ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sari Swag Run 2026: ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಹುಬ್ಬಳ್ಳಿಯಲ್ಲಿ ಎಚ್‌ಸಿಜಿ ಆಸ್ಪತ್ರೆ ವತಿಯಿಂದ 'ಸಾರಿ ಸ್ವಾಗ್ ರನ್ 2026'

ನಡಿಗೆಯ ಬಳಿಕ ಭಾಗವಹಿಸಿದ ಎಲ್ಲರಿಗೂ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ಬಿಎಂಐ ಸೇರಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಇದಕ್ಕಾಗಿ ಪ್ರತ್ಯೇಕ ಮಹಿಳಾ ಆರೋಗ್ಯ ಜಾಗೃತಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಮಹಿಳೆಯರು ವೈದ್ಯಕೀಯ ವೃತ್ತಿ ಪರರೊಂದಿಗೆ ಸಮಾಲೋಚನೆ ನಡೆಸಿ, ಮುಂಜಾಗ್ರತಾ ಆರೋಗ್ಯ ಮತ್ತು ದಿನನಿತ್ಯದ ತಪಾಸಣೆ ಗಳ ಕುರಿತು ಮಾರ್ಗದರ್ಶನ ಪಡೆದರು

ಹುಬ್ಬಳ್ಳಿಯಲ್ಲಿ ಎಚ್‌ಸಿಜಿ ಆಸ್ಪತ್ರೆ ವತಿಯಿಂದ 'ಸಾರಿ ಸ್ವಾಗ್ ರನ್ 2026'

-

Profile
Ashok Nayak Mar 30, 2026 2:07 PM

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರನ್ನು ಸ್ವಯಂ ಕಾಳಜಿ ಮತ್ತು ಮುಂಜಾಗ್ರತಾ ಆರೋಗ್ಯದ ಕಡೆಗೆ ಪ್ರೇರೇಪಿಸಿದ 1 ಕಿ.ಮೀ. ನಡಿಗೆ

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಹಾಗೂ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಸಹಯೋಗದಲ್ಲಿ, ಮಹಿಳೆಯರಲ್ಲಿ ಮುಂಜಾಗ್ರತಾ ಆರೋಗ್ಯ ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ಕುರಿತು ಅರಿವು ಮೂಡಿಸಲು 1 ಕಿ.ಮೀ. ಸುದೀರ್ಘ ವಿನೂತನ 'ಸಾರಿ ಸ್ವಾಗ್ ರನ್ - 2026' (Sari Swag Run 2026)ಸಮುದಾಯ ನಡಿಗೆಯನ್ನು ಆಯೋಜಿಸಲಾಗಿತ್ತು.

ಸಂಪ್ರದಾಯದೊಂದಿಗೆ ಸ್ವಯಂ-ಕಾಳಜಿಯ ಪ್ರಬಲ ಸಂದೇಶ ಸಾರಿದ ಈ ಸಾಂಕೇತಿಕ ನಡಿಗೆಯಲ್ಲಿ ಹುಬ್ಬಳ್ಳಿಯ ವಿವಿಧ ಭಾಗಗಳ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂ ಡಿದ್ದರು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಪೂರ್ವಭಾವಿ ಕ್ರಮಗಳನ್ನು ತೆಗೆದು ಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಜೊತೆಗೆ, ಸಂಪ್ರದಾಯ, ಶಕ್ತಿ ಮತ್ತು ಆತ್ಮ ವಿಶ್ವಾಸದ ಸಂಕೇತವಾಗಿ ಸೀರೆ, ಸ್ಪೋರ್ಟ್ಸ್ ಶೂ ಮತ್ತು ಸನ್‌ಗ್ಲಾಸ್ ಧರಿಸಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನಿಂದ ಆರಂಭವಾದ ಈ ನಡಿಗೆಯು ಶಿರೂರ್ ಪಾರ್ಕ್ ರಸ್ತೆಯ ಮೂಲಕ ಸಾಗಿ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಲ್ಲಿ ಮುಕ್ತಾಯಗೊಂಡಿತು.

ಇದನ್ನೂ ಓದಿ: Bangalore News: ನೋಂದಾಯಿತವಲ್ಲದ ಮದರಸಾಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ ಅನುದಾನ : ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ

ಮಹಿಳೆಯರ ಆರೋಗ್ಯ ಜಾಗೃತಿಗೆ ಬೆಂಬಲ ಸೂಚಿಸಿ ಸ್ಥಳೀಯರು, ವೃತ್ತಿಪರರು ಹಾಗೂ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು.

ನಡಿಗೆಯ ಬಳಿಕ ಭಾಗವಹಿಸಿದ ಎಲ್ಲರಿಗೂ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ಬಿಎಂಐ ಸೇರಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಇದಕ್ಕಾಗಿ ಪ್ರತ್ಯೇಕ ಮಹಿಳಾ ಆರೋಗ್ಯ ಜಾಗೃತಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಮಹಿಳೆಯರು ವೈದ್ಯಕೀಯ ವೃತ್ತಿಪರರೊಂದಿಗೆ ಸಮಾಲೋಚನೆ ನಡೆಸಿ, ಮುಂಜಾಗ್ರತಾ ಆರೋಗ್ಯ ಮತ್ತು ದಿನನಿತ್ಯದ ತಪಾಸಣೆಗಳ ಕುರಿತು ಮಾರ್ಗದರ್ಶನ ಪಡೆದರು. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಶೇಷ ಪ್ರಿವೆಂಟಿವ್ ಹೆಲ್ತ್ ಪ್ಯಾಕೇಜ್‌ಗಳನ್ನು ಸಹ ಪರಿಚಯಿಸಲಾಯಿತು.

ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಹಿಳೆಯರು ತಮ್ಮ ಆರೋಗ್ಯಕ್ಕಿಂತ ಕುಟುಂಬ ದ ಜವಾಬ್ದಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಮುಂಜಾಗ್ರತಾ ಆರೋಗ್ಯದ ಬಗ್ಗೆ ಮಹಿಳೆಯರಲ್ಲಿ ಹೆಚ್ಚು ಚರ್ಚೆಗಳು ನಡೆಯಬೇಕು ಎಂಬುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಈ ವೇಳೆ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಸಹಾಯಕ ಸಿಟಿವಿಎಸ್ ಸರ್ಜನ್ ಡಾ. ವೇದಾ ಹಳ್ಳದ ಮಾತನಾಡಿ, "ಮಹಿಳೆಯರು ಹೆಚ್ಚಾಗಿ ತಮ್ಮ ಆರೋಗ್ಯಕ್ಕಿಂತ ಕುಟುಂಬದ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಇದು ನಿಯಮಿತ ತಪಾಸಣೆ ಮತ್ತು ಚಿಕಿತ್ಸೆ ಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಸಾರಿ ಸ್ವಾಗ್ ರನ್‌ನಂತಹ ಉಪಕ್ರಮಗಳ ಮೂಲಕ, ಮಹಿಳೆಯರು ತಮ್ಮ ಸ್ವಂತ ಯೋಗಕ್ಷೇಮಕ್ಕಾಗಿ ಸಮಯ ಮೀಸಲಿಡಲು ಮತ್ತು ಮುಂಜಾಗ್ರತಾ ಆರೋಗ್ಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ನಾವು ಪ್ರೇರೇ ಪಿಸುತ್ತಿದ್ದೇವೆ. ನಿಯಮಿತ ತಪಾಸಣೆ ಮತ್ತು ಸಕಾಲಿಕ ಸಮಾಲೋಚನೆಯಿಂದ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ ವಾಗುತ್ತದೆ" ಎಂದರು.

ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ.ಸೀತಾ ಮುತಾಲಿಕ್ ಮಾತನಾಡಿ, "ಸಾರಿ ಸ್ವಾಗ್ ರನ್‌ನಂತಹ ಸಮುದಾಯ-ಚಾಲಿತ ಕಾರ್ಯಕ್ರಮಗಳು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸುವ ಪೂರಕ ವಾತಾವರಣವನ್ನು ಸೃಷ್ಟಿಸುತ್ತವೆ. ಇಂತಹ ಚಟುವಟಿಕೆಗಳ ಮೂಲಕ ಜನರನ್ನು ಒಗ್ಗೂಡಿಸಿ, ನಿಯಮಿತ ಆರೋಗ್ಯ ತಪಾಸಣೆಯ ಮಹತ್ವದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿ ಸುವ ವಿಶ್ವಾಸ ನಮ್ಮದಾಗಿದೆ. ಇದು ಮಹಿಳೆಯರು ತಮ್ಮ ದೀರ್ಘಕಾಲೀನ ಯೋಗಕ್ಷೇಮದ ನಿಟ್ಟಿನಲ್ಲಿ ಹೆಚ್ಚು ಸೂಕ್ತ ಹೆಜ್ಜೆಗಳನ್ನು ಇಡಲು ಸಹಕಾರಿಯಾಗುತ್ತದೆ" ಎಂದು ತಿಳಿಸಿದರು.

ಸಾರಿ ಸ್ವಾಗ್ ರನ್ 2026 ರಂತಹ ಉಪಕ್ರಮಗಳ ಮೂಲಕ, ಎಚ್‌ಸಿಜಿ ಆಸ್ಪತ್ರೆಯು ಸಮುದಾಯದ ಒಳಗೊಳ್ಳುವಿಕೆಯನ್ನು ಬಲಪಡಿಸುವುದರ ಜೊತೆಗೆ ಮಹಿಳೆಯರಲ್ಲಿ ಮುಂಜಾಗ್ರತಾ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ತನ್ನ ಬದ್ಧತೆಯನ್ನು ಮುಂದುವರಿಸಿದೆ.