ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಡಿಕೆಶಿ ಎದುರು ಮುನಿರತ್ನ ಹೈಡ್ರಾಮಾ; ಮೈಕ್​ಗಾಗಿ ವೇದಿಕೆ ಮೇಲೆ ಜಟಾಪಟಿ, ಜೆಪಿ ಪಾರ್ಕ್‌ನಲ್ಲಿ ಗೊಂದಲದ ವಾತಾವರಣ

ಬೆಂಗಳೂರು ನಡಿಗೆ ಪಾರ್ಕ್​ಗಳಲ್ಲಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ ಇಂದು ಮತ್ತಿಕೆರೆ ಬಳಿಯ ಜೆಪಿ ಪಾರ್ಕ್​​ನಲ್ಲಿ ಪಾಕಿಂಗ್‌ ಮಾಡಿದರು. ಈ ವೇಳೆ ಜೆಪಿ ಪಾರ್ಕ್​ನಲ್ಲಿ ಹೈಡ್ರಾಮಾ ನಡೆದಿದೆ. ಆರ್​ಎಸ್​ಎಸ್​ ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್​ಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ನಿರ್ಲಕ್ಷ್ಯಿಸಿದರು.

ಡಿಕೆಶಿ ಎದುರು ಮುನಿರತ್ನ ಹೈಡ್ರಾಮಾ

-

Vishakha Bhat Vishakha Bhat Oct 12, 2025 10:38 AM

ಬೆಂಗಳೂರು ನಡಿಗೆ ಪಾರ್ಕ್​ಗಳಲ್ಲಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ (DK Shivakumar) ಇಂದು ಮತ್ತಿಕೆರೆ ಬಳಿಯ ಜೆಪಿ ಪಾರ್ಕ್​​ನಲ್ಲಿ ಪಾಕಿಂಗ್‌ ಮಾಡಿದರು. ಈ ವೇಳೆ ಜೆಪಿ ಪಾರ್ಕ್​ನಲ್ಲಿ ಹೈಡ್ರಾಮಾ ನಡೆದಿದೆ. ಆರ್​ಎಸ್​ಎಸ್​ ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್​ಗೆ ಬಂದ ಬಿಜೆಪಿ ಶಾಸಕ ಮುನಿರತ್ನ (muniratna) ಅವರನ್ನು ಡಿಕೆ ಶಿವಕುಮಾರ್ ನಿರ್ಲಕ್ಷ್ಯಿಸಿದರು. ಡಿಕೆಶಿ ವೇದಿಕೆಯಲ್ಲಿ ಕುಳಿತಾಗಲೂ ಶಾಸಕ ಮುನಿರತ್ನ ಕೆಳಗೆ ಜನರ ಮಧ್ಯೆ ಕುರ್ಚಿಯಲ್ಲಿ ಕುಳಿತರು. ಆಗ ಡಿಸಿಎಂ ‘ಹೇಯ್, ಕಪ್ಪು ಟೋಪಿ ಎಂಎಲ್​ಎ ಬಾರಯ್ಯ’ ಎಂದು ಕರೆದರು. ಆದರೆ, ಅದಕ್ಕೆ ಒಪ್ಪದ ಮುನಿರತ್ನ ‘ನಾನು ಜನರ ಮಧ್ಯದಲ್ಲೇ ಕೂರುತ್ತೇನೆ’ ಎಂದು ಹೇಳಿದರು. ಇದಾದ ನಂತರ ಇದ್ದಕ್ಕಿದ್ದಂತೆ ಎದ್ದು ನಿಂತು ಡಿಕೆ ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪ್ರತಿಭಟನೆ ನಡೆಸಿದರು.

ವೇದಿಕೆ ಮೇಲೆ ಡಿಕೆಶಿ ಮುನಿರತ್ನ ಕಿತ್ತಾಡಿದ್ದಾರೆ. ಮುನಿರತ್ನ ಡಿಕೆಶಿ ಕರೀತಿಂದಂತೆ ವೇದಿಕೆಗೆ ಬಂದ ಮುನಿರತ್ನ, ಡಿಸಿಎಂ ಕೈಯಲ್ಲಿ ಮೈಕ್​ ಕೇಳಿದ್ದಾರೆ. ಇಲ್ಲ‌ ಆಗಲ್ಲ ಆಮೇಲೆ ಕೊಡ್ತೀನಿ ಎಂದು ಡಿಕೆಶಿ ಪಟ್ಟು ಹಿಡಿದ್ರು. ಈ ವೇಳೆ ಮುನಿರತ್ನ ಡಿಕೆ ಶಿವಕುಮಾರ್ ಕೈಯಲ್ಲಿದ್ದ ಮೈಕ್​​ನನ್ನೇ ಕಿತ್ತುಕೊಳ್ಳಲು ಮುಂದಾದರು. ಬೆಂಗಳೂರು ನಡಿಗೆ ಸರ್ಕಾರದ ಕಾರ್ಯಕ್ರಮವಾದರೂ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿದ್ದಾರೆ. ಈ ಕಾರ್ಯಕ್ರಮದಲ್ಲೆಲ್ಲೂ ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನ ನೀಡಿಲ್ಲ’ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮೈಕ್ ಕಿತ್ತುಕೊಂಡು ಅವನನ್ನ ಹೊರಗೆ ಕಳಿಸ್ರಿ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ. ಸಂಘದ ಗಣವೇಷದಲ್ಲೇ ವೇದಿಕೆ ಮೇಲೆ ಬಂದು ಮುನಿರತ್ನ ಗಲಾಟೆ ಮಾಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ ಎಂದು ಜೋರಾಗಿ ಕೂಗಿದ್ದಾರೆ. ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ವೇದಿಕೆ ಮೇಲೆಯೇ ಕೂತು ಹೈಡ್ರಾಮಾ ಮಾಡಿದ ಮುನಿರತ್ನ ಅವರನ್ನ ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ.

ಈ ಸುದ್ದಿಯನ್ನೂ ಓದಿ: MLA Munirathna: ಶಾಸಕ ಮುನಿರತ್ನಗೆ ಬಿಗ್ ರಿಲೀಫ್; ಸಾಮೂಹಿಕ ಅತ್ಯಾಚಾರ ಕೇಸ್‌ ರದ್ದು ಮಾಡಿದ ಹೈಕೋರ್ಟ್

ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ರೇಪಿಸ್ಟ್ ಮುನಿ ಎಂದು ಕೂಗಿದ್ದಾರೆ. ಇದೇ ವೇಳೆ ಮಾತಾಡಿದ ಡಿಕೆ ಶಿವಕುಮಾರ್​, ಇವರದ್ದು ಬರೀ ರಾಜಕೀಯನೇ ಆಯ್ತು ಬಿಡಿ ಎಂದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್​ನಿಂದ ಕರೆದೊಯ್ದರು.