ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಾಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ವಿಜ್ಞಾನ ಪ್ರದರ್ಶನ, ವೃಕ್ಷ ವಂದನೆ ಹಾಗೂ 2 ಸಾವಿರಕ್ಕೂ ಅಧಿಕ ಸೀಡ್ ಬಾಲ್ ತಯಾರಿಕೆ

ಶಾಲೆಯ ವಿದ್ಯಾರ್ಥಿಗಳು ನೇರೆಳೆ, ಬೇವು, ಹೊಂಗೆ, ಹಿಪ್ಪೆ, ಕಾಡು ಹುಣಸೆ, ಸಪೋಟ, ಹೀಚಲ, ಕಾಡು ಬಾದಾಮಿ ಸೇರಿದಂತೆ ವಿವಿಧ ಜಾತಿಯ ಮರಗಳ ಬೀಜಗಳನ್ನು ಮನೆಗಳಿಂದ ತಂದು ಮಣ್ಣಿನ ಉಂಡೆಗಳೊಂದಿಗೆ ಸಂಯೋಜಿಸಿ ೨ ಸಾವಿರಕ್ಕೂ ಹೆಚ್ಚು ಸೀಡ್ ಬಾಲ್‌ಗಳನ್ನು ತಯಾರಿಸಿ ದರು. ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ ಸಂತೃಪ್ತಿಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು

ಅಗಲಗುರ್ಕಿ ಬಿಜಿಎಸ್ ಶಾಲೆಯಲ್ಲಿ ವಿಜ್ಞಾನ–ಪರಿಸರ ಸಂಭ್ರಮ

ಅಗಲಗುರ್ಕಿಯ ಬಿಜಿಎಸ್ ಇಂಗ್ಲಿಷ್ ಶಾಲೆಯಲ್ಲಿ ಮಹಾಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಇಸ್ರೋ ವಿಜ್ಞಾನಿ ಡಾ. ಶಿವಾನಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು 2 ಸಾವಿರಕ್ಕೂ ಅಧಿಕ ಸೀಡ್ ಬಾಲ್‌ಗಳನ್ನು ತಯಾರಿಸಿ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು -

Profile
Ashok Nayak Jul 20, 2026 11:14 PM

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲಿಷ್ ಶಾಲೆಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಜನ್ಮದಿನ ವನ್ನು ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ, ವೃಕ್ಷ ವಂದನೆ ಹಾಗೂ ಎರಡು ಸಾವಿರಕ್ಕೂ ಅಧಿಕ ಬೀಜದುಂಡೆ (ಸೀಡ್ ಬಾಲ್) ತಯಾರಿಸುವ ಕಾರ್ಯಕ್ರಮ ವಿದ್ಯಾರ್ಥಿಗಳ ಉತ್ಸಾಹದ ನಡುವೆ ನಡೆಯಿತು.

ಶಾಲೆಯ ವಿದ್ಯಾರ್ಥಿಗಳು ನೇರೆಳೆ, ಬೇವು, ಹೊಂಗೆ, ಹಿಪ್ಪೆ, ಕಾಡು ಹುಣಸೆ, ಸಪೋಟ, ಹೀಚಲ, ಕಾಡು ಬಾದಾಮಿ ಸೇರಿದಂತೆ ವಿವಿಧ ಜಾತಿಯ ಮರಗಳ ಬೀಜಗಳನ್ನು ಮನೆಗಳಿಂದ ತಂದು ಮಣ್ಣಿನ ಉಂಡೆಗಳೊAದಿಗೆ ಸಂಯೋಜಿಸಿ ೨ ಸಾವಿರಕ್ಕೂ ಹೆಚ್ಚು ಸೀಡ್ ಬಾಲ್‌ಗಳನ್ನು ತಯಾರಿಸಿ ದರು. ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ ಸಂತೃಪ್ತಿಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು.

ಇದನ್ನೂ ಓದಿ: Chikkaballapur News: ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜವಾಬ್ದಾರಿ ಹಂಚಿಕೆ: ಕದಸಂಸ ರಾಜ್ಯ ವಿಭಾಗೀಯ ಸಂಚಾಲಕರಾಗಿ ಜಿ.ಎನ್. ಸುರೇಶ್ ನೇಮಕ

ಕಾರ್ಯಕ್ರಮವನ್ನು ಉದ್ಘಾಟಿಸಿದ ಇಸ್ರೋ ವಿಜ್ಞಾನಿ ಡಾ. ಶಿವಾನಿ ಮಾತನಾಡಿ, ಶಾಲಾ ಹಂತ ದಲ್ಲೇ ವಿಜ್ಞಾನ ವಸ್ತು ಪ್ರದರ್ಶನಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿರುವ ಸೃಜನಶೀಲತೆ, ಸಂಶೋಧನಾ ಮನೋಭಾವ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಕುತೂಹಲ, ನಿರಂತರ ಪರಿಶ್ರಮ, ಸೃಜನಾತ್ಮಕತೆ ಹಾಗೂ ಸೋಲನ್ನು ಎದುರಿಸುವ ಧೈರ್ಯ ಅಗತ್ಯವಾಗಿದೆ ಎಂದು ಹೇಳಿದರು.

cbpm7science exibistion

ವಿದ್ಯಾರ್ಥಿಗಳು ಮೊಬೈಲ್ ಮತ್ತು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ತಮ್ಮ ವ್ಯಕ್ತಿತ್ವ ಹಾಗೂ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಪ್ರೌಢಶಾಲೆಯಲ್ಲಿ ಕಲಿಯುವ ಮೌಲ್ಯಗಳು ಜೀವನಪರ್ಯಂತ ಮಾರ್ಗದರ್ಶಿಯಾಗುತ್ತವೆ. ಆರೋಗ್ಯದ ಜೊತೆಗೆ ಗುರಿಸಾಧನೆಯತ್ತ ಗಮನ ಹರಿಸಿದರೆ ಯಶಸ್ಸು ಸಾಧ್ಯ ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ಇಸ್ರೋ ಸಂಸ್ಥೆಯ ಸಾಧನೆಗಳು ಹಾಗೂ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಪ್ರಾಂಶುಪಾಲ ಮೋಹನ್ ಕುಮಾರ್ ಡಿ.ಸಿ. ಮಾತನಾಡಿ, ಪೂಜ್ಯ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆ ಎಲ್ಲರಿಗೂ ಮಾದರಿಯಾಗಿದೆ. ಕರ್ನಾಟಕದಾದ್ಯಂತ ಐದು ಕೋಟಿಗೂ ಅಧಿಕ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಹೊಸ ಚಳವಳಿಯನ್ನೇ ರೂಪಿಸಿರುವ ಅವರ ಜನ್ಮದಿನದ ಅಂಗವಾಗಿ ಸೀಡ್ ಬಾಲ್ ತಯಾರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

cbpm7s

ಬಿಜಿಎಸ್ ಸಂವಿತ್ ಶಾಲೆಯ ಕೌನ್ಸಿಲರ್ ಹಾಗೂ ಶೈಕ್ಷಣಿಕ ಸಲಹೆಗಾರ್ತಿ ಕೆ.ಆರ್. ಕಲಾವತಿ ಮಾತ ನಾಡಿ, ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿಜ್ಞಾನ ಮತ್ತು ಪರಿಸರ ಜಾಗೃತಿಗೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಾಯು ಮಾಲಿನ್ಯ ನಿಯಂತ್ರಣ, ತುಂತುರು ನೀರಾವರಿ, ಹೈನು ಗಾರಿಕೆ, ರಾಕೆಟ್, ರೊಬೋಟ್ ಮಾದರಿಗಳು, ಆಹಾರ ಕಲಬೆರಕೆ ಪತ್ತೆ ತಂತ್ರಜ್ಞಾನ, ಪ್ರೊಜೆಕ್ಟರ್, ತಂಪುಕಾರಕ, ಮೈಕ್ರೊಫೋನ್, ರಕ್ತ ಪರೀಕ್ಷೆ ಹಾಗೂ ಶ್ವಾಸಕೋಶದ ರಚನೆ ಸೇರಿದಂತೆ ವಿವಿಧ ವೈಜ್ಞಾನಿಕ ಮಾದರಿಗಳು ಮತ್ತು ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.