ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Police Transfer Guidelines: ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರ ವರ್ಗಾವಣೆಗೆ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

Karnataka Police Department: ಪೊಲೀಸ್ ಉಪಾಧೀಕ್ಷಕರು (ಸಿವಿಲ್) ಮತ್ತು ಪೊಲೀಸ್ ನಿರೀಕ್ಷಕರ (ಸಿವಿಲ್) ವರ್ಗಾವಣೆ ಮಾರ್ಗಸೂಚಿಗೆ ಸಂಬಂಧಿಸಿ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರು ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

-

Prabhakara R
Prabhakara R Aug 1, 2026 10:34 PM

ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿಗಳು, ನೌಕರರ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಸಂಬಂಧ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮಾಹಿತಿ ನೀಡಿದ್ದು, ಪೊಲೀಸ್ ಉಪಾಧೀಕ್ಷಕರು (ಸಿವಿಲ್) ಮತ್ತು ಪೊಲೀಸ್ ನಿರೀಕ್ಷಕ (ಸಿವಿಲ್) ಹುದ್ದೆಗಳ ವರ್ಗಾವಣೆಗೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳನ್ನು (Police Transfer Guidelines) ನಿಗದಿ ಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಉಪಾಧೀಕ್ಷಕರು (ಸಿವಿಲ್) ಮತ್ತು ಪೊಲೀಸ್ ನಿರೀಕ್ಷಕರ (ಸಿವಿಲ್) ವರ್ಗಾವಣೆ ಮಾರ್ಗಸೂಚಿಗೆ ಸಂಬಂಧಿಸಿ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರು ಆದೇಶ ಹೊರಡಿಸಿದ್ದಾರೆ.

ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾರ್ಗಸೂಚಿ

1.ಪೊಲೀಸ್ ಉಪಾಧೀಕ್ಷಕರು (ಸಿವಿಲ್)- ಮುಂಬಡ್ತಿ ಹೊಂದಿದ ತರುವಾಯ ಕಡ್ಡಾಯವಾಗಿ ಕನಿಷ್ಟ 02 ವರ್ಷಗಳ ಸೇವೆ:

ಪೊಲೀಸ್ ಉಪಾಧೀಕ್ಷಕರು (ಸಿವಿಲ್) ಹುದ್ದೆಗೆ ಮುಂಬಡ್ತಿ ಹೊಂದಿದ ತರುವಾಯ ಕಡ್ಡಾಯವಾಗಿ ಕನಿಷ್ಟ 02 ವರ್ಷಗಳ ಸೇವೆಯನ್ನು ಡಿವೈಎಸ್‌ಪಿ ವೃಂದದ ಕಾರ್ಯಕಾರ್ಯೇತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು.

2.ಪೊಲೀಸ್ ನಿರೀಕ್ಷಕರು (ಸಿವಿಲ್)- ಮುಂಬಡ್ತಿ ಹೊಂದಿದ ತರುವಾಯ ಕಡ್ಡಾಯವಾಗಿ ಕನಿಷ್ಟ 02 ವರ್ಷಗಳ ಸೇವೆ:

ಪೊಲೀಸ್ ನಿರೀಕ್ಷಕರು (ಸಿವಿಲ್) ಹುದ್ದೆಗೆ ಮುಂಬಡ್ತಿ ಹೊಂದಿದ ತಕ್ಷಣ ಕಡ್ಡಾಯವಾಗಿ ಕನಿಷ್ಠ 02 ವರ್ಷಗಳ ಸೇವೆಯನ್ನು ಪೊಲೀಸ್ ನಿರೀಕ್ಷಕರ ವೃಂದದ ಕಾರ್ಯಕಾರ್ಯೇತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು.

3.ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಾರ್ಯಕಾರಿ ಹುದ್ದೆಗಳ ಗರಿಷ್ಠ ಅವಧಿ:

ಪೊಲೀಸ್ ಉಪಾಧೀಕ್ಷಕರು (ಸಿವಿಲ್) ಮತ್ತು ಪೊಲೀಸ್ ನಿರೀಕ್ಷಕರು (ಸಿವಿಲ್) ಬೆಂಗಳೂರು ನಗರ/ ಮಂಗಳೂರು ನಗರ/ ಮೈಸೂರು ನಗರ/ ಹುಬ್ಬಳ್ಳಿ-ಧಾರವಾಡ ನಗರ / ಬೆಳಗಾವಿ ನಗರ/ ಕಲಬುರಗಿ ನಗರ ಗಳಂತಹ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಿತವಾಗಿ ಗರಿಷ್ಠ ಐದು ವರ್ಷಗಳ ಅವಧಿಗೆ ಮಾತ್ರ ಕಾರ್ಯಕಾರಿ ಹುದ್ದೆಗಳಲ್ಲಿ (ಕಾನೂನು ಸುವ್ಯವಸ್ಥೆ, ಸಂಚಾರ, ಸಿಸಿಬಿ, ರೈಲ್ವೆ, ಸೈಬರ್ ಮತ್ತು ಮಹಿಳಾ) ಸೇವೆ ಸಲ್ಲಿಸಲು ಅರ್ಹರಾಗಿರುತ್ತಾರೆ.

ಪ್ರಸ್ತುತ ರೈಲ್ವೆ, ಸೈಬರ್ ಮತ್ತು ಮಹಿಳಾ ವಿಭಾಗ/ಪೊಲೀಸ್ ಠಾಣೆಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪೊಲೀಸ್ ಉಪಾಧೀಕ್ಷಕರು (ಸಿವಿಲ್) ಮತ್ತು ಪೊಲೀಸ್ ನಿರೀಕ್ಷಕರು (ಸಿವಿಲ್) ಅಧಿಕಾರಿಗಳು, ಅವರ ಅವಧಿ ಪೂರ್ಣಗೊಳಿಸಿದ ನಂತರ ಅವರುಗಳಿಗೆ ಈ ನಿಬಂಧನೆ ಅನ್ವಯವಾಗುತ್ತದೆ.

ಮೇಲ್ಕಂಡ ಹುದ್ದೆಗಳಲ್ಲಿ ಪೊಲೀಸ್ 05 (2) ಕಮಿಷನರೇಟ್ ವ್ಯಾಪ್ತಿಯ ಕಾರ್ಯಕಾರಿ ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಅಧಿಕಾರಿಗಳನ್ನು ಕಡ್ಡಾಯವಾಗಿ ಸಂಬಂಧಿಸಿದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಿಂದ ವರ್ಗಾಯಿಸಿ, ಇತರೆ ಘಟಕಗಳಲ್ಲಿನ ಹುದ್ದೆಗಳಲ್ಲಿ ಕನಿಷ್ಠ 05 (ಐದು) ವರ್ಷಗಳ ಕಾಲ ನೇಮಿಸತಕ್ಕದ್ದು.

ಆನಂತರ, ಸಂಬಂಧಿಸಿದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹೊರಗಿನ ಘಟಕಗಳಲ್ಲಿ 05 ವರ್ಷಗಳ ಕಾಲ Cooling Period ಅನ್ನು ಪೂರ್ಣಗೊಳಿಸಿದ ನಂತರ ಮಾತ್ರ ಸದರಿ ಅಧಿಕಾರಿಗಳು ಪುನಃ ಆಯಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಹುದ್ದೆಗಳ ಪರಿಗಣನೆಗೆ ಅರ್ಹತೆಯನ್ನು ಹೊಂದುತ್ತಾರೆ.

ಸೃಷ್ಟಿಕರಣವಾಗಿ, ಯಾವುದೇ ಅಧಿಕಾರಿಗೆ ಸಂಬಂಧಿಸಿದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಾರ್ಯಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ನಿಗದಿಪಡಿಸಿರುವ 05 (ಐದು) ವರ್ಷಗಳ ಗರಿಷ್ಠ ಅವಧಿ ಪೂರ್ಣಗೊಂಡ ನಂತರವೇ Cooling Period ಪ್ರಾರಂಭವಾಗುತ್ತದೆ. ಈ ಐದು ವರ್ಷದ ಅವಧಿ ಪೂರ್ಣಗೊಳ್ಳುವ ಮೊದಲು ಕಮಿಷನರೇಟ್ ವ್ಯಾಪ್ತಿಯ ಹೊರಗಿನ ಘಟಕಗಳಲ್ಲಿ ನಿರ್ವಹಿಸಿದ ಸೇವೆಯನ್ನು ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯಕಾರ್ಯೇತರ ಹುದ್ದೆಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಯಾವುದೇ ಕಾರಣಕ್ಕೂ Cooling Period ಎಂದು ಪರಿಗಣಿಸತಕ್ಕದ್ದಲ್ಲ ಅಥವಾ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.

4.ಮುಂಬಡ್ತಿಯ ನಂತರ ಪುನರ್ ಮನನ ತರಬೇತಿ:

ಪೊಲೀಸ್ ಉಪಾಧೀಕ್ಷಕರ (ಸಿವಿಲ್) ಮತ್ತು ಪೊಲೀಸ್ ನಿರೀಕ್ಷಕರ (ಸಿವಿಲ್) ಹುದ್ದೆಗೆ ಮುಂಬಡ್ತಿ ಹೊಂದಿದ ಪ್ರತಿಯೊಬ್ಬ ಅಧಿಕಾರಿಯು ಮುಂಬಡ್ತಿ ದಿನಾಂಕದಿಂದ 02 (ಎರಡು) ವರ್ಷಗಳೊಳಗಾಗಿ ಕಡ್ಡಾಯವಾಗಿ 04 (ನಾಲ್ಕು) ವಾರಗಳ ಪುನರ್ ಮನನ ತರಬೇತಿಯನ್ನು ಪೂರ್ಣಗೊಳಿಸತಕ್ಕದ್ದು. ಸದರಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸದ ಅಧಿಕಾರಿಯನ್ನು ಕಾರ್ಯಕಾರಿ ಹುದ್ದೆಗೆ ಪರಿಗಣಿಸತಕ್ಕದ್ದಲ್ಲ.

5.ಕಾರ್ಯಕಾರಿ ಹುದ್ದೆಗೆ ನಿಯೋಜನೆಗೆ ಅರ್ಹತೆ:

ಈ ಕೆಳಕಂಡ ಸಂದರ್ಭಗಳಲ್ಲಿ ಯಾವುದೇ ಪೊಲೀಸ್ ಉಪಾಧೀಕ್ಷಕರು ಮತ್ತು ರವರನ್ನು ಕಾರ್ಯಕಾರಿ ಹುದ್ದೆಗೆ ಪೊಲೀಸ್ ನಿರೀಕ್ಷಕರು(ಸಿವಿಲ್) ನಿಯೋಜಿಸತಕ್ಕದ್ದಲ್ಲ:

1) ಅವರ ವಿರುದ್ಧ ಯಾವುದೇ ಪ್ರಮುಖ ಇಲಾಖಾ ವಿಚಾರಣೆ ಬಾಕಿ ಇದ್ದಲ್ಲಿ,

2) ಲೋಕಾಯುಕ್ತ ಪ್ರಕರಣ ಬಾಕಿ ಇದ್ದಲ್ಲಿ,

3) ಯಾವುದೇ ಅಪರಾಧ ಪ್ರಕರಣ ತನಿಖೆ ಅಥವಾ ವಿಚಾರಣೆಯಲ್ಲಿದ್ದಲ್ಲಿ ಅಥವಾ,

4) ಪೊಲೀಸ್ ಸಿಬ್ಬಂದಿ ಮಂಡಳಿಯು ಸದರಿ ಅಧಿಕಾರಿಯನ್ನು ಕಾರ್ಯಕಾರಿ ಹುದ್ದೆಗೆ ಅನರ್ಹರೆಂದು ಪರಿಗಣಿಸಿದ್ದಲ್ಲಿ.

6.ಪೊಲೀಸ್ ಉಪಾಧೀಕ್ಷಕರು (ಸಿವಿಲ್) ಕಾರ್ಯಕಾರಿ ಮತ್ತು ಕಾರ್ಯಕಾರ್ಯೇತರ ಹುದ್ದೆಗಳ ಪರ್ಯಾಯ ಸೇವೆ:

ಕಾರ್ಯಕಾರಿ ಹುದ್ದೆಗೆ ನಿಯೋಜಿಸಲ್ಪಟ್ಟ ಪೊಲೀಸ್ ಉಪಾಧೀಕ್ಷಕರು (ಸಿವಿಲ್) ರವರು ಕನಿಷ್ಠ 02 (ಎರಡು) ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕಡ್ಡಾಯವಾಗಿ ಕನಿಷ್ಠ 02 (ಎರಡು) ವರ್ಷಗಳ ಕಾಲ ಕಾರ್ಯಕಾರೇತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು.

ಹೀಗೆ ಕಾರ್ಯಕಾರೇತರ ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮಾತ್ರ ಸದರಿ ಅಧಿಕಾರಿಗಳು ಪುನಃ ಕಾರ್ಯಕಾರಿ ಹುದ್ದೆಗೆ ನಿಯೋಜನೆಗೆ ಅರ್ಹರಾಗಿರುತ್ತಾರೆ.

PC Exam Dress code: ನಾಳೆ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಧಾರ್ಮಿಕ ಉಡುಪುಗಳಿಗೆ ನಿರ್ಬಂಧವಿಲ್ಲ ಎಂದು ಗೃಹಸಚಿವ ಸ್ಪಷ್ಟನೆ

7.ಪೊಲೀಸ್ ನಿರೀಕ್ಷಕರು (ಸಿವಿಲ್) - ಕಾರ್ಯಕಾರಿ ಮತ್ತು ಕಾರ್ಯಕಾರ್ಯತರ ಹುದ್ದೆಗಳ ಪರ್ಯಾಯ ಸೇವೆ:

ಕಾರ್ಯಕಾರಿ ಹುದ್ದೆಗೆ ನಿಯೋಜಿಸಲ್ಪಟ್ಟ ಪೊಲೀಸ್ ನಿರೀಕ್ಷಕರು (ಸಿವಿಲ್). ರವರು ಕನಿಷ್ಠ 02 (ಎರಡು) ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕಡ್ಡಾಯವಾಗಿ ಕನಿಷ್ಠ 01 (ಒಂದು) ವರ್ಷದ ಕಾಲ ಕಾರ್ಯಕಾರೇತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು.

ಹೀಗೆ ಕಾರ್ಯಕಾರೇತರ ಹುದ್ದೆಯಲ್ಲಿ ಕನಿಷ್ಠ ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮಾತ್ರ ಸದರಿ ಅಧಿಕಾರಿಗಳು ಪುನಃ ಕಾರ್ಯಕಾರಿ ಹುದ್ದೆಗೆ ನಿಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.