ಫ್ಲಿಪ್‌ಕಾರ್ಟ್ ನ ಡೆಲಿವರಿ ವಾಹನಗಳ ವಿಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಬಳಕೆ
ಮಹಾನಗರಗಳಲ್ಲಿ ಮತ್ತು ಎರಡನೇ ಹಂತದ ನಗರಗಳಲ್ಲಿ ದೈನಂದಿನ ಬಳಕೆಯ ವಸ್ತು ಗಳನ್ನು ಡೆಲಿವರಿ ಮಾಡಲು ಶೇ.70ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುತ್ತಿದೆ. ಫ್ಲಿಪ್‌ಕಾರ್ಟ್ ಸಂಸ್ಥೆಯು ದೀರ್ಘ ದೂರದ ಸರಕು ಸಾಗಾಣಿಕೆಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಸಾಧ್ಯತೆಯನ್ನು ಪರೀಕ್ಷಿಸಲು ದೆಹಲಿ- ಜೈಪುರ ಕಾರಿಡಾರ್ ನಲ್ಲಿ ಲಾಂಗ್-ಹಾಲ್ ಎಲೆಕ್ಟ್ರಿಕ್ ಟ್ರಕ್ ಪೈಲೆಟ್ ಯೋಜನೆಯನ್ನು ಆರಂಭ ಮಾಡಿದೆ.
-
2030ರ ವೇಳೆಗೆ ಶುದ್ಧ ಸಾರಿಗೆಗೆ ಪರಿವರ್ತನೆ ಹೊಂದುವುದನ್ನು ವೇಗಗೊಳಿಸಲು ಲಾಂಗ್-ಹಾಲ್ ಪೈಲೆಟ್ ಮತ್ತು ಇವಿ ಇಕೋಸಿಸ್ಟಮ್ ಯೋಜನೆ ಆರಂಭ
ಬೆಂಗಳೂರು - ನವೆಂಬರ್ 13, 2025: ಭಾರತದ ಸ್ವದೇಶಿ ಇ-ಕಾಮರ್ಸ್ ಸಂಸ್ಥೆ ಆಗಿರುವ ಫ್ಲಿಪ್‌ಕಾರ್ಟ್ ತನ್ನ ಡೆಲಿವರಿ ವಾಹನಗಳ ವಿಭಾಗದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಗಳ ಸಂಖ್ಯೆಯನ್ನು 20,000ಕ್ಕೆ ಹೆಚ್ಚಿಸುವ ಮೂಲಕ ಹೊಸ ಸಾಧನೆ ಮಾಡಿದೆ. 20230ರ ವೇಳೆಯ ತನ್ನ ಡೆಲಿವರಿ ವಿಭಾಗದಲ್ಲಿ ಶೇ.100 ಎಲೆಕ್ಟ್ರಿಕ್ ವಾಹನಗಳನ್ನು ಬಳಸಿಕೊಳ್ಳ ಬೇಕು ಎಂಬ ಕಂಪನಿಯ ಉದ್ದೇಶ ಸಾಕಾರದ ಭಾಗವಾಗಿ ಈ ಸಾಧನೆ ಮಾಡಲಾಗಿದೆ. ಸುಸ್ಥಿರ ಸಾರಿಗೆ ವಿಭಾಗದಲ್ಲಿ ಫ್ಲಿಪ್‌ಕಾರ್ಟ್ ಮಾಡುತ್ತಿರುವ ನಿರಂತರ ಹೂಡಿಕೆಗಳಿಗೆ ಈ ಸಾಧನೆ ಪುರಾವೆಯಾಗಿದೆ.
ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಲಕ್ನೋ ಸೇರಿದಂತೆ ಪ್ರಮುಖ ಮಹಾನಗರ ಮತ್ತು ಎರಡನೇ ಶ್ರೇಣಿಯ ನಗರಗಳಲ್ಲಿ ಈ ಎಲೆಕ್ಟ್ರಿಕ್ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ದಿ ಕ್ಲೈಮೇಟ್ ಗ್ರೂಪ್ ನೇತೃತ್ವದ ಇವಿ 100 ಯೋಜನೆಯ ಕಡೆಗೆ ಸಂಸ್ಥೆಯು ಹೊಂದಿರುವ ಬದ್ಧತೆಯನ್ನು ಈ ಯೋಜನೆ ತೋರಿಸುತ್ತದೆ. ಇದರ ಜೊತೆಗೆ ಫ್ಲಿಪ್ ಕಾರ್ಟ್ ಇವಿ ಅಳವಡಿಕೆಯನ್ನು ವೇಗಗೊಳಿಸಲು ಲಾಂಗ್-ಹಾಲ್ ಟ್ರಕ್ ಪೈಲೆಟ್, ಪ್ಯಾನ್-ಇಂಡಿಯಾ ರೋಡ್‌ಶೋಗಳು, ಡೆಲಿವರಿ ಪಾಲುದಾರರಿಗೆ ಡಿಜಿಟಲ್ ತರಬೇತಿ ಮತ್ತು ಅಳವಡಿಕೆ ಸವಾಲುಗಳನ್ನು ಎದುರಿಸಲು ಡೇಟಾ-ಚಾಲಿತ ವಿಧಾನ ಇತ್ಯಾದಿ ಗಳನ್ನು ನಡೆಸುತ್ತಿದೆ.
ಇದನ್ನೂ ಓದಿ: Bangalore Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಪ್ರಸ್ತುತ ಫ್ಲಿಪ್‌ಕಾರ್ಟ್ ನ ದೈನಂದಿನ ವಸ್ತು ಡೆಲಿವರಿ ವಿಭಾಗದಲ್ಲಿ ಶೇ.70ಕ್ಕೂ ಹೆಚ್ಚು ಇವಿಗಳನ್ನು ಬಳಸಲಾಗುತ್ತಿದೆ. ಹೆಚ್ಚು ಜನನಿಬಿಡ, ಹೆಚ್ಚು ಡೆಲಿವರಿ ಇರುವ ಪ್ರದೇಶಗಳಲ್ಲಿ ಈ ವಾಹನಗಳು ಹೆಚ್ಚು ವಿಶ್ವಾಸಾರ್ಹತೆಯನ್ನು ತೋರಿಸುತ್ತಿವೆ ಮತ್ತು ಸಂಸ್ಥೆಯ ಕಾರ್ಯಾ ಚರಣೆಯಲ್ಲಿ ಇಂಗಾಲ ಹೊರಸೂಸುವಿತೆಯನ್ನು ಬಹಳ ಕಡಿಮೆ ಮಾಡುತ್ತದೆ.
ಈ ಕುರಿತು ಮಾತನಾಡುವ ಫ್ಲಿಪ್‌ಕಾರ್ಟ್ ಗ್ರೂಪ್ ನ ಕಸ್ಟಮರ್ ಎಕ್ಸ್ ಪೀರಿಯನ್ಸ್ ಮತ್ತು ರೀಕಾಮರ್ಸ್ ವಿಭಾಗದ ಹೆಡ್ ಆಫ್ ಮಿನಿಟ್ಸ್ & ಸಪ್ಲೈ ಚೈನ್ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಟ್ ಹೇಮಂತ್ ಬದ್ರಿ ಅವರು, “ನಮ್ಮ ಡೆಲಿವರಿ ವಾಹನ ವಿಭಾಗದಲ್ಲಿ 20,000 ಇವಿಗಳನ್ನು ಹೊಂದಿರುವುದಕ್ಕೆ ನಾವು ಬಹಳ ಹೆಮ್ಮೆಪಡುತ್ತೇವೆ. ಫ್ಲಿಪ್‌ಕಾರ್ಟ್‌ನಲ್ಲಿ ನಾವು ಯಾವಾಗಲೂ ಹೊಸತನ್ನು ಅಳವಡಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿರು ತ್ತೇವೆ. ನಿಜವಾದ ಸುಸ್ಥಿರ ಸಪ್ಲೈ ಚೈನ್ ಎಂದರೆ ಪ್ರತೀ ಹಂತದಲ್ಲೂ ಹೊಸತನ ಸಾಧಿಸುವುದೇ ಎಂದೇ ಅರ್ಥ. ಸುದೀರ್ಘ ದೂರದ ಡೆಲಿವರಿ ವಿಭಾಗದಲ್ಲಿ ಇವಿ ಬಳಸುವ ನಮ್ಮ ಹೊಸ ಲಾಂಗ್-ಹಾಲ್ ಎಲೆಕ್ಟ್ರಿಕ್ ಟ್ರಕ್ ಪೈಲಟ್ ಯೋಜನೆಯು ಈ ವಿಭಾಗದಲ್ಲಿ ಸಂಚಲನ ಉಂಟು ಮಾಡಲಿದೆ. ನಾವು ಭವಿಷ್ಯಕ್ಕಾಗಿ ಕಾರ್ಯ ನಿರ್ವಹಿಸು ತ್ತಿದ್ದೆ ಮತ್ತು ಸಂಪೂರ್ಣ ಡೆಲಿವರಿ ವಿಭಾಗದಲ್ಲಿ ಶೇ. 100 ಎಲೆಕ್ಟ್ರಿಫಿಕೇಶನ್ ಸಾಧ್ಯ ಎಂದು ಸಾಬೀತುಪಡಿಸುತ್ತಿದ್ದೇವೆ” ಎಂದರು.
ಫ್ಲಿಪ್‌ಕಾರ್ಟ್ ನ ಹೆಡ್ ಆಫ್ ಸಸ್ಟೇನೇಬಿಲಿಟಿ ನಿಶಾಂತ್ ಗುಪ್ತಾ ಅವರು, “ಡೆಲಿವರಿ ವಿಭಾಗದಲ್ಲಿ ಇವಿ ಬಳಕೆ ಬಹಳ ನಿರ್ಣಾಯಕವಾಗಿದೆ ಮತ್ತು ಮಹತ್ವದ್ದಾಗಿದೆ. ನಮ್ಮ ವಿಶ್ ಮಾಸ್ಟರ್ ಗಳಿಗೆ ಪ್ರಾಯೋಗಿಕ ಜ್ಞಾನ ಒದಗಿಸುವುದರಿಂದ ಹಿಡಿದು ಮೂಲ ಸೌಕರ್ಯ ಹಾಗೂ ಉತ್ಪನ್ನ ವಿನ್ಯಾಸ ವಿಭಾಗದಲ್ಲಿ ಉದ್ಯಮ ಪಾಲುದಾರರೊಂದಿಗೆ ಸಹಯೋಗ ಮಾಡಿಕೊಳ್ಳುವವರೆಗೆ ನಾವು ಇವಿ ಅಳವಡಿಕೆಗೆ ತಡೆಗಟ್ಟುವ ಅನೇಕ ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಪರಿವರ್ತನೆ ತೀವ್ರವಾಗುತ್ತಿದ್ದಂತೆ ಪ್ರತಿ ಪಾಲುದಾರರ ಅಗತ್ಯಗಳಿಗೆ ಸಮಾನ, ಸುಲಭ ಮತ್ತು ಪ್ರತಿಕ್ರಿಯಾ ತ್ಮಕವಾಗಿ ಉಳಿಯುವುದು ನಮ್ಮ ಜವಾಬ್ದಾರಿಯಾಗಿದೆ” ಎಂದರು.
ಸುದೀರ್ಘ ಪಯಣದಲ್ಲಿ ಇವಿ ಸಾಧ್ಯತೆ ಪರೀಕ್ಷಿಸಲು ಎಲೆಕ್ಟ್ರಿಕ್ ಟ್ರಕ್ ಪೈಲೆಟ್ ಯೋಜನೆ
ಗೋಲ್ಡನ್ ಏರೋ ಲಾಜಿಸ್ಟಿಕ್ಸ್ ಜೊತೆಗಿನ ಪಾಲುದಾರಿಕೆಯಲ್ಲಿ ಲಾಂಗ್-ಹಾಲ್ ಲಾಜಿಸ್ಟಿಕ್ಸ್ ಪೈಲೆಟ್ ಪ್ರೋಗ್ರಾಂ ಅನ್ನು ಫ್ಲಿಪ್ ಕಾರ್ಟ್ ಆರಂಭಿಸಿದೆ. ಈ ಮೂಲಕ ದೆಹಲಿ-ಜೈಪುರ ಕಾರಿಡಾರ್ ಮಧ್ಯೆ ರೆಟ್ರೋಫಿಟೆಡ್ ಕಲ್ಯಾಣಿ ಎಲೆಕ್ಟ್ರಿಕ್ ಟ್ರಕ್ ಬಳಸಿ ಡೆಲಿವರಿ ಮಾಡುವ ಕಾರ್ಯ ಆರಂಭವಾಗಿದೆ. ಈ ಪೈಲೆಟ್ ಯೋಜನೆಯು ಮಧ್ಯಮ-ದೂರದ ಸರಕು ಸಾಗಾಣಿಕೆಯಲ್ಲಿ ಎಲೆಕ್ಟ್ರಿಕ್ ಟ್ರಕ್ ಗಳ ಬಳಕೆಯ ಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು ವಿನ್ಯಾಸಗೊಳಿಸಲಾಗಿದ್ದು, ಈ ಯೋಜನೆಯು ವಾಹನದ ಕಾರ್ಯಕ್ಷಮತೆ, ಶಕ್ತಿ ದಕ್ಷತೆ ಕುರಿತು ಒಳನೋಟಗಳನ್ನು ನೀಡುತ್ತದೆ.
ಇವಿ100 ನೇತೃತ್ವದ ಯೋಜನೆಗಳು
ಡೆಲಿವರಿ ನೆಟ್‌ವರ್ಕ್ ಗಳಲ್ಲಿ ಅರಿವು ಮೂಡಿಸಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಫ್ಲಿಪ್‌ಕಾರ್ಟ್ ಸಂಸ್ಥೆಯು ತನ್ನ ಓಇಎಂ ಪಾಲುದಾರರಾದ ರಿವಾಲ್ಟ್ ಮತ್ತು ಬಜಾಜ್ ಜೊತೆಗಿನ ಸಹಭಾಗಿತ್ವದಲ್ಲಿ ದೇಶವ್ಯಾಪಿ ಇವಿ ರೋಡ್‌ಶೋ ಆಯೋಜನೆ ಮಾಡಿದೆ. ಅನೇಕ ನಗರಗಳಲ್ಲಿ ನಡೆದ ಈ ಕಾರ್ಯಕ್ರಮವು ವಿಶ್ ಮಾಸ್ಟರ್ ಗಳಿಗೆ ಇವಿ ಮಾದರಿ ಗಳನ್ನು ಪರೀಕ್ಷಿಸಲು, ಲಭ್ಯವಿರುವ ಚಾರ್ಜಿಂಗ್ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬ್ಯಾಟರಿ ಕಾರ್ಯಕ್ಷಮತೆ ಹಾಗೂ ರೇಂಜ್ ಕುರಿತು ಮಾಹಿತಿ ಪಡೆಯಲು ನೆರವಾಯಿತು.
ಇದಲ್ಲದೆ ಫ್ಲಿಪ್‌ಕಾರ್ಟ್ ದೆಹಲಿ ಮತ್ತು ಮುಂಬೈಯಲ್ಲಿ ಟಾರ್ಗೆಟೆಡ್ ಓಇಎಂ x ಲಾಸ್ಟ್ ಮೈಲ್ ಏಜೆನ್ಸೀಸ್ (ಎಲ್ಎಂಎ) ಕನೆಕ್ಟ್ಸ್ ಎಂಬ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ತಯಾರಕರು, ವಾಹನ ನಿರ್ವಾಹಕರು ಮತ್ತು ಸೇವಾ ಪೂರೈಕೆದಾರರು ಭಾಗವಹಿಸಿ ಮೂಲ ಸೌಕರ್ಯ, ಹಣಕಾಸು ಮತ್ತು ವಾಹನ ಸಿದ್ಧತೆಯ ಕುರಿತು ಸಂವಾದ ನಡೆಸಿದರು.
ವಿಶ್ ಮಾಸ್ಟರ್ ಗಳಿಗೆ ಡಿಜಿಟಲ್ ತರಬೇತಿ
ಇವಿ ಪರಿವರ್ತನೆಯ ಪಯಣಕ್ಕೆ ತನ್ನ ಸಿಬ್ಬಂದಿಯನ್ನು ಸಜ್ಜುಗೊಳಿಸಲು ಫ್ಲಿಪ್‌ಕಾರ್ಟ್ ವಿಶ್‌ಮಾಸ್ಟರ್ ಡಿಜಿಟಲ್ ತರಬೇತಿ ಕಾರ್ಯಕ್ರಮ ಆರಂಭಿಸಿದೆ. ಈ ಮೂಲಕ ಡೆಲಿವರಿ ಪಾಲುದಾರರಿಗೆ ಇವಿ 100 ಗುರಿಗಳು, ವಾಹನ ಕಾರ್ಯಾಚರಣೆ, ಚಾರ್ಜಿಂಗ್ ಪದ್ಧತಿಗಳು ಮತ್ತು ಸುಸ್ಥಿರತೆಯ ಲಾಭಗಳ ಕುರಿತು ತಿಳಿಸಲಾಗುತ್ತದೆ.
ಈ ಅಭಿಯಾನವು ವಿಭಿನ್ನ ಭೂಪ್ರದೇಶ ಮತ್ತು ಸ್ಥಿತಿಗಳಲ್ಲಿ ಇವಿ ಕಾರ್ಯಕ್ಷಮತೆ ಕುರಿತು ಇರುವ ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸುತ್ತದೆ. 5,410ಕ್ಕೂ ಹೆಚ್ಚು ವಿಶ್ ಮಾಸ್ಟರ್ ಗಳೊಂದಿಗೆ ಫ್ಲಿಪ್‌ಕಾರ್ಟ್ ನಡೆಸಿದ ಸಮೀಕ್ಷೆಯಲ್ಲಿ ಇವಿಗಳ ಕುರಿತು ಧನಾತ್ಮಕ ಭಾವನೆಯು ಬೆಳೆಯುತ್ತಿರುವುದು ಕಂಡು ಬಂದಿದ್ದು, ಬಹುತೇಕ ಅರ್ಧಕ್ಕಿಂತ ಹೆಚ್ಚು ಮಂದಿ ಇವಿಗೆ ಬದಲಾವಣೆ ಹೊಂದಲು ಉತ್ಸುಕರಾಗಿದ್ದಾರೆ. ಆದರೆ ಸುಲಭ ಸಾಲ ಲಭ್ಯತೆ ಸವಾಲಾಗಿದೆ.
ಈ ಬೆಳವಣಿಗೆಗಳು ತನ್ನ ಕಾರ್ಯಾಚರಣೆಗಳಲ್ಲಿ ಸುಸ್ಥಿರತೆಯನ್ನು ಉಂಟು ಮಾಡುವ ಮತ್ತು ಶುದ್ಧ ಸಾರಿಗೆಯನ್ನು ಅಳವಡಿಸಿಕೊಳ್ಳುವ ಫ್ಲಿಪ್‌ಕಾರ್ಟ್‌ನ ನಿರಂತರ ಪ್ರಯತ್ನ ಗಳನ್ನು ಪ್ರತಿಬಿಂಬಿಸುತ್ತವೆ.