Karnataka Budget 2026 Size: 4.48 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ಸಿಎಂ; ಯಾವ ಇಲಾಖೆಗೆ ಎಷ್ಟು ಅನುದಾನ?
Siddaramaiah Budget: 2026-27 ನೇ ಸಾಲಿನ ಬಜೆಟ್ ಮಂಡನೆಯಾಗುತ್ತಿದೆ. ಈ ಬಾರಿ ಬಜೆಟ್ ಗಾತ್ರ 4.48 ಸಾವಿರ ಕೋಟಿ ಹೆಚ್ಚಳವಾಗಿದೆ. ಕಳೆದ ವರ್ಷಕ್ಕಿಂತ 40 ಸಾವಿರ ಕೋಟಿ ಹೆಚ್ಚಳ ಮಾಡಲಾಗಿದೆ. ಯಾವ ವಲಯಕ್ಕೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ. -
ಬೆಂಗಳೂರು: ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ್ದು, ಈ ಬಾರಿಯ ಬಜೆಟ್‌ನ ಒಟ್ಟು ಗಾತ್ರ 4,48,004 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2025-26ನೇ ಸಾಲಿನ ಪರಿಷ್ಕೃತ ಅಂದಾಜು 3,95,307 ಕೋಟಿ ರೂ.ಗಳಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರದಲ್ಲಿ ಗಣನೀಯ ಏರಿಕೆಯಾಗಿದೆ.
ಬಜೆಟ್ ದಾಖಲೆಗಳ ‘ಆಯವ್ಯಯ ವಿಹಂಗಮ ನೋಟ'ದ ಪ್ರಕಾರ, ಅಭಿವೃದ್ಧಿ ಹಂಚಿಕೆಯಲ್ಲಿ ಎಂದಿನಂತೆ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಒತ್ತು ನೀಡಲಾಗಿದ್ದು, ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎರಡನೇ ಅತಿ ದೊಡ್ಡ ಪಾಲು ಪಡೆದುಕೊಂಡಿದೆ.
ಯಾವ ವಲಯಕ್ಕೆ ಎಷ್ಟು ಅನುದಾನ?
- ಶಿಕ್ಷಣ: 47,224 ಕೋಟಿ ರೂ. (10%)
- ಮಹಿಳಾ ಮತ್ತು ಮಕ್ಕಳ ಕಲ್ಯಾಣ: 34,929 ಕೋಟಿ ರೂ. (7%)
- ಇಂಧನ: 29,947 ಕೋಟಿ ರೂ. (6%)
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 26,559 ಕೋಟಿ ರೂ. (6%)
- ಲೋಕೋಪಯೋಗಿ ಮತ್ತು ಸಾರಿಗೆ: 23,100 ಕೋಟಿ ರೂ. (5%)
- ನೀರಾವರಿ: 22,436 ಕೋಟಿ ರೂ. (5%)
- ನಗರಾಭಿವೃದ್ಧಿ ಮತ್ತು ವಸತಿ: 22,203 ಕೋಟಿ ರೂ. (5%)
- ಕಂದಾಯ: 19,843 ಕೋಟಿ ರೂ. (4%)
- ಸಮಾಜ ಕಲ್ಯಾಣ: 18,612 ಕೋಟಿ ರೂ. (4%)
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ: 17,817 ಕೋಟಿ ರೂ. (4%)
- ಒಳಾಡಳಿತ (ಗೃಹ): 11,424 ಕೋಟಿ ರೂ. (2%)
- ಕೃಷಿ ಮತ್ತು ತೋಟಗಾರಿಕೆ: 8,373 ಕೋಟಿ ರೂ. (2%)
- ಆಹಾರ ಮತ್ತು ನಾಗರಿಕ ಸರಬರಾಜು: 7,942 ಕೋಟಿ ರೂ. (2%)
- ಪಶುಸಂಗೋಪನೆ ಮತ್ತು ಮೀನುಗಾರಿಕೆ: 4,084 ಕೋಟಿ ರೂ. (1%)
- ಇತರೆ ವಲಯಗಳು: 1,72,757 ಕೋಟಿ ರೂ. (37%)
ಒಟ್ಟು ಬಂಡವಾಳ ಜಮೆ: 1,32,190 ಕೋಟಿ ರೂ.
ಇದರಲ್ಲಿ ಬಹಿರಂಗ ಮಾರುಕಟ್ಟೆ ಸಾಲದ (Open market loans) ಮೂಲಕವೇ ಅತಿ ಹೆಚ್ಚು ಅಂದರೆ 1,22,340 ಕೋಟಿ ರೂ. ಸಂಗ್ರಹಿಸಲು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,810 ಕೋಟಿ ರೂ. ಸಾಲ ನಿರೀಕ್ಷಿಸಲಾಗಿದೆ.
ಒಟ್ಟು ವೆಚ್ಚ: 1,09,998 ಕೋಟಿ ರೂ.
ಇದರಲ್ಲಿ ಮೂಲಸೌಕರ್ಯ ಮತ್ತು ಇತರ ಬಂಡವಾಳ ವೆಚ್ಚಕ್ಕಾಗಿ (Capital Expenditure) 71,924 ಕೋಟಿ ರೂ. ಮೀಸಲಿಡಲಾಗಿದೆ. ಮಾರುಕಟ್ಟೆ ಸಾಲಗಳ ಮರುಪಾವತಿಗಾಗಿ 29,007 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ ಸಾಲದ ಮರುಪಾವತಿಗೆ 2,700 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ.
KSRTC 144 ಹೊಸ ಬಸ್ ಖರೀದಿ ಸರ್ಕಾರ ಒಪ್ಪಿಗೆ; ಬಜೆಟ್‌ಗೂ ಮುನ್ನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳೇನು?
ಈ ಬಾರಿಯ ಆಯವ್ಯಯದಲ್ಲಿ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿಯಂತಹ ಮೂಲ ವಲಯಗಳ ಜೊತೆಗೆ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಸಿಂಹಪಾಲು ನೀಡಿದೆ.