2nd PUC Results 2026 Toppers: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ; ಈ ಬಾರಿಯ ಟಾಪರ್ಸ್ ಇವರೇ ನೋಡಿ
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಟಾಪರ್: ಶೇ. 83.65ರಷ್ಟು ಬಾಲಕರು ಮತ್ತು ಶೇ. 88.70ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 44 ಸಾವಿರ ಮಕ್ಕಳು ಒಂದು ವಿಷಯದಲ್ಲಿ ಫೇಲ್ ಆಗಿದ್ದರೆ, ಎರಡು ವಿಷಯದಲ್ಲಿ 18 ಸಾವಿರ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹಾಗೆಯೇ ಎಲ್ಲ ವಿಷಯಗಳಲ್ಲಿಯೂ ಫೇಲ್ ಆದವರ ಸಂಖ್ಯೆ 1,772ಕ್ಕೆ ಇಳಿದಿದೆ.
ಪ್ರಿನ್ಸಿಲ್ಲಾ, ದಿಶಾ, ಅರ್ಚನಾ ಮತ್ತು ಸಂಗೀತ -
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಹಲವು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ತೋರಿದ್ದಾರೆ. ಈ ಬಾರಿ ಶೇ. 86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮೂರೂ ವಿಭಾಗಗಳಲ್ಲಿ ರಾಜ್ಯದ ಟಾಪರ್‌ಗಳ ಪಟ್ಟಿ (2nd PUC Results 2026 Toppers) ಇಲ್ಲಿ ನೀಡಲಾಗಿದೆ.
ಈ ಬಾರಿ ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ 88.04 ಹಾಗೂ ವಿಜ್ಞಾನ ವಿಭಾಗದಲ್ಲಿ 91.69 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಶೇ. 83.65ರಷ್ಟು ಬಾಲಕರು ಮತ್ತು ಶೇ. 88.70ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 44 ಸಾವಿರ ಮಕ್ಕಳು ಒಂದು ವಿಷಯದಲ್ಲಿ ಫೇಲ್ ಆಗಿದ್ದರೆ, ಎರಡು ವಿಷಯದಲ್ಲಿ 18 ಸಾವಿರ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹಾಗೆಯೇ ಎಲ್ಲ ವಿಷಯಗಳಲ್ಲಿಯೂ ಫೇಲ್ ಆದವರ ಸಂಖ್ಯೆ 1,772ಕ್ಕೆ ಇಳಿದಿದೆ.
ಇನ್ನು 1,70,529 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 2,95,385 ವಿದ್ಯಾರ್ಥಿಗಳು ಪ್ರಥಮ ದರ್ಜೆ 63,957 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಮತ್ತು ಶೇ 50ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ 63,957 ಇದೆ, ಈ ಬಾರಿ ಮೂರನೇ ಪರಿಕ್ಷೆ ಇರುವುದಿಲ್ಲ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ವಿಭಾಗವಾರು ಟಾಪ್ 10 ವಿದ್ಯಾರ್ಥಿಗಳ ಪಟ್ಟಿ
ವಿಜ್ಞಾನ ವಿಭಾಗ
- ಪ್ರಿನ್ಸಿಲಾ ಕಾರ್ಡೋಜಾ, ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು, ಮಂಗಳೂರು-599
- ಅಭಿರಾಮ್ ವಿ ಭಟ್, ವಿವೇಕಾನಂದ ಪಿಯು ಕಾಲೇಜು, ಪುತ್ತೂರು (ದಕ್ಷಿಣ ಕನ್ನಡ)-598
- ಏಂಜೆಲ್ ತಿವಾರಿ, ಬೇಸ್ ಪಿಯು ಕಾಲೇಜು, ಬನ್ನೇರುಘಟ್ಟ ರಸ್ತೆ (ಬೆಂಗಳೂರು)- 598
- ಅಂಕಿತ್ ಬಿ. ಕರಟಗಿ, ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜು, ಹುಕ್ಕೇರಿ (ಬೆಳಗಾವಿ)- 598
- ಧನುಷ್ ಗುಟ್ಟಿ, ನ್ಯೂ ವೈಬ್ರೆಂಟ್ ಪಿಯು ಕಾಲೇಜು, ಮೂಡುಬಿದಿರೆ- 598
- ಮೀನಾಕ್ಷಿ ಉನ್ನಿತನ್, ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು, ಮಂಗಳೂರು-598
- ನಂದನ್ ನಾಯಕ್, ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು-598
- ರಕ್ಷಿತಾ ಮಂಜುನಾಥ್, ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ- 598
- ರಶ್ಮಿ, ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜು, ಕುಂದಾಪುರ (ಉಡುಪಿ)-598
- ಸಾಯಿ ರಾಘವ ವಿಶ್ವೇಶ್, ಆಕ್ಸ್‌ಫರ್ಡ್ ಇಂಡಿಪೆಂಡೆಂಟ್ ಪಿಯು ಕಾಲೇಜು, ಉಲ್ಲಾಳ (ಬೆಂಗಳೂರು)- 598
ವಾಣಿಜ್ಯ ವಿಭಾಗ
- ಅದಿತಿ. ಎ. ಬಾಪು ಶ್ರೀ ಮಹಾವೀರ್ ಜೈನ್ ಪಿಯು ಕಾಲೇಜು, ವಿ.ವಿ. ಪುರಂ (ಬೆಂಗಳೂರು)-600
- ದಿಶಾ, ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ (ದಕ್ಷಿಣ ಕನ್ನಡ)- 600
- ಧ್ವನಿ ಸಂತೋಷ್ ಕುಲಕರ್ಣಿ, ಗೋಗ್ಟೆ ವಾಣಿಜ್ಯ ಪಿಯು ಕಾಲೇಜು, ಬೆಳಗಾವಿ-599
- ರಾಚೆಲ್ ಡಿಸೋಜಾ, ಸೇಂಟ್ ಅಲೋಶಿಯಸ್ ಪಿಯು ಕಾಲೇಜು, ಮಂಗಳೂರು-599
- ದೇವಲಾಪುರ ವೈಷ್ಣವಿ, ಜೈನ್ ಪಿಯು ಕಾಲೇಜು, ಜಯನಗರ (ಬೆಂಗಳೂರು)-598
- ಪ್ರೇರಣಾ ಆರ್. ಹೆಗಡೆ, ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳ (ಉಡುಪಿ)-598
- ಸಹನಾ ಆರ್, ಆರ್.ಎನ್.ಎಸ್. ಪಿಯು ಕಾಲೇಜು, ರಾಜರಾಜೇಶ್ವರಿನಗರ (ಬೆಂಗಳೂರು)-598
- ಶೃತಿ ಶಿವಕುಮಾರ್, ಟ್ರಾನ್ಸೆಂಡ್ ಪಿಯು ಕಾಲೇಜು, ಜಯನಗರ (ಬೆಂಗಳೂರು)-598
- ಸ್ನೇಹಾ ಬೆಂಗಳೂರು ರಮೇಶ್ ಜೈನ್ ಪಿಯು ಕಾಲೇಜು, ಜಯನಗರ (ಬೆಂಗಳೂರು) 598
- ವೃಷಾ ಮ್ಯಾಪ್ಸ್ ಪಿಯು ಕಾಲೇಜು, ಮಂಗಳೂರು 598
ಕಲಾ ವಿಭಾಗ
- ಅರ್ಚನಾ ಡಿ.ಎಂ., ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಕೊಟ್ಟೂರು (ವಿಜಯನಗರ)-598
- ಸಂಗೀತಾ, ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಕೊಟ್ಟೂರು (ವಿಜಯನಗರ)-598
- ಸೃಷ್ಟಿ , ವಿ.ಜಿ. ಮಹಿಳಾ ಪಿಯು ಕಾಲೇಜು, ಕಲಬುರಗಿ-598
- ಫಾತಿಮತ್ ಶಹ್ಲಾ, ಶಾರದಾ ಮಹಿಳಾ ಪಿಯು ಕಾಲೇಜು, ಸುಳ್ಯ (ದಕ್ಷಿಣ ಕನ್ನಡ)-595
- ಮಹಮದಾಯನ್ ನದಾಫ್, ಬಿ.ಎಚ್.ಎಸ್ ಕಲಾ ಮತ್ತು ಟಿ.ಜಿ.ಪಿ ವಿಜ್ಞಾನ ಪಿಯು ಕಾಲೇಜು, ಜಮಖಂಡಿ-595
- ಸಾನಿಕಾ ಮೇಟಗಾರ್, ಎಸ್.ಎಸ್. ಪಿಯು ಕಾಲೇಜು, ವಿಜಯಪುರ-595
- ಶಿವಾನಂದ ಎಂ. ಬುರ್ಲಾಟ್ಟಿ, ಜೆ.ಎ. ಕಾಂಪೋಸಿಟ್ ಪಿಯು ಕಾಲೇಜು, ಅಥಣಿ (ಬೆಳಗಾವಿ)-595
- ಶ್ರಾವಣಿ ಪಾಟೀಲ್ ಜೆ.ಎಸ್.ಎಸ್. ಎಸ್.ಎಂ. ಪಿಯು ಕಾಲೇಜು, ಧಾರವಾಡ-595
- ಅಕ್ಷತಾ ಚವಾಣ್, ಎಸ್.ಎಸ್. ಪಿಯು ಕಾಲೇಜು, ವಿಜಯಪುರ-594
- ದೀಕ್ಷಾ ಎಂ. ವಿಜಯ ಪಿಯು ಕಾಲೇಜು, ಜಯನಗರ (ಬೆಂಗಳೂರು)-594