ಏರ್ ಇಂಡಿಯಾಕ್ಕೆ ಹಕ್ಕಿ ಡಿಕ್ಕಿ: ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿದ ವಿಮಾನ
ವಿಶಾಖಪಟ್ಟಣನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿಯೊಂದು ಮಂಗಳವಾರ ಡಿಕ್ಕಿಯಾಗಿದೆ. ಬಳಿಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಬಳಿಕ ತಾಂತ್ರಿಕ ತಂಡಗಳು ವಿಮಾನವನ್ನು ಪರಿಶೀಲನೆ ನಡೆಸಿದವು. ವಿಮಾನದಲ್ಲಿ 148 ಪ್ರಯಾಣಿಕರಿದ್ದರು. ಘಟನೆಯಲ್ಲಿ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ ಎನ್ನಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೆ (Air India Express flight) ಹಕ್ಕಿಯೊಂದು ಮಂಗಳವಾರ ಡಿಕ್ಕಿಯಾದ ಘಟನೆ ನಡೆದಿದೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ (bengaluru airport) ಇಳಿಸಲಾಯಿತು. ಪಕ್ಷಿ ಡಿಕ್ಕಿಯಾದ (bird strike) ಮೇಲೆ ತಾಂತ್ರಿಕ ತಂಡಗಳು ಅದನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದವು. ವಿಮಾನದಲ್ಲಿ 148 ಪ್ರಯಾಣಿಕರಿದ್ದರು. ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ವಿಮಾನಯಾನ ಸಂಸ್ಥೆ, ಗ್ರಾಹಕರಿಗೆ ಆಗಿರುವ ತೊಂದರೆಗಾಗಿ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರಿಗೆ ಲಘು ಉಪಹಾರ ನೀಡಲಾಗಿದೆ.ಕಾಲಕಾಲಕ್ಕೆ ಸೂಕ್ತ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.
ವಿಶಾಖಪಟ್ಟಣನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿಯಾಗಿದೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 148 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿದ್ದು ಕೇಂದ್ರ ಸರ್ಕಾರ: ಬಿ.ವೈ. ವಿಜಯೇಂದ್ರ
ಹಕ್ಕಿ ಡಿಕ್ಕಿಯಾದ ಬಳಿಕ ಏರ್ ಇಂಡಿಯಾ ವಿಮಾನ ಐಎಕ್ಸ್ 2065 ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದೆ. ಸುರಕ್ಷಿತವಾಗಿ ಇಳಿದ ಮೇಲೆ ಅದನ್ನು ಪಾರ್ಕಿಂಗ್ ಸ್ಟ್ಯಾಂಡ್ಗೆ ಸ್ಥಳಾಂತರಿಸಲಾಯಿತು. ಎಂಜಿನಿಯರ್ಗಳು ಮತ್ತು ತಾಂತ್ರಿಕ ತಂಡಗಳು ಪ್ರಮಾಣಿತ ಸುರಕ್ಷತಾ ಕಾರ್ಯವಿಧಾನಗಳ ಭಾಗವಾಗಿ ಅದರ ರಚನೆ ಅಥವಾ ಎಂಜಿನ್ಗಳಿಗೆ ಯಾವುದೇ ಸಂಭಾವ್ಯ ಹಾನಿಯ ಬಗ್ಗೆ ನಿರ್ಣಯಿಸಲು ವಿಮಾನವನ್ನು ಪರಿಶೀಲನೇ ನಡೆಸಿದವು.
Air India Express bird strike: Flight IX2065 lands safely in Bengaluru with 148 aboard Air India Express flight IX2065 from Visakhapatnam lands safely at Bengaluru's Kempegowda airport after a bird strike on 20 October; all 148 passengers unharmed. https://t.co/Z2qA2jmiT1 https://t.co/GAfm0VpQ4L
— NationPress (@np_nationpress) October 20, 2026
ಭಯೋತ್ಪಾದನೆಯ ಬೆದರಿಕೆ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 14ರಂದು ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಎಐ-2030 ತುರ್ತಾಗಿ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಏರೋಡ್ರೋಮ್ ಸಮಿತಿಯು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ಹುಸಿ ಬೆದರಿಕೆ ಎಂದು ತೀರ್ಮಾನಿಸಿದ ಬಳಿಕ ವಿಮಾನ ಟೇಕ್ಆಫ್ಗೆ ಅನುಮತಿ ನೀಡಲಾಯಿತು.
Mysuru Dasara 2026: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಹೇಗಿತ್ತು ನೋಡಿ; Video
ಇದಕ್ಕೂ ಮೊದಲು ಅಕ್ಟೋಬರ್ 11 ರಂದು ದೆಹಲಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನವು ಹೈದರಾಬಾದ್ನ ಶಂಶಾಬಾದ್ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನದ ಮಧ್ಯದಲ್ಲಿ ಎಲೆಕ್ಟ್ರಾನಿಕ್ ಸಾಧನದಿಂದ ಹೊಗೆ ಬರಲು ಪ್ರಾರಂಭಿಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಲಾಯಿತು. ಅನಿರೀಕ್ಷಿತ ಅಡಚಣೆಗಾಗಿ ಇಂಡಿಗೋ ವಿಷಾದ ವ್ಯಕ್ತಪಡಿಸಿತ್ತು.