯ ರಸ್ತೆ, ಎಚ್‌ಎಎಲ್ 2ನೇ ಹಂತ, ಕಾರ್ಲ್ಟನ್ ಟವರ್ಸ್, ಎನ್‌ಎಎಲ್ ಕಾಂಪೌAಡ್, ರಾಮ ದೇವಸ್ಥಾನ ರಸ್ತೆ, ವೆಂಕಟೇಶ್ವರ ಕಾಲೋನಿ, ಭೂಮಾ ರೆಡ್ಡಿ ಕಾಲೋನಿ, 515 ಕಾಲೋನಿ, ಕೊಡಿಹಳ್ಳಿ ಗ್ರಾಮ, 17ನೇ ಮುಖ್ಯ ರಸ್ತೆ, 18ನೇ ಮುಖ್ಯ ರಸ್ತೆ, 19ನೇ ಮುಖ್ಯ ರಸ್ತೆ, 100 ಅಡಿ ರಸ್ತೆ, ಸರ್ವಿಸ್ ರಸ್ತೆ, 13ನೇ 'ಊ' ಮುಖ್ಯ ರಸ್ತೆ, 12ನೇ ಮುಖ್ಯ ರಸ್ತೆ, ಡೊಂಲೂರು 2ನೇ ಹಂತ, 6ನೇ ಮುಖ್ಯ ರಸ್ತೆ, ಡಿಫೆನ್ಸ್ ಕಾಲೋನಿ, 80 ಅಡಿ ರಸ್ತೆ, 11ನೇ ಮುಖ್ಯ ರಸ್ತೆ, ಹಳೆಯ ತಿಪ್ಪಸಂದ್ರ, ಹೊಸ ತಿಪ್ಪಸಂದ್ರ, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲಾವೆಲ್ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ರಿಚ್‌ಮಂಡ್ ರಸ್ತೆ, ಕಸ್ತೂರಬಾ ರಸ್ತೆ, ವಾಲ್ಟನ್ ರಸ್ತೆ, ಡಿಕೆನ್ಸನ್ ರಸ್ತೆ, ಅಶೋಕ್ ನಗರ, ಪ್ರಿಮ್‌ರೋಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಟ್ರಿನಿಟಿ ವೃತ್ತ, ಹಲಸೂರು ರಸ್ತೆ, ಮರ್ಫಿ ಟೌನ್, ಹಲಸೂರು ಗೀತಾಂಜಲಿ ಲೇಔಟ್, ಎಚ್‌ಎಎಲ್ 3ನೇ ಹಂತ, ಹೊಸ ತಿಪ್ಪಸಂದ್ರ ಮುಖ್ಯ ರಸ್ತೆ, ಸೀತಾಪನಹಳ್ಳಿ ಕಾಲೋನಿ, ಎಡಿಇ ಕಾಂಪೌಂಡ್, ಬಿಇಎಂಎಲ್ ರಸ್ತೆ, ಗಣೇಶ ದೇವಸ್ಥಾನ, ಪ್ರಿಸ್ಟಿನ್ ಪಾರ್ಕ್, 80 ಅಡಿ ರಸ್ತೆ, ಹೊಸ ತಿಪ್ಪಸಂದ್ರ, ಎಚ್‌ಎಎಲ್ 2ನೇ ಹಂತ, ಡಿಫೆನ್ಸ್ ಕಾಲೋನಿ, ಮೊಟ್ಟಪ್ಪನಪಾಳ್ಯ, ಅಪ್ಪಾರೆಡ್ಡಿ ಪಾಳ್ಯ, ಇಸ್ರೋ ಕ್ವಾರ್ಟರ್ಸ್, ಇಎಸ್‌ಐ ಆಸ್ಪತ್ರೆ, ಟೆಲಿಫೋನ್ ಎಕ್ಸ್‌ಚೇಂಜ್ ಪ್ರದೇಶ, ಭಾರತ್ ಸಹಕಾರ ಬ್ಯಾಂಕ್, ಪೂಜಾ ಅಪಾರ್ಟ್ಮೆಂಟ್, ಹಳೆಯ ತಿಪ್ಪಸಂದ್ರ, 6ನೇ ಮುಖ್ಯ ರಸ್ತೆ, ಹುಲ್ಲೇರಿ, ಜಿ.ಜಿ. ಆಸ್ಪತ್ರೆ, 9ನೇ ಮುಖ್ಯ ರಸ್ತೆ, 4ನೇ ಮುಖ್ಯ ರಸ್ತೆ, ಎಚ್‌ಎಎಲ್ 3ನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪೀಣ್ಯ ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ

220/66/11 ಕೆ.ವಿ. ಎಸ್‌ಆರ್‌ಎಸ್ ಪೀಣ್ಯ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಎನ್-4/ ಎನ್-5/ ಎನ್-7 ಉಪ ವಿಭಾಗದ ಹಲವೆಡೆ ಜುಲೈ 19ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ʼಒಂದು ರಾಷ್ಟ್ರ, ಒಂದು ಸಮಯ'ಕ್ಕೆ ಇಸ್ರೋ ಸಹಯೋಗ ಅನನ್ಯ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬಣ್ಣನೆ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಪೀಣ್ಯ ಗ್ರಾಮ, ಎಸ್.ಆರ್.ಎಸ್. ರಸ್ತೆ, 4ನೇ ಬ್ಲಾಕ್, 2ನೇ ಬ್ಲಾಕ್, ಎಂ.ಇ.ಐ. (MEI) ಫ್ಯಾಕ್ಟರಿ, 7ನೇ ಮುಖ್ಯ ರಸ್ತೆ, ಭಾರತ್ ಕಂಡಕ್ಟರ್ ರಸ್ತೆ, ಮಾಲಿನ್ಯ ನಿಯಂತ್ರಣ ಮಂಡಳಿ ರಸ್ತೆ, ಬ್ರೆಮ್ಮೆಲ್ ರಬ್ಬರ್ ರಸ್ತೆ, ಎಸ್.ಆರ್.ಎಸ್. ಮುಖ್ಯ ರಸ್ತೆ, 3ನೇ ಹಂತ, 10ನೇ ಅಡ್ಡರಸ್ತೆ, 1ನೇ ಹಂತ, ಪಿ.ಐ.ಎ. (PIA) 3ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, 1ನೇ ಹಂತ, ಪೀಣ್ಯ ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಅನುಸೋಲಾರ್ ರಸ್ತೆ, ಚೇರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ವೃತ್ತ, ಸ್ನೋ ವೈಟ್ ರಸ್ತೆ, ಜನರಲ್ ಮೆಟಲ್ ರಸ್ತೆ, ಮೈಸೂರು ಇಂಜಿನಿಯರಿಂಗ್ ರಸ್ತೆ, ಸನ್‌ರೈಸ್ ಕಾಸ್ಟಿಂಗ್ ರಸ್ತೆ, 3ನೇ ಹಂತ, ವೈಷ್ಣವಿ ಮಾಲ್ ಮತ್ತು ಕಾವೇರಿ ಮಾಲ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.