ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜ್ಯಾದ್ಯಂತ 10 ಸಾವಿರ ʻಭಾರತ್ ಜೋಡೋ ಯುವ ಸಂಘಗಳʼ ಸ್ಥಾಪನೆಗೆ ಸರ್ಕಾರ ಆದೇಶ; ಏನಿದರ ಉದ್ದೇಶ?

ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್‌ ಅವರು ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ 6,000 ಸಂಘಗಳು, ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ 4,000 ಸಂಘಗಳ ಸ್ಥಾಪನೆಗೆ ಆದೇಶಿಸಲಾಗಿದೆ.

10 ಸಾವಿರ ʻಭಾರತ್ ಜೋಡೋ ಯುವ ಸಂಘಗಳʼ ಸ್ಥಾಪನೆಗೆ ಸರ್ಕಾರ ಆದೇಶ

-

Prabhakara R
Prabhakara R Jul 13, 2026 11:19 PM

ಬೆಂಗಳೂರು: ರಾಜ್ಯಾದ್ಯಂತ 10 ಸಾವಿರ ʻಭಾರತ್ ಜೋಡೋ ಯುವ ಸಂಘಗಳʼ (Bharat Jodo Yuva Sangha) ಸ್ಥಾಪನೆಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ 6,000 ಸಂಘಗಳು, ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ 4,000 ಸಂಘಗಳ ಸ್ಥಾಪನೆಗೆ ಆದೇಶಿಸಲಾಗಿದ್ದು, ಪ್ರತಿ ಸಂಘಕ್ಕೆ ಪ್ರತಿ ವರ್ಷ ತಲಾ 10 ಲಕ್ಷ ರೂ. ನಂತೆ 1,000 ಕೋಟಿ ರೂ. ಅನುದಾನ ನೀಡುವುದಾಗಿಯೂ ಸರ್ಕಾರ ತಿಳಿಸಿದೆ.

ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ, ಸಾಮಾಜಿಕ ಸಾಮರಸ್ಯ ಉತ್ತೇಜಿಸಲು ಭಾರತ್ ಜೋಡೋ ಯುವ ಸಂಘಗಳ ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರತಿ ವರ್ಷ ಪ್ರತಿ ಸಂಘಕ್ಕೆ 10 ಲಕ್ಷ ರೂ. ನಂತೆ 1,000 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿದೆ.

ಹೇಗಿರಲಿವೆ ಭಾರತ್ ಜೋಡೋ ಯುವ ಸಂಘಗಳು?

  • ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಂಘ, ಪ್ರತಿಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 4000 ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆ (ಟಿ.ಎಂ.ಸಿ.) ಯಲ್ಲಿ ಸರಾಸರಿ 6000 ಜನಸಂಖ್ಯೆಗೆ ಒಂದು ಸಂಘ, ಪ್ರತಿ ನಗರಸಭೆ (ಸಿ.ಎಂ.ಸಿ.) ಯಲ್ಲಿ ಸರಾಸರಿ 8,000 ಜನಸಂಖ್ಯೆಗೆ ಒಂದು ಸಂಘ ಹಾಗೂ ಮಹಾನಗರ ಪಾಲಿಕೆ ಮತ್ತು ಜಿ.ಬಿ.ಎ. ವ್ಯಾಪ್ತಿಯಲ್ಲಿ ಸರಾಸರಿ 10000 ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸತಕ್ಕದ್ದು.
  • ಮಹಾನಗರ ಪಾಲಿಕೆ ಮತ್ತು ಜಿಬಿಎ ಈ ಯೋಜನೆಗೆ ತಗಲುವ ವೆಚ್ಚವನ್ನು ತಮ್ಮ ಸ್ವಂತ ಆಯವ್ಯಯದಿಂದ ಭರಿಸತಕ್ಕದ್ದು.
  • ಈ ಯೋಜನೆಯ ಅನುಷ್ಠಾನಕ್ಕಾಗಿ ಆಡಳಿತ ಮತ್ತು ಪಿ.ಎಂ.ಯು. ವೆಚ್ಚಕ್ಕಾಗಿ ಪ್ರತಿ ವರ್ಷ ಅಂದಾಜು 10 ಕೋಟಿ ರೂ.ಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒದಗಿಸಲಾಗುವುದು.
  • ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖಾಂತರ ಅನುಷ್ಠಾನ ಮಾಡುವುದು.
  • ಈ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಅನುಷ್ಠಾನ ಮಾಡುವುದು.
  • ಪ್ರತಿಯೊಂದು ಸಂಘಕ್ಕೆ ಒಬ್ಬ ತರಬೇತುದಾರರಿಗೆ ಗೌರವಧನಕ್ಕಾಗಿ ವಾರ್ಷಿಕ ತಲಾ 24,000 ರೂ. ಗಳಂತೆ, ಒಟ್ಟು 24 ಕೋಟಿ ರೂ.ಗಳ ವೆಚ್ಚವನ್ನು ಸಂಘಗಳಿಗೆ ಒದಗಿಸಲಾಗುವ 1,000 ಕೋಟಿ ರೂ.ಗಳಿಂದ ಭರಿಸುವುದು.
  • ಈ ಯೋಜನೆಯನ್ನು ಪ್ರತಿವರ್ಷ ಒಟ್ಟು 1,010 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸುವುದು.
  • ಈ ಯೋಜನೆಯನ್ನು ಈ ಆದೇಶದ ಅನುಬಂಧದಲ್ಲಿರುವ ಮಾರ್ಗಸೂಚಿಗಳನ್ವಯ ಜಾರಿಗೊಳಿಸುವುದು.
  • ಮಾರ್ಗಸೂಚಿಗಳಲ್ಲಿ ಮುಂದೆ ಯಾವುದಾದರೂ ಬದಲಾವಣೆಗಳ ಅವಶ್ಯವಿದ್ದಲ್ಲಿ, ಅದಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಿಂದ ಅನುಮೋದನೆ ಪಡೆದು ಸೂಕ್ತವಾದ ಬದಲಾವಣೆ ಮಾಡುವುದು.

KPSC chairman: ಕೆಪಿಎಸ್‌‍ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ