ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ಭೈರಪ್ಪ ನಿಧನ ಸಾಹಿತ್ಯಲೋಕಕಷ್ಟೇ ಅಲ್ಲ ಚಿತ್ರರಂಗಕ್ಕೂ ತುಂಬಲಾರದ ನಷ್ಟ; ತಾರಾ ಅನುರಾಧಾ

ಖ್ಯಾತ ಕಾದಂಬರಿಕಾರ ಹಾಗೂ ಚಿಂತಕ ಎಸ್‌ ಎಲ್‌ ಭೈರಪ್ಪ ಅವರು ನಿನ್ನೆ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತದಲ್ಲಿ ಇರಿಸಲಾಗಿದ್ದು ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಚಿತ್ರನಟಿ ಅನುರಾಧಾ ತಾರಾ ಅವರು ಭೈರಪ್ಪ ಅವರಿಗೆ ನಮನ ಸಲ್ಲಿಸಿದರು.

ಬೆಂಗಳೂರು: ಖ್ಯಾತ ಕಾದಂಬರಿಕಾರ ಹಾಗೂ ಚಿಂತಕ ಎಸ್‌ ಎಲ್‌ ಭೈರಪ್ಪ (SL Bhyrappa) ಅವರು ನಿನ್ನೆ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತದಲ್ಲಿ ಇರಿಸಲಾಗಿದ್ದು ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಚಿತ್ರನಟಿ ಅನುರಾಧಾ ತಾರಾ ಅವರು ಭೈರಪ್ಪ ಅವರಿಗೆ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು ಸಾಹಿತ್ಯ ಕ್ಷೇತ್ರಕ್ಕೆ ಭೈರಪ್ಪ ಕೊಡುಗೆ ಅಪಾರ. ಭೈರಪ್ಪ ನಿಧನ ಸಾಹಿತ್ಯಲೋಕಕಷ್ಟೇ ಅಲ್ಲ ಚಿತ್ರರಂಗಕ್ಕೂ ತುಂಬಲಾರದ ನಷ್ಟ ಎಂದು ಅವರು ಹೇಳಿದ್ದಾರೆ.

ಭೈರಪ್ಪ ಅವರ ಕಾದಂಬರಿ ಮತದಾನವನ್ನು ಸಿನಿಮಾ ಮಾಡುವಾಗ ಅವರನ್ನು ಭೇಟಿಯಾದೆ. ಆದರೆ ಅದಕ್ಕೂ ಮೊದಲು ನಾನು ಅವರ ಕಾದಂಬರಿಗಳ ಅಭಿಮಾನಿ. ಇತಿಹಾಸ, ಪುರಾಣ, ಸಾತ್ವಿಕ ಅಂಶಗಳನ್ನು ಇಟ್ಟುಕೊಂಡ ಬರೆದಿರುವ ಈ ಕೃತಿಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕಿತ್ತು ಎಂದು ಅವರು ಹೇಳಿದರು.

ನಿರ್ದೇಶಕ ಟಿಎಸ್‌ ನಾಗಾಭರಣ ಮಾತನಾಡಿ, ಭೈರಪ್ಪನವರು ಕೇವಲ ಕಾದಂಬರಿಯ ಸಾಮ್ರಾಟನಲ್ಲ. ಇತಿಹಾಸ, ಪುರಾಣ, ಸಾಮಾಜಿಕ ಕ್ಷೇತ್ರಗಳನ್ನು ತಮ್ಮ ಕೃತಿಯಲ್ಲಿ ಅಳವಡಿಸಿ ಹೊಸ ರೂಪು ನೀಡಿದ್ದಾರೆ. 1955 ರಿಂದ ಪ್ರಾರಂಭವಾದ ಅವರ ಈ ಯಾನ ಇಲ್ಲಿಯವರಿಗೆ ಬಂದಿದೆ. ಅವರ ಕಾದಂಬರಿಯ ಒಂದೊಂದು ಅಕ್ಷರವೂ ಮನ ಮುಟ್ಟುವಂತಿದೆ. ಅಕ್ಷರ ಲೋಕ ಸದಾ ಲೋಕ ಇವರನ್ನು ನೆನೆಸುತ್ತದೆ. ಭೈರಪ್ಪನವರ ಕೃತಿಯನ್ನು ಪ್ರತಿಯೊಬ್ಬನೂ ಓದಬೇಕು ಅದೇ ಅವರಿಗೆ ಸಲ್ಲಿಸುವ ಗೌರವ ಎಂದು ಅವರು ಹೇಳಿದರು.

ಮಧ್ಯಾಹ್ನ 2 ಗಂಟೆಯ ಬಳಿಕ ಶರೀರವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಮೈಸೂರಿನ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ನಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ:SL Bhyrappa: ಎಸ್‌ಎಲ್‌ ಭೈರಪ್ಪ ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಿಕ ಧ್ವನಿ: ಕಮಲ ಹಾಸನ್‌

ಕಳೆದ ಆರು ತಿಂಗಳಿಂದ ಭೈರಪ್ಪ ಅವರು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ ಮನೆಯಲ್ಲಿದ್ದರು. ಭೈರಪ್ಪ ಅವರ ಕೊನೆಯ ಸಮಯದಲ್ಲಿ ವಿಶ್ವೇಶ್ವರ ಭಟ್ಟರು ಮತ್ತು ಅವರ ಕುಟುಂಬಸ್ಥರು ಆರೈಕೆ ಮಾಡಿದ್ದಾರೆ. ವಿಶ್ವೇಶ್ವರ ಭಟ್ಟರು ಸಿಎಂ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತಕ್ಕೆ ಸಿಎಂ ನಿರ್ದೇಶನ ನೀಡಿದ್ದಾರೆ. ನಾಳೆ ಮೈಸೂರಿನಲ್ಲಿ ಅಂತಿಮ ದರ್ಶನ ಹಾಗೂ ಶುಕ್ರವಾರ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದೆ.