ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ಕರ್ಫ್ಯೂ ನಡುವೆಯೂ ರಾಮಜನ್ಮ ಸಭೆಯಲ್ಲಿ ಭೈರಪ್ಪ ಭಾಗಿಯಾಗಿದ್ದರು; ಅರವಿಂದ ಲಿಂಬಾವಳಿ ಹೇಳಿದ್ದೇನು?

ನಾಡಿನ ಶ್ರೇಷ್ಠ ಸಾಹಿತಿ ಭೈರಪ್ಪ ನಿನ್ನೆ ವಿಧಿವಶವಾದರು. ಅವರ ಪಾರ್ಥೀವ ಶರೀರವನ್ನು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತದಲ್ಲಿ ಇರಿಸಲಾಗಿದ್ದು ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೈರಪ್ಪಗೆ ಅಂತಿಮ ನಮನ ಸಲ್ಲಿಸಿದರು.

ಕರ್ಫ್ಯೂ ನಡುವೆಯೂ ರಾಮಜನ್ಮ ಸಭೆಯಲ್ಲಿ ಭೈರಪ್ಪ ಭಾಗಿಯಾಗಿದ್ದರು!

-

Vishakha Bhat Vishakha Bhat Sep 25, 2025 12:21 PM

ನಾಡಿನ ಶ್ರೇಷ್ಠ ಸಾಹಿತಿ ಭೈರಪ್ಪ ನಿನ್ನೆ ವಿಧಿವಶವಾದರು. ಅವರ ಪಾರ್ಥೀವ ಶರೀರವನ್ನು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತದಲ್ಲಿ ಇರಿಸಲಾಗಿದ್ದು ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೈರಪ್ಪಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶ್ವಮಾನ್ಯತೆಯನ್ನು ತಂದು ಕೊಟ್ಟವರಲ್ಲಿ ಭೈರಪ್ಪನವೂ ಒಬ್ಬರು.

ಅವರ ಅಗಲುವಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಇವರ ಕಾದಂಬರಿಗಳು ಒಂದು ರೀತಿಯಲ್ಲಿ ಸತ್ಯದ ಅನ್ವೇಷಣೆ. ಸಾಮಾಜಿಕ ವಿಷಯದ ಮೇಲೆ ಬರೆದ ಪ್ರತಿ ಕೃತಿಯೂ ಸಮಾಜದ ಮೇಲೆ ಪರಿಣಾಮ ಬೀರಿದೆ. ನಾನು ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರಿಂದ ಆಶೀರ್ವಾದ ಪಡೆದುಕೊಂಡೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿಜಯೇಂದ್ರ ಹೇಳಿದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪನವರ ನಿಧನದಿಂದ ಸಾಹಿತ್ಯ ಕ್ಷೇತ್ರ ಬರೆದಾಗಿದೆ. ಅವರ ಕೃತಿಗಳು ಎಂದಿಗೂ ಅಜರಾಮರ. ಅವರ ಕಾದಂಬರಿಗಳನ್ನು ಸುಮಾರು 40 ಭಾಷೆಗಳಲ್ಲಿ ಅನುವಾದ ಮಾಡಲಾಗಿದೆ. ವಿದೇಶಗಳಲ್ಲಿನ ಪುಸ್ತಕ ಮೇಳದಲ್ಲಿಯೂ ಭೈರಪ್ಪನವರ ಪುಸ್ತಕಗಳು ಮಾರಾಟವಾಗುತ್ತಿದ್ದವು. ಇವು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಭಾರತೀಯ ವಿಚಾರದ ಪ್ರತಿಪಾಲಕರು ಭೈರಪ್ಪ ಆಗಿದ್ದರು. ರಾಮ ಜನ್ಮ ಭೂಮಿಯ ಕರ್ಫ್ಯೂ ಸಮಯದಲ್ಲಿಯೂ, ಅದನ್ನು ದಿಕ್ಕರಿಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಇದು ರಾಷ್ಟ್ರೀಯ ಜಾಗೃತಿ ವಿಚಾರ ಎಂದು ಭೈರಪ್ಪ ಹೇಳಿದ್ದರು. ಮಾಜಿ ಡಿಸಿಎಂ ಅಶ್ವಥ್ಥ ನಾರಾಯಣ ಮಾತನಾಡಿ, ಎಸ್ ಎಲ್ ಭೈರಪ್ಪ ಅವರ ಬದುಕೇ ಒಂದು ಸಂದೇಶ. ಭೈರಪ್ಪನ ಕಾದಂಬರಿಗಳು ಎಷ್ಟೋ ಜನರಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ಮಧ್ಯಾಹ್ನ 2 ಗಂಟೆಯ ಬಳಿಕ ಶರೀರವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಮೈಸೂರಿನ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ನಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.