ವನ್ಯಜೀವಿ ಚಲನಚಿತ್ರ ನಿರ್ಮಾಪಕ ಸುಹಾಸ್ ಪ್ರೇಮ್ ಕುಮಾರ್ ನಿರ್ದೇಶನದ 'ಲಿಟಲ್ ಪ್ಲಾನೆಟ್: ಎ ಟೇಲ್ ಆಫ್ ಫ್ರಾಗ್ಸ್' ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ನಿರೂಪಕ/ವಾಯ್ಸ್‌ಓವರ್ ಪ್ರಶಸ್ತಿ
ಸೌಂದರ್ಯ ಜಯಚಂದ್ರನ್ ಅವರು ನಿರೂಪಣೆ ಮಾಡಿರುವ ಈ ಸಾಕ್ಷ್ಯಚಿತ್ರವು ಜಗತ್ತಿನ ಸಮೃದ್ಧ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಕಪ್ಪೆಗಳ ಅಪೂರ್ವ ಲೋಕದ ಸಿಮ್ಯಾಟಿಕ್ ಪಯಣವಾಗಿದೆ. ಒಂಬತ್ತು ವರ್ಷಗಳ ಕಾಲ ಚಿತ್ರೀಕರಿಸಲಾದ ಈ ಸಾಕ್ಷ್ಯಚಿತ್ರವು ಉಭಯಚರಗಳ ಗಮನಾರ್ಹ ವೈವಿಧ್ಯತೆ, ವರ್ತನೆ ಮತ್ತು ಪರಿಸರ ಮಹತ್ವವನ್ನು ಸೆರೆಹಿಡಿಯುವುದರ ಜೊತೆಗೆ ಅವುಗಳ ಸೂಕ್ಷ್ಮ ಆವಾಸಸ್ಥಾನಗಳನ್ನು ಸಂರಕ್ಷಿಸುವುದರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.
-
ಬೆಂಗಳೂರು: ವನ್ಯಜೀವಿ ಚಲನಚಿತ್ರ ನಿರ್ಮಾಪಕ ಸುಹಾಸ್ ಪ್ರೇಮ್ ಕುಮಾರ್ ನಿರ್ದೇಶನದ 'ಲಿಟಲ್ ಪ್ಲಾನೆಟ್: ಎ ಟೇಲ್ ಆಫ್ ಫ್ರಾಗ್ಸ್' ಸಾಕ್ಷ್ಯಚಿತ್ರವು 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಲ್ಲಿ ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ನಿರೂಪಕ/ವಾಯ್ಸ್‌ಓವರ್ ಪ್ರಶಸ್ತಿ ಪಡೆದುಕೊಂಡಿದೆ.
ಇದನ್ನೂ ಓದಿ: 72nd National Film Awards: ದೇಶೀಯ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ನ ʼಮಿಥ್ಯʼ: ತುಳುವಿನ 'ಇಂಬು'ಗೆ ಅವಾರ್ಡ್
ಸೌಂದರ್ಯ ಜಯಚಂದ್ರನ್ ಅವರು ನಿರೂಪಣೆ ಮಾಡಿರುವ ಈ ಸಾಕ್ಷ್ಯಚಿತ್ರವು ಜಗತ್ತಿನ ಸಮೃದ್ಧ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಕಪ್ಪೆಗಳ ಅಪೂರ್ವ ಲೋಕದ ಸಿಮ್ಯಾಟಿಕ್ ಪಯಣವಾಗಿದೆ. ಒಂಬತ್ತು ವರ್ಷಗಳ ಕಾಲ ಚಿತ್ರೀಕರಿಸಲಾದ ಈ ಸಾಕ್ಷ್ಯಚಿತ್ರವು ಉಭಯಚರಗಳ ಗಮನಾರ್ಹ ವೈವಿಧ್ಯತೆ, ವರ್ತನೆ ಮತ್ತು ಪರಿಸರ ಮಹತ್ವವನ್ನು ಸೆರೆಹಿಡಿಯುವುದರ ಜೊತೆಗೆ ಅವುಗಳ ಸೂಕ್ಷ್ಮ ಆವಾಸಸ್ಥಾನಗಳನ್ನು ಸಂರಕ್ಷಿಸುವುದರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.
ಮೈ ರಿಸ್ಟಿಕಾ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಸುಹಾಸ್ ಪ್ರೇಮ್ ಕುಮಾರ್ ಮತ್ತು ರಾಜ್ ಗೋರ್ ನಿರ್ಮಿಸಿರುವ ಈ ಚಿತ್ರವು ಕರ್ನಾಟಕ ಮತ್ತು ಕೇರಳದ ಮಳೆಕಾಡುಗಳಲ್ಲಿ ನಡೆಸಿದ ವರ್ಷಗಳ ಶ್ರಮದ ಫಲವಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿರುವ ಈ ಸಾಕ್ಷ್ಯಚಿತ್ರವು ಇಲ್ಲಿಯವರೆಗೆ 18 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.