Vishweshwar Bhat Column Impact: : ʼಹಕ್ಕಿ-ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಮಾಡಬೇಕುʼ ಅಂಕಣ ಪ್ರಸ್ತಾಪ
ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ಸಡಿಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ಅರುಣ್ ಪ್ರಸ್ತಾಪಿಸಿ ದ್ದಾರೆ. ಮನುಷ್ಯರ ದೃಷ್ಟಿಯಿಂದ ಇದು ಉತ್ತಮ. ಆದರೆ ಕಬ್ಬನ್ ಪಾರ್ಕ್ ನಲ್ಲಿರುವ ಹಾವು, ಹಕ್ಕಿಗಳ ದೃಷ್ಟಿಯಿಂದ ನೋಡುವುದಾದರೆ ಸಡಿಲಿಕೆ ಮಾಡದಿರುವುದೇ ಉತ್ತಮ. ಆದ್ದರಿಂದ ಈಗಾಗಲೇ ಸಾರ್ವ ಜನಿಕ ರಜಾದಿನಗಳಂದು ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಕ್ಕಿರುವ ನಿರ್ಬಂಧದ ಆದೇಶವನ್ನು ರದ್ದುಪಡಿಸಬಾದರು ಎಂದು ಮನವಿ ಮಾಡಿದರು.


ಬೆಂಗಳೂರು (ವಿಧಾನ ಪರಿಷತ್): ‘ಹಕ್ಕಿ-ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಮಾಡಬೇಕು’ ಅಂಕಣ ವಿಧಾನಪರಿಷತ್‌ನಲ್ಲಿ ಸದ್ದುಮಾಡಿದೆ. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರಭಟ್ ಅವರ ‘ನೂರೆಂಟು ವಿಶ್ವ ’ಅಂಕಣದಲ್ಲಿ, ಸದನದಲ್ಲಿ ಪ್ರಾಣಿ-ಪಕ್ಷಿಗಳಿಗೆ ಸಂಬಂಧಿಸಿ ದಂತೆ ಚರ್ಚೆಯಾಗಬೇಕು ಎನ್ನುವ ಬಗ್ಗೆ ಗುರುವಾರ ಅಂಕಣ ಬರೆದಿದ್ದರು. ಈ ಅಂಕಣದ ಬಗ್ಗೆ ಕಾಂಗ್ರೆಸ್ ನ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಪ್ರಸ್ತಾಪಿಸಿದರು. ಗುರುವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಪತ್ರಿಕೆಗಳಲ್ಲಿ ಹಕ್ಕಿ-ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗವಾಗಬೇಕು ಎಂದು ಅಂಕಣದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Vishweshwar Bhat Column: ಹಕ್ಕಿಗಳ, ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಆಗಬೇಕು !
ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ಸಡಿಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ಅರುಣ್ ಪ್ರಸ್ತಾಪಿಸಿದ್ದಾರೆ. ಮನುಷ್ಯರ ದೃಷ್ಟಿಯಿಂದ ಇದು ಉತ್ತಮ. ಆದರೆ ಕಬ್ಬನ್ ಪಾರ್ಕ್ ನಲ್ಲಿರುವ ಹಾವು, ಹಕ್ಕಿಗಳ ದೃಷ್ಟಿಯಿಂದ ನೋಡುವುದಾದರೆ ಸಡಿಲಿಕೆ ಮಾಡದಿರುವುದೇ ಉತ್ತಮ. ಆದ್ದರಿಂದ ಈಗಾಗಲೇ ಸಾರ್ವಜನಿಕ ರಜಾದಿನಗಳಂದು ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಕ್ಕಿರುವ ನಿರ್ಬಂಧದ ಆದೇಶವನ್ನು ರದ್ದುಪಡಿಸಬಾದರು ಎಂದು ಮನವಿ ಮಾಡಿದರು.
ತುರ್ತು ಪರಿಸ್ಥಿತಿಯಲ್ಲಿ ಅವಕಾಶ: ಇದಕ್ಕೂ ಮೊದಲು ಉತ್ತರಿಸಿದ ವಿಧಾನಪರಿಷತ್ ಸಭಾ ನಾಯಕ ಎನ್.ಎಸ್ ಬೋಸರಾಜು, ಕಬ್ಬನ್ ಉದ್ಯಾನವನದಲ್ಲಿ ಸಾರ್ವತ್ರಿಕ ರಜಾದಿನಗಳಂದು ವಾಹನಗಳ ಪ್ರವೇಶಕ್ಕೆ ನಿಷೇಧವಿದ್ದು, ತುರ್ತು ಸೇವೆಯ ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ರಜಾದಿನ ಮಕ್ಕಳು, ಸಾರ್ವಜನಿಕರು ಕಬ್ಬನ್ ಉದ್ಯಾನವನಕ್ಕೆ ಬರುತ್ತಾರೆ, ಹೀಗಾಗಿ ಅವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವಾಹನಗಳನ್ನು ನಿಷೇಧಿಸ ಲಾಗಿದ್ದು, ರಜಾ ದಿನಗಳಂದು ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುವ ಬಗ್ಗೆ ಮರುಪರಿಶೀಲನೆ ಮಾಡಲಾಗುತ್ತದೆ ಎಂದರು.
ಭಾನುವಾರ ಹಾಗೂ ಪ್ರತಿ ತಿಂಗಳು 2ನೇ ಶನಿವಾರ, 4ನೇ ಶನಿವಾರ ಮತ್ತು ರಜಾದಿನಗಳಂದು ವಾಹನಗಳ ಪ್ರವೇಶಕ್ಕೆ ನಿಷೇಧವಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಸ್ತಾವನೆ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಳಿದ ದಿನಗಳಂದು ಬೆಳಗ್ಗೆ 8ರಿಂದ ರಾತ್ರಿ 10 ಗಂಟೆವರೆಗೆ ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗುತ್ತದೆ. ಶನಿವಾರ ಸಂಜೆ 6.30 ರಿಂದ ರಾತ್ರಿ 10ರವರೆಗೆ ಕಬ್ಬನ್ ಉದ್ಯಾನವನದಲ್ಲಿ ಹೈಕೋರ್ಟ್ ಕಡೆಯಿಂದ ಸಿದ್ದಲಿಂಗಯ್ಯ ವೃತ್ತದ ವರೆಗೆ ಹಾಗೂ ಸಿದ್ದ ಲಿಂಗಯ್ಯ ವೃತ್ತದಿಂದ ಹೈಕೋರ್ಟ್ ಕಡೆಗೆ ಪ್ರವೇಶದ್ವಾರ ತೆರೆಯಲಾಗುತ್ತದೆ ಎಂದರು.
ನಿರ್ಬಂಧ ತೆರವಿಗೆ ಮನವಿ
ಮೇಲ್ಮನೆ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಕಬ್ಬನ್ ಪಾರ್ಕ್ ಆಸುಪಾಸಿನಲ್ಲಿ ತೀವ್ರ ಪ್ರಮಾಣದ ಸಂಚಾರ ಇರುತ್ತದೆ. ಆದ್ದರಿಂದ ಸಾರ್ವಜನಿಕ ರಜೆದಿಗಳಂದು ವಿಧಿಸಿರುವ ವಾಹನ ಸಂಚಾರ ನಿರ್ಬಂಧ ತೆರವುಗೊಳಿಸಬೇಕು. ಇದರೊಂದಿಗೆ ರಾತ್ರಿ 10 ಗಂಟೆಯವರೆಗೆ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ತುರ್ತುಪರಿಸ್ಥಿತಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎನ್ನುವ ಸರಕಾರದ ಉತ್ತರಕ್ಕೆ, ಒಮ್ಮೆ ಬೀಗ ಹಾಕಿದರೆ ಅಲ್ಲಿ ಯಾರೂ ಇರುವುದಿಲ್ಲ. ಆದ್ದರಿಂದ ನಿರ್ಬಂಧ ಸಡಿಲಿಕೆ ಮಾಡಬೇಕು ಎಂದು ವಿನಂತಿಸಿದರು.