ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿಲ್ಲ, ಕಾಕ್ರೋಚ್‍ಗಳ ಜತೆ ಜಂತರ್‌ ಮಂತರ್‌ನಲ್ಲಿ ಕುಳಿತಿದೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಬೆಂಗಳೂರಿನ ಜಿ.ಕೆ.ವಿ.ಕೆ.ಯಲ್ಲಿ ನಡೆದ ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ಅತಿ ಶೀಘ್ರವಾಗಿ ಧಾವಿಸಿ ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಬೆಂಗಳೂರಲ್ಲಿ ಇಲ್ಲದಿರುವುದು ವಿಪರ್ಯಾಸ ಎಂದು ಅವರು ಟೀಕಿಸಿದ್ದಾರೆ.

ಸರ್ಕಾರ ಬೆಂಗಳೂರಲ್ಲಿ ಇಲ್ಲದಿರುವುದು ವಿಪರ್ಯಾಸ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರಿನ ಜಿ.ಕೆ.ವಿ.ಕೆ.ಯಲ್ಲಿ ನಡೆದ ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಛಲವಾದಿ ನಾರಾಯಣಸ್ವಾಮಿ. -

Profile
Siddalinga Swamy Jul 24, 2026 4:24 PM

ಬೆಂಗಳೂರು, ಜು.24: ಸೂಕ್ತ ವ್ಯಕ್ತಿಗೆ ಸೂಕ್ತ ಸ್ಥಾನ ಕೊಡುವುದು ಸರ್ಕಾರದ ಬದ್ಧತೆಯಾಗಿರಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ. ಜಿ.ಕೆ.ವಿ.ಕೆ.ಯಲ್ಲಿ ನಡೆದ ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಲ್ಲಿವರೆಗೆ ವೈದ್ಯಕೀಯ, ಎಂಜಿನಿಯರಿಂಗ್ ಸೀಟುಗಳು ಮಾರಾಟವಾಗುತ್ತಿದ್ದವು. ಈಗ ರೈತ ಮಕ್ಕಳ ಸೀಟುಗಳೂ ಮಾರಾಟವಾಗುತ್ತಿವೆ ಎಂದು ಆರೋಪಿಸಿದ ಅವರು, ಸರ್ಕಾರವು ನಿಮಗೆ ದ್ರೋಹ ಮಾಡುವುದನ್ನು ಯಾರಿಂದಲೂ ಸಹಿಸಲಸಾಧ್ಯ ಎಂದು ಹೇಳಿದರು.

ಸರ್ಕಾರ ಅತಿ ಶೀಘ್ರವಾಗಿ ಧಾವಿಸಿ ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಬೆಂಗಳೂರಲ್ಲಿ ಇಲ್ಲದಿರುವುದು ವಿಪರ್ಯಾಸ ಎಂದು ಟೀಕಿಸಿದ ಅವರು, ದೆಹಲಿಗೆ ಹೋದ ಸರ್ಕಾರ ಯಾವತ್ತು ಬರುತ್ತದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿಮ್ಮ ಬೇಡಿಕೆಗಳ ಕುರಿತು ಪತ್ರದ ಮೂಲಕ ಗಮನ ಸೆಳೆಯುವೆ. ಕೃಷಿ ಇಲಾಖೆ ಕಮೀಷನರ್‌ ಜತೆ ಮಾತನಾಡುವೆ ಎಂದು ತಿಳಿಸಿದರು. ನೀವು ಬೀದಿಯಲ್ಲಿ ಕುಳಿತುಕೊಳ್ಳುವುದನ್ನು ಸರ್ಕಾರ ಹಗುರವಾಗಿ ಹಾಗೂ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಜಂತರ್ ಮಂತರ್‌ನಲ್ಲಿ ಕುಳಿತಿದ್ದಾರಲ್ಲವೇ? ಎಂದು ಕೇಳಿದರಲ್ಲದೇ, ಈ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಸಮಸ್ಯೆ ಪರಿಹಾರಗೊಂಡರೂ ಕಾಕ್ರೋಚ್‍ಗಳು ಅಲ್ಲೇ ಕುಳಿತಿವೆ. ಕಾಕ್ರೋಚ್‍ಗಳಿಗೆ ನಿಮ್ಮ ಸಮಸ್ಯೆ ಯಾಕೆ ಅರ್ಥವಾಗಿಲ್ಲ ಎಂದು ಪ್ರಶ್ನಿಸಿದರು. ಹೊಟ್ಟೆಪಾಡು ಮಾತ್ರ ನೋಡುವ ಕಾಕ್ರೋಚ್‍ಗಳಿಂದ ಯಾರಿಗಾದರೂ ಒಳ್ಳೇದಾದುದು ನೋಡಿದ್ದೀರಾ ಎಂದು ಕೇಳಿದರು.

ʼʼಕೆಪಿಎಸ್‌ಸಿ ಕರ್ಮಕಾಂಡದ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿಲ್ಲವೇಕೆ?ʼʼ ಪ್ರಲ್ಹಾದ್‌ ಜೋಶಿ ವಾಗ್ದಾಳಿ

ಕರ್ನಾಟಕದ ಸರ್ಕಾರ ಕಾಕ್ರೋಚ್‍ಗಳ ಜತೆ ಜಂತರ್ ಮಂಥರ್‌ನಲ್ಲಿ ಕುಳಿತಿದೆ ಎಂದು ಆಕ್ಷೇಪಿಸಿದ ಅವರು, ನಿಮ್ಮ ಬೇಡಿಕೆ ಕುರಿತು ಕುಲಪತಿ ಜತೆಗೂ ಮಾತನಾಡುವೆ. ಅನ್ಯಾಯ ಸರಿಪಡಿಸಲು ಕುಲಪತಿಗಳೂ ಒತ್ತಾಯಿಸಬೇಕಿತ್ತು ಎಂದು ತಿಳಿಸಿದರು. ಸರ್ಕಾರ ಉದ್ಧಟತನ ಮುಂದುವರಿಸಿದರೆ ಮತ್ತೆ ಬರುವೆ ಎಂದು ಎಚ್ಚರಿಸಿದರು. ಒಗ್ಗಟ್ಟು ಎಂಬುದೇ ಶಕ್ತಿ. ಆ ಶಕ್ತಿ ಪ್ರದರ್ಶನ ಇಲ್ಲಿ ನಡೆದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.