ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸುಸ್ಥಿರ ನಗರ ಜೀವನವನ್ನು ಮರು ವ್ಯಾಖ್ಯಾನಿಸುತ್ತಿದೆ ಬೆಂಗಳೂರಿನ ನೀರಿನ ಬಿಕ್ಕಟ್ಟು

ಬೆಂಗಳೂರಿನ ಸಾಂಪ್ರದಾಯಿಕ ಜಲಮೂಲಗಳು. ಐತಿಹಾಸಿಕ ದಾಖಲೆಗಳ ಪ್ರಕಾರ ನಗರದಲ್ಲಿ 260 ಕೆರೆಗಳಿದ್ದವು, ಇಂದು 80ಕ್ಕಿಂತ ಕಡಿಮೆ ಉಳಿದಿದ್ದರೂ ಅವು ಗಳಲ್ಲಿ ಬಹಳಷ್ಟು ಮಾಲಿನ್ಯಗೊಂಡಿವೆ ಅಥವಾ ಒತ್ತುವರಿಗೆ ಒಳಗಾಗಿವೆ. ಇದರಿಂದ ಸಹಜವಾಗಿ ಅಂತರ್ಜಲ ಮರುಪೂರಣದ ಮೇಲೆ ಪರಿಣಾ ಮ ಬೀರಿದೆ.

ಸುಸ್ಥಿರ ನಗರ ಜೀವನವನ್ನು ಮರು ವ್ಯಾಖ್ಯಾನಿಸುತ್ತಿದೆ ನೀರಿನ ಬಿಕ್ಕಟ್ಟು

-

Profile
Ashok Nayak Apr 7, 2026 6:35 PM

-ಗುರ್ಮಿತ್ ಸಿಂಗ್ ಅರೋರ, ರಾಷ್ಟ್ರೀಯ ಅಧ್ಯಕ್ಷರು, ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್

ಬೆಂಗಳೂರು ಹಿಂದೆ “ಕೆರೆಗಳ ನಗರ” ಎಂದು ಖ್ಯಾತಿ ಪಡೆದಿದ್ದು ಇಂದು ಭಾರತದ ಅತ್ಯಂತ ಪ್ರಮುಖ ನಗರ ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ನಗರವಾಗಿದೆ. ಇಲ್ಲಿನ ಅಂಕಿ ಅಂಶಗಳು ಆತಂಕಕಾರಿಯಾಗಿವೆ. ಬೆಂಗಳೂರಿಗೆ ದಿನಕ್ಕೆ 2,600 ಮಿಲಿಯನ್ ಲೀಟರ್ ಗಳಷ್ಟು ನೀರಿನ ಅಗತ್ಯವಿದೆ, ಆದರೆ ಕಾವೇರಿ ನೀರಿನ ಪೂರೈಕೆಯು 1,450 ಎಂ.ಎಲ್.ಡಿ ಮಾತ್ರ ಇದೆ, ಈ ಕೊರತೆಯು ಜನಸಂಖ್ಯೆಯ ಹೆಚ್ಚಳದಿಂದ ಮತ್ತಷ್ಟು ತೀವ್ರವಾಗಿದೆ.

ಈ ಅಂತರ ತುಂಬಲು ಬೆಂಗಳೂರು ಹೆಚ್ಚಾಗಿ ಅಂತರ್ಜಲವನ್ನು ನಂಬಿಕೊಂಡಿದೆ. ಅಂದಾಜುಗಳ ಪ್ರಕಾರ ನಗರದ ನೀರಿನ ಬೇಡಿಕೆಯ ಶೇ.45ರಷ್ಟು ಬೇಡಿಕೆಯನ್ನು ಬೋರ್ ವೆಲ್ ಗಳಿಂದ ಪೂರೈಸ ಲಾಗುತ್ತಿದೆ. ಆದರೆ ಇದು ದೀರ್ಘಕಾಲ ಮುಂದುವರಿಯಲಾರದು. ನಗರದ ಹಲವಾರು ಭಾಗಗಳಲ್ಲಿ ಅಂತರ್ಜಲದ ಮಟ್ಟವು 1,000 ಅಡಿಗೂ ಮೀರಿ ತಳ ಸೇರಿದ್ದು ಹಲವು ಬೋರ್ ವೆಲ್ ಗಳು ಒಣಗಿವೆ.

ಈ ಕೊರತೆಯಿಂದ ಟ್ಯಾಂಕರ್ ಅರ್ಥವ್ಯವಸ್ಥೆಯ ಪ್ರಗತಿ ಅವಕಾಶ ಕಲ್ಪಿಸಿದೆ. ನಗರದಲ್ಲಿ ಸುಮಾರು 3,000-4,000 ಖಾಸಗಿ ವಾಟರ್ ಟ್ಯಾಂಕರ್ ಗಳನ್ನು ಬಳಸುತ್ತಿದ್ದು ಪ್ರತಿ ಟ್ಯಾಂಕರ್ ದಿನಕ್ಕೆ 2-5 ಟ್ರಿಪ್ ಗಳನ್ನು ಮಾಡುತ್ತಿದ್ದು ತಿಂಗಳಿಗೆ ಪ್ರತಿ ಮನೆಯೂ ಬಳಕೆ ಮತ್ತು ಸ್ಥಳ ಆಧರಿಸಿ ₹1,000ರಿಂದ ₹5,000 ವ್ಯಯಿಸುತ್ತಿದ್ದಾರೆ. ಇದು ಬರೀ ಆರ್ಥಿಕ ಹೊರೆ ಮಾತ್ರವಲ್ಲದೆ ನೀರಿನ ಗುಣಮಟ್ಟ ಮತ್ತು ನಿಯಂತ್ರಣವಿಲ್ಲದ ನೀರು ಹೊರ ತೆಗೆಯುವ ಕುರಿತು ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: Water4Life: ಭಾರತದ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್‌ನಿಂದ ಜನ ಚಳವಳಿ

ಅಷ್ಟೇ ಆತಂಕಕಾರಿ ವಿಷಯವೆಂದರೆ ಬೆಂಗಳೂರಿನ ಸಾಂಪ್ರದಾಯಿಕ ಜಲಮೂಲಗಳು. ಐತಿಹಾಸಿಕ ದಾಖಲೆಗಳ ಪ್ರಕಾರ ನಗರದಲ್ಲಿ 260 ಕೆರೆಗಳಿದ್ದವು, ಇಂದು 80ಕ್ಕಿಂತ ಕಡಿಮೆ ಉಳಿದಿದ್ದರೂ ಅವು ಗಳಲ್ಲಿ ಬಹಳಷ್ಟು ಮಾಲಿನ್ಯಗೊಂಡಿವೆ ಅಥವಾ ಒತ್ತುವರಿಗೆ ಒಳಗಾಗಿವೆ. ಇದರಿಂದ ಸಹಜವಾಗಿ ಅಂತರ್ಜಲ ಮರುಪೂರಣದ ಮೇಲೆ ಪರಿಣಾಮ ಬೀರಿದೆ.

ಆದಾಗ್ಯೂ, ಈ ಎಲ್ಲ ಸವಾಲುಗಳ ನಡುವೆಯೂ ಸುಸ್ಥಿರ ಪರಿಹಾರಗಳತ್ತ ಬದಲಾವಣೆಯು ವೇಗ ಪಡೆಯುತ್ತಿದೆ. ಕರ್ನಾಟಕ ಸರ್ಕಾರವು ಕೆಲವು ಆಸ್ತಿಗಳ ಗಾತ್ರಕ್ಕೆ ಮಳೆನೀರು ಕೊಯಿಲು ಕಡ್ಡಾಯ ಗೊಳಿಸಿದೆ ಮತ್ತು ಅದರ ಅಳವಡಿಕೆ ಸತತವಾಗಿ ಹೆಚ್ಚುತ್ತಿದೆ. ಅಧ್ಯಯನಗಳ ಪ್ರಕಾರ ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಿದ ಮಳೆನೀರು ಕೊಯಿಲಿನ ವ್ಯವಸ್ಥೆಯು ಮನೆಯ ಹೊರಗಿನ ನೀರಿನ ಆಧಾರಪಡುವಿಕೆಯನ್ನು ವಾರ್ಷಿಕ ಶೇ.30-50ರಷ್ಟು ಕಡಿಮೆ ಮಾಡಬಲ್ಲದು.

ಮಲಿನ ನೀರಿನ ಮರುಬಳಕೆಯು ಮತ್ತೊಂದು ಪ್ರಗತಿಯ ಕ್ಷೇತ್ರವಾಗಿದೆ. ದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ವಾಣಿಜ್ಯ ಕಟ್ಟಡಗಳು ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್.ಟಿ.ಪಿ.ಗಳು) ಗಳನ್ನು ಅಳವಡಿಸಿಕೊಳ್ಳುತ್ತಿದ್ದು ಅವರಿಗೆ ಫ್ಲಷಿಂಗ್, ಲ್ಯಾಂಡ್ ಸ್ಕೇಪಿಂಗ್ ಮತ್ತು ಕೂಲಿಂಗ್ ಸಿಸ್ಟಂನಂತಹ ಉದ್ದೇಶಗಳಿಗೆ ಶೇ.60ರಿಂದ ಶೆ.70ರಷ್ಟು ನೀರನ್ನು ಮರು ಬಳಕೆ ಮಾಡಿಕೊಳ್ಳಬಹು ದಾಗಿದೆ.

0704

ನೀರನ್ನು ವ್ಯರ್ಥ ಮಾಡದ ಉತ್ಪನ್ನಗಳ ಬಳಕೆಯು ಗಮನಾರ್ಹ ವ್ಯತ್ಯಾಸ ತರಬಲ್ಲುದಾಗಿದೆ. ಕಡಿಮೆ ನೀರು ಹರಿಸುವ ನಲ್ಲಿಗಳು ಮತ್ತು ಡ್ಯುಯಲ್-ಫ್ಲಷ್ ಸಿಸ್ಟಂಗಳು ಪ್ರತಿ ಮನೆಯ ನೀರಿನ ಬಳಕೆಯನ್ನು ಶೇ.20ರಿಂದ 30ರಷ್ಟು ಕಡಿಮೆ ಮಾಡಬಲ್ಲವು. ಅಲ್ಲದೆ ಸ್ಮಾರ್ಟ್ ವಾಟರ್ ಮೀಟರ್ ಗಳು ಸೋರುವಿಕೆ ಪತ್ತೆ ಹಚ್ಚಿನ ನೀರಿನ ಬಳಕೆ ಉತ್ತಮಪಡಿಸಬಲ್ಲವು. ಒಟ್ಟಿನಲ್ಲಿ ಶೇ.65ರಷ್ಟು ಬೆಂಗಳೂರಿನ ನಿವಾಸಿಗಳು ಈಗ ನೀರಿನ ಬಳಕೆ ಕಡಿಮೆ ಮಾಡಲು ಸಕ್ರಿಯವಾಗಿ ಪ್ರಯತ್ನಿಸು ತ್ತಿದ್ದಾರೆ.

ಈ ಪರಿವರ್ತನೆಯಲ್ಲಿ ಉದ್ಯಮದ ವೇದಿಕೆಗಳೂ ಪ್ರಮುಖ ಪಾತ್ರ ವಹಿಸುತ್ತಿವೆ. ಪ್ಲಂಬೆಕ್ಸ್ ಇಂಡಿಯಾ 2026 ಡೇಟಾ-ಪ್ರೇರಿತ ಆವಿಷ್ಕಾರಗಳಾದ ಐಒಟಿ-ಸನ್ನದ್ಧ ವಾಟರ್ ಮಾನಿಟರಿಂಗ್, ಲೀಕ್ ಡಿಟೆಕ್ಷನ್ ಸಿಸ್ಟಂಗಳು ಮತ್ತು ಉನ್ನತ ದಕ್ಷತೆಯ ಪ್ಲಂಬಿಂಗ್ ತಂತ್ರಜ್ಞಾನಗು ನಗರ ನೀರಿನ ವ್ಯರ್ಥತೆಯನ್ನು ಶೇ.25-30ರಷ್ಟು ಕಡಿಮೆ ಮಾಡಬಲ್ಲವು ಎಂದು ತೋರಿಸಿವೆ.