Bangalore News: ಜನಗಣತಿಯಲ್ಲಿ ಸರ್ಕಾರಿ ನೌಕರರ ಬಳಕೆ: ಆಡಳಿತ ವ್ಯವಸ್ಥೆಯ ಮೇಲೆ ಕರಿನೆರಳು
ಬೇಸಿಗೆಯ ಸುಡುಬಿಸಿಲಿನಲ್ಲಿ ಸಿಬ್ಬಂದಿಗಳು ಜನಗಣತಿಯಲ್ಲಿ ತೊಡಗಿದ್ದು, ಗಣತಿ ಆರಂಭಗೊಂಡ ನಾಲ್ಕು ದಿನಗಳಲ್ಲಿಯೇ ಬಸವಳಿದಿದ್ದಾರೆ.ಈಗ ಅಂತರ್ಜಾಲದಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸ್ವಯಂಪ್ರೇರಿತರಾಗಿ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿದ್ದು, ಇದೇ 15 ರವರೆಗೆ ಅವಕಾಶ ಇದೆ. ನಂತರದ ದಿನಗಳಲ್ಲಿ ಸರ್ಕಾರಿ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ಈ ಗಣತಿ ಕಾರ್ಯವನ್ನು ಮುಗಿಸಬೇಕಾಗಿದೆ.
-
ಬೆಂಗಳೂರು: ಜನಗಣತಿಗೆ ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋ ಜಿಸಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ. ಕೇಂದ್ರ ಸರ್ಕಾರ ಆರಂಭಿಸಿರುವ ಜನಗಣತಿಗೆ ಶಿಕ್ಷಕರ ಸಮುದಾಯ ಹಿಂದೆ ಸರಿದ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತಿರುವುದರಿಂದ ಕಚೇರಿಯ ಕೆಲಸ ಕಾರ್ಯಗಳು ಸ್ತಬ್ದಗೊಳ್ಳುತ್ತಿವೆ. ಆಡಳಿತ ಯಂತ್ರದ ಮೇಲೆ ಜನಗಣತಿಯ ಕರಿ ನೆರಳು ಬಿದ್ದಿದೆ.
ಪ್ರಮುಖವಾಗಿ ಖಜಾನೆ ಇಲಾಖೆ, ನೀರಾವರಿ, ಕಂದಾಯ ಇಲಾಖೆಗಳಿಂದ ಅಧಿಕಾರಿಗಳು ಸಿಬ್ಬಂದಿ ಗಳನ್ನು ನಿಯೋಜಿಸಿರುವುದರಿಂದ ರೈತರಿಗೆ ಪಹಣಿ, ಇಸಿ ಹಾಗೂ ವೇತನ ಬಿಡುಗಡೆ ಸೇರಿದಂತೆ ಹಲವಾರು ಸೇವೆಗಳು ವ್ಯತ್ಯಯಗೊಳ್ಳುತ್ತಿವೆ.
ಸರ್ಕಾರಿ ನೌಕರರು ಸೇರಿದಂತೆ ನಿಗಮಮಂಡಳಿಗಳು ಹಾಗೂ ಗುತ್ತಿಗೆ ಕಾರ್ಮಿಕರಿಗೆ ವೇತನ ಬಿಡು ಗಡೆ ಮಾಡುವ ಖಜಾನೆ ಇಲಾಖೆಯಲ್ಲಿಯೂ ಕೂಡ ಬಹುತೇಕ ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ಬಳಸಿಕೊಂಡಿರುವುದರಿಂದ ಈ ಬಾರಿ ವೇತನದಲ್ಲಿ ವಿಳಂಬವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದರ ನಡುವೆ ಜನಗಣತಿಗೆ ನಿಯೋಜಿ ಸಿರುವುದರಿಂದ ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲದೆ ಕಡತಗಳ ವಿಲೇವಾರಿ ಕೂಡ ವ್ಯತ್ಯಯವಾಗುತ್ತಿದೆ.
ಬೇಸಿಗೆಯ ಸುಡುಬಿಸಿಲಿನಲ್ಲಿ ಸಿಬ್ಬಂದಿಗಳು ಜನಗಣತಿಯಲ್ಲಿ ತೊಡಗಿದ್ದು, ಗಣತಿ ಆರಂಭಗೊಂಡ ನಾಲ್ಕು ದಿನಗಳಲ್ಲಿಯೇ ಬಸವಳಿದಿದ್ದಾರೆ.ಈಗ ಅಂತರ್ಜಾಲದಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸ್ವಯಂಪ್ರೇರಿತರಾಗಿ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿದ್ದು, ಇದೇ 15 ರವರೆಗೆ ಅವಕಾಶ ಇದೆ. ನಂತರದ ದಿನಗಳಲ್ಲಿ ಸರ್ಕಾರಿ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ಈ ಗಣತಿ ಕಾರ್ಯವನ್ನು ಮುಗಿಸಬೇಕಾಗಿದೆ.
ಈಗ ಸರ್ಕಾರಿ ನೌಕರರನ್ನು ನೇಮಿಸುತ್ತಿರುವುದರಿಂದ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಯಾಗುತ್ತಿದೆ. ಆದ್ದರಿಂದ ಕಳೆದ 5 ವರ್ಷಗಳಿಂದೀಚೆಗೆ ನಿವೃತ್ತಿಯಾಗಿರುವ ನೌಕರರನ್ನು ಏಕೆ 2027- ಜನಗಣತಿ ಕಾರ್ಯಕ್ಕೆ ನೇಮಿಸಬಾರದು. ಆದ್ದರಿಂದ ಜಿ.ಬಿ.ಎ ಅಥವಾ ಯಾವುದೇ ಪ್ರಾಧಿಕಾರಗಳು ಜಮಗಣತಿಗಾಗಲೀ ಚುನಾವಣಾ ಕೆಲಸಕ್ಕಾಗಲೀ ಸರ್ಕಾರಿ ನೌಕರರನ್ನು ಒತ್ತಾಯಪೂರ್ವಕವಾಗಿ ನೇಮಕ ಮಾಡುವುದು ಸರಿಯಲ್ಲ. ಅದರಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ವಯೋ ಸಹಜ ಕಾಯಿಲೆಗಳು ಇರುತ್ತವೆ. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ವಿ.ಎ ಗಳು, ಕಂದಾಯ ಅಧಿಕಾರಿಗಳು, ಶಿಕ್ಷಕರು, ನಿವೃತ್ತಿ ಸರ್ಕಾರಿ ನೌಕರರು ಇವರುಗಳನ್ನು ನೇಮಕ ಮಾಡಿ ಕೊಂಡು ಸುಗಮವಾಗಿ 2027 ಜನಗಣತಿ ಕಾರ್ಯವನ್ನು ಮಾಡಬಹುದು ಎಂದು ಹೆಸರು ಹೇಳಲು ಇಚ್ಚಿಸಿದ ಸರ್ಕಾರಿ ನೌಕರರಾದ ಗುಂಜೂರು ಮಂಜುನಾಥ್ ಹೇಳಿದ್ದಾರೆ.