Invitation for Republic Day: ದೆಹಲಿ ಗಣರಾಜ್ಯ ಪೆರೇಡ್ ವಿಕ್ಷಣೆಗೆ ದಿ ಆಕ್ಸ್ ಫರ್ಡ್ ಪಾಲಿಟೆಕ್ನಿಕ್ ನ ವಿದ್ಯಾರ್ಥಿನಿಗೆ ಆಹ್ವಾನ
ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ನಿಗಮದ ಅಂಗಸಂಸ್ಥೆಯಾದ ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿಯ ಪ್ರಧಾನಮಂತ್ರಿ ಕೌಶಲ್ಯ ವಿಕಾಸಯೋಜನೆಯಡಿಯಲ್ಲಿ ತರಬೇತಿ ಪಡೆದ ಹಲವಾರು ವಿದ್ಯಾರ್ಥಿ ಫಲಾನುಭವಿಗಳಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿನಿ ಯಾಗಿದ್ದು, ತನ್ಮೂಲಕ ದಿ ಆಕ್ಸ್ ಫರ್ಡ್ ಪಾಲಿಟೆಕ್ನಿಕ್ ಸಂಸ್ಥೆಗೆ ಗೌರವ ತಂದಿರುತ್ತಾರೆ
ಬೆಂಗಳೂರು: ನವದೆಹಲಿಯಲ್ಲಿ ಇದೇ ತಿಂಗಳ 26 ರಂದು ನಡೆಯಲಿರುವ 76 ನೇ ಗಣರಾಜ್ಯೋತ್ಸ ವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನ ಜೆ. ಪಿ ನಗರದಲ್ಲಿರುವ ದಿ ಆಕ್ಸ್ ಫರ್ಡ್ ಪಾಲಿಟೆಕ್ನಿಕ್ ನ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಕುಮಾರಿ. ಐಶ್ವರ್ಯ. ಎನ್ ರವರಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಆಹ್ವಾನ ನೀಡಲಾಗಿದೆ.
ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ನಿಗಮದ ಅಂಗಸಂಸ್ಥೆಯಾದ ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿಯ ಪ್ರಧಾನಮಂತ್ರಿ ಕೌಶಲ್ಯ ವಿಕಾಸಯೋಜನೆಯಡಿಯಲ್ಲಿ ತರಬೇತಿ ಪಡೆದ ಹಲವಾರು ವಿದ್ಯಾರ್ಥಿ ಫಲಾನುಭವಿಗಳಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿನಿಯಾಗಿದ್ದು, ತನ್ಮೂಲಕ ದಿ ಆಕ್ಸ್ ಫರ್ಡ್ ಪಾಲಿಟೆಕ್ನಿಕ್ ಸಂಸ್ಥೆಗೆ ಗೌರವ ತಂದಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಮಲ್ಲೇಶ್ ಬಿ.ವೈ ರವರು ತಿಳಿಸಿರುತ್ತಾರೆ.
ಸಂಸ್ಥೆಯು ಬೆಂಗಳೂರಿನ ಯು. ಟಿ.ಎಲ್ ಟೆಕ್ನಾಲಜಿಸ್ ರವರ ಸಹಯೋಗದಲ್ಲಿ ಸಂಸ್ಥೆಯ ಗಣಕ ಯಂತ್ರ ವಿಭಾಗದ ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೂ ಕೌಶಲಾಭಿವೃದ್ಧಿ ನಿಗಮದ ಪ್ರಾಯೋಜಿತ ತರಬೇತಿಯಾದ ಜೂನಿಯರ್ ಸಾಫ್ಟ್ ವೇರ್ ಡೆವಲಪರ್ ಕಾರ್ಯಗಾರವನ್ನು ಹಮ್ಮಿ ಕೊಂಡಿತ್ತು. ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳೂ ನಿಗಮದ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜೊತೆ ಜೊತೆಗೆ ಕೌಶಲಾಭಿವೃದ್ಧಿಗೆ ಪೂರಕವಾದ ಹಲವಾರು ತರಬೇತಿ ಕಾರ್ಯಗಾರಗಳನ್ನು ನುರಿತ ಹಾಗೂ ಅನುಭವಿ ತರಬೇತುದಾರರಿಂದ ನೀಡಲಾಗುತ್ತಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ಅಂತ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥರಾದ ಲೀಲಾರಾಜುರವರು ತಿಳಿಸಿರುತ್ತಾರೆ.
ವಿದ್ಯಾರ್ಥಿಗೆ ಉತ್ತಮ ಭವಿಷ್ಯ ದೊರಕಲಿ ಹಾಗೂ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಸಂಸ್ಥೆಯ ಛೇರ್ ಮನ್ ಡಾII. ಎಸ್.ಎನ್.ಎಲ್.ವಿ ನರಸರಾಜು ಹಾರೈಸುತ್ತಾರೆ.
ಇದನ್ನೂ ಓದಿ: Bengaluru Power Cut: ಜ.21ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ