ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

One Lakh Rent for Freedom Park: ಫ್ರೀಡಂಪಾರ್ಕ್ ಪ್ರತಿಭಟನೆಗೆ ದಿನಕ್ಕೆ 1 ಲಕ್ಷ ರು.ಬಾಡಿಗೆ ನಿಗದಿ: 10 ಸಾವಿರ ರು.ಠೇವಣಿ ಇಡಲು ನಿಯಮ, ಹೋರಾಟಗಾರರಿಂದ ತೀವ್ರ ಆಕ್ಷೇಪ

ಮಳೆ ಮತ್ತು ಬಿಸಿಲಿನ ನಡುವೆಯೂ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸಲು ಅನುಕೂಲ ವಾಗಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾದ ಈ ಸೌಲಭ್ಯ ಈಗ ದುಬಾರಿ ಬಾಡಿಗೆಯಿಂದ ಸಾಮಾನ್ಯ ಹೋರಾಟಗಾರರ ಕೈಗೆಟುಕದಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಸ್ಥಳ ಹಲವು ತಿಂಗಳುಗಳ ಕಾಲ ಬೀಗ ಹಾಕಿದ ಸ್ಥಿತಿಯ ಇರುತ್ತಿದ್ದು, ದುಬಾರಿ ಶುಲ್ಕ ಪಾವತಿ ಸುವ ಸಂಘಟನೆಗಳು ಕಾರ್ಯಕ್ರಮ ನಡೆಸುವ ಸಂದರ್ಭ ಗಳಲ್ಲಿ ಮಾತ್ರ ಸ್ವಚ್ಛಗೊಳಿಸಿ ತೆರೆಯಲಾಗು ತ್ತಿದೆ ಎಂಬ ಆರೋಪವೂ ಇದೆ.

ಫ್ರೀಡಂಪಾರ್ಕ್ ಪ್ರತಿಭಟನೆಗೆ ದಿನಕ್ಕೆ 1 ಲಕ್ಷ ರು.ಬಾಡಿಗೆ ನಿಗದಿ

-

Profile
Ashok Nayak Aug 27, 2026 10:31 AM

ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಮುಖ ಪ್ರತಿಭಟನಾ ಕೇಂದ್ರವಾದ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಗಾರರಿಗಾಗಿ ನಿರ್ಮಿಸಲಾ ಗಿರುವ ಕಟ್ಟಡ ಪ್ರದೇಶ ಬಳಸಲು ದಿನಕ್ಕೆ 1 ಲಕ್ಷ ರು.ಬಾಡಿಗೆ ಮತ್ತು 10 ಸಾವಿರ ರುಪಾಯಿ ಠೇವಣಿ ನಿಗದಿಪಡಿಸಿರುವ ವಿಚಾರ ತೀವ್ರ ವಿವಾದಕ್ಕೆ ಕಾರಣವಾಗಿದೆ. ಗಾಂಧಿನಗರದ ಶೇಷಾದ್ರಿ ರಸ್ತೆಯಲ್ಲಿರುವ ಫ್ರೀಡಂ ಪಾರ್ಕ್ ಆವರಣದ ಪಾರ್ಕಿಂಗ್ ಸಂಕೀರ್ಣದ ಮೇಲ್ಭಾಗದಲ್ಲಿ ಈ ಬೃಹತ್ ಮುಚ್ಚಿದ ಸ್ಥಳ ನಿರ್ಮಿಸಲಾಗಿದೆ.

ಮಳೆ ಮತ್ತು ಬಿಸಿಲಿನ ನಡುವೆಯೂ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸಲು ಅನುಕೂಲ ವಾಗಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾದ ಈ ಸೌಲಭ್ಯ ಈಗ ದುಬಾರಿ ಬಾಡಿಗೆಯಿಂದ ಸಾಮಾನ್ಯ ಹೋರಾಟಗಾರರ ಕೈಗೆಟುಕದಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇತ್ತೀಚಿನ ವರದಿಗಳ ಪ್ರಕಾರ, ಈ ಸ್ಥಳ ಹಲವು ತಿಂಗಳುಗಳ ಕಾಲ ಬೀಗ ಹಾಕಿದ ಸ್ಥಿತಿಯ ಇರುತ್ತಿದ್ದು, ದುಬಾರಿ ಶುಲ್ಕ ಪಾವತಿಸುವ ಸಂಘಟನೆಗಳು ಕಾರ್ಯಕ್ರಮ ನಡೆಸುವ ಸಂದರ್ಭ ಗಳಲ್ಲಿ ಮಾತ್ರ ಸ್ವಚ್ಛಗೊಳಿಸಿ ತೆರೆಯಲಾಗುತ್ತಿದೆ ಎಂಬ ಆರೋಪವೂ ಇದೆ.

ಇದನ್ನೂ ಓದಿ: Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್

ಪ್ರತಿಭಟನೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ದುಬಾರಿ ಬಾಡಿಗೆ : ಫ್ರೀಡಂ ಪಾಕ್ ನಲ್ಲಿರುವ ಈ ಕಟ್ಟಡ ಸಾಮಾನ್ಯ ವಾಣಿಜ್ಯ ಸಭಾಂಗಣವಲ್ಲ ಎಂಬುದು ಹೋರಾಟಗಾರರ ಪ್ರಮುಖ ವಾದ. ಸಾರ್ವಜನಿಕ ಸಭೆ, ಪ್ರಜಾಸತ್ತಾತ್ಮಕ ಹೋರಾಟ ಮತ್ತು ಪ್ರತಿಭಟನೆಗಳಿಗೆ ಅನುಕೂಲವಾಗಲೆಂದು ಪಾರ್ಕಿಂಗ್ ಕಟ್ಟಡದ ಮೇಲ್ಭಾಗದಲ್ಲಿ ದೊಡ್ಡ ಸ್ಥಳವನ್ನು ನಿರ್ಮಿಸಲಾಗಿತ್ತು. ಈಗ ಇದೇ ಸ್ಥಳದ ಬಳಕೆಗೆ ಸುಮಾರು 1 ಲಕ್ಷ ರು. ಬಾಡಿಗೆ ಹಾಗೂ 10 ಸಾವಿರ ರು. ಠೇವಣಿ ನಿಗದಿಪಡಿಸಲಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ದೊಡ್ಡ ರಾಜಕೀಯ ಪಕ್ಷಗಳು ಅಥವಾ ಆರ್ಥಿಕವಾಗಿ ಸದೃಢ ಸಂಘಟನೆಗಳಿಗೆ ಈ ಮೊತ್ತ ಭರಿಸುವುದು ಸಾಧ್ಯವಾಗಬಹುದು. ಆದರೆ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಗಳು, ರೈತ ಸಂಘಟನೆಗಳು, ಆಶಾ ಕಾರ್ಯಕರ್ತೆಯರು, ಚಾಲಕರ ಸಂಘಗಳು, ನಿವೃತ್ತ ನೌಕರರು, ವಿಕಲಚೇತನರ ಸಂಘಟನೆಗಳಿಗೆ ಇದು ದೊಡ್ಡ ಹೊರೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಫ್ರೀಡಂಪಾರ್ಕ್ ಏಕೆ ಪ್ರತಿಭಟನಾ ಕೇಂದ್ರ?

ಬೆಂಗಳೂರಿನಲ್ಲಿ ಹಿಂದೆ ಪುರಭವನ, ಮೌರ್ಯ ಸರ್ಕಲ್, ಬನ್ನಪ್ಪ ಪಾರ್ಕ್, ಎಂಜಿ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಮುಖ ರಸ್ತೆಗಳಲ್ಲಿ ನಡೆಯುವ ಧರಣಿ ಮತ್ತು ಮೆರವಣಿ ಗೆಗಳಿಂದ ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ಗಳಿಗೆ ನಿರ್ದಿಷ್ಟ ಸ್ಥಳ ನಿಗದಿಪಡಿಸುವ ಚರ್ಚೆ ಆರಂಭವಾಯಿತು. 2004ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಎಸ್. ಮರಿಸ್ವಾಮಿ ಅವರು ಪುರಭವನ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಧರಣಿ, ಸತ್ಯಾಗ್ರಹ ಮತ್ತು ಪ್ರತಿಭಟನೆಗಳಿಗೆ ನಿರ್ಬಂಧ ಹೇರಬೇಕು ಹಾಗೂ ಪ್ರತಿಭಟನೆಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕು ಎಂಬ ಕ್ರಮಕ್ಕೆ ಮುಂದಾಗಿದ್ದರು.

ಹಳೆಯ ಕೇಂದ್ರ ಕಾರಾಗೃಹದ ಆವರಣದಲ್ಲಿ ಪ್ರತಿಭಟನೆಗಳಿಗೆ ಪ್ರತ್ಯೇಕ ಜಾಗ ಮೀಸಲಿಡುವಂತೆ ಅವರು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಈ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ 2005ರಲ್ಲಿ ಧರಂಸಿಂಗ್ ಸರಕಾರ ಫ್ರೀಡಂ ಪಾರ್ಕ್ ಅನ್ನು ಪ್ರತಿಭಟನೆ ಮತ್ತು ಧರಣಿಗಳಿಗೆ ನಿಗದಿತ ಸ್ಥಳವನ್ನಾಗಿ ಮಾಡುವ ನಿರ್ಧಾರ ಘೋಷಿಸಿತು. ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗಳಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಲು, ಹೈಕೋರ್ಟ್ 2022ರ ಮಾರ್ಚ್‌ನಲ್ಲಿ ಮಧ್ಯಂತರ ಆದೇಶ ನೀಡಿ ನಗರದ ಎಲ್ಲ ಪ್ರತಿಭಟನೆ ಕೇವಲ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ನಡೆಸುವಂತೆ ಸರಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.