ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Vadhu Serial: ತಮ್ಮ ಮದುವೆ ಕಥೆ ಹೇಳಲು ಬರುತ್ತಿದ್ದಾರೆ ಡಿವೋರ್ಸ್ ಲಾಯರ್‌ ‘ವಧು’; ಇವ್ರು ಸಿಎಸ್​ಪಿ ಫ್ಯಾನ್ ಹೌದು...!

ಕಲರ್ಸ್ ಕನ್ನಡದಲ್ಲಿ ಸದ್ಯ ಬಿಗ್ ಬಾಸ್ ಸೀಸನ್ 11 (Bigg Boss Season 11) ಅಬ್ಬರ ಮುಗಿದಿದೆ. ಹಾಗಾಗಿ ಸದ್ಯ ಹೊಸ ಹೊಸ ಧಾರಾವಾಹಿಗಳು ಆರಂಭವಾಗೋದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ವಧು ಧಾರಾವಾಹಿ ಪ್ರೋಮೊ ಬಿಡುಗಡೆಯಾಗಿದೆ. ಅದರಲ್ಲೂ ಇತ್ತೀಚೆಗೆ ಪ್ರಸಾರವಾದ ವಧು ಸೀರಿಯಲ್ ಪ್ರೊಮೋ ಸಖತ್ ಇಂಟ್ರೆಸ್ಟಿಂಗ್ ಆಗಿದ್ದು, ಈ ಸೀರಿಯಲ್ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ಸಿಎಸ್​ಪಿ (CSP Sir) ಸರ್ ನಟಿಸುತ್ತಿದ್ದಾರೆ.

ಇಂದಿನಿಂದ ಶುರುವಾಗ್ತಿದೆ  ಡಿವೋರ್ಸ್ ಲಾಯರ್‌ ‘ವಧು’ ಮದುವೆ ಕಥೆ!

ʻವಧು’ ಸೀರಿಯಲ್‌

Profile Sushmitha Jain Jan 27, 2025 12:04 PM

ಬೆಂಗಳೂರು: ಕಲರ್ಸ್ ಕನ್ನಡ( Colors Kannada) ಒಂದು ಕುಟುಂಬ ಮನರಂಜನಾ ಚಾನಲ್ ಆಗಿದ್ದು, ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗುಣಮಟ್ಟದ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ಒದಗಿಸುತ್ತದೆ. ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ನಿನಗಾಗಿ, ದೃಷ್ಟಿಬೊಟ್ಟು, ಕರಿಮಣಿ, ನೂರು ಜನ್ಮಕೂ, ಗಿಚ್ಚಿ ಗಿಲಿ ಗಿಲಿ, ರಾಜಾ ರಾಣಿ, ನನ್ನಮ್ಮ ಸೂಪರ್‌ಸ್ಟಾರ್, ಫ್ಯಾಮಿಲಿ ಗ್ಯಾಂಗ್‌ಸ್ಟಾರ್ಸ್ ಮತ್ತು ಬಿಗ್ ಬಾಸ್ ಕನ್ನಡ ಚಾನಲ್‌ನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕೆಲವು.

ಇದೀಗ ಈ ಲಿಸ್ಟ್ ಗೆ ವಧು ಧಾರಾವಾಹಿ (Vadhu Serial) ಸೇರಿಕೊಳ್ಳಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಡಿವೋರ್ಸ್ ಲಾಯರ್ ಮದುವೆ ಕಥೆಯನ್ನು ಹೊಂದಿರುವ ವಧು ಧಾರಾವಾಹಿ ಪ್ರಸಾರವಾಗಲಿದೆ.

ಹೌದು ಕಲರ್ಸ್ ಕನ್ನಡದಲ್ಲಿ ಸದ್ಯ ಬಿಗ್ ಬಾಸ್ ಸೀಸನ್ 11 (Bigg Boss Season 11) ಅಬ್ಬರ ಮುಗಿದಿದೆ. ಹಾಗಾಗಿ ಸದ್ಯ ಹೊಸ ಹೊಸ ಧಾರಾವಾಹಿಗಳು ಆರಂಭವಾಗೋದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ವಧು ಧಾರಾವಾಹಿ ಪ್ರೋಮೊ ಬಿಡುಗಡೆಯಾಗಿದೆ. ಅದರಲ್ಲೂ ಇತ್ತೀಚೆಗೆ ಪ್ರಸಾರವಾದ ವಧು ಸೀರಿಯಲ್ ಪ್ರೊಮೋ ಸಖತ್ ಇಂಟ್ರೆಸ್ಟಿಂಗ್ ಆಗಿದ್ದು, ಈ ಸೀರಿಯಲ್ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ಸಿಎಸ್​ಪಿ (CSP Sir) ಸರ್ ನಟಿಸುತ್ತಿದ್ದಾರೆ. ಅಂದ್ರೆ ಕನ್ನಡ ಅದ್ಭುತ ನಿರ್ದೇಶಕ, ನಟ ಟಿ ಎಸ್ ಸೀತಾರಾಮ್ ಅವರು ನಟಿಸುತ್ತಿರೋದು ವೀಕ್ಷಕರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಎಷ್ಟೊ ವರ್ಷಗಳ ನಂತರ ಸಿಎಸ್​ಪಿ ಯವರನ್ನ ತೆರೆ ಮೇಲೆ ನೋಡೊದಕ್ಕೆ ವೀಕ್ಷಕರು ಖುಷಿ ಪಟ್ಟಿದ್ದಾರೆ.

ಕಥೆ ಏನು?
ವಧು ಈ ಧಾರಾವಾಹಿ ಕಥಾ ನಾಯಕಿ, ಸಾರ್ಥಕ್ ಕಥಾ ನಾಯಕನಾಗಿರುತ್ತಾನೆ. ತಾನು ಮಾಡುವ ವೃತ್ತಿಯಿಂದಲೇ ವಧುವಿಗೆ ಮದುವೆ ಆಗುತ್ತಿರಲಿಲ್ಲ. ಇದರಿಂದಲೇ ಮನೆಯಲ್ಲಿ ವಧು ಅವಮಾನಕ್ಕೆ ಒಳಗಾಗುತ್ತಿರುತ್ತಾಳೆ. ಇತ್ತ ತಾಯಿಯ ಮುದ್ದಿನ ಮಗನಾಗಿರುವ ಸಾರ್ಥಕ್‌ಗೆ ಆತನ ಪತ್ನಿಯೇ ಸಮಸ್ಯೆ. ಪತ್ನಿಯಿಂದ ಡಿವೋರ್ಸ್ ಪಡೆಯಲು ಕಥಾ ನಾಯಕಿ ವಧು ಬಳಿ ಬರುತ್ತಾನೆ. ನಂತರ ಮುಂದೆ ಇವರಿಬ್ಬರ ನಡುವಿನ ಸಂಬಂಧ ಹೇಗೆ ಮುಂದುವರಿಯುತ್ತೆ ಎಂಬುವುದೇ ಧಾರಾವಾಹಿಯ ಒನ್‌ಲೈನ್ ಕಥೆಯಾಗಿದೆ.

ಈ ಸುದ್ದಿಯನ್ನೂ ಓದಿ: BBK 11: ಬಿಗ್ ಬಾಸ್ ಮನೆಗೆ ಬಂದ ಯಜಮಾನ ತಂಡ: ಮಸ್ತ್ ಮಜಾ ಮಾಡಿ ಸ್ಪರ್ಧಿಗಳು

ಇನ್ನು ಟಿ ಎಸ್ ಸೀತಾರಾಮ್ (TN Seetharam)ಅವರು ವಧು ಸೀರಿಯಲ್ ನಲ್ಲೂ ಕೂಡ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಯಕಿ ಕೂಡ ಲಾಯರ್ ಆಗುವ ಕನಸು ಕಂಡಿರುವ ಹುಡುಗಿ ಆಗಿರೋದರಿಂದ, ಇಲ್ಲಿ ಸೀತಾರಾಮ್ ಪ್ರಮುಖ ಪಾತ್ರ ವಹಿಸೋದಂತೂ ಖಂಡಿತಾ. ಮತ್ತೆ ಸೀತಾರಮ್ ಅವರ ಮನೋಜ್ಞ ಅಭಿನಯ, ಮಾತಿನ ಗತ್ತು, ಲಾಯರ್ ಲುಕ್ ನೋಡೋಕೆ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಪರಮೇಶ್ವರ್ ಗುಂಡ್ಕಲ್‌ (Parameshwar Gundkal) ಪ್ರೊಡಕ್ಷನ್​ಹೌಸ್ ನಿರ್ಮಾಣದ ವಧು ಧಾರಾವಾಹಿಯಲ್ಲಿ ಟಿ.ಎನ್‌.ಸೀತಾರಾಮ್‌ ನಟಿಸುತ್ತಿದ್ದಾರೆ. ಸೀರಿಯಲ್​ಗಳಲ್ಲಿ ವಕೀಲರ ಪಾತ್ರದ ಮೂಲಕವೇ ಖ್ಯಾತಿ ಪಡೆದಿರುವ ಅವರು ಈಗ ಮತ್ತೆ ಸಿಎಸ್​ಪಿ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಹೊಸ ಸೀರಿಯಲ್​ ಕುರಿತು ಬಿಗ್​ಬಾಸ್​ ಶೋನಲ್ಲಿ ಮಾಹಿತಿ ತಿಳಿದು ಬಂದಿದೆ.