ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ugadi celebration: ಯುಗಾದಿ ವರ್ಷದ ತೊಡಕು ಆಚರಣೆಗಾಗಿ ಮಾಂಸದ ಅಂಗಡಿಗಳಿಗೆ ಮುಗಿ ಬಿದ್ದ ಜನತೆ : ವ್ಯಾಪಾರಿಗಳ ಮೊಗದಲ್ಲಿ ಅರಳಿದ ಮಂದಹಾಸ

ಯುಗಾದಿ ವರ್ಷ ತೊಡಕಿನ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳಿಗೆ ಎಲ್ಲಿಲ್ಲದ ಬೇಡಿಕೆ ನಿರ್ಮಾಣವಾಗಿತ್ತು. ಮಾಂಸವನ್ನು ಕೊಳ್ಳಲು ಜನತೆ ಸರದಿಗಾಗಿ ಕಾಯು ವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಜಾನೆ 3 ಗಂಟೆಯಿಂದಲೇ ಅಂಗಡಿಗಳನ್ನು ತೆರೆದಿದ್ದ ಮಾಂಸದ ಅಂಗಡಿಗಳ ಮಾಲೀಕರು ವ್ಯಾಪಾರದ ವಹಿವಾಟನ್ನು ಭರ್ಜರಿಯಾಗಿ ಮಾಡಿದರು.

ಮಾಂಸದ ಅಂಗಡಿಗಳಿಗೆ ಮುಗಿ ಬಿದ್ದ ಜನತೆ

ನಗರದ ಮಟನ್ ಮಾರ್ಕೆಟ್ ನಲ್ಲಿ ಮಾಂಸದ ಅಂಗಡಿಗಳ ಸಾಲಿನ  ಮಾಂಸದ ಅಂಗಡಿಗಳಲ್ಲಿ ಜನತೆ ಮಾಂಸವನ್ನು ಖರೀದಿ ಮಾಡುತ್ತಿರುವುದು -

Ashok Nayak
Ashok Nayak Mar 20, 2026 11:00 PM

ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ಅಂಗವಾಗಿ ಶುಕ್ರವಾರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಘೋಷಿತ ಬಂದ್ ವಾತಾವರಣ ಕಂಡುಬಂದರೆ, ಮಾಂಸಪ್ರಿಯರು ವರ್ಷದ ತೊಡಕು ನಿವಾರಣೆಗಾಗಿ ಮಾಂಸದ ಅಂಗಡಿಗಳಿಗೆ ಜನತೆ ಮುಗಿ ಬಿದ್ದು ಮಾಂಸ ಖರೀದಿ ಮಾಡಿದ್ದು ಕಂಡು ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿತ್ತು.

ನಗರದ ಪ್ರಮುಖ ರಸ್ತೆಗಳಾದ ಬಿ.ಬಿ.ರಸ್ತೆ, ಎಂ.ಜಿ.ರಸ್ತೆ, ಗಂಗಮ್ಮ ಗುಡಿ, ಬಜಾರ್ ರಸ್ತೆ, ಸರ್ ಎಂ.ವಿ.ವೃತ್ತ, ಅಂಬೇಡ್ಕರ್ ವೃತ್ತಗಳು ಪ್ರತಿ ದಿನ ಜನಸಂದಣಿಯಿಂದ ಇರುತ್ತಿದ್ದು, ಇಂದು ಹಬ್ಬದ ಅಂಗವಾಗಿ ಜನಸಂಖ್ಯೆ ತುಂಬಾ ವಿರಳವಾಗಿತ್ತು.

ನಗರದಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು ಮುಚ್ಚಿದ್ದರಿಂದ ನಗರ ದಲ್ಲೆಡೆ ನಿಶಬ್ದ ವಾತಾವರಣ ನಿರ್ಮಾಣವಾಗಿತ್ತು. ಉಳಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳ ವಹಿವಾಟು ಭರ್ಜರಿಯಾಗಿ ನಡೆಯಿತು.

ಮಾಂಸಕ್ಕೆ ಬೇಡಿಕೆ: ಯುಗಾದಿ ವರ್ಷ ತೊಡಕಿನ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳಿಗೆ ಎಲ್ಲಿಲ್ಲದ ಬೇಡಿಕೆ ನಿರ್ಮಾಣವಾಗಿತ್ತು. ಮಾಂಸವನ್ನು ಕೊಳ್ಳಲು ಜನತೆ ಸರದಿಗಾಗಿ ಕಾಯು ವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಜಾನೆ 3 ಗಂಟೆಯಿಂದಲೇ ಅಂಗಡಿಗಳನ್ನು ತೆರೆದಿದ್ದ ಮಾಂಸದ ಅಂಗಡಿಗಳ ಮಾಲೀಕರು ವ್ಯಾಪಾರದ ವಹಿವಾಟನ್ನು ಭರ್ಜರಿಯಾಗಿ ಮಾಡಿದರು.

ಇದನ್ನೂ ಓದಿ: Ugadi Festival: ಬೆಲೆ ಏರಿಕೆಯ ನಡುವೆಯೂ ಯುಗಾದಿ ಸಂಭ್ರಮಕ್ಕೆ ಖರೀದಿ ಜೋರು

ಹಬ್ಬದ ಹಿನ್ನೆಲೆಯಲ್ಲಿ ನಗರದ ಸಂತೆ ಮಾರ್ಕೆಟ್ ನ ಮಾಂಸದ ಅಂಗಡಿಗಳ ಸಂಕೀರ್ಣ, ಕೋಳಿ ಮತ್ತು ಮೀನಿನ ಅಂಗಡಿಗಳು, ಎಂಜಿ ರಸ್ತೆ, ವಾಪಸಂದ್ರ, ನಗರ ಹೊರವಲಯ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿನ ಪೆರೇಸಂದ್ರ, ಮಂಡಿಕಲ್, ನಂದಿ, ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿಗಳ ಕೇಂದ್ರ ಸ್ಥಾನಗಳಲ್ಲಿ ಕೋಳಿ, ಮೀನು, ಕುರಿ ,ಮೇಕೆ ಮತ್ತು ಹಂದಿ ಮಾಂಸದ ಅಂಗಡಿಗಳ ಬಳಿ ಮಾಂಸ ಕೊಳ್ಳಲು ಜನ ಮುಗಿ ಬಿದ್ದಿದ್ದರು.

ಮಾಂಸದ ಅಂಗಡಿಗಳ ಮುಂದೆ ರಾಶಿ ರಾಶಿ ಕುರಿ-ಮೇಕೆಗಳ ತಲೆಗಳನ್ನು ಸಾಲು ಸಾಲಾಗಿ ಇಡಲಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಜನರು ಯಾರೂ ರಸ್ತೆಗೆ ಇಳಿಯದೆ ಮನೆಯಲ್ಲಿ ಮಾಂಸದೂಟದ ಸವಿಯನ್ನು ಸವಿದರು.

ದಿಢೀರ್ ಬೆಲೆ ಏರಿಕೆ: 1 ಕೆಜಿ ಕುರಿ ಮಾಂಸ 650 ರಿಂದ 700 ರೂ.ಗಳಿಗೆ ದೊರೆಯುತ್ತಿದ್ದು, ಇದೀಗ ದಿಢೀರನೇ 850 ರೂ.ಗಳಿಗೆ ಜಿಗಿದರೆ, ಭೋಟಿ 150 ರಿಂದ 200 ರೂಗಳಿಗೆ ಸಿಗುತ್ತಿದ್ದ ಬೋಟಿಯು 300 ರೂಗಳಿಗೆ ಮತ್ತು 350 ರಿಂದ 500 ರೂಗಳಿಗೆ ದೊರೆಯುತ್ತಿದ್ದ ಕುರಿ ಮತ್ತು ಮೇಕೆ ತಲೆ, ಕಾಲುಗಳು 700 ರಿಂದ 850 ರೂಗಳಿಗೆ ಏರಿಕೆಯಾಗಿತ್ತು.

1 ಕೆಜಿ ಕೋಳಿ ಮಾಂಸ 170 ರಿಂದ 270 ರೂ.ಗಳವರೆಗೆ ಏರಿದೆ. 1 ಹಂದಿ ಮಾಂಸ 260 ರಿಂದ 380 ರೂ.ಗಳಿಗೆ ದೊರೆಯುತ್ತಿದ್ದು, ಇದೀಗ ದಿಢೀರನೇ 400 ರಿಂದ 500 ರೂ.ಗಳಿಗೆ ಜಿಗಿದಿತ್ತು. ಮೀನು – ಕ್ಯಾಟಲಾಕ್-270 ರೂಪಾಯಿ, ಜಿಲೇಬಿ - 150 ರೂಪಾಯಿ,  ಅಂಜಲ್- 980 ರೂಪಾಯಿ ಹಾಗೂ ಬಾಂಗಡ- 240 ರೂಪಾಯಿಗಳಿಗೆ ಮಾರಾಟವಾಗಿತ್ತು. ಆದರೂ ಸಹ ಜನತೆ ಮಾಂಸವನ್ನು ಕೊಳ್ಳುವುದಕ್ಕೆ ಹಿಂದೆ ಬಿದ್ದಿರಲಿಲ್ಲ. ಅಂದಾಜು ರೂ 30 ರಿಂದ 35  ಲಕ್ಷ ರೂಪಾಯಿ ವ್ಯಾಪಾರವಾಗಿದೆ.

ಇದಲ್ಲದೇ ಉಗಾದಿ ಹಬ್ಬದ ಚೀಟಿಗಳ ಗ್ರಾಹಕರಿಗೆ ಬೇರೆ ಬೇರೆ ರೀತಿಯಾಗಿ ಕೋಳಿ ಮಾಂಸ ಮತ್ತು ಕುರಿ-ಮೇಕೆಗಳ ಮಾಂಸ ಸಹ ವಿತರಣೆ ಜೋರಾಗಿಯೇ ಇತ್ತು. ಇದರೊಂದಿಗೆ ಜಿಲ್ಲೆಯ ಹಲವೆಡೆಗಳಲ್ಲಿ ಗುಡ್ಡೆ ಮಾಂಸದ ವಹಿವಾಟು ಸಹ ನಡೆದು ಅದೂ ಸಹಾ ಕಡಿಮೆಯಿಲ್ಲದೇ ಅಂದಾಜು ರೂ 20 ರಿಂದ 25 ಲಕ್ಷ ರೂಪಾಯಿ ವ್ಯಾಪಾರವಾಗಿದೆ.

ನಿನ್ನೆ ಗುರುವಾರ ಹಿಂದುಗಳ ಹಬ್ಬ ಉಗಾದಿ, ಇಂದು ಶುಕ್ರವಾರ ಇಂದು ಹಿಂದುಗಳ ಹಬ್ಬ ವರ್ಷದ ತೊಡಕು, ನಾಳೆ ಶನಿವಾರ ನಮ್ಮ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಇರುವು ದರಿಂದ  ಮಾಂಸಕ್ಕೆ ಹೆಚ್ಚು ಬೇಡಿಕೆ ಉಂಟಾಗಿರುವುದರಿಂದ ಬೆಲೆ ಹೆಚ್ಚಾಗಿದೆ. ಹಬ್ಬಗಳ ನಂತರ ಮತ್ತೆ ಮಾಮೂಲಿಯ ರೇಟ್ ಗೆ ಮಾಂಸ ಸಿಗುತ್ತದೆ ಎಂದು ಮಾಂಸ ವ್ಯಾಪಾರಿ ರಫೀಕ್ ಹೇಳಿದರು.