ಪ್ರತ್ಯೇಕ ಕಂಪನಿ ಆದ ನಂತರ ತನ್ನ ಹೊಸ ಬ್ರ್ಯಾಂಡ್ ಗುರುತನ್ನು ಅನಾವರಣಗೊಳಿಸಿದ ಬ್ಲೂಸ್ಪ್ರಿಂಗ್
ಬ್ಲೂಸ್ಪ್ರಿಂಗ್ ಏಕತೆ, ಮಹತ್ವಾಕಾಂಕ್ಷೆ ಮತ್ತು ಪ್ರಗತಿಯ ತತ್ವಗಳ ಮೇಲೆ ಆಧಾರಿತವಾಗಿರುವ ಹೊಸ ಬ್ರ್ಯಾಂಡ್ ಗುರುತು, ಕಂಪನಿಯ ತಜ್ಞ ಸಾಮರ್ಥ್ಯಗಳು ಮತ್ತು ಹಳೆಯ ಬ್ರ್ಯಾಂಡ್‌ಗಳನ್ನು ಒಂದೇ ಸಮಗ್ರ ವೇದಿಕೆಯಡಿ ಒಟ್ಟುಗೂಡಿಸುತ್ತದೆ.ಹೊಸ ದೃಶ್ಯ ಗುರುತು ಹೊಸ ಟ್ಯಾಗ್‌ಲೈನ್ ‘ಮೂಲಸೌಕರ್ಯ.
-
ಭಾರತದ ಪ್ರಮುಖ ಒಗ್ಗೂಡಿತ ಮೂಲಸೌಕರ್ಯ ನಿರ್ವಹಣಾ ಸೇವೆ ಕಂಪನಿ ಬ್ಲೂಸ್ಪ್ರಿಂಗ್ ಎಂಟರ್‌ಪ್ರೈಸಸ್ ಲಿಮಿಟೆಡ್ (NSE: BLUSPRING, BSE: 544414) ಇಂದು ತನ್ನ ಹೊಸ ಬ್ರ್ಯಾಂಡ್ ಗುರುತನ್ನು ಪರಿಚಯಿಸಿದೆ, ಇದರಲ್ಲಿ ಹೊಸ ಲೋಗೋ ಮತ್ತು ದೃಶ್ಯ ಶೈಲಿಯನ್ನು ನೋಡಬಹುದು. ಈ ಬ್ರ್ಯಾಂಡ್ ಬ್ಲೂಸ್ಪ್ರಿಂಗ್ ನ ಕ್ವೆಸ್ ಕಾರ್ಪ್ ನಿಂದ ವಿಭಜನೆ ಆದ ನಂತರ ಸ್ವತಂತ್ರ, ಪಟ್ಟಿಯಲ್ಲಿ ದಾಖಲೆಗೊಂಡ ಸಂಸ್ಥೆಯಾಗಿ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅತ್ಯಾವಶ್ಯಕ ಮೂಲಸೌಕರ್ಯ ಮತ್ತು ಜನಸಂಪರ್ಕ ಸೇವೆಗಳಲ್ಲಿ ತಂತ್ರಜ್ಞಾನ ಆಧಾರಿತ, ನಿಯಮಾನುಸಾರ ಪರಿಹಾರಗಳನ್ನು ಬೇಕಾದ ಸಂಸ್ಥೆಗಳಿಗೆ ವಿಶ್ವಾಸಾರ್ಹ ಸಹಯೋಗಿಯಾಗಿ ತನ್ನ ಪಾತ್ರವನ್ನು ತಿಳಿಸುತ್ತದೆ.
ಬ್ಲೂಸ್ಪ್ರಿಂಗ್ ಏಕತೆ, ಮಹತ್ವಾಕಾಂಕ್ಷೆ ಮತ್ತು ಪ್ರಗತಿಯ ತತ್ವಗಳ ಮೇಲೆ ಆಧಾರಿತವಾಗಿರುವ ಹೊಸ ಬ್ರ್ಯಾಂಡ್ ಗುರುತು, ಕಂಪನಿಯ ತಜ್ಞ ಸಾಮರ್ಥ್ಯಗಳು ಮತ್ತು ಹಳೆಯ ಬ್ರ್ಯಾಂಡ್‌ಗಳನ್ನು ಒಂದೇ ಸಮಗ್ರ ವೇದಿಕೆಯಡಿ ಒಟ್ಟುಗೂಡಿಸುತ್ತದೆ.ಹೊಸ ದೃಶ್ಯ ಗುರುತು ಹೊಸ ಟ್ಯಾಗ್‌ಲೈನ್ ‘ಮೂಲಸೌಕರ್ಯ.
ಜನರು. ಪ್ರಗತಿ.’; ಮೂಲಕ ಗುರುತಿಸಲಾಗಿದ್ದು, ಶಕ್ತಿಶಾಲಿ ಜನರಿಂದ ಸಮಗ್ರ ಮೂಲಸೌಕರ್ಯ ನಿರ್ಮಿಸಲಾಗುತ್ತದೆ ಮತ್ತು ಒಟ್ಟಾಗಿ ಅವರು ದೇಶದ ಪ್ರಗತಿಯನ್ನು ವೇಗಗೊಳಿಸುತ್ತಾರೆ ಎಂಬ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.ಹೊಸ ಲೋಗೋವು ‘ಬಿ’ ಅಕ್ಷರವನ್ನು ರೂಪಿಸುವ ಪರಸ್ಪರ ಸಂಪರ್ಕಿತ ಬ್ಲಾಕ್‌ಗಳಿಂದ ನಿರ್ಮಿತವಾಗಿದ್ದು, ವಿಭಿನ್ನ ತಂಡಗಳು ಮತ್ತು ಸೇವೆಗಳು ಒಟ್ಟಾಗಿ ಶಕ್ತಿಯನ್ನು ನಿರ್ಮಿಸುವುದನ್ನು ತೋರಿಸುತ್ತದೆ. ಅದರ ಮುಂದೆ ನೆಲದ ರೂಪವು ಬೆಳವಣಿಗೆ ಮತ್ತು ಪರಿವರ್ತನೆಯನ್ನು ಸೂಚಿಸುತ್ತದೆ. ನೀಲಿ–ಹಸಿರು ಬಣ್ಣ ವಿಶ್ವಾಸ, ಶಾಂತಿ ಮತ್ತು ಹೊಸತನವನ್ನು ತೋರಿಸುತ್ತದೆ.
ಇದನ್ನೂ ಓದಿ: Bangalore News: ಭವಿಷ್ಯದ ತಂತ್ರಜ್ಞಾನಕ್ಕೆ ವೇದಿಕೆಯಾದ ಮಾಹೆ ಬೆಂಗಳೂರು: 'ಸೂಪರ್‌ಕಂಪ್ಯೂಟಿಂಗ್ ಇಂಡಿಯಾ' ಸಮ್ಮೇಳನಕ್ಕೆ ತೆರೆ
ನವೀಕರಿಸಿದ ಬ್ರ್ಯಾಂಡ್ ರಚನೆ ಸೇವಾ-ಲೈನ್-ಪ್ರಥಮ ಮಾದರಿಯನ್ನು ಪ್ರತಿಬಿಂಬಿಸುತ್ತದೆ, ಟೆರಿಯರ್, ಹೋಫಿನ್‌ಕಾನ್ಸ್ ಮತ್ತು ವೆದಾಂಗ್ - ಮುಂತಾದ ಪ್ರಮುಖ ಬ್ರ್ಯಾಂಡ್‌ಗಳಿಗೆ “ಪಾವರ್ಡ್ ಬೈ” ಅಳವಡಿಸಲಾಗಿದೆ. ಇದರಿಂದ ಗ್ರಾಹಕರು ತಮ್ಮ ಕ್ಷೇತ್ರದ ತಜ್ಞತೆಯ ಲಾಭವನ್ನು ಪಡೆಯುವು ದಕ್ಕೂ ಜೊತೆಗೆ ಒಬ್ಬರ ಒಪ್ಪಂದದಲ್ಲಿ ಸಂಪೂರ್ಣ ಜವಾಬ್ದಾರಿ ಮತ್ತು ದೇಶಾದ್ಯಾಂತ ಸೇವೆ ಪಡೆಯಬಹುದು.
ಈಗ ಕಂಪನಿ ಒಗ್ಗೂಡಿತ ಫೆಸಿಲಿಟಿ ನಿರ್ವಹಣೆ, ಆಹಾರ ಮತ್ತು ಆತಿಥ್ಯ, ಸುರಕ್ಷತೆ (ಟೆರಿಯರ್ ಮೂಲಕ), ಎಂಜಿನಿಯರಿಂಗ್ ಆಸ್ತಿಯ ನಿರ್ವಹಣೆ (ಹೋಫಿನ್‌ಕಾನ್ಸ್ ಮೂಲಕ), ಟೆಲಿಕಾಂ ನೆಟ್‌ವರ್ಕ್‌ಗಳ (ವೆದಾಂಗ್ ಮೂಲಕ) ಸೇವೆಗಳನ್ನು ಒದಗಿಸುತ್ತಿದೆ. ಈ ರಚನೆ ಕಂಪನಿಯ ಕಥೆ ಯನ್ನು ಗ್ರಾಹಕರು, ಪಾಲುದಾರರು ಮತ್ತು ಹಿತಾಸಕ್ತಿಗಾರರಿಗೆ ಸರಳವಾಗಿ ತೋರಿಸುತ್ತದೆ ಮತ್ತು ಹಳೆಯ ಬ್ರ್ಯಾಂಡ್‌ಗಳ ಶಕ್ತಿ ಮತ್ತು ಪರಿಣತಿಯನ್ನು ಉಳಿಸುತ್ತದೆ.
ಭಾರತದ ಮೂಲಸೌಕರ್ಯ ಸೇವೆಗಳ ವಲಯದಲ್ಲಿ ವಿಭಿನ್ನ ಸ್ಥಾನಮಾನ
ಬ್ಲೂಸ್ಪ್ರಿಂಗ್ ಕಂಪನಿಯು ಕೈಗಾರಿಕೆಯಲ್ಲಿ ಒಂದು ಪ್ರಮುಖ ಅಂತರವನ್ನು ಭರಿಸುತ್ತದೆ; ಭಾರತ ದಲ್ಲಿ ಯಾವುದೇ ಇತರ ಕಂಪನಿ ಎಲ್ಲಾ ಮೂಲಸೌಕರ್ಯ ಸೇವಾ ಕ್ಷೇತ್ರಗಳಲ್ಲಿ ಒಗ್ಗೂಡಿತ ಸಾಮರ್ಥ್ಯಗಳನ್ನು ಒದಗಿಸುವುದಿಲ್ಲ. ಭಾರತವು ವೇಗವಾಗಿ ಮೂಲಸೌಕರ್ಯ ಪರಿವರ್ತನೆಯನ್ನು ಅನುಭವಿಸುತ್ತಿರುವಾಗ, ಸರ್ಕಾರದ ₹11.21 ಲಕ್ಷ ಕೋಟಿ ಹೂಡಿಕೆಯ ಯೋಜನೆಯ ಮೂಲಕ, ಬ್ಲೂಸ್ಪ್ರಿಂಗ್ ನ ಸ್ಥಿತಿಗತಿ ದೇಶದ ಬೆಳವಣಿಗೆ ಪ್ರಾಧಾನ್ಯತೆಗಳಿಗೆ ಹೊಂದಿಕೆಯಾಗಿದ್ದು, ಆರೋಗ್ಯ, ಶಿಕ್ಷಣ, BFSI, IT, ಟೆಲಿಕಾಂ, ತಯಾರಿಕೆ, ವಾಣಿಜ್ಯ ರಿಯಲ್ ಎಸ್ಟೇಟ್, ಮತ್ತು ಸರ್ಕಾರಿ ಸಂಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬೆಂಬಲ ನೀಡುತ್ತದೆ.
ಕಂಪನಿಯ ವ್ಯಾಪ್ತಿ 90,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡಿದ್ದು, 28 ರಾಜ್ಯಗಳು ಮತ್ತು 34ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಶಾದ್ಯಾಂತ 1,000ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುತ್ತದೆ.
ಈ ಘೋಷಣೆಯ ಕುರಿತು, ಬ್ಲೂಸ್ಪ್ರಿಂಗ್ ನ ಸಿಇಒ ಕಮಲ್ ಪಾಲ್ ಹೋಡಾ ಹೇಳಿದರು,
“ಬ್ಲೂಸ್ಪ್ರಿಂಗ್ ನ ನವೀಕರಿಸಿದ ಗುರುತು ನಮ್ಮನ್ನು ನಾವು ಯಾರು ಮತ್ತು ಒಗ್ಗೂಡಿತ ಮೂಲ ಸೌಕರ್ಯ ಸೇವಾ ಸಂಸ್ಥೆ ಆಗಿ ನಾವು ಯಾವ ಮೌಲ್ಯಗಳಿಗೆ ನಿಲುಕುತ್ತೇವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ನಮ್ಮ ಪ್ರಮುಖ ಸೇವಾ ಲೈನ್‌ಗಳು ಮತ್ತು ತಜ್ಞ ಬ್ರ್ಯಾಂಡ್‌ಗಳನ್ನು ಗ್ರಾಹಕರು, ನಮ್ಮ ಸಿಬ್ಬಂದಿ ಮತ್ತು ಪಾಲುದಾರರಿಗಾಗಿ ಒಂದು ಸರಳ ಮತ್ತು ಹೊಂದಾಣಿಕೆಯ ಕಥೆಯಾಗಿ ಒಟ್ಟುಗೂಡಿಸುತ್ತದೆ.
ಸಂಸ್ಥೆಗಳು ಮುಖ್ಯ ಮೂಲಸೌಕರ್ಯವನ್ನು ಚುರುಕಾಗಿ, ಅನುಸರಣೆ-ಪ್ರಥಮವಾಗಿ ಮತ್ತು ಮಾನವ ಕೇಂದ್ರಿತ ಕಾಳಜಿಯೊಂದಿಗೆ ನಿರ್ವಹಿಸಬಹುದಾದ ಪಾಲುದಾರರನ್ನು ಹುಡುಕುತ್ತಿರು ವಾಗ, ನಮ್ಮ ಹೊಸ ಬ್ರ್ಯಾಂಡ್ ವೇದಿಕೆ ಅವುಗಳ ತಂಡದ ವಿಶ್ವಾಸಾರ್ಹ ವಿಸ್ತರಣೆ ಆಗಲು ನಮ್ಮ ಉದ್ದೇಶವನ್ನು ಸೂಚಿಸುತ್ತದೆ. ಇದು ಟೆರಿಯರ್, ಹೋಫಿನ್‌ಕಾನ್ಸ್ ಮತ್ತು ವೆದಾಂಗ್ ಮುಂತಾದ ಬ್ರ್ಯಾಂಡ್‌ಗಳ ಪರಂಪರೆಯನ್ನು ಗೌರವಿಸುತ್ತದೆ, ಅದೇ ಸಮಯದಲ್ಲಿ ಅವುಗಳನ್ನು ಒಂದು ಸಾಮಾನ್ಯ ಉದ್ದೇಶವಾದ — ಮೂಲಸೌಕರ್ಯ. ಜನರು. ಪ್ರಗತಿ. ಇದರ ಹಿಂದೆ ಏಕೀಕೃತ ಗೊಳಿಸು ತ್ತದೆ.”
ಬ್ಲೂಸ್ಪ್ರಿಂಗ್ ನ ಮಾರ್ಕೆಟಿಂಗ್ ಉಪಾಧ್ಯಕ್ಷೆ, ಶಿಲ್ಪಾ ಕೊನಾ ಹೇಳಿದರು, “ನಮ್ಮ ಹೊಸ ಗುರುತು ಸ್ಪಷ್ಟತೆ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯುತ್ತಿರುವ ಬ್ರ್ಯಾಂಡ್ ಅನ್ನು ತೋರಿಸುತ್ತದೆ. ಪ್ರತಿ ಅಂಶವೂ ಚಲನೆ ಮತ್ತು ಸಹಕಾರವನ್ನು ಸೂಚಿಸಲು ವಿನ್ಯಾಸಗೊಳಿಸಲಾಗಿದೆ. ಈಗ ನಾವು ವಿಸ್ತರಿಸುತ್ತಿರುವಂತೆ, ಈ ನವೀಕರಣವು ಬ್ಲೂಸ್ಪ್ರಿಂಗ್ ಕಥೆಯನ್ನು ಒಟ್ಟಾಗಿ ಹೇಳಲು ಮತ್ತು ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯೊಂದಿಗೆ ಹೆಚ್ಚು ಅರ್ಥಪೂರ್ಣವಾಗಿ ಸಂಪರ್ಕ ಸಾಧಿಸಲು ವೇದಿಕೆ ಯನ್ನು ಒದಗಿಸುತ್ತದೆ,”
ನವೀಕರಿಸಿದ ಬ್ರ್ಯಾಂಡ್ ಗುರುತನ್ನು ಮುಂದಿನ ತಿಂಗಳುಗಳಲ್ಲಿ ಎಲ್ಲಾ ಬ್ರ್ಯಾಂಡ್ ಸಂಪರ್ಕ ಸ್ಥಳಗಳಲ್ಲಿ ಬಿಡುಗಡೆ ಮಾಡಲಾಗುವುದು, ಇದರಲ್ಲಿ ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು, ಸಂಸ್ಥೆಯ ಮಾರ್ಕೆಟಿಂಗ್ ಮತ್ತು ಪ್ರಚಾರ ಸಾಮಗ್ರಿ, ಸೈನ್‌ಬೋರ್ಡ್‌ಗಳು, ಮುದ್ರಿತ ಮತ್ತು ಡಿಜಿಟಲ್ ಜಾಹೀರಾತುಗಳು ಮತ್ತು ಉದ್ಯೋಗಿ ಸಂವಹನಗಳು ಸೇರಿವೆ.