ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿಪಿಆರ್ ತರಬೇತಿ ಕಾರ್ಯಕ್ರಮ ಆಯೋಜಿಸಿದ ಫೋರ್ಟಿಸ್ ಆಸ್ಪತ್ರೆಗಳು

ಪ್ರತೀ 90 ನಿಮಿಷಗಳ ತರಬೇತಿ ಸೆಷನ್‌ ನಲ್ಲಿ ಸಿಪಿಆರ್ ತಂತ್ರಗಳ ಪ್ರಾಯೋಗಿಕ ಪ್ರದರ್ಶನ, ಉಸಿರುಗಟ್ಟುವಿಕೆಯಿಂದ ರಕ್ಷಿಸುವ ವಿಧಾನಗಳು (ಚೋಕಿಂಗ್ ರೆಸ್ಕ್ಯೂ ಮೆಥಡ್) ಮತ್ತು ತುರ್ತು ಔಷಧ ತಜ್ಞರು, ತರಬೇತಿ ಪಡೆದ ನರ್ಸ್‌ ಗಳು ಹಾಗೂ ಪ್ರಮಾಣೀಕೃತ ಸಿಪಿಆರ್ ತರಬೇತಿದಾರರ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.

ಸಿಪಿಆರ್ ತರಬೇತಿ ಕಾರ್ಯಕ್ರಮ ಆಯೋಜಿಸಿದ ಫೋರ್ಟಿಸ್ ಆಸ್ಪತ್ರೆಗಳು

-

Ashok Nayak
Ashok Nayak Nov 24, 2025 6:43 PM

ಬೆಂಗಳೂರು: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನ ಸಮುದಾಯವು ತ್ವರಿತವಾಗಿ ಪ್ರತಿಕ್ರಿ ಯಿಸಲು ನೆರವಾಗುವ ಉದ್ದೇಶದಿಂದ ಫೋರ್ಟಿಸ್ ಆಸ್ಪತ್ರೆಗಳು ಬೆಂಗಳೂರು ಇಂದು ‘ಫೋರ್ಟಿಸ್ ಹೈ ನಾ’ (ಫೋರ್ಟಿಸ್ ಇದೆಯಲ್ಲ) ಅಭಿಯಾನದಡಿ ಸಿಪಿಆರ್ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ. ತುರ್ತು ಸ್ಥಿತಿಯಲ್ಲಿ ಯಾವಾಗಲೂ ನಿಮ್ಮ ಜೊತೆ ಫೋರ್ಟಿಸ್ ಇದೆ ಎಂಬ ಸಂದೇಶವನ್ನು ಸಾರುತ್ತಾ ಜೀವ ಉಳಿಸುವ ಅತ್ಯಗತ್ಯ ಕೌಶಲ್ಯಗಳನ್ನು ಪ್ರಜೆಗಳಿಗೆ ಕಲಿಸುವುದೇ ಈ ಯೋಜನೆಯ ಉದ್ದೇಶವಾಗಿದ್ದು, ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಈ ತರಬೇತಿ ಕಾರ್ಯಕ್ರಮವನ್ನು ಭಾರತದ ಎಲ್ಲಾ ಫೋರ್ಟಿಸ್ ಆಸ್ಪತ್ರೆಗಳಲ್ಲಿ ಏಕಕಾಲ ದಲ್ಲಿ ನಡೆಸಲಾಯಿತು. ಎರಡು ಗ್ಲೆನೀಗಲ್ಸ್ ಆಸ್ಪತ್ರೆಗಳೂ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಇದು ಫೋರ್ಟಿಸ್ ಜಾಲದಲ್ಲಿ ಇದುವರೆಗೆ ನಡೆದ ಅತಿದೊಡ್ಡ ಸಿಪಿಆರ್ ತರಬೇತಿ ಕಾರ್ಯಕ್ರಮವಾಗಿದ್ದು, ಒಟ್ಟಾರೆಯಾಗಿ ಆಸ್ಪತ್ರೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ 4,000ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ.

ಪ್ರತೀ 90 ನಿಮಿಷಗಳ ತರಬೇತಿ ಸೆಷನ್‌ ನಲ್ಲಿ ಸಿಪಿಆರ್ ತಂತ್ರಗಳ ಪ್ರಾಯೋಗಿಕ ಪ್ರದರ್ಶನ, ಉಸಿರುಗಟ್ಟುವಿಕೆಯಿಂದ ರಕ್ಷಿಸುವ ವಿಧಾನಗಳು (ಚೋಕಿಂಗ್ ರೆಸ್ಕ್ಯೂ ಮೆಥಡ್) ಮತ್ತು ತುರ್ತು ಔಷಧ ತಜ್ಞರು, ತರಬೇತಿ ಪಡೆದ ನರ್ಸ್‌ ಗಳು ಹಾಗೂ ಪ್ರಮಾಣೀಕೃತ ಸಿಪಿಆರ್ ತರಬೇತಿದಾರರ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಎಲ್ಲಾ ಭಾಗವಹಿಸಿದವ ರಿಗೂ ಭಾಗವಹಿಸಿದ ಪ್ರಮಾಣಪತ್ರ ಮತ್ತು ತುರ್ತು ಸಹಾಯ ಕ್ರಮಗಳನ್ನು ವಿವರಿಸುವ ಪ್ರಥಮ ಚಿಕಿತ್ಸೆ ಕಿರುಪುಸ್ತಕ ನೀಡಲಾಯಿತು.

ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್

ಆಸ್ಪತ್ರೆ ಆವರಣಗಳನ್ನು ಮೀರಿ ಹಲವು ಕಡೆಗಳ ನಿವಾಸಿ ಕಲ್ಯಾಣ ಸಂಘಗಳು (ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್), ಕಾರ್ಪೋರೇಟ್ ಕಂಪನಿಗಳು, ಶಾಲೆಗಳು, ಜಿಮ್‌ ಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ತರಬೇತಿ ಕಾರ್ಯಕ್ರಮಗಳನ್ನು ಆಯೋ ಜಿಸಲಾಯಿತು.

ಅರೆಕೆರೆ, ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ರೆಸಿಡೆನ್ಸಿ ಅಪಾರ್ಟ್‌ ಮೆಂಟ್‌ ನಿಂದ 26 ಜನ, ಚಾಮರಾಜಪೇಟೆ, ಕನ್ನಿಂಗ್ ಹ್ಯಾಮ್ ರೋಡ್‌ ನ ಲೀಲಾವತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯಿಂದ 35 ಜನ, ಆರ್.ಆರ್. ನಗರ, ನಾಗರಭಾವಿಯ ಕೆ.ಆರ್.ಎಸ್. ಎಂಡೆವರ್ಸ್ ಅಪಾರ್ಟ್‌ಮೆಂಟ್‌ ನಿಂದ 25 ಜನ, ಮಾಗಡಿ ರಸ್ತೆ, ನಾಗರಭಾವಿಯ ಫೋರ್ಡ್ ಶೋ ರೂಮ್‌ನಲ್ಲಿ ನಡೆದ ಸಮುದಾಯ ಸಿಪಿಆರ್ ತರಬೇತಿ ಕಾರ್ಯಕ್ರಮದಲ್ಲಿ 65 ಜನರು ಭಾಗವಹಿಸಿದರು. ವಿದ್ಯಾರ್ಥಿಗಳು, ಕಚೇರಿ ಸಿಬ್ಬಂದಿ, ಫಿಟ್‌ ನೆಸ್ ತರಬೇತಿದಾರರು, ಟ್ರಾಫಿಕ್ ಪೊಲೀಸರು, ಟ್ಯಾಕ್ಸಿ ಚಾಲಕರು ಮತ್ತು ಮೊದಲ ಪ್ರತಿಕ್ರಿಯೆ ನೀಡುವವರು ಇವರೆಲ್ಲರಿಗೂ ಜೀವ ಉಳಿಸುವ ಕೌಶಲಗಳನ್ನು ಅಥವಾ ಜ್ಞಾನವನ್ನು ನೇರವಾಗಿ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಜೊತೆಯಲ್ಲಿ ತುರ್ತು ಪರಿಸ್ಥಿತಿ ಯಲ್ಲಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಸಿದ್ಧವಾದ ಸಮುದಾಯವನ್ನು ನಿರ್ಮಿಸುವುದು ಸಂಸ್ಥೆಯ ಗುರಿಯಾಗಿತ್ತು.

ಈ ಕುರಿತು ಮಾತನಾಡಿದ ಫೋರ್ಟಿಸ್ ಹೆಲ್ತ್‌ ಕೇರ್‌ ನ ಚೀಫ್ ಗ್ರೋತ್ ಆಂಡ್ ಇನ್ನೋ ವೇಷನ್ ಆಫೀಸರ್ ಡಾ. ರಿತು ಗಾರ್ಗ್ ಅವರು, “ತುರ್ತು ಸ್ಥಿತಿ ಯಾವಾಗ, ಎಲ್ಲಿ ಬೇಕಾದರೂ ಎದುರಾಗಬಹುದು. ಮನೆಯಲ್ಲಿ, ಕಚೇರಿಯಲ್ಲಿ ಅಥವಾ ರಸ್ತೆಯಲ್ಲಿ ಸಾಗುವಾಗ ಹೀಗೆ ಎಲ್ಲಾದರೂ ಸಿಗಬಹುದು. ಹಾಗಾಗಿ ಈ ಸಿಪಿಆರ್ ತರಬೇತಿ ಕಾರ್ಯ ಕ್ರಮದ ಮೂಲಕ ವೈದ್ಯಕೀಯ ಸಹಾಯ ದೊರೆಯುವ ಮೊದಲ ನಿರ್ಣಾಯಕ ಕ್ಷಣಗಳಲ್ಲಿ ಸಮರ್ಥವಾಗಿ ಪ್ರತಿಕ್ರಿಯಿಸುವ ಜ್ಞಾನವನ್ನು ಮತ್ತು ಆತ್ಮವಿಶ್ವಾಸವನ್ನು ಪ್ರತಿಯೊಬ್ಬರಿಗೂ ನೀಡುವುದು ನಮ್ಮ ಉದ್ದೇಶವಾಗಿದೆ. ಜನ ಸಮುದಾಯದಲ್ಲಿ ವಿಶ್ವಾಸ ಮತ್ತು ಸಿದ್ಧತೆಯನ್ನು ಬೆಳೆಸು ವುದೇ ನಮ್ಮ ‘ಫೋರ್ಟಿಸ್ ಹೈ ನಾ’ (ಫೋರ್ಟಿಸ್ ಇದೆಯಲ್ಲ) ಅಭಿಯಾನದ ಮೂಲ ಉದ್ದೇಶವಾಗಿದೆ” ಎಂದು ಹೇಳಿದರು.

ಫೋರ್ಟಿಸ್ ಹಾಸ್ಪಿಟಲ್ಸ್ ಬೆಂಗಳೂರಿನ ಉಪಾಧ್ಯಕ್ಷರು ಮತ್ತು ವ್ಯವಹಾರ ಮುಖ್ಯಸ್ಥ ರಾದ ಡಾ.ಅನಂತ ರಾವ್ ಮಾತನಾಡಿ, “ತುರ್ತು ಸ್ಥಿತಿಯಲ್ಲಿ ಪ್ರತಿ ಸೆಕೆಂಡ್ ಕೂಡ ಅಮೂಲ್ಯವಾದದ್ದು. ಯಾವುದೇ ವ್ಯಕ್ತಿಯ ಹೃದಯ ಬಡಿತ ನಿಂತಾಗ ಸಮೀಪದಲ್ಲಿರು ವವರ ತಕ್ಷಣದ ಪ್ರತಿಕ್ರಿಯೆಯೇ ಅವರ ಜೀವನ ಅಥವಾ ಮರಣದ ನಡುವೆ ವ್ಯತ್ಯಾಸ ಮಾಡಬಹುದು. ಸಿಪಿಆರ್ ಕೇವಲ ವೈದ್ಯಕೀಯ ಸಿಬ್ಬಂದಿಯ ಕೌಶಲ್ಯವಲ್ಲ, ಇದು ಎಲ್ಲರೂ ತಿಳಿದಿರಬೇಕಾದ ಜೀವನ ಕೌಶಲ್ಯ. ಅಧ್ಯಯನಗಳ ಪ್ರಕಾರ ಹೃದಯಾಘಾತ ಘಟನೆಗಳು ಶೇ.80ರಷ್ಟು ಆಸ್ಪತ್ರೆಯ ಹೊರಗೇ ಸಂಭವಿಸುತ್ತವೆ. ಆದರೆ ಭಾರತದಲ್ಲಿ ಶೇ.2ಕ್ಕಿಂತ ಕಡಿಮೆ ಜನರಿಗೆ ಸಿಪಿಆರ್ ತರಬೇತಿ ಇದೆ (ಪಾಶ್ಚಿಮಾತ್ಯ ದೇಶಗಳಲ್ಲಿ ಶೇ.18). ಈ ಕೊರತೆಯೇ ಹೃದಯಾಘಾತಕ್ಕೊಳದವರು ಬದುಕುಳಿಯುವ ಪ್ರಮಾಣವನ್ನು ಬಹಳಷ್ಟು ಕಡಿಮೆ ಮಾಡುತ್ತಿದೆ. ನಮ್ಮ ಈ ಸಿಪಿಆರ್ ತರಬೇತಿ ಕಾರ್ಯಕ್ರಮದ ಮೂಲಕ ಸಾವಿರಾರು ಪ್ರಜೆಗಳಿಗೆ ಸಿಪಿಆರ್ ಕೌಶಲ ಮತ್ತು ಮೂಲಭೂತ ಜೀವ ರಕ್ಷಣೆ ತರಬೇತಿ ನೀಡಿ ದೇಶಾ ದ್ಯಂತ ಮೊದಲ ಪ್ರತಿಕ್ರಿಯೆ ನೀಡುವವರ ದೊಡ್ಡ ಜಾಲವನ್ನು ನಿರ್ಮಿಸುವುದೇ ನಮ್ಮ ಗುರಿಯಾಗಿದೆ” ಎಂದು ಹೇಳಿದರು.

‘ಫೋರ್ಟಿಸ್ ಹೈ ನಾ’ (ಫೋರ್ಟಿಸ್ ಇದೆಯಲ್ಲ) ಅಭಿಯಾನವು ತುರ್ತು ಮತ್ತು ಆಘಾತ ಸೇವೆಗಳನ್ನು ಪ್ರೋತ್ಸಾಹಿಸುವ ಫೋರ್ಟಿಸ್‌ ನ ದೊಡ್ಡ ಯೋಜನೆಯ ಭಾಗವಾಗಿದೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ, ತಜ್ಞರ ಆರೈಕೆ ಮತ್ತು ಸಮುದಾಯದ ವಿಶ್ವಾಸದ ಕುರಿತು ಈ ಅಭಿಯಾನವು ಮಾತನಾಡುತ್ತದೆ. ಅನುಭವಿ ವೈದ್ಯರು ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶ್ವದರ್ಜೆಯ ತುರ್ತು ವೈದ್ಯಕೀಯ ಸೇವೆ ನೀಡುವಲ್ಲಿ ಫೋರ್ಟಿಸ್ ಆಸ್ಪತ್ರೆ ಬದ್ಧವಾಗಿದೆ. ಈ ತುರ್ತು ಅಭಿಯಾನವು 24×7 ತುರ್ತು ಮತ್ತು ಆಘಾತ ಆರೈಕೆ ನೀಡುವ ಆಸ್ಪತ್ರೆಯ ಅಚಲ ಬದ್ಧತೆಯನ್ನು ಸಾರುತ್ತದೆ.