ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡೋಕ್ರಾ ಕರಕುಶಲ ಕಲಾವಿದ ಸುಭಾಷ್‌ ಮಂಡಲ್‌ಗೆ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ

HL Nagegowda National Award: ಕರ್ನಾಟಕ ಜಾನಪದ ಪರಿಷತ್ತು ಪ್ರತಿ ವರ್ಷ ಪ್ರದಾನ ಮಾಡುವ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಗೆ ಪಶ್ಚಿಮ ಬಂಗಾಳದ ಖ್ಯಾತ ಡೋಕ್ರಾ ಕರಕುಶಲ ಕಲಾವಿದ ಸುಭಾಷ್‌ ಮಂಡಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಸುಭಾಷ್‌ ಮಂಡಲ್‌ಗೆ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ

ಡೋಕ್ರಾ ಕರಕುಶಲ ಕಲಾವಿದ ಸುಭಾಷ್‌ ಮಂಡಲ್ -

Profile
Siddalinga Swamy Nov 19, 2026 6:58 PM

ಬೆಂಗಳೂರು, ನ. 19: ಕರ್ನಾಟಕ ಜಾನಪದ ಪರಿಷತ್ತು ಪ್ರತಿ ವರ್ಷ ಪ್ರದಾನ ಮಾಡುವ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯ (HL Nagegowda National Award) 2026ನೇ ಸಾಲಿನ ಪ್ರಶಸ್ತಿಗೆ ಪಶ್ಚಿಮ ಬಂಗಾಳದ ಖ್ಯಾತ ಡೋಕ್ರಾ ಕರಕುಶಲ ಕಲಾವಿದ ಸುಭಾಷ್‌ ಮಂಡಲ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಗೌರವ ಧನವನ್ನೊಳಗೊಂಡಿದೆ.

ಡೋಕ್ರಾ ಕರಕುಶಲವು ಹಿತ್ತಾಳೆ ಮತ್ತು ಇತರ ಲೋಹದ ಕಲಾಕೃತಿಗಳ ತಯಾರಿಯಾಗಿದ್ದು ಪಶ್ಚಿಮ ಬಂಗಾಳದ ಬರ್ದಮಾನ್ ಜಿಲ್ಲೆಯ ದರಿಯಾಪುರದ ಸುಭಾಷ್‌ ಮಂಡಲ್ ಕಲಾಕೃತಿಗಳ ರಚನೆಯಲ್ಲಿ ಹಲವು ದಶಕಗಳ ಪರಿಣತಿ ಹೊಂದಿದ್ದಾರೆ. ಡೋಕ್ರಾ ಸಾಂಪ್ರದಾಯಿಕ ಕರಕುಶಲವಾಗಿದ್ದು, 4,000 ವರ್ಷಗಳ ಇತಿಹಾಸ ಹೊಂದಿದೆ.

HL Nagegowda National Award

ಸಾಂಪ್ರದಾಯಿಕ ಬುಡಕಟ್ಟು ಶೈಲಿಯ ಜತೆಗೆ ಆಧುನಿಕ ಗೃಹಾಲಂಕಾರಕ್ಕೆ ಸೂಕ್ತವಾದ ಕಲಾಕೃತಿಗಳನ್ನು ಸುಭಾಷ್‌ ಮಂಡಲ್ ರಚಿಸುತ್ತಾರೆ. ಇವರ ಪ್ರಮುಖ ರಚನೆಗಳಲ್ಲಿ ಕುದುರೆಗಳು, ಗೂಳಿಗಳು, ದೇವರು ಮತ್ತು ದೇವತೆಗಳ ಮೂರ್ತಿಗಳು, ಮಾನವ ಆಕೃತಿಗಳು ಹಾಗೂ ವಿವಿಧ ಪಕ್ಷಿ-ಪ್ರಾಣಿಗಳ ಕಲಾಕೃತಿಗಳು ಸೇರಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ನ. 20ರ ಸಂಜೆ 5 ಗಂಟೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ಆಯೋಜಿಸಲಾಗಿದ್ದು ಸುಭಾಷ್‌ ಮಂಡಲ್ ಅವರ ಕಲಾಕೃತಿಗಳ ಪ್ರದರ್ಶನವೂ ಇರಲಿದೆ.