ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೆಂಕಟ್ ಸೆಂಟರ್ ಫಾರ್ ಅಸೈಟಿಕ್ ಹೆಲ್ತ್ ನಿಂದ ದೇಶದಲ್ಲೇ ಮೊದಲ ಬಾರಿಗೆ ತಲೆ ನೋವಿಗೆ ನೂತನ ಶಸ್ತ್ರ ಚಿಕಿತ್ಸಾ ವಿಧಾನ ಪ್ರಾರಂಭ

ಅಂತರರಾಷ್ಟ್ರೀಯ ಮೈಗ್ರೇನ್ ಆಕ್ಷನ್ ದಿನಾಚರಣೆ (ಸೆಪ್ಟೆಂಬರ್ 12, 2025) ಪ್ರಯುಕ್ತ ತಲೆ ನೋವು ಸಮಸ್ಯೆಗೆ ಪರಿಣಾಮಕಾರಿ ಉಪಶಮನ ನೀಡಲು ಅಭಿಯಾನವನ್ನು ಹೊಮ್ಮಿಕೊಳ್ಳಲಾಗಿದೆ. ಬನಶಂಕರಿ ಯ ಡಾ. ಪುನೀತ್ ರಾಜ್ ಕುಮಾರ್ ರಸ್ತೆಯ ಎನ್ ಸಿಇಆರ್‌ಟಿ ಪಕ್ಕದಲ್ಲಿ ನಮ್ಮ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ತಲೆ ನೋವಿಗೆ ಪರಿಣಾಮಕಾರಿ ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ

ಮೊದಲ ಬಾರಿಗೆ ತಲೆ ನೋವಿಗೆ ನೂತನ ಶಸ್ತ್ರ ಚಿಕಿತ್ಸಾ ವಿಧಾನ ಪ್ರಾರಂಭ

-

Ashok Nayak Ashok Nayak Sep 12, 2025 9:50 PM

ಬೆಂಗಳೂರು: ಮೈಗ್ರೇನ್‌ ತೀವ್ರವಾದ ತಲೆನೋವಾಗಿದ್ದು ರೋಗಿಗಳನ್ನು ಅತಿಯಾಗಿ ಬಳಲಿಸುತ್ತದೆ. ಈ ಸಮಸ್ಯೆಗೆ ಕ್ರಾಂತಿಕಾರಕ ಚಿಕಿತ್ಸಾ ಪದ್ಧತಿ ಜಾರಿಗೊಳ್ಳುತ್ತಿದ್ದು, ವೆಂಕಟ್ ಸೆಂಟರ್ ಫಾರ್ ಅಸೈಟಿಕ್ ಹೆಲ್ತ್ ನಿಂದ ದೇಶದಲ್ಲೇ ಮೊದಲ ಬಾರಿಗೆ ಶಸ್ತ್ರ ಚಿಕಿತ್ಸೆಯನ್ನು ಪರಿಚಯಿಸಲಾಗುತ್ತಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವೆಂಕಟ್ ಸೆಂಟರ್ ನ ನಿರ್ದೇಶಕರು ಮತ್ತು ಕನ್ಸಂಟಲ್ಟ್ ಪ್ಲಾಸ್ಟಿಕ್‌ ಸರ್ಜನ್ ಡಾ. ಅನಿಕೇತ್ ವೆಂಕಟರಾಮ್, ಅಂತರರಾಷ್ಟ್ರೀಯ ಮೈಗ್ರೇನ್ ಆಕ್ಷನ್ ದಿನಾಚರಣೆ (ಸೆಪ್ಟೆಂಬರ್ 12, 2025) ಪ್ರಯುಕ್ತ ತಲೆ ನೋವು ಸಮಸ್ಯೆಗೆ ಪರಿಣಾಮಕಾರಿ ಉಪಶಮನ ನೀಡಲು ಅಭಿಯಾನವನ್ನು ಹೊಮ್ಮಿಕೊಳ್ಳಲಾಗಿದೆ. ಬನಶಂಕರಿಯ ಡಾ. ಪುನೀತ್ ರಾಜ್ ಕುಮಾರ್ ರಸ್ತೆಯ ಎನ್ ಸಿಇಆರ್‌ಟಿ ಪಕ್ಕದಲ್ಲಿ ನಮ್ಮ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ತಲೆ ನೋವಿಗೆ ಪರಿಣಾಮಕಾರಿ ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: Bangalore News: ಶಿಕ್ಷಕರು ಮಕ್ಕಳನ್ನು ಸಮರ್ಥ ನಾಗರಿಕರನ್ನಾಗಿ ರೂಪಿಸಬೇಕು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶಮಾನೆ

ದೇಶದಲ್ಲಿ ಲಕ್ಷಾಂತರ ಜನರನ್ನು ಮೈಗ್ರೇನ್ ತೊಂದರೆ ಪೀಡಿಸುತ್ತಿದ್ದರೂ, ಉನ್ನತ ಮಟ್ಟದ ಚಿಕಿತ್ಸೆ ಕುರಿತು ಜಾಗೃತಿ ಇನ್ನೂ ಕಡಿಮೆ ಇದೆ. ದೇಶದಲ್ಲಿ ಮೊದಲ ಬಾರಿಗೆ ಮೈಗ್ರೇನ್ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸುತ್ತಿದ್ದೇವೆ. ಔಷಧಿ ಅಥವಾ ಇಂಜೆಕ್ಷನ್‌ಗಳಿಂದ ಪರಿಹಾರ ದೊರೆಯದ ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆ ಹೊಸ ಆಶಾಕಿರಣವಾಗಲಿದೆ ಎಂದರು.

Book 2

ಮೈಗ್ರೇನ್ ಶಸ್ತ್ರಚಿಕಿತ್ಸೆ ಡೇ-ಕೇರ್ ವಿಧಾನವಾಗಿದ್ದು, ತ್ವಚೆಯ ಮಟ್ಟದಲ್ಲಿ ಸಣ್ಣ ಚಿರಾಯಗಳನ್ನು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಇದು ಮಿದುಳಿನ ಸರ್ಜರಿ ಅಲ್ಲ, ಬದಲಾಗಿ ಮುಖದ ಕೆಲವು ವಿಶೇಷ ಟ್ರಿಗರ್ ಪಾಯಿಂಟ್ಗಳ ಮೇಲೆ ಇರುವ ಒತ್ತಡವನ್ನು ನಿವಾರಿಸಲು ಬಳಸುವ ನಿಖರ ಹಾಗೂ ಸುರಕ್ಷಿತವಾದ ತಂತ್ರಜ್ಞಾನವಾಗಿದೆ. ಈ ವಿಧಾನ ಸುರಕ್ಷಿತ, ಕನಿಷ್ಠ ಹಸ್ತಕ್ಷೇಪದ ಚಿಕಿತ್ಸೆಯಾಗಿದ್ದು 90% ಕ್ಕೂ ಹೆಚ್ಚು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದರು.

ಭಾರತದ ಮೊದಲ ಮೈಗ್ರೇನ್ ಶಸ್ತ್ರಚಿಕಿತ್ಸೆ ಜಾಗೃತಿ ಅಭಿಯಾನದ ಪ್ರಾರಂಭಿಸುತ್ತಿದ್ದು, ಈ ಮೂಲಕ ನೈಜ ರೋಗಿಗಳ ಯಶಸ್ಸಿನ ಅನುಭವ ಹಂಚಿಕೆ ಮಾಡಲಾಗುತ್ತದೆ. ಜೊತೆಗೆ ಮೈಗ್ರೇನ್ ರೋಗಿಗಳಿಗೆ ಉಚಿತ ಸಲಹೆ ನೀಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು