KIA: ಹಣಕಾಸು ವರ್ಷ 2025–26ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ದಾಖಲೆ ಬೆಳವಣಿಗೆ
ದೇಶೀಯ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಸುಮಾರು ಶೇ.3.2ರಷ್ಟು ಏರಿಕೆಯಾದರೆ, ಅಂತಾ ರಾಷ್ಟ್ರೀಯ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಶೇ.50ಕ್ಕಿಂತ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ಇದು ಭವಿಷ್ಯದಲ್ಲಿ ಹೆಚ್ಚಿನ ಸಾಧ್ಯತೆಗಳನ್ನು ಸೂಚಿಸುತ್ತದೆ. ಪ್ರಸ್ತುತ, ‘ಕನೆಕ್ಷನ್ಸ್ ಬೈ ಬಿಎಲ್ ಆರ್’ ಸೇವೆಯ ಮೂಲಕ ವರ್ಗಾವಣೆ ಪ್ರಯಾಣಿಕರಿಗೆ ಇನ್ನಷ್ಟು ಸುಗಮ ಮತ್ತು ವಿಶ್ವಾಸಾರ್ಹ ಸಂಪರ್ಕ ಅನುಭವವನ್ನು ಒದಗಿಸಲಾಗುತ್ತಿದೆ.
-
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು 2025–26ನೇ ಹಣಕಾಸು ವರ್ಷದಲ್ಲಿ ಬಲವಾದ ಮತ್ತು ನಿರಂತರ ಬೆಳವಣಿಗೆಯನ್ನು ದಾಖಲಿಸಿ ದ್ದು, 44.47 ದಶಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವ ಹಾಗೂ 5,32,000 ಮೆಟ್ರಿಕ್ ಟನ್ ಸರಕುಗಳನ್ನು ಸಾಗಣೆ ಮಾಡುವ ಮೂಲಕ, ಪ್ರಯಾಣಿಕ ಮತ್ತು ಸರಕು ಎರಡೂ ವಿಭಾಗಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಏರಿಕೆ, ದೇಶೀಯ ಬೇಡಿಕೆಯ ಸ್ಥಿರತೆ ಹಾಗೂ ಬಲಿಷ್ಠ ಸರಕು ಕಾರ್ಯಾಚರಣೆ ವ್ಯವಸ್ಥೆ ಈ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ.
ಈ ಮೂಲಕ ದಕ್ಷಿಣ ಭಾರತದ ಪ್ರಮುಖ ಜಾಗತಿಕ ಪ್ರವೇಶ ದ್ವಾರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿ ಕೊಂಡಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಚಾರ ಶೇ.23.9ರಷ್ಟು ಏರಿಕೆಯಾಗಿ 7.23 ದಶಲಕ್ಷ ತಲುಪಿದರೆ, ದೇಶೀಯ ಸಂಚಾರ ಶೇ.3.3ರಷ್ಟು ಏರಿಕೆಯೊಂದಿಗೆ 37.24 ದಶಲಕ್ಷ ತಲುಪಿದೆ. ಒಟ್ಟಾರೆ ಪ್ರಯಾಣಿಕರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.6.2ರಷ್ಟು ಏರಿಕೆ ಕಂಡು ಬಂದಿದೆ. ಜಾಗತಿಕ ರಾಜಕೀಯ ಸವಾಲುಗಳ ನಡುವೆಯೂ ಈ ಬೆಳವಣಿಗೆ ಬೆಂಗಳೂರು ನಗರವು ಜಾಗತಿಕ ವ್ಯವಹಾರ ಹಾಗೂ ನಾವೀನ್ಯತಾ ಕೇಂದ್ರವಾಗಿ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ
ವಿಮಾನ ನಿಲ್ದಾಣದಲ್ಲಿ ವರ್ಗಾವಣೆ ಪ್ರಯಾಣಿಕರ ಸಂಖ್ಯೆಯಲ್ಲೂ ಗಮನಾರ್ಹವಾಗಿ ಹೆಚ್ಚಳ ಕಂಡುಬಂದಿದ್ದು, ವರ್ಷದಿಂದ ವರ್ಷಕ್ಕೆ ಸುಮಾರು ಶೇ.22ರಷ್ಟು ಏರಿಕೆಯಾಗಿದೆ. ಇದು ಒಟ್ಟು ಪ್ರಯಾಣಿಕರ ಸಂಚಾರದಲ್ಲಿ ಶೇ.15.7ರಷ್ಟು ಪಾಲನ್ನು ಹೊಂದಿದೆ.
ದೇಶೀಯ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಸುಮಾರು ಶೇ.3.2ರಷ್ಟು ಏರಿಕೆಯಾದರೆ, ಅಂತಾರಾಷ್ಟ್ರೀಯ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಶೇ.50ಕ್ಕಿಂತ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ಇದು ಭವಿಷ್ಯದಲ್ಲಿ ಹೆಚ್ಚಿನ ಸಾಧ್ಯತೆಗಳನ್ನು ಸೂಚಿಸುತ್ತದೆ. ಪ್ರಸ್ತುತ, ‘ಕನೆಕ್ಷನ್ಸ್ ಬೈ ಬಿಎಲ್‌ಆರ್’ ಸೇವೆಯ ಮೂಲಕ ವರ್ಗಾವಣೆ ಪ್ರಯಾಣಿಕರಿಗೆ ಇನ್ನಷ್ಟು ಸುಗಮ ಮತ್ತು ವಿಶ್ವಾಸಾರ್ಹ ಸಂಪರ್ಕ ಅನುಭವವನ್ನು ಒದಗಿಸಲಾಗುತ್ತಿದೆ.
ಸಂಪರ್ಕ ವಿಸ್ತರಣೆ ಮತ್ತು ಕಾರ್ಯಾಚರಣೆಯ ವೃದ್ಧಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಹನೋಯ್ ಮತ್ತು ರಿಯಾದ್ ಸೇರಿದಂತೆ ಹೊಸ ಅಂತಾರಾಷ್ಟ್ರೀಯ ಗಮ್ಯಸ್ಥಾನಗಳನ್ನು ಸೇರ್ಪಡೆಗೊಳಿಸುವ ಮೂಲಕ ತನ್ನ ಜಾಗತಿಕ ಸಂಪರ್ಕವನ್ನು ವಿಸ್ತರಿಸಿದೆ. ಲಂಡನ್ ಹೀತ್ರೋ, ಬ್ಯಾಂಕಾಕ್, ಬಹ್ರೇನ್, ಜೆಡ್ಡಾ, ಫುಕೆಟ್, ಕುವೈತ್, ಕಠ್ಮಂಡು, ಮ್ಯೂನಿಕ್ ಮತ್ತು ಮಾರಿಷಿಯಸ್ ಮಾರ್ಗಗಳಲ್ಲಿ ಸೇವೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ದುಬೈ, ಅಬುಧಾಬಿ, ಸಿಂಗಾಪುರ, ಲಂಡನ್ ಹೀತ್ರೋ ಮತ್ತು ಕೌಲಾಲಂಪುರ ಪ್ರಮುಖ ಅಂತಾರಾಷ್ಟ್ರೀಯ ಗಮ್ಯಸ್ಥಾನಗಳಾಗಿದ್ದರೆ, ದೆಹಲಿ, ಮುಂಬೈ, ಕೊಲ್ಕತ್ತಾ, ಹೈದರಾಬಾದ್ ಮತ್ತು ಪುಣೆ ದೇಶೀಯವಾಗಿ ಪ್ರಮುಖ ಮಾರ್ಗಗಳಾಗಿವೆ. ನವಿ ಮುಂಬೈ, ಜೈಸಲ್ಮೇರ್, ಬೀದರ್, ಸಿಲ್ಚರ್ ಮತ್ತು ದಿಮಾಪುರಗಳು ದೇಶೀಯವಾಗಿ ಹೊಸ ದಾಗಿ ಸೇರ್ಪಡೆಗೊಂಡಿವೆ.
ಪ್ರಯಾಣಿಕರ ಸಂಚಾರ ಹೆಚ್ಚಳಕ್ಕೆ ಅನುಗುಣವಾಗಿ ಕಾರ್ಯಾಚರಣೆಯ ವಿಮಾನ ನಿಲ್ದಾಣದ ಸಾಮರ್ಥ್ಯವು ವಿಸ್ತರಿಸಿದ್ದು, ಒಟ್ಟು 2,80,800 ವಿಮಾನ ಸಂಚಾರಗಳು ದಾಖಲಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.4.5ರಷ್ಟು ಏರಿಕೆಯಾಗಿದೆ. ದಿನಕ್ಕೆ ಸರಾಸರಿ 769 ವಿಮಾನ ಸಂಚಾರ ದಾಖಲಾಗಿದ್ದು, ಒಂದೇ ದಿನದಲ್ಲಿ ಗರಿಷ್ಠ 837 ವಿಮಾನ ಗಳ ಸಂಚಾರ ದಾಖಲಾಗಿದೆ. ಪ್ರಯಾಣಿಕರ ಸಂಚಾರದಲ್ಲಿಯೂ ಹೊಸ ದಾಖಲೆ ನಿರ್ಮಾಣವಾಗಿದ್ದು, ಒಂದೇ ದಿನದಲ್ಲಿ 1,39,111 ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ.
ಸರಕು ವಿಭಾಗದಲ್ಲಿ ನಿರಂತರ ಪ್ರಗತಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಸರಕು ಸಾಗಣೆ ವಿಭಾಗವು ಸ್ಥಿರವಾದ ಬೆಳವಣಿಗೆಯನ್ನು ಕಾಯ್ದು ಕೊಂಡಿದ್ದು, ಶೇ.6ರಷ್ಟು ಏರಿಕೆಯೊಂದಿಗೆ 5,32,000 ಮೆಟ್ರಿಕ್ ಟನ್ ಸರಕನ್ನು ಸಾಗಣೆ ಮಾಡಿದೆ.15 ಸರಕು ವಿಮಾನ ಸಂಸ್ಥೆಗಳು 38 ಗಮ್ಯಸ್ಥಾನಗಳಿಗೆ ಸೇವೆ ನೀಡುತ್ತಿದ್ದು, ಚಿಕಾಗೋ, ಸಿಂಗಾಪುರ, ಲಂಡನ್ ಹೀತ್ರೋ, ಫ್ರಾಂಕ್‌ಫರ್ಟ್, ಶೆನ್ಜೆನ್ ಮತ್ತು ಹಾಂಗ್ ಕಾಂಗ್ ಪ್ರಮುಖ ಅಂತಾರಾಷ್ಟ್ರೀಯ ಸಂಪರ್ಕ ಕೇಂದ್ರಗಳಾಗಿವೆ. ಕೃಷಿ ಉತ್ಪನ್ನಗಳು, ಕೊಳೆತುಹೋಗುವ ಸರಕುಗಳು, ಔಷಧಿ, ಆಟೋ ಭಾಗಗಳು, ಸ್ಪೇರ್ ಪಾರ್ಟ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಇ-ಕಾಮರ್ಸ್ ಸರಕುಗಳ ಸಾಗಣೆ ಈ ಬೆಳವಣಿಗೆಗೆ ಉತ್ತೇಜನ ನೀಡಿವೆ.
ಕೊಳೆತುಹೋಗುವ ಸರಕುಗಳ ಸಾಗಣೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಸತತ ಐದನೇ ವರ್ಷವೂ ಭಾರತದ ಪ್ರಮುಖ ರಫ್ತು ಕೇಂದ್ರವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈ ವರ್ಷದಲ್ಲಿ ಸುಮಾರು 60 ದಶಲಕ್ಷ ಗುಲಾಬಿ ಹೂಗಳನ್ನು ಸಾಗಣೆ ಮಾಡಿದ್ದು, ಪ್ರಮಾಣದಲ್ಲಿ ಶೇ.38 ಮತ್ತು ತೂಕದಲ್ಲಿ ಶೇ. 64ರಷ್ಟು ಏರಿಕೆಯಾಗಿದೆ. ಮಾವಿನ ಹಣ್ಣುಗಳ ರಫ್ತು ಶೇ.12ರಷ್ಟು ಏರಿಕೆಯಾಗಿ ಐದು ವರ್ಷಗಳ ಗರಿಷ್ಠ ಮಟ್ಟ ತಲುಪಿದರೆ, ಕೊತ್ತಂಬರಿ ಸೊಪ್ಪಿನ ಸಾಗಣೆಯಲ್ಲಿ ಶೇ.13ರಷ್ಟು ಏರಿಕೆ ಯಾಗಿದೆ. ಎಐಸಾಟ್ಸ್ ಬಿಎಲ್‌ಆರ್ ಲಾಜಿಸ್ಟಿಕ್ಸ್ ಪಾರ್ಕ್ ಪ್ರಾರಂಭವಾಗಿರುವುದು ಸರಕು ಸಾಗಣೆಯ ಸಾಮರ್ಥ್ಯ ಮತ್ತು ಸಂಸ್ಕರಣಾ ವ್ಯವಸ್ಥೆಗೆ ಇನ್ನಷ್ಟು ಬಲ ಒದಗಿಸಿದೆ.
ಸ್ಥಿರ ಬೆಳವಣಿಗೆ ಮತ್ತು ವಿಸ್ತರಿಸುತ್ತಿರುವ ಸಂಪರ್ಕ ಜಾಲದಿಂದ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಭಾರತದಲ್ಲಿ ಪ್ರಮುಖ ವರ್ಗಾವಣೆ ಕೇಂದ್ರ ವಾಗಿ ರೂಪುಗೊಳ್ಳುತ್ತಿದೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಸಂಪರ್ಕ ವಿಸ್ತರಣೆ, ಸಾಮರ್ಥ್ಯ ಹೆಚ್ಚಳ ಮತ್ತು ಭವಿಷ್ಯದ ಅಗತ್ಯಗಳಿಗೆ ಪೂರಕವಾದ ವ್ಯವಸ್ಥೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.