ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಫ್ಯಾಷನ್-ಪ್ರಿಯ ಯುವಜನತೆಗೆ ಪ್ರಶಸ್ತಿ ವಿಜೇತ ʼಬೇರ್‌ ಸಂಗ್ರಹʼ ಪರಿಚಯಿಸಿದ ಫಾಸ್ಟ್ರ್ಯಾಕ್

ಈ ಬೇರ್‌ ಕೈಗಡಿಯಾರಗಳ ಸಂಗ್ರಹವು 6 ಪ್ರಖರ ಬಣ್ಣಗಳಲ್ಲಿ ಲಭ್ಯ ಇದೆ. ದಟ್ಟ ಅಲ್ಯೂ ಮಿನಿಯಂ ಅಂಚಿನ ಉಂಗುರಗಳಿಂದ ಅಲಂಕೃತವಾಗಿರುವ ಕೈಗಡಿಯಾರದಲ್ಲಿ ಚಲನೆಯಲ್ಲಿ ಇರುವ ಬಿಡಿಭಾಗಗಳೆಲ್ಲ ಡಯಲ್‌ನಲ್ಲಿ ಕಾಣಲಿವೆ. ಸಮಕಾಲೀನ ಕೈಗಡಿಯಾರ ವಿನ್ಯಾಸವು ತಾಜಾ ನೋಟ ಒಳಗೊಂಡಿದ್ದು, ₹ 2195 ಮಾರಾಟ ಬೆಲೆಯಾಗಿದೆ

ಕೈಗಡಿಯಾರವು ವಿನ್ಯಾಸ ವಿಭಾಗದಲ್ಲಿ 50 ವಿನ್ಯಾಸಗಳಲ್ಲಿ ಒಂದಾಗಿದೆ

Profile Ashok Nayak Feb 23, 2025 11:58 PM

ಗಾಢ ಪಾರದರ್ಶಕದ ಈ ಕೈಗಡಿಯಾರದ ವಿನ್ಯಾಸವು ಪ್ರತಿಷ್ಠಿತ 24 ನೇ ಸಿಐಐ ಭಾರತ ವಿನ್ಯಾಸ ಶೃಂಗಸಭೆ 2024ರಲ್ಲಿ ಮುಂಚೂಣಿ 50 ವಿನ್ಯಾಸಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ

ಬೆಂಗಳೂರು: ಭಾರತದ ಪ್ರಮುಖ ಯುವ ಫ್ಯಾಷನ್ ಪರಿಕರಗಳ ಬ್ರ್ಯಾಂಡ್ ಆಗಿರುವ ಫಾಸ್ಟ್ರ್ಯಾಕ್‌, ಫ್ಯಾಷನ್‌ ಪ್ರೇಮಿ ಯುವಕ – ಯುವತಿಯರಿಗಾಗಿ ತನ್ನ ಇತ್ತೀಚಿನ ಸಂಗ್ರಹ ವಾದ ಬೇರ್‌ (BARE) ಕೈಗಡಿಯಾರವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೊಂದು ನಾವೀನ್ಯತೆಯ ಪಾರದರ್ಶಕ ಕೈಗಡಿಯಾರವಾಗಿದ್ದು, ವ್ಯಕ್ತಿತ್ವ ಅಭಿವ್ಯಕ್ತಿಯ ಸಂಭ್ರಮಾ ಚರಣೆ ಆಗಿರಲಿದೆ. ಪ್ರತಿಷ್ಠಿತ 24 ನೇ ಸಿಐಐ ಇಂಡಿಯಾ ಡಿಸೈನ್ ಶೃಂಗಸಭೆ 2024 ರಲ್ಲಿ ಈ ವಿಶಿಷ್ಟ ಕೈಗಡಿಯಾರವು ಉತ್ಪನ್ನ ವಿನ್ಯಾಸ ವಿಭಾಗದಲ್ಲಿ ಮುಂಚೂಣಿ 50 ವಿನ್ಯಾಸಗಳಲ್ಲಿ ಒಂದಾಗಿದೆ ಎಂದು ಗುರುತಿಸಲ್ಪಟ್ಟಿದೆ.

ಈ ಬೇರ್‌ ಕೈಗಡಿಯಾರಗಳ ಸಂಗ್ರಹವು 6 ಪ್ರಖರ ಬಣ್ಣಗಳಲ್ಲಿ ಲಭ್ಯ ಇದೆ. ದಟ್ಟ ಅಲ್ಯೂ ಮಿನಿಯಂ ಅಂಚಿನ ಉಂಗುರಗಳಿಂದ ಅಲಂಕೃತವಾಗಿರುವ ಕೈಗಡಿಯಾರದಲ್ಲಿ ಚಲನೆ ಯಲ್ಲಿ ಇರುವ ಬಿಡಿಭಾಗಗಳೆಲ್ಲ ಡಯಲ್‌ನಲ್ಲಿ ಕಾಣಲಿವೆ. ಸಮಕಾಲೀನ ಕೈಗಡಿಯಾರ ವಿನ್ಯಾಸವು ತಾಜಾ ನೋಟ ಒಳಗೊಂಡಿದ್ದು, ₹ 2195 ಮಾರಾಟ ಬೆಲೆಯಾಗಿದೆ.

ಈ ವಿಶಿಷ್ಟ ಕೈಗಡಿಯಾರ ಸಂಗ್ರಹವು ಭಾರತದಾದ್ಯಂತ ಆಕರ್ಷಕ ಶೈಲಿ ಪ್ರಜ್ಞೆ ಹೊಂದಿ ರುವ ಯುವಜನತೆಗೆ ಫ್ಯಾಷನ್ ಕೈಗಡಿಯಾರ ಖರೀದಿಸಲು ಪ್ರೇರಣೆ ನೀಡಲಿದೆ.

"ಟೂ ಬೇರ್ ಟು ಕೇರ್" ಎಂಬ ಘೋಷವಾಕ್ಯ ಒಳಗೊಂಡಿರುವ ಪ್ರಚಾರ ಅಭಿಯಾನವು ಈ ಕೈಗಡಿಯಾರದ ವಿಶಿಷ್ಟ ವಿನ್ಯಾಸದ ಬಗ್ಗೆ ಗಮನ ಸೆಳೆಯಲಿದೆ. ಈ ಕೈಗಡಿಯಾರ ಧರಿಸಿದವರು ತಮ್ಮ ವ್ಯಕ್ತಿತ್ವ ಅಭಿವ್ಯಕ್ತಿಸಲು ಹಿಂಜರಿಯುವುದಿಲ್ಲ.

ಈ ವಿಶಿಷ್ಟ ವಿನ್ಯಾಸದ ಕೈಗಡಿಯಾರವನ್ನು ಮಾರುಕಟ್ಟೆಗೆ ಪರಿಚಯಿಸುವ ಸಮಾ ರಂಭದಲ್ಲಿ ಮಾತನಾಡಿದ ಫಾಸ್ಟ್ರ್ಯಾಕ್‌ನ ಮಾರಾಟ ವಿಭಾಗದ ಮುಖ್ಯಸ್ಥ ಡ್ಯಾನಿ ಜೇಕಬ್ ಅವರು , "ಇಂದಿನ ಯುವಜನರು ಮುತುವರ್ಜಿಯಿಂದ ವಿನ್ಯಾಸ ಮಾಡಿರುವ, ಪರಿಪೂರ್ಣ ಮಾಹಿತಿ ತುಂಬಿಕೊಂಡಿರುವ ಡಿಜಿಟಲ್ ಜಗತ್ತನ್ನು ಮುನ್ನಡೆಸುತ್ತಿದ್ದಾರೆ. ಆದರೆ ಖಚಿತತೆ, ದಿಟ್ಟತನ, ಕಟು ವಾಸ್ತವ, ಏರಿಳಿತ, ಮುಜುಗರ ಉಂಟು ಮಾಡುವ ದೋಷಗಳು ನಮ್ಮನ್ನು ಸುಂದರ ಮಾನವನನ್ನಾಗಿ ರೂಪಿಸಿವೆ. ಪರಿಪೂರ್ಣತೆಗೆ ಒಲವು ತೋರುವ ಜಗತ್ತಿನಲ್ಲಿ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಪ್ರದರ್ಶಿಸಲು ದಿಟ್ಟತನ ಮತ್ತು ಸತ್ಯಾಸತ್ಯತೆಯ ಅಗತ್ಯ ಇದೆ. ಅವ್ಯವಸ್ಥೆ, ಅಪರಿಪೂರ್ಣತೆ ಒಪ್ಪಿಕೊಳ್ಳಲು ಹಿಂದೇಟು ಹಾಕದ ಮತ್ತು ನಿಷ್ಪಕ್ಷಪಾತ ವ್ಯಕ್ತಿತ್ವದ ಅದ್ಭುತ ಕ್ಷಣಗಳ ಸಂಭ್ರಮಾಚರಿಸಲು ನಾವು ಬಯಸುತ್ತೇವೆʼ ಎಂದು ಹೇಳಿದ್ದಾರೆ.

ಫಾಸ್ಟ್ರ್ಯಾಕ್‌ನ ಬೇರ್‌ ಸಂಗ್ರಹವು ಉತ್ಪನ್ನ ಗುರುತಿಸುವ 6 ಸಂಕೇತಗಳನ್ನು (ಎಸ್‌ಕೆಯು) ಒಳಗೊಂಡಿದೆ. ಸದ್ಯಕ್ಕೆ ಎಲ್ಲಾ ಫಾಸ್ಟ್ರ್ಯಾಕ್‌ ರಿಟೇಲ್‌ ಮಳಿಗೆಗಳು, ಟೈಟನ್ ವರ್ಲ್ಡ್ ಸ್ಟೋರ್‌ಗಳು, ಅಧಿಕೃತ ವಿತರಕರು ಮತ್ತು ಪ್ರಮುಖ ಆನ್‌ಲೈನ್ ತಾಣಗಳಲ್ಲಿ ಖರೀದಿಗೆ ಲಭ್ಯ ಇವೆ.