ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದ ಕೋಕಾ-ಕೋಲಾ ಅಭಿಯಾನ

ಆದಿತ್ಯ ಗದ್ವಿ ಇನ್ನಿಂಗ್ಸ್‌ ಗಳ ಮಧ್ಯದ ವಿರಾಮದಲ್ಲಿ ಕ್ರೀಡಾಂಗಣದ ಕೇಂದ್ರ ಬಿಂದು ವಾದರು. ಕ್ಯಾನೆಸ್ ಲಯನ್ಸ್ ಪ್ರಶಸ್ತಿ ವಿಜೇತ ಅಭಿಯಾನ ಖಲಾಸಿಯ ಮತ್ತು ಗುಜರಾತ್‌ನ ಜಾನಪದ ಪರಂಪರೆಗೆ ಸೇರಿದ ಉತ್ಸಾಹಭರಿತ ಮೀಠಾ ಖಾರಾ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿ ದರು. ಈ ಪ್ರದರ್ಶನ ಕೋಕ್ ಸ್ಟುಡಿಯೋ ಭಾರತ್‌ನ ಸಾಮರ್ಥ್ಯವನ್ನು ತೋರಿಸಿದೆ.

ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದ ಕೋಕಾ-ಕೋಲಾ ಅಭಿಯಾನ

-

Ashok Nayak
Ashok Nayak Nov 10, 2025 8:52 PM

ಬೆಂಗಳೂರು: ನವಿ ಮುಂಬೈನಲ್ಲಿ ನಡೆದ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ ನಲ್ಲಿ ಉಲ್ಲಾಸ ಮತ್ತು ಲಯದ ಅಲೆಯನ್ನು ಉಕ್ಕಿಸಿದ ಕೋಕಾ-ಕೋಲಾ. ಅರ್ಧಾವಧಿಯ ವಿರಾಮದಲ್ಲಿ ಕೋಕಾ-ಕೋಲಾ ಅಭಿಯಾನ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿತು.

ಪಂದ್ಯದ ವಿರಾಮ ಉತ್ಸಾಹದ ಸಂಭ್ರಮವಾಯಿತು. ಸ್ಟ್ಯಾಂಡ್‌ಗಳಿಂದ ಹಾಡು ಮತ್ತು ಹರ್ಷೋದ್ಗಾರಗಳು ಗಗನಕ್ಕೆ ಚಿಮ್ಮಿದವು. ವಿರಾಮ ಸಮಯ ಒಳ್ಳೆ ರಿಫ್ರೆಶ್ ಮಾಡುವ, ಆನಂದಿಸುವ ಮತ್ತು ಮತ್ತೆ ಲವಲವಿಕೆಯನ್ನು ತಂದುಕೊಳ್ಳುವ ಸಮಯವಾಯಿತು. ಕೋಕ್ ಸ್ಟುಡಿಯೋ ಭಾರತ್‌ನ ಸಂಗೀತ ಮತ್ತು ತಣ್ಣನೆಯ ಕೋಕಾ-ಕೋಲಾದ ನೊರೆ, ಆಟ ನಿಂತಿದ್ದರೂ ಉತ್ಸಾಹ ಕಡಿಮೆಯಾಗದಂತೆ ನೋದಿಕೊಂಡವು.

ಆದಿತ್ಯ ಗದ್ವಿ ಇನ್ನಿಂಗ್ಸ್‌ ಗಳ ಮಧ್ಯದ ವಿರಾಮದಲ್ಲಿ ಕ್ರೀಡಾಂಗಣದ ಕೇಂದ್ರ ಬಿಂದು ವಾದರು. ಕ್ಯಾನೆಸ್ ಲಯನ್ಸ್ ಪ್ರಶಸ್ತಿ ವಿಜೇತ ಅಭಿಯಾನ ಖಲಾಸಿಯ ಮತ್ತು ಗುಜರಾತ್‌ನ ಜಾನಪದ ಪರಂಪರೆಗೆ ಸೇರಿದ ಉತ್ಸಾಹಭರಿತ ಮೀಠಾ ಖಾರಾ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಈ ಪ್ರದರ್ಶನ ಕೋಕ್ ಸ್ಟುಡಿಯೋ ಭಾರತ್‌ನ ಸಾಮರ್ಥ್ಯವ ನ್ನು ತೋರಿಸಿದೆ.

ಇದನ್ನೂ ಓದಿ: Bangalore News: ಎರಡು ದಿನಗಳ ಉಪಕುಲಪತಿಗಳ ರಾಷ್ಟ್ರೀಯ ಸಮ್ಮೇಳನ: ಶಿಕ್ಷಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ನಿರ್ಧಾರ

ಕೋಕ್ ಸ್ಟುಡಿಯೋ ಭಾರತ್‌ ಭಾರತಕ್ಕೆಂದೇ ಪುನರ್ವಿನ್ಯಾಸಗೊಳಿಸಿದ ಕೋಕಾ-ಕೋಲಾ ಸಂಗೀತ ವೇದಿಕೆ. ಇದು, ಸ್ಥಳೀಯ ಸಂಗೀತ ಪ್ರತಿಭೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿ ಸುತ್ತದೆ ಮತ್ತು ಅಪ್ಪಟ ಪ್ರಾದೇಶಿಕ ಕಲಾತ್ಮಕತೆಗೆ ಪ್ರೋತ್ಸಾಹ ನೀಡುತ್ತದೆ. ಈ ವೇದಿಕೆ ಅಸಲೀತನಕ್ಕೆ ಬದ್ಧವಾಗಿದೆ. ಹಾಗಾಗಿ, ಭಾರತದ ಅತ್ಯಂತ ಜನಾದರಣೆಯ ವೇದಿಕೆಗಳಲ್ಲಿ ಒಂದಾಗಿದೆ. ಇದು ಸ್ವದೇಶಿ ಪ್ರತಿಭೆಗಳು ವಿಶ್ವ ವೇದಿಕೆಯಲ್ಲಿ ಮಿಂಚುವಂತೆ ಮಾಡಿದೆ.

ಆದಿತ್ಯ ಗದ್ವಿ: “ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ ನಂತಹ ವೇದಿಕೆ ಯಾವಾಗಲೂ ಸಿಗುವು ದಿಲ್ಲ. ಇಡೀ ದೇಶವೇ ವೀಕ್ಷಿಸುತ್ತಿರುತ್ತದೆ ಮತ್ತು ಹುರಿದುಂಬಿಸುತ್ತಿರುತ್ತದೆ. ಕೋಕ್ ಸ್ಟುಡಿ ಯೋ ಭಾರತ್‌ ಜೊತೆ ನಾನು ಚಿಕ್ಕಂದಿನಿಂದಲೂ ಕೇಳಿರುವ ಸಂಗೀತವನ್ನು ಇಂತಹ ಮಹತ್ವದ ಕ್ರಿಕೆಟ್ ಸ್ಪರ್ಧೆಯ ಸ್ಥಳಕ್ಕೆ ತರುತ್ತಿದ್ದೇನೆ. ನಮ್ಮ ಸಂಗೀತ ಜನರನ್ನು ಇನ್ನಷ್ಟು ಉತ್ಸಾಹಗೊಳಿಸುವುದನ್ನು ನೋಡುವುದೇ ಒಂದು ಭಾರಿ ಸಂತೋಷ.”

ಕೋಕಾ-ಕೋಲಾ INSWA ನ IMX (ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಎಕ್ಸ್ ಪೀರಿಯೆನ್ಸ್) ಲೀಡ್, ಶಂತನು ಗಂಗಾನೆ: "ಇಂದು ಅಭಿಮಾನಿಗಳಿಗೆ ವಿಶೇಷವಾದದ್ದೇನೋ ಬೇಕಿದೆ. ಕ್ರೀಡೆಯ ಬಗ್ಗೆ ಪ್ರೇಕ್ಷಕರಿಗೆ ಇರುವ ನಿರೀಕ್ಷೆಗಳು ಹೆಚ್ಚುತ್ತಿವೆ. ಐಸಿಸಿ ಜೊತೆಗಿನ ನಮ್ಮ ಅನುಭವ ನಮಗೆ ಇದನ್ನು ನಮಗೆ ಕಲಿಸಿದೆ.

ಪ್ರೇಕ್ಷಕರನ್ನು ನಮ್ಮೊಂದಿಗೆ ತೊಡಗಿಸಿಕೊಳ್ಳ ಬೇಕು. ಕೋಕ್‌ನ ಹಾಫ್‌ಟೈಮ್ ಪ್ರದರ್ಶನದ ಗುರಿಯೇ ಅದು. ನಮ್ಮ ಉದ್ದೇಶ, ವಿರಾಮ ಸಮಯವನ್ನು ಕ್ರೀಡೆ, ಸಂಗೀತ ಮತ್ತು ಮನರಂಜನೆ ಒಟ್ಟಾಗಿಸುವ ಸಮಯವನ್ನಾಗಿ ಪರಿವರ್ತಿಸುವುದು. ಕೋಕ್ ಸ್ಟುಡಿಯೋ ಭಾರತ್, ಕ್ರಿಕೆಟ್ ಗೆ ಜಗತ್ತಿನಲ್ಲಿ ಎಲ್ಲರೂ ಇಷ್ಟಪಡಬಹುದಾದ ಭಾರತದ ವಿಶಿಷ್ಟ ಸಂಸ್ಕೃತಿ ಮತ್ತು ಭಾವನೆಗಳ ಸ್ಪರ್ಶವನ್ನು ನೀಡುತ್ತದೆ."

ಐಸಿಸಿ ಮುಖ್ಯ ವಾಣಿಜ್ಯ ಅಧಿಕಾರಿ ಅನುರಾಗ್ ದಹಿಯಾ, "ಕೋಕಾ-ಕೋಲಾ ಜೊತೆಗಿನ ನಮ್ಮ ಸಹಯೋಗ, ಅಭಿಮಾನಿಗಳಿಗೂ ಕ್ರಿಕೆಟ್ ಗೂ ಇರುವ ಸಂಬಂಧದಂತೆ ಇದೆ. ಈಗ ಹಾಫ್‌-ಟೈಮ್ ಕ್ರೀಡೆ ಮತ್ತು ಸಂಸ್ಕೃತಿಯನ್ನು ಒಟ್ಟುಗೂಡಿಸಿ ಅಭಿಮಾನಿಗಳನ್ನು ಹೊಸ ರೀತಿಯಲ್ಲಿ ತೊಡಗಿಸಿಕೊಳ್ಳುತ್ತದೆ. ಈ ಸಲದ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ ಎಲ್ಲರನ್ನೂ ಒಳಗೊಳ್ಳುವಂತೆ, ಮತ್ತು ಸೃಜನಾತ್ಮಕವಾಗಿ ಇತ್ತು. ಎಲ್ಲೆಲ್ಲೂ ಇರುವ ಪ್ರೇಕ್ಷಕರು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ ಅನ್ನು ತನ್ಮಯತೆಯಿಂದ ಆನಂದಿಸುವಂತೆ ಮಾಡಿತು."

ಆದಿತ್ಯ ಅವರ ಪ್ರದರ್ಶನ, ಕ್ರೀಡಾಂಗಣಕ್ಕೆ ಒಂದು ವಿಶೇಷವಾದ ಸೊಬಗನ್ನು ನೀಡಿತು. ಟಿವಿ ಪ್ರಸಾರವನ್ನು ವೀಕ್ಷಿಸುತ್ತಿದ್ದ ಅಭಿಮಾನಿಗಳೂ ತಮ್ಮ ಮನೆಗಳಿಂದಲೇ ಭಾಗವಹಿಸಿ ದರು. ಬ್ಲಿಂಕಿಟ್‌ನ ’ಅರ್ಧ ಬೆಲೆಯಲ್ಲಿ ಕೋಕ್’ ಆಫರ್ ವಿರಾಮ ಸಮಯದ ಮೂಡ್ ಅನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿತು. ಕೋಕ್ ಅನ್ನು ಕ್ಯಾಚ್ ಹಿಡಿಯಲು ಬಹಳ ಕಾರತದಿಂದ ಕಾಯುತ್ತಿದ್ದು ಹಿಂದಕ್ಕೆ ಬಗ್ಗುವುದು.... ನೋಡಲು ವಿಶೇಷವಾಗಿತ್ತು. ಅದೇ ಸಂಗೀತ, ಅದೇ ವಿರಾಮ, ಆದರೆ ಒಬ್ಬೊಬ್ಬರಿಗೆ ಒಂದೊಂದು ವಿಭಿನ್ನ ರೀತಿಯ ಅನುಭವ!

ವಿರಾಮದ ಸಮಯವನ್ನು ಕ್ರೀಡೆ ಮತ್ತು ಸಂಸ್ಕೃತಿಗಳು ಒಟ್ಟಾಗುವ ಸ್ಥಳವನ್ನಾಗಿ ಪರಿವ ರ್ತಿಸಿದ ಕೋಕಾ-ಕೋಲಾ, ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಆಟಕ್ಕೆ ಹೊಸ ಆಯಾಮ ವನ್ನೆ ನೀಡಿವೆ. ಈಗ ಪ್ರೇಕ್ಷಕರಿಗೆ ಆಟ, ಸ್ಕೋರ್ ಮಾತ್ರವಲ್ಲ: ವಿರಾಮ ಸಮಯದಲ್ಲಿನ ಸಂಗೀತ, ಉತ್ಸಾಹ ಎಲ್ಲವೂ ಮುಖ್ಯವೇ.