ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಚ್ಐವಿ ಹರಡುವ ಕಾರ್ಖಾನೆಯಾಯಿತಾ ಪಾಕಿಸ್ತಾನ ಆಸ್ಪತ್ರೆ ? ಸಿರಿಂಜ್ ಮರುಬಳಕೆ, ವೈದ್ಯರ ನಿರ್ಲಕ್ಷ್ಯದಿಂದ ಆತಂಕ

ಪಾಕಿಸ್ತಾನ ಆಸ್ಪತ್ರೆಯಲ್ಲಿ ಸಿರಿಂಜ್ ಮರುಬಳಕೆಯಿಂದ 331 ಮಕ್ಕಳಿಗೆ ಎಚ್‌ಐವಿ ಸೋಂಕು ತಗಲಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದರೂ ಇದರ ಬಳಿಕವೂ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಮುಂದುವರಿದಿದೆ. ಮಕ್ಕಳಲ್ಲಿ ಎಚ್‌ಐವಿ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಕೂಡ ಆಸ್ಪತ್ರೆಯಲ್ಲಿ ಅಸುರಕ್ಷಿತ ವೈದ್ಯಕೀಯ ಪದ್ಧತಿಗಳನ್ನು ಅನುಸರಿಸುವುದನ್ನು ಮುಂದುವರಿಸಲಾಗಿದೆ ಎಂದು ಅನೇಕ ಕುಟುಂಬಗಳು ದೂರಿವೆ.

ಸಿರಿಂಜ್‌ ಮರುಬಳಕೆಯಿಂದ  331 ಮಕ್ಕಳಿಗೆ ಎಚ್‌ಐವಿ ಸೋಂಕು

ಸಂಗ್ರಹ ಚಿತ್ರ -

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದ (Punjab province) ಟೌನ್ಸಾದಲ್ಲಿ ಸಿರಿಂಜ್ (needles) ಮರುಬಳಕೆಯಿಂದ 331 ಮಕ್ಕಳಿಗೆ ಎಚ್‌ಐವಿ (HIV) ಸೋಂಕು‌ ತಗಲಿದೆ. ಈ ಪ್ರಕರಣ ಬೆಳಕಿಗೆ ಬಂದ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಇದರ ಬಳಿಕವು ಕೂಡ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯವಹಿಸಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಪಾಕಿಸ್ತಾನದ ತಹಸಿಲ್ ಪ್ರಧಾನ ಕಚೇರಿ (Tehsil Headquarters (THQ) Hospital) ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಅನಂತರವೂ ಆಸ್ಪತ್ರೆಯಲ್ಲಿ ಅಸುರಕ್ಷಿತ ವೈದ್ಯಕೀಯ ಪದ್ಧತಿಗಳನ್ನು ಅನುಸರಿಸುವುದನ್ನು ಮುಂದುವರಿಸಲಾಗಿದೆ ಎಂದು ಅನೇಕ ಕುಟುಂಬಗಳು ದೂರಿವೆ.

ಟೌನ್ಸಾದ ತಹಸಿಲ್ ಪ್ರಧಾನ ಕಚೇರಿ (ಟಿಎಚ್‌ಕ್ಯೂ) ಆಸ್ಪತ್ರೆಯಲ್ಲಿ ಅಸುರಕ್ಷಿತ ವಿಧಾನದಲ್ಲಿ ಚಿಕಿತ್ಸೆ ನೀಡುವುದನ್ನು ಮುಂದುವರಿಸಲಾಗಿದೆ. ನೂರಾರು ಮಕ್ಕಳಿಗೆ ವೈರಸ್ ತಗಲಿರುವುದು ಆತಂಕಕ್ಕೆ ಕಾರಣವಾಗಿದೆ.

180 ಅಪ್ರಾಪ್ತ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ; ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಬಂಧನ

ಎಚ್‌ಐವಿ ಸೋಂಕಿನಿಂದ ಇತ್ತೀಚೆಗೆ ಸಾವನ್ನಪ್ಪಿದ ಎಂಟು ವರ್ಷದ ಮೊಹಮ್ಮದ್ ಅಮೀನ್ ಕೊನೆಯ ದಿನಗಳಲ್ಲಿ ತೀವ್ರ ನೋವು ಮತ್ತು ನಿರಂತರ ಜ್ವರದಿಂದ ಬಳಲುತ್ತಿದ್ದನು. ಆತನ ಸಹೋದರಿಯಲ್ಲೂ ಕೂಡ ಇದೇ ರೀತಿಯ ಲಕ್ಷಣಗಳು ಕಂಡು ಬಂದಿವೆ. ಕಲುಷಿತ ಸಿರಿಂಜ್‌ಗಳಿಂದ ಆಸ್ಪತ್ರೆಯಲ್ಲಿ ದಿನದಲ್ಲಿ ಕನಿಷ್ಠ ಇಬ್ಬರು ಮಕ್ಕಳಿಗೆ ಎಚ್‌ಐವಿ ಸೋಂಕು ತಗಲುತ್ತದೆ ಎಂದು ಅವರ ಕುಟುಂಬ ತಿಳಿಸಿದೆ.

ತನಿಖಾ ವರದಿಯ ಪ್ರಕಾರ 2024ರ ನವೆಂಬರ್ ನಿಂದ 2025ರ ಅಕ್ಟೋಬರ್ ಮಧ್ಯೆ ಟೌನ್ಸಾದಲ್ಲಿ ಸುಮಾರು 331 ಮಕ್ಕಳಿಗೆ ಎಚ್‌ಐವಿ ಸೋಂಕು ತಗಲಿದೆ. ಪರೀಕ್ಷಿಸಲಾದ 97 ಪೀಡಿತ ಕುಟುಂಬಗಳಲ್ಲಿ ಕೇವಲ ನಾಲ್ಕು ತಾಯಂದಿರು ಮಾತ್ರ ಎಚ್‌ಐವಿ ಸೋಂಕಿತರಾಗಿರುವುದು ತಿಳಿದುಬಂದಿದೆ.

ಸಿರಿಂಜ್‌ಗಳ ಮರುಬಳಕೆ

ಟಿಎಚ್‌ಕ್ಯು ಟೌನ್ಸಾದಲ್ಲಿ ಎಚ್ ಐವಿ ಸೋಂಕು ಹರಡಲು ಮುಖ್ಯ ಕಾರಣ ಸಿರಿಂಜ್ ಗಳ ಮರುಬಳಕೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಬಹು ಡೋಸ್ ಔಷಧ ಬಾಟಲುಗಳಿಗೆ ಸಿರಿಂಜ್‌ಗಳನ್ನು ಮರುಬಳಕೆ ಮಾಡಲಾಗುತ್ತಿತ್ತು. ಒಂದೇ ಬಾಟಲಿಯನ್ನು ಅನೇಕ ಮಕ್ಕಳ ಚಿಕಿತ್ಸೆ ಬಳಸಲಾಗಿದ್ದು, ಇದು ವೈರಸ್ ಹರಡುವ ಅಪಾಯವನ್ನು ಹೆಚ್ಚಿಸಿತ್ತು. ಇಷ್ಟು ಮಾತ್ರವಲ್ಲ ಆಸ್ಪತ್ರೆ ಸಿಬ್ಬಂದಿ ಯಾವುದೇ ಸ್ಯಾನಿಟೈಸರ್ ಬಳಕೆ ಮಾಡದೇ, ಕೈಗವಸುಗಳನ್ನು ಹಾಕದೆ ಚಿಕಿತ್ಸೆ ನೀಡುತ್ತಿರುವುದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ.

Honour Killing: ಬೆಳಗಾವಿಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ, ವಿಷ ಕುಡಿಸಿ ಯುವತಿಯ ಕೊಲೆ

ಆರೋಪ ನಿರಾಕರಿಸಿದ ವೈದ್ಯಕೀಯ ಅಧೀಕ್ಷಕರು

ಸಾಕ್ಷಿ ಸಮೇತ ವರದಿ ಪ್ರಕಟವಾಗಿದ್ದರೂ ಕೂಡ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಆರೋಪಗಳನ್ನು ನಿರಾಕರಿಸಿದ್ದು, ಇಲ್ಲಿನ ಸೌಲಭ್ಯಗಳು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಮೇಲೆ 2025ರ ಮಾರ್ಚ್ ತಿಂಗಳಲ್ಲಿ ಆಗಿನ ವೈದ್ಯಕೀಯ ಅಧೀಕ್ಷಕರನ್ನು ಅಮಾನತುಗೊಳಿಸಿದ್ದು, ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಆದರೂ ಬಳಿಕವೂ ಅಸುರಕ್ಷಿತ ಅಭ್ಯಾಸಗಳು ಮುಂದುವರಿದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.