ಬೆಂಗಳೂರಿನಲ್ಲಿ ಚೆವ್ರಾನ್ ಇಂಡಿಯಾದ ಹೊಸ ಕೇಂದ್ರ ಉದ್ಘಾಟನೆ: ಚೆವ್ರಾನ್ ಇಂಜಿನ್ ನ ಮೊದಲ ವಾರ್ಷಿಕೋತ್ಸವ ಆಚರಣೆ
ಆರ್‌ಎಂಝಡ್ ಇಕೋವರ್ಲ್ಡ್ ನಲ್ಲಿ ಸ್ಥಾಪಿತಗೊಂಡಿರುವ ಚೆವ್ರಾನ್ ಇಂಜಿನ್ ಕೇಂದ್ರವು 3,12,000 ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು, ಎಲ್‌ಇಇಡಿ-ಪ್ರಮಾಣೀಕೃತ ಅತ್ಯಾಧುನಿಕ ಕಟ್ಟಡವಾಗಿದೆ. ಸಹಯೋಗದ ಅವಕಾಶಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಕೇಂದ್ರವು ಡಿಜಿಟಲ್ ಆವಿಷ್ಕಾರ ತಜ್ಞರನ್ನು, ಉನ್ನತ ಡೊಮೇನ್ ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಒಂದೇ ಸ್ಥಳದಲ್ಲಿ ಸೇರಿಸುವ ಅತ್ಯುತ್ಕೃಷ್ಟ ತಂತ್ರಜ್ಞಾನ ಕೇಂದ್ರವಾಗಿದೆ.

-

1000ಕ್ಕೂ ಹೆಚ್ಚು ವೃತ್ತಿಪರರು ಚೆವ್ರಾನ್ ಇಂಜಿನ್ (ಇಂಜಿನಿಯರಿಂಗ್ ಆಂಡ್ ಇನ್ನೋ ವೇಶನ್ ಎಕ್ಸಲೆನ್ಸ್ ಸೆಂಟರ್) ಸೇರಿದ್ದಾರೆ. 3,12,000 ಚದರ ಅಡಿಗಳ ವಿಸ್ತೀರ್ಣ ಹೊಂದಿರುವ ಚೆವ್ರಾನ್ ಇಂಜಿನ್, ಎಲ್‌ಇಇಡಿ- ಪ್ರಮಾಣೀಕೃತ ಕಟ್ಟಡವಾಗಿದ್ದು, ಅತ್ಯಾಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಬೆಂಗಳೂರು: ಚೆವ್ರಾನ್ ಇಂಡಿಯಾ ಸಂಸ್ಥೆಯು ತನ್ನ ಇಂಜಿನಿಯರಿಂಗ್ ಆಂಡ್ ಇನ್ನೋವೇಶನ್ ಎಕ್ಸಲೆನ್ಸ್ ಸೆಂಟರ್ (ಇಂಜಿನ್) ಕಾರ್ಯಾರಂಭ ಮಾಡಿ ಒಂದು ವರ್ಷ ಆದ ಸಂಭ್ರಮಕ್ಕೆ ಬೆಂಗಳೂರಿನ ಬೆಳ್ಳಂದೂರು ಟೆಕ್ ಕಾರಿಡಾರ್ ನಲ್ಲಿ ಹೊಸ ಕೇಂದ್ರವನ್ನು ಉದ್ಘಾಟಿಸಿದೆ.
ಭಾರತದ ಶ್ರೇಷ್ಠ ಪ್ರತಿಭಾ ಸಂಪನ್ಮೂಲ ಮತ್ತು ಹೊಸ ಆವಿಷ್ಕಾರದ ಪರಿಸರ ವ್ಯವಸ್ಥೆಯನ್ನು ಬಳಸಿಕೊಂಡು ಜಾಗತಿಕ ಮಟ್ಟದ ಎನರ್ಜಿ ಸೊಲ್ಯೂಷನ್ಸ್ ವಿಭಾಗವನ್ನು ಆಧುನಿಕಗೊಳಿಸುವ ಚೆವ್ರಾನ್ ನ ಬದ್ಧತೆಗೆ ಈ ಹೊಸ ಕೇಂದ್ರವು ಉತ್ತಮ ಪುರಾವೆಯಾಗಿದೆ.
ಆರ್‌ಎಂಝಡ್ ಇಕೋವರ್ಲ್ಡ್ ನಲ್ಲಿ ಸ್ಥಾಪಿತಗೊಂಡಿರುವ ಚೆವ್ರಾನ್ ಇಂಜಿನ್ ಕೇಂದ್ರವು 3,12,000 ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು, ಎಲ್‌ಇಇಡಿ-ಪ್ರಮಾಣೀಕೃತ ಅತ್ಯಾಧುನಿಕ ಕಟ್ಟಡವಾಗಿದೆ. ಸಹಯೋಗದ ಅವಕಾಶಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಕೇಂದ್ರವು ಡಿಜಿಟಲ್ ಆವಿಷ್ಕಾರ ತಜ್ಞರನ್ನು, ಉನ್ನತ ಡೊಮೇನ್ ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಒಂದೇ ಸ್ಥಳದಲ್ಲಿ ಸೇರಿಸುವ ಅತ್ಯುತ್ಕೃಷ್ಟ ತಂತ್ರಜ್ಞಾನ ಕೇಂದ್ರವಾಗಿದೆ. ಇದರ ಎಐ ಫಸ್ಟ್ ಕಾರ್ಯಪಡೆಯು ತಾಂತ್ರಿಕ ಕೆಲಸಗಳ ಕೇಂದ್ರೀಕರಣ ಮತ್ತು ಪ್ರಮಾಣೀಕರಣ ಮಾಡುವ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ: Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್ 1! ಕಾಂತಾರ, ಕೆಜಿಎಫ್ ದಾಖಲೆ ಉಡೀಸ್
ಚೆವ್ರಾನ್ ಇಂಡಿಯಾದ ಕಂಟ್ರಿ ಹೆಡ್ ಅಕ್ಷಯ್ ಸಾಹ್ನಿ ಅವರು ಈ ಕುರಿತು ಮಾತನಾಡಿ, “ಚೆವ್ರಾನ್ ಇಂಜಿನ್ ಕೇವಲ ಕೆಲಸದ ಸ್ಥಳ ಮಾತ್ರವೇ ಅಲ್ಲ, ಬದಲಿಗೆ ಇದು ಭಾರತದ ಪ್ರತಿಭೆಗಳನ್ನು ಮತ್ತು ಚೆವ್ರಾನ್ ನ ಜಾಗತಿಕ ಸಂಪನ್ಮೂಲಗಳನ್ನು ಒಂದೆಡೆ ಸೇರಿಸಿ ಈ ಕಾಲದ ಶಕ್ತಿ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದ ಲೋ ಕಾರ್ಬನ್ ಎನರ್ಜಿ ಸಿಸ್ಟಮ್ ಅನ್ನು ನಿರ್ಮಿಸಲು ಕೆಲಸ ಮಾಡುತ್ತದೆ. ಎಐ ಆಧರಿತ ತಂತ್ರಜ್ಞಾನ ಉತ್ಪನ್ನಗಳು ಮತ್ತು ರೋಬೋಟಿಕ್ಸ್ ನಿಂದ ಹಿಡಿದು ಹೋಲೋಗ್ರಾಫಿಕ್ ಎಕ್ಸ್ ಪೀರಿಯನ್ಸ್ ಸೆಂಟರ್ ಗಳವರೆಗೆ ಮತ್ತು ನಮ್ಮ ಸಂಕೀರ್ಣ ಸಂಸ್ಕರಣಾ ಘಟಕಗಳ ಡಿಜಿಟಲ್ ಟ್ವಿನ್ ಗಳವರೆಗೆ ನಾವು ಕೆಲಸದ ರೀತಿಯನ್ನೇ ಬದಲಾಯಿಸುತ್ತಿದ್ದೇವೆ. ಇಂಜಿನ್ ಈಗಾಗಲೇ ಚೆವ್ರಾನ್ ನ ಜಾಗತಿಕ ಉದ್ಯಮಗಳನ್ನು ಬೆಂಬಲಿಸುತ್ತಿರುವುದು ವಿಶೇಷವಾಗಿದೆ. ಚೆವ್ರಾನ್ ಇಂಜಿನ್ ಸಂಸ್ಥೆಯು ಕೈಗೆಟಕುವ ಬೆಲೆಯ, ವಿಶ್ವಾಸಾರ್ಹ ಮತ್ತು ಅತ್ಯಂತ ಶುದ್ಧವಾದ ಶಕ್ತಿಯನ್ನು ಒದಗಿಸಲು ಉನ್ನತ ಪರಿಣಾಮ ಬೀರುವ ತಂತ್ರಜ್ಞಾನ ಉತ್ಪನ್ನಗಳನ್ನು ಒದಗಿಸುವ ವಿಚಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ” ಎಂದು ಹೇಳಿದರು.
ಆಗಸ್ಟ್ 2024 ರಿಂದ ಕಾರ್ಯಾರಂಭ ಮಾಡಿದಾಗಿನಿಂದ, ಚೆವ್ರಾನ್ ಇಂಜಿನ್ 1,000ಕ್ಕೂ ಹೆಚ್ಚು ವೃತ್ತಿಪರರನ್ನು ನೇಮಿಸಿಕೊಂಡಿದೆ. ಈ ಮೂಲಕ ಶಕ್ತಿ ಕ್ಷೇತ್ರದ ಭವಿಷ್ಯಕ್ಕಾಗಿ ಅತ್ಯಾಧುನಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬಲ್ಲ ಭಾರತದ ಅತ್ಯುತ್ಕೃಷ್ಟ ಇಂಜಿನಿಯರಿಂಗ್ ಮತ್ತು ಡಿಜಿಟಲ್ ಸಾಮರ್ಥ್ಯಗಳನ್ನು ಪ್ರಚುರ ಪಡಿಸುತ್ತಿದೆ.