ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ; ರ‍್ಯಾಶ್‌ ಡ್ರೈವಿಂಗ್‌ ಪ್ರಶ್ನಿಸಿದ ಯುವತಿಗೆ ಹೊಡೆದ ರ‍್ಯಾಪಿಡೋ ಬೈಕ್ ಚಾಲಕ

Rapido Bike Driver: ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಚಾಲಕನೊಬ್ಬ ಯುವತಿ ಮೇಲೆ ಹಲ್ಲೆ ನಡೆಸಿರುವ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರ‍್ಯಾಶ್‌ ಡ್ರೈವಿಂಗ್‌ ಬಗ್ಗೆ ಯುವತಿ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಚಾಲಕ ಆಕೆಯ ಕೆನ್ನೆ ಮೇಲೆ ಹೊಡೆದಿದ್ದಾನೆ ಎನ್ನಲಾಗಿದೆ.

ರ‍್ಯಾಪಿಡೋ ಬೈಕ್ ಚಾಲಕನಿಂದ ಯುವತಿ ಮೇಲೆ ಹಲ್ಲೆ

-

Ramesh Ballamoole
Ramesh Ballamoole Jun 16, 2025 5:08 PM

ಬೆಂಗಳೂರು: ರ‍್ಯಾಪಿಡೋ ಬೈಕ್ ಚಾಲಕನೊಬ್ಬ (Rapido Bike Driver) ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ ಆಕೆಯ ಮೇಲೆ ಕೈ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರ‍್ಯಾಶ್‌ ಡ್ರೈವಿಂಗ್‌ ಬಗ್ಗೆ ಪ್ರಶ್ನಿಸಿದ ಯುವತಿಯನ್ನು ಆತ ಥಳಿಸಿದ್ದಾನೆ. ಸುಮಾರು 3 ದಿನಗಳ ಹಿಂದೆ ಜಯನಗರದಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೊ ವೈರಲ್‌ (Viral Video) ಆಗಿದೆ (Bengaluru News). ಎಲ್ಲರ ಎದುರೇ ಯುವತಿಯ ಕೆನ್ನೆಗೆ ಹೊಡೆದಿದ್ದು, ಆ ರಭಸಕ್ಕೆ ಅವಳು ನೆಲಕ್ಕೆ ಬಿದ್ದಿದ್ದಾಳೆ. ಡ್ರೈವರ್‌ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದ್ದಾರೆ.

ʼʼಬೈಕ್‌ ಇಳಿದ ಯುವತಿ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಕ್ಕೆ ಚಾಲಕನ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದಳು. ಇದರಿಂದ ರೊಚ್ಚಿಗೆದ್ದ ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Language Row: ಬೆಂಗಳೂರಲ್ಲಿ ಕನ್ನಡ ಮಾತಾಡೋದೇ ತಪ್ಪಾ?; ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಉಪನ್ಯಾಸಕ ವಜಾ!

ಏನಿದು ಘಟನೆ?

ಎಂದಿನಂತೆ ಯುವತಿ ರ‍್ಯಾಪಿಡೋ ಬೈಕ್ ಬುಕ್‌ ಮಾಡಿದ್ದಳು. ಆಕೆಯನ್ನು ಹತ್ತಿಸಿಕೊಂಡ ಚಾಲಕ ವೇಗವಾಗಿ ಬೈಕ್‌ ಓಡಿಸಿದ್ದಾನೆ. ಆಕೆ ನಿಧಾನವಾಗಿ ಓಡಿಸುವಂತೆ ಕೇಳಿಕೊಂಡಲೂ ಕಿವಿಗೆ ಹಾಕಿಕೊಂಡಿರಲಿಲ್ಲ. ಕೊನೆಗೆ ಜಯನಗರ ಫುಟ್‌ವೇರ್‌ ಬಳಿ ಇಳಿದ ಆಕೆ ರ‍್ಯಾಶ್‌ ಡ್ರೈವಿಂಗ್ ಬಗ್ಗೆ ಮತ್ತೆ ಪ್ರಶ್ನೆ ಎತ್ತಿದ್ದಳು.

ಇದರಿಂದ ಇಬ್ಬರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಒಂದಷ್ಟು ಜನರು ಗುಂಪುಗೂಡಿದ್ದರು. ಈ ಪೈಕಿ ಕೆಲವರು ಘಟನೆಯನ್ನು ಚಿತ್ರೀಕರಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಚಾಲಕ ಯುವತಿಯ ಕೆನ್ನೆಗೆ ಹೊಡೆದಿದ್ದಾನೆ. ಆತ ಹೊಡೆದ ರಭಸಕ್ಕೆ ಆಕೆ ರಸ್ತೆ ಮೇಲೆ ಬಿದ್ದಿದ್ದಾಳೆ. ಇದೆಲ್ಲ ವಿಡಿಯೊದಲ್ಲಿ ಸೆರೆಯಾಗಿದೆ.

ಇಬ್ಬರ ಮಧ್ಯೆ ಜಗಳ ನಡೆಯುತ್ತಿದ್ದರೂ ಯಾರೊಬ್ಬರೂ ಯುವತಿಯ ಸಹಾಯಕ್ಕೆ ಧಾವಿಸಲಿಲ್ಲ ಎಂದು ನೆಟ್ಟಿಗರು ಅಸಮಾಧಾನ ತೋಡಿಕೊಂಡಿದ್ದಾರೆ. ಸ್ಥಳೀಯರ ಪ್ರಕಾರ ಮಹಿಳೆ ಆರಂಭದಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಲು ಹಿಂಜರಿದಿದ್ದಾರೆ. ಮನವೊಲಿಕೆಯ ನಂತರ ಔಪಚಾರಿಕ ದೂರು ದಾಖಲಿಸಳುನೊಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿಡಿಯೊ ವೈರಲ್‌

ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ʼʼಚಾಲಕ ಯುವತಿಯನ್ನು ನಿಂದಿಸುತ್ತಿದ್ದರೂ ಆಕೆಯ ಸಹಾಯಕ್ಕೆ ಯಾರೂ ಧಾವಿಸದೇ ಇದ್ದುದು ದುರದೃಷ್ಟಕರʼʼ ಎಂದು ಒಬ್ಬರು ಹೇಳಿದ್ದಾರೆ. ʼʼಚಾಲಕ ಉತ್ತರ ಭಾರತದವನೇ ಅಥವಾ ಸ್ಥಳೀಯ ನಿವಾಸಿಯೇ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ʼʼಚಾಲಕ ಮಾನಸಿಕ ಅಸ್ವಸ್ಥನಿರಬೇಕು. ಅಂತಹವರು ಮಾತ್ರ ಹೀಗೆ ವರ್ತಿಸಲು ಸಾಧ್ಯʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಚಾಲಕ ಹೇಳಿದ್ದೇನು?

ಇನ್ನು ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಚಾಲಕ ಸುಹಾಸ್ ಪ್ರತಿಕ್ರಿಯಿಸಿದ್ದು, ʼʼಮೊದಲು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು ಆ ಯುವತಿ. ಶರ್ಟ್ ಕಟ್‌ನಲ್ಲಿ ಬಂದೆ ಅಂತ ಅರ್ಧ ದಾರಿಯಲ್ಲಿ ನಿಲ್ಲಿಸಿ ಬೈದರು ನಾನು ಐದು ವರ್ಷದಿಂದ ರ‍್ಯಾಪಿಡೋ ಓಡಿಸುತ್ತಿದ್ದೇನೆ. ದಾರಿ ಗೊತ್ತು ಅಂದೆ. ಮೊದಲು ಅವರೇ ಟಿಫಿನ್ ಬಾಕ್ಸ್‌ನಿಂದ ಹೊಡೆದಿದ್ದು. ಅಷ್ಟು ಜನರ ಮುಂದೆ ಹೊಡೆದಾಗ ಸಿಟ್ಟಲ್ಲಿ‌ ನಾನು ಹೊಡೆದೆʼʼ ಎಂದು ಸ್ಪಷ್ಟಪಡಿಸಿದ್ದಾನೆ. ಪೊಲೀಸರೊಂದಿಗೆ ತನಿಖೆಗೆ ಸಹರಿಸುತ್ತೇನೆ ಎಂದಿದ್ದಾನೆ.