ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LIC: ಎಲ್‌ಐಸಿ ನೂತನ ಸಿಇಒ ಮತ್ತು ಎಂಡಿಯಾಗಿ ಆರ್. ದೊರೈಸ್ವಾಮಿ ಆಯ್ಕೆ!

ಭಾರತದ ಆರ್ಥಿಕ ಸೇವೆಗಳ ಇಲಾಖೆಯು ಜುಲೈ 14, 2025ರಂದು ಹೊರಡಿಸಿರುವ ಅಧಿಸೂಚನೆಯಂತೆ ಶ್ರೀ ಆರ್. ದೊರೈಸ್ವಾಮಿಯನ್ನು ಭಾರತೀಯ ಜೀವನ ವಿಮಾ ನಿಗಮದ (ಎಲ್‌ಐಸಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪನಾ ನಿರ್ದೇಶಕರಾಗಿ (CEO & MD) ನೇಮಕ ಮಾಡಿದೆ. ಈ ಕುರಿತು ಹಣಕಾಸು ಸಚಿವಾಲಯ ,ಹಣಕಾಸು ಸೇವಾ ಇಲಾಖೆ ನೋಟಿಫಿಕೇಶನ್‌ ಪ್ರಕಟಿಸಿದೆ.

ಎಲ್‌ಐಸಿಗೆ ಹೊಸ ಸಿಇಒ‌ ನೇಮಕ!

Profile Pushpa Kumari Jul 15, 2025 4:51 PM

ಮುಂಬೈ: ಭಾರತದ ಆರ್ಥಿಕ ಸೇವೆಗಳ ಇಲಾಖೆಯು ಜುಲೈ 14, 2025ರಂದು ಹೊರಡಿಸಿರುವ ಅಧಿಸೂಚನೆಯಂತೆ , ಆರ್. ದೊರೈಸ್ವಾಮಿಯನ್ನು (R Doraiswamy) ಭಾರತೀಯ ಜೀವನ ವಿಮಾ ನಿಗಮದ (ಎಲ್‌ಐಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪನಾ ನಿರ್ದೇಶಕ ರಾಗಿ (CEO & MD) ನೇಮಕ ಮಾಡಿದೆ. ಈ ಕುರಿತು ಹಣಕಾಸು ಸಚಿವಾಲಯ ,ಹಣಕಾಸು ಸೇವಾ ಇಲಾಖೆ ನೋಟಿಫಿಕೇಶನ್‌ ಪ್ರಕಟಿಸಿದೆ. ಮೂರು ವರ್ಷ ಗಳ ಕಾಲ ಆಗಸ್ಟ್‌ 28 , 2028 ರವರೆಗೆ ಶ್ರೀ ದೊರೈಸ್ವಾಮಿ ಎಲ್‌ಐಸಿಯ ಸಿಇಒ ಹಾಗೂ ಎಂ.ಡಿಯಾಗಿ ಅಧಿಕಾರ ವಹಿಸಲಿದ್ದಾರೆ.

ದೊರೈಸ್ವಾಮಿಯವರು ಮುಂಬೈನ ಎಲ್‌ಐಸಿ ಕೇಂದ್ರ ಕಚೇರಿಯಲ್ಲಿ ಭಾರತೀಯ ಜೀವ ವಿಮಾ ನಿಗಮದ (LIC) ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (MD) ಅಧಿಕಾರವನ್ನು ಸ್ವೀಕರಿಸಿದರು. ಅವರ ಅಧಿಕಾರ ಅವಧಿಯು ಮೂರು ವರ್ಷಗಳ ಕಾಲ ಇರಲಿದೆ.

ಇದನ್ನು ಓದಿ:Karnataka Bank: ಕರ್ಣಾಟಕ ಬ್ಯಾಂಕ್‌ ಎಂಡಿ-ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕ ರಾಜೀನಾಮೆ; ಷೇರು ಬೆಲೆ ಭಾರಿ ಕುಸಿತ!

ದೊರೈಸ್ವಾಮಿ ಅವರ ನೇಮಕವು ಜೀವ ವಿಮಾ ಸಂಸ್ಥೆಯಲ್ಲಿ ಪ್ರಮುಖ ನಾಯಕತ್ವ ಬದಲಾವಣೆ ಯನ್ನು ಸೂಚಿಸಿದೆ. ಎಲ್‌ಐಸಿ ಭಾರತದ ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಜೀವನ ವಿಮಾ ಸಂಸ್ಥೆಯಾಗಿದ್ದು, ಲಕ್ಷಾಂತರ ಗ್ರಾಹಕರಿಗೆ ಜೀವವಿಮೆ ಸೇವೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುತ್ತಿದೆ. ಈ ನೂತನ ನೇಮಕದಿಂದ ಕಂಪನಿಯ ಕಾರ್ಯನಿರ್ವಹಣೆಯಲ್ಲಿ ಮತ್ತಷ್ಟು ಕಾರ್ಯವೃದ್ದಿಯಾಗಲಿದೆ.