ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೋವೊ ನಾರ್ಡಿಸ್ಕ್ ಇಂಡಿಯಾದಿಂದ ಓಜೆಂಪಿಕ್ ಮತ್ತು ವಿಗೋವಿ ಆರಂಭಿಕ ಡೋಸ್‌ ಗಳ ಬೆಲೆ ಇಳಿಕೆ

ವಿಗೋವಿ ಮತ್ತು ಓಜೆಂಪಿಕ್ ನಲ್ಲಿರುವ ಸಕ್ರಿಯ ಔಷಧೀಯ ಘಟಕವಾದ 'ನೋವೊ ನಾರ್ಡಿಸ್ಕ್‌ ನ ಸೆಮಾಗ್ಲುಟೈಡ್', 50ಕ್ಕೂ ಹೆಚ್ಚು ಕ್ಲಿನಿಕಲ್ ಪ್ರಯೋಗಗಳು ಮತ್ತು 4.9 ಕೋಟಿ ರೋಗಿಗಳ ಬಳಕೆಯ ಅನುಭವದ ಹಿನ್ನೆಲೆಯನ್ನು ಹೊಂದಿದೆ. ಈ ಎರಡೂ ಚಿಕಿತ್ಸೆಗಳನ್ನು 'ಆರ್ ಡಿ ಎನ್ ಎ' ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಇವುಗಳನ್ನು ಬಳಸಲು ಸುಲಭ ವಾದ 'ಪೆನ್' ಸಾಧನಗಳಲ್ಲಿ ನೀಡಲಾಗುತ್ತದೆ.

ಓಜೆಂಪಿಕ್ ಮತ್ತು ವಿಗೋವಿ ಆರಂಭಿಕ ಡೋಸ್‌ ಗಳ ಬೆಲೆ ಇಳಿಕೆ

-

Profile
Ashok Nayak Apr 2, 2026 1:49 PM

ಬೆಂಗಳೂರು: ನೋವೊ ನಾರ್ಡಿಸ್ಕ್ ಇಂಡಿಯಾ ಇಂದು ಟೈಪ್ 2 ಮಧುಮೇಹ ಮತ್ತು ಬೊಜ್ಜು ಅಥವಾ ಅಧಿಕ ತೂಕದೊಂದಿಗೆ ಬದುಕುತ್ತಿರುವ ರೋಗಿಗಳಿಗಾಗಿ ತನ್ನ ಮೂಲ ಮತ್ತು ಪ್ರಮುಖ 'ಸೆಮಾಗ್ಲುಟೈಡ್' ಇಂಜೆಕ್ಷನ್‌ ಗಳ ಬೆಲೆಯನ್ನು ಕಡಿತ ಮಾಡಿದೆ. ಏಪ್ರಿಲ್ 1st ನಿಂದ ಜಾರಿಗೆ ಬರುವಂತೆ, ಓಜೆಂಪಿಕ್ ಆರಂಭಿಕ ಡೋಸ್ ಬೆಲೆಯನ್ನು 36% ಮತ್ತು ವಿಗೋವಿ ಆರಂಭಿಕ ಡೋಸ್ ಬೆಲೆಯನ್ನು 48% ರಷ್ಟು ಕಡಿಮೆ ಮಾಡಲಾಗಿದೆ.

ಓಜೆಂಪಿಕ್ (0.25 mg) ಮತ್ತು ವಿಗೋವಿ (0.25 mg) ಇನ್ನು ಮುಂದೆ ದಿನಕ್ಕೆ ರೂ. 202 ಅಥವಾ ವಾರಕ್ಕೆ ರೂ. 1,415 (ತೆರಿಗೆ ಒಳಗೊಂಡಂತೆ) ಬೆಲೆಯಲ್ಲಿ ಲಭ್ಯವಿರುತ್ತದೆ. ಉತ್ಕೃಷ್ಟ ವೈದ್ಯಕೀಯ ಪುರಾವೆಗಳು ಮತ್ತು ಉನ್ನತ ವೈಜ್ಞಾನಿಕ ಗುಣಮಟ್ಟವನ್ನು ಹೊಂದಿರುವ ಈ ನವೀನ ಚಿಕಿತ್ಸೆಗಳನ್ನು ಭಾರತದಲ್ಲಿ ಮಧುಮೇಹ ಮತ್ತು ಸ್ಥೂಲ ಕಾಯತೆ ಹೊಂದಿರುವ ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳ ಲಾಗಿದೆ.

ಟೈಪ್ 2 ಮಧುಮೇಹ ಹೊಂದಿರುವ ಜನರಿಗೆ (ಪಿಡಬ್ಲ್ಯೂಟಿ2ಡಿ) ಉತ್ತಮ ಪ್ರಯೋಜನ ಗಳನ್ನು ನೀಡುವ ಏಕೈಕ 'ಜಿ.ಎಲ್.ಪಿ-1 ಆರ್.ಎ' ಎಂದರೆ ಓಜೆಂಪಿಕ್ (Ozempic®). ಇದು ರಕ್ತದಲ್ಲಿನ ಸಕ್ಕರೆ ಅಂಶದ ಮೇಲೆ ನಿಯಂತ್ರಣ (ಗ್ಲೈಸೆಮಿಕ್ ಕಂಟ್ರೋಲ್)ಕ್ಕೆ, ಪರಿಣಾಮ ಕಾರಿಯಾಗಿ ತೂಕ ಇಳಿಕೆಗೆ ಸಹಕಾರಿಯಾಗಿದೆ ಹಾಗೂ ಟೈಪ್ 2 ಮಧುಮೇಹ ಇರುವವ ರಲ್ಲಿ ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.

ಇದನ್ನೂ ಓದಿ: Health Tips: ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಇದಕ್ಕೆ ಕಾರಣವೇನು?

ಇನ್ನು ವಿಗೋವಿ (Wegovy®) ಔಷಧಿಯು ಅಧಿಕ ತೂಕ/ ಬೊಜ್ಜು ಹೊಂದಿರುವ ಜನರಲ್ಲಿ ಉತ್ತಮ ರೀತಿಯಲ್ಲಿ ಮತ್ತು ಸುಸ್ಥಿರ ತೂಕ ಇಳಿಕೆಗೆ ನೆರವಾಗುವುದಲ್ಲದೆ, ಹೃದಯದ ಆರೋಗ್ಯಕ್ಕೂ ಸಹಕಾರಿ ಎಂದು ದೃಢಪಟ್ಟಿದೆ. ಈ ಎರಡೂ ಔಷಧಿಗಳನ್ನು ಆಹಾರ ಪದ್ಧತಿ ಮತ್ತು ವ್ಯಾಯಾಮದ ಜೊತೆಗೆ ಪೂರಕವಾಗಿ ಬಳಸಬೇಕು. ಇವು ಕೇವಲ ಪ್ರಿಸ್ಕ್ರಿಪ್ಷನ್ ಆಧಾರಿತ ಔಷಧಿಗಳಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಬಳಸ ಬೇಕು.

ವಿಗೋವಿ ಮತ್ತು ಓಜೆಂಪಿಕ್ ನಲ್ಲಿರುವ ಸಕ್ರಿಯ ಔಷಧೀಯ ಘಟಕವಾದ 'ನೋವೊ ನಾರ್ಡಿಸ್ಕ್‌ ನ ಸೆಮಾಗ್ಲುಟೈಡ್', 50ಕ್ಕೂ ಹೆಚ್ಚು ಕ್ಲಿನಿಕಲ್ ಪ್ರಯೋಗಗಳು ಮತ್ತು 4.9 ಕೋಟಿ ರೋಗಿಗಳ ಬಳಕೆಯ ಅನುಭವದ ಹಿನ್ನೆಲೆಯನ್ನು ಹೊಂದಿದೆ. ಈ ಎರಡೂ ಚಿಕಿತ್ಸೆಗಳನ್ನು 'ಆರ್ ಡಿ ಎನ್ ಎ' ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಇವುಗಳನ್ನು ಬಳಸಲು ಸುಲಭವಾದ 'ಪೆನ್' ಸಾಧನಗಳಲ್ಲಿ ನೀಡಲಾಗುತ್ತದೆ. ಇವು ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಹೊಂದಿದ್ದು, ದೇಶಾದ್ಯಂತ ವ್ಯವಸ್ಥಿತವಾದ 'ಕೋಲ್ಡ್ ಚೈನ್' (ಶೈತ್ಯೀ ಕರಿಸಿದ ಸರಣಿ) ನಿರ್ವಹಣಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ಇದು ರೋಗಿಗಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಭರವಸೆ ನೀಡುತ್ತದೆ. ಇಂಜೆಕ್ಷನ್ ರೂಪದ ಈ ಸೆಮಾಗ್ಲುಟೈಡ್ ಅನ್ನು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (ಡಿಸಿಜಿಐ), ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ), ಯುಎಸ್ ಎಫ್‌ಡಿಎ ಮತ್ತು ಜಪಾನ್‌ ನ ಪಿಎಂಡಿಎ ಸೇರಿದಂತೆ 75 ದೇಶಗಳ ನಿಯಂತ್ರಕ ಸಂಸ್ಥೆಗಳು ಅನುಮೋದಿಸಿವೆ.

ಈ ಕುರಿತು ಮಾತನಾಡುತ್ತಾ, ನೋವೊ ನಾರ್ಡಿಸ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾದ ವಿಕ್ರಾಂತ್ ಶ್ರೋತ್ರಿಯ ಅವರು, "ನಾವು ವಿಜ್ಞಾನ ತೋರಿದ ದಾರಿಯಲ್ಲಿ ಮುನ್ನಡೆ ಯುತ್ತಿದ್ದೇವೆ . ನಾವು ಸದಾ ನಮ್ಮ ರೋಗಿಗಳ ಮೇಲೆಯೇ ಗಮನ ಇಟ್ಟಿರುತ್ತೇವೆ. ನಮ್ಮ ಈ ನವೀನ ಚಿಕಿತ್ಸೆಗಳ ಬೆಲೆಯನ್ನು ಪರಿಷ್ಕರಿಸುವ ಮೂಲಕ, ಭಾರತದಲ್ಲಿ ಟೈಪ್ 2 ಮಧು ಮೇಹ, ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವ ಜನರಿಗೆ ಅತ್ಯುತ್ತಮ ದರ್ಜೆಯ 'ಕಾರ್ಡಿಯೋಮೆಟಬಾಲಿಕ್' ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡಲು ನಾವು ಪ್ರಯತ್ನಿಸು ತ್ತಿದ್ದೇವೆ.

ನಾವು ರೋಗಿಗಳು ಮತ್ತು ವೈದ್ಯರ ಅಭಿಪ್ರಾಯಗಳನ್ನು ಆಲಿಸಿದ್ದೇವೆ ಮತ್ತು ಆ ಪ್ರತಿಕ್ರಿಯೆ ಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಭಾರತಕ್ಕೆ ಮಧುಮೇಹ, ಬೊಜ್ಜು ಮತ್ತು ಅವುಗಳಿಗೆ ಸಂಬಂಧಿಸಿದ ತೊಡಕುಗಳ ಹೊರೆ ಅಪಾರವಾಗಿದೆ. ಪರಿಣಾಮಕಾರಿ, ಸುರಕ್ಷಿತ ಮತ್ತು ಕಾಲಕ್ಕೆ ತಕ್ಕಂತೆ ಪರೀಕ್ಷಿಸಲ್ಪಟ್ಟ ಉತ್ಪನ್ನಗಳ ಮೂಲಕ ಈ ಪರಿಸ್ಥಿತಿ ಯನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದರು.

*

ಓಜೆಂಪಿಕ್(0.25 mg) ಮತ್ತು ವಿಗೋವಿ (0.25 mg) ಇನ್ನು ಮುಂದೆ ವಾರಕ್ಕೆ ರೂ. 1,415 ಅಥವಾ ತಿಂಗಳಿಗೆ ರೂ. 5,660 ಬೆಲೆಗೆ (ತೆರಿಗೆ ಒಳಗೊಂಡಂತೆ) ಲಭ್ಯವಿರಲಿವೆ.

  • ವಿಶ್ವದಾದ್ಯಂತ ಅತಿ ಹೆಚ್ಚು ಶಿಫಾರಸು ಮಾಡಲಾಗುವ 'ಜಿ.ಎಲ್.ಪಿ-1 ಆರ್.ಎ' ಔಷಧಿಯಾಗಿರುವ ಓಜೆಂಪಿಕ್ ಅನ್ನು, ಟೈಪ್ 2 ಮಧುಮೇಹ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಹೃದಯ/ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ವಿಗೋವಿ ಔಷಧಿಯನ್ನು ದೀರ್ಘಕಾಲದ ತೂಕ ನಿರ್ವಹಣೆ ಮತ್ತು ಅಧಿಕ ತೂಕ/ ಬೊಜ್ಜು ಹೊಂದಿರುವವರಲ್ಲಿ ಹೃದಯ ಸಂಬಂಧಿ ಗಂಭೀರ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸೂಚಿಸಲಾಗುತ್ತದೆ.