ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat conferred with Bhargava Bhushan award: ಬ್ರಾಹ್ಮಣ ಯುವಕರು ರಾಜಕೀಯಕ್ಕೆ ಬರಬೇಕು

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ತ್ಯಾಗ, ಬಲಿದಾನದ ಮೂಲಕ ಬ್ರಾಹ್ಮಣ ಸಮುದಾಯ ರಾಷ್ಟ್ರದ ಸೇವೆ ಮಾಡಿದೆ. ಬ್ರಾಹ್ಮಣ ಸಮುದಾಯ ಬುದ್ದಿವಂತ, ಚಾರಿತ್ರ್ಯವಂತ, ಕ್ರಿಯಾಶೀಲ ಸಮಾಜವಾಗಿದೆ. ಆದರೆ ಇಂದಿನ ಯುವಕರು ಸಮಾಜ ಸೇವೆಯಲ್ಲಿ ಕಾಣಿಸುತ್ತಿಲ್ಲ. ರಾಜಕಾರಣದಲ್ಲೂ ಬ್ರಾಹ್ಮಣ ಸಮುದಾಯದ ಸಂಖ್ಯೆ ಕಡಿಮೆ ಇದೆ. ಯುವಕರು ರಾಜಕಾರಣ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು

ಬ್ರಾಹ್ಮಣ ಯುವಕರು ರಾಜಕೀಯಕ್ಕೆ ಬರಬೇಕು

-

Ashok Nayak
Ashok Nayak Jan 5, 2026 8:00 AM

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕರೆ

ಬೆಂಗಳೂರು: ಬ್ರಾಹ್ಮಣ ಯುವಕರು ಸಮಾಜ ಸೇವೆ ಹಾಗೂ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ(RV Deshpande) ಹೇಳಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ವತಿಯಿಂದ ನಗರದ ಗಾಯನ ಸಮಾಜದ ಸಭಾಂಗಣದಲ್ಲಿ ನಡೆದ ವಿಪ್ರೋತ್ಸವ-2026 ಮತ್ತು ಭಾರ್ಗವ ಭೂಷಣ ಪ್ರಶಸ್ತಿ ಸಮಾ ರಂಭದಲ್ಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ತ್ಯಾಗ, ಬಲಿದಾನದ ಮೂಲಕ ಬ್ರಾಹ್ಮಣ ಸಮುದಾಯ ರಾಷ್ಟ್ರದ ಸೇವೆ ಮಾಡಿದೆ. ಬ್ರಾಹ್ಮಣ ಸಮುದಾಯ ಬುದ್ದಿವಂತ, ಚಾರಿತ್ರ್ಯವಂತ, ಕ್ರಿಯಾಶೀಲ ಸಮಾಜವಾಗಿದೆ. ಆದರೆ ಇಂದಿನ ಯುವಕರು ಸಮಾಜ ಸೇವೆಯಲ್ಲಿ ಕಾಣಿಸುತ್ತಿಲ್ಲ. ರಾಜಕಾರಣದಲ್ಲೂ ಬ್ರಾಹ್ಮಣ ಸಮುದಾಯದ ಸಂಖ್ಯೆ ಕಡಿಮೆ ಇದೆ. ಯುವಕರು ರಾಜಕಾರಣ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿರುವ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣ ಸಮುದಾಯ ಬೆಳೆಯ ಬಹುದು. ಆದರೆ ನಿಷ್ಟೆ, ಗುರಿ, ಪ್ರಯತ್ನ ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಯುವಕರು ಹೆಜ್ಜೆ ಹಾಕಬೇಕು. ವಿದ್ಯೆ ಬ್ರಾಹ್ಮಣ ಸಮುದಾಯದ ಆಸ್ತಿಯಾಗಿದ್ದು, ಕೌಶಲ್ಯ ತಬೇತಿಯನ್ನು ನೀಡುವುದು ಮುಖ್ಯವಾಗಿದೆ. ಕೇವಲ ಬ್ರಾಹ್ಮಣ ಸಮುದಾಯ ಮಾತ್ರವಲ್ಲದೆ ಎಲ್ಲಾ ಸಮುದಾಯದವರನ್ನು ಬ್ರಾಹ್ಮಣ ಸಮುದಾಯ ಕೈ ಹಿಡಿದು ನಡೆಸಬೇಕು ಎಂದರು.

ಇದನ್ನೂ ಓದಿ: G N Bhat Column: ತಾಳಮದ್ದಲೆ ಕಲಾಪ್ರಕಾರದ ಇನ್ನೊಂದು ದುರವಸ್ಥೆ

ಸ್ವಾವಲಂಬಿ, ಸ್ವಾಭಿಮಾನದ ಜೀವನವನ್ನು ಬಾಳಬೇಕು. ಯಾವ ಸಮಾಜವನ್ನು ಬಿಡದೆ ಕೈ ಹಿಡಿದು ನಡೆಸಬೇಕು. ನಿರುದ್ಯೋಗ, ಬೆಲೆ ಏರಿಕೆ, ಸದ್ಯದ ಜ್ವಲಂತ ಸಮಸ್ಯೆಯಾಗಿದ್ದು, ಮಕ್ಕಳು ಕಾಲಿ ಕೈಯಲ್ಲಿ ಕೂರಬಾರದು. ಬ್ರಾಹ್ಮಣರಾಗಿ ಹುಟ್ಟಿದ್ದು ಪುಣ್ಯ. ಬ್ರಾಹ್ಮಣ ರಲ್ಲಿಯೂ ಮಧ್ಯಮ ವರ್ಗದ ಜನರು ಹೆಚ್ಚಿದ್ದಾರೆ. ಸ್ವಾವಲಂಬಿ, ಸ್ವಾಭಿಮಾನದಿಂದ ಬಾಳಲು ಕೌಶಲ್ಯಗಳನ್ನು ಕಲಿಯಬೇಕು. ಬೇರಯವರ ದ್ವೇಷಕ್ಕಾಗಿ ಅಲ್ಲ, ಬದಲಾಗಿ ಬ್ರಾಹ್ಮಣ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಬ್ರಾಹ್ಮಣರೆಲ್ಲರೂ ಒಗ್ಗಟ್ಟಾಗಿರ ಬೇಕು ಎಂದು ಹೇಳಿದರು.

ಮೈಸೂರಿನ ಅರ್ಜುನ ಅವಧೂತ ಗುರುಜಿ ಮಾತನಾಡಿ, ವಿಪ್ರ ಎಂದರೆ ವಿವೇಕ ಪ್ರಜ್ಞೆ. ಪ್ರಜ್ಞೆಯ ಜೀವನ ನಡೆಸುವವನೆ ಬ್ರಾಹ್ಮಣ. ಯಾವ ವ್ಯಕ್ತಿ ಎಲ್ಲಾ ಸಮುದಾಯದವರನ್ನು ಸೆರಿಸಿಕೊಂಡು, ಚೈತನ್ಯವನ್ನು ನೀಡುವ ಶಕ್ತಿ ಹೊಂದಿರುವವನೆ ಬ್ರಾಹ್ಮಣ. ಬ್ರಾಹ್ಮಣರಿಗೆ ಹುಟ್ಟುವಾಗಲೆ ಭಗವಂತ ಮೆರಿಟ್ ಕೊಟ್ಟಿದ್ದಾನೆ. ವಿಶ್ವಕ್ಕೆ ಬೆಳಕನ್ನು ನೀಡಬಲ್ಲ ಶಕ್ತಿ ಕೊಟ್ಟಿದ್ದಾನೆ.

V bhat fecilitate

ಭಕ್ತಿ ಭಾವ, ಸಂಸ್ಕಾರ, ತ್ಯಾಗ ಎಲ್ಲವನ್ನು ನೀಡಿದ್ದಾನೆ. ಬ್ರಾಹ್ಮಣರಲ್ಲಿ ಒಗ್ಗಟ್ಟು ಬಂದಾಗ ವಿವೇಕಾನಂದರ ವಿಶ್ವಗುರು ಭಾರತ ಶ್ರೀಘ್ರವಾಗಿ ಆಗಲಿದೆ, ಸನಾತನ, ಎಲ್ಲರೂ ಒಂದಾಗಿ ಒಗ್ಗಟ್ಟಿನ ಹೆಜ್ಜೆ ಹಾಕೋಣ ಎಂದು ತಿಳಿಸಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಪ್ರದೀಪ ಮಾತನಾಡಿ, ಮಹಾ ಸಂಘದಿಂದ ರಾಜ್ಯದ ಬ್ರಾಹ್ಮಣ ಮಕ್ಕಳಿಗೆ ಎಂಟು ವರ್ಷಕ್ಕೆ ಉಪನಯನ ಮಾಡಿ, ಅವರು ಐದು ವರ್ಷ ಸಂಧ್ಯಾವಂದನೆ ಮಾಡಿದವರಿಗೆ ಉಚಿತ ಶಿಕ್ಷಣ. ಬ್ರಾಹ್ಮಣರ ವಿರುದ್ಧ ಕ್ಷುಲ್ಲಕ ಹೇಳಿಕೆ ನೀಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪರಶುರಾಮ ಲೀಗಲ್ ಸೆಲ್, ಅನ್ಯಧರ್ಮದವರ ಜತೆ ಹುಡುಗಿಯರು ಓಡಿಹೋಗುವುದನ್ನು ತಡೆಯಲು ಪರಶು ರಾಮ ತಂಡ ರಚನೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.

ವಿಶ್ವೇಶ್ವರ ಭಟ್ ಸೇರಿ ಐವರಿಗೆ ಭಾರ್ಗವ ಭೂಷಣ ಪ್ರಶಸ್ತಿ ಪ್ರದಾನ

ಪರಶುರಾಮನ ಹೆಸರಿನಲ್ಲಿ ನೀಡಲಾಗುವ ಭಾರ್ಗವ ಭೂಷಣ ಪ್ರಶಸ್ತಿಯನ್ನು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್(Vishweshwar Bhat) ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರಿಗೆ ನೀಡಿ ಗೌರವಿಸಲಾಯಿತು. ಭಟ್ಟರೊಂದಿಗೆ ನಟ ಶ್ರೀನಾಥ್, ಸಮಾಜ ಸೇವಕಿ ಆಶಾ ದಿನೇಶ್, ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ, ಉದ್ಯಮಿ ಜಿ.ಶ್ರೀನಿವಾಸ್ ರಾವ್ ಅವರಿಗೆ ಭಾರ್ಗವ ಭೂಷಣ-2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.