70 Years of Service for LIC: LICಗೆ 70ನೇ ವಾರ್ಷಿಕೋತ್ಸವ
1956ರ ಸೆಪ್ಟೆಂಬರ್ 1ರಂದು ದೇಶಾದ್ಯಂತ ಜೀವವಿಮೆ ವಿಸ್ತರಿಸುವ ಹಾಗೂ ಅತ್ಯಂತ ಕೈಗೆಟುಕುವ ದರದಲ್ಲಿ ಸಾರ್ವಜನಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ LIC ಸ್ಥಾಪನೆಯಾಯಿತು. ಕಳೆದ ಏಳು ದಶಕಗಳಲ್ಲಿ ವಿಶ್ವಾಸ, ಗುಣಮಟ್ಟದ ಸೇವೆ, ಆರ್ಥಿಕ ಸದೃಢತೆ ಮತ್ತು ಜನಸಾಮಾನ್ಯರ ಮೇಲಿನ ಬದ್ಧತೆಯೊಂದಿಗೆ ಸಂಸ್ಥೆಯು ತನ್ನ ಯಶಸ್ವಿ ಪಯಣವನ್ನು ಮುಂದುವರಿಸಿದೆ.
-
ಬೆಂಗಳೂರು: ದೇಶದ ಪ್ರಮುಖ ಜೀವವಿಮಾ ಸಂಸ್ಥೆ ಹಾಗೂ ರಾಷ್ಟ್ರೀಯ ಮಹತ್ವದ ಹಣಕಾಸು ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮವು (LIC), ಸೆಪ್ಟೆಂಬರ್ 1, 2026ರಂದು ತನ್ನ 70ನೇ ಸಂಸ್ಥಾಪನಾ ದಿನವನ್ನು (70 Years of Service) ಆಚರಿಸುತ್ತಿದೆ.
1956ರ ಸೆಪ್ಟೆಂಬರ್ 1ರಂದು ದೇಶಾದ್ಯಂತ ಜೀವವಿಮೆ ವಿಸ್ತರಿಸುವ ಹಾಗೂ ಅತ್ಯಂತ ಕೈಗೆಟುಕುವ ದರದಲ್ಲಿ ಸಾರ್ವಜನಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ LIC ಸ್ಥಾಪನೆಯಾಯಿತು. ಕಳೆದ ಏಳು ದಶಕಗಳಲ್ಲಿ ವಿಶ್ವಾಸ, ಗುಣಮಟ್ಟದ ಸೇವೆ, ಆರ್ಥಿಕ ಸದೃಢತೆ ಮತ್ತು ಜನಸಾಮಾನ್ಯರ ಮೇಲಿನ ಬದ್ಧತೆಯೊಂದಿಗೆ ಸಂಸ್ಥೆಯು ತನ್ನ ಯಶಸ್ವಿ ಪಯಣವನ್ನು ಮುಂದುವರಿಸಿದೆ.
ಮಾರುಕಟ್ಟೆ ಸಾಧನೆ: 2025-26ನೇ ಹಣಕಾಸು ವರ್ಷದಲ್ಲಿ LIC ಒಟ್ಟು ಪಾಲಿಸಿಗಳ ಸಂಖ್ಯೆಯಲ್ಲಿ ಶೇ. 65.16 ಹಾಗೂ ಮೊದಲ ವರ್ಷದ ಪ್ರೀಮಿಯಂ ಆದಾಯದಲ್ಲಿ ಶೇ. 56.66 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ತನ್ನ ಸಿಂಹಪಾಲುವನ್ನು ಕಾಯ್ದುಕೊಂಡಿದೆ. ಸಂಸ್ಥೆಯ ಒಟ್ಟು ನಿರ್ವಹಣೆಯಲ್ಲಿರುವ ಆಸ್ತಿಯ ಮೌಲ್ಯ (AUM) ಶೇ. 5.08ರಷ್ಟು ಏರಿಕೆಯಾಗಿದ್ದು, ₹57.29 ಲಕ್ಷ ಕೋಟಿ ತಲುಪಿದೆ.
ಇದನ್ನೂ ಓದಿ: LIC: ಎಲ್‌ಐಸಿ ನೂತನ ಸಿಇಒ ಮತ್ತು ಎಂಡಿಯಾಗಿ ಆರ್. ದೊರೈಸ್ವಾಮಿ ಆಯ್ಕೆ!
ಖಾಸಗಿ ವಿಮಾ ಸಂಸ್ಥೆಗಳ ತೀವ್ರ ಸ್ಪರ್ಧೆಯ ನಡುವೆಯೂ LIC ದೇಶದ ಅತಿದೊಡ್ಡ ಜೀವವಿಮಾ ಸಂಸ್ಥೆಯಾಗಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ದೇಶಾದ್ಯಂತ ಇರುವ ವ್ಯಾಪಕ ಶಾಖೆಗಳು, ಏಜೆಂಟ್‌ಗಳ ಜಾಲ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಕೋಟ್ಯಂತರ ಗ್ರಾಹಕರಿಗೆ ನಿರಂತರ ಸೇವೆ ಒದಗಿಸುತ್ತಿದೆ.
ಸಾಮಾಜಿಕ ಕಳಕಳಿ (CSR): 2006ರಲ್ಲಿ ಸ್ಥಾಪನೆಯಾದ 'LIC ಗೋಲ್ಡನ್ ಜುಬಿಲಿ ಫೌಂಡೇಶನ್' ಇದುವರೆಗೆ ದೇಶಾದ್ಯಂತ 1,045 ಸಾಮಾಜಿಕ ಯೋಜನೆಗಳಿಗೆ ₹303 ಕೋಟಿ ಧನಸಹಾಯ ನೀಡಿದೆ. ಅಲ್ಲದೆ, ಆರ್ಥಿಕವಾಗಿ ಹಿಂದುಳಿದ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ₹105.27 ಕೋಟಿ ಮೊತ್ತದ 41,776 ವಿದ್ಯಾರ್ಥಿವೇತನಗಳನ್ನು ವಿತರಿಸಿದೆ.
ಡಿಜಿಟಲ್ ಸೇವೆಗಳು: 'My LIC App' ಸೇರಿದಂತೆ ಹಲವು ನೂತನ ಡಿಜಿಟಲ್ ಉಪಕ್ರಮಗಳ ಮೂಲಕ ಗ್ರಾಹಕರಿಗೆ ಅತ್ಯಂತ ವೇಗವಾದ, ಸುಲಭ ಹಾಗೂ ಸುಲಲಿತ ಸೇವೆಗಳನ್ನು ತಲುಪಿಸ ಲಾಗುತ್ತಿದೆ.
70ನೇ ಸಂಸ್ಥಾಪನಾ ದಿನದ ಈ ಶುಭ ಸಂದರ್ಭದಲ್ಲಿ LIC ತನ್ನ ಗೌರವಾನ್ವಿತ ಪಾಲಿಸಿದಾರರು, ಷೇರುದಾರರು, ಉದ್ಯೋಗಿಗಳು, ಏಜೆಂಟ್‌ಗಳು ಹಾಗೂ ಇತರ ಪಾಲುದಾರರ ನಿರಂತರ ವಿಶ್ವಾಸ ಮತ್ತು ಬೆಂಬಲಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ.
“ಯೋಗಕ್ಷೇಮಂ ವಹಾಮ್ಯಹಂ – ನಿಮ್ಮ ಕಲ್ಯಾಣವೇ ನಮ್ಮ ಜವಾಬ್ದಾರಿ” ಎಂಬ ಧ್ಯೇಯವಾಕ್ಯ ದೊಂದಿಗೆ LIC ಮುಂದಿನ ದಿನಗಳಲ್ಲೂ ಜೀವ ರಕ್ಷಣೆ, ಆರ್ಥಿಕ ಭದ್ರತೆ ಮತ್ತು ಅತ್ಯುತ್ತಮ ಗ್ರಾಹಕ ಸೇವೆಗೆ ತನ್ನ ಬದ್ಧತೆಯನ್ನು ಮುಂದುವರಿಸಲಿದೆ.