ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಚಿವ ನಾಗೇಂದ್ರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು : ಸದನ ʼಕದನʼ

ವಿಪಕ್ಷಗಳ ಹೋರಾಟದ ಮಧ್ಯೆ ಸಚಿವ ನಾಗೇಂದ್ರಗೆ ಮತ್ತೊಂದು ಇಲಾಖೆ ಜವಾಬ್ದಾರಿ ನೀಡಲಾಗಿದೆ. ಶುಕ್ರವಾರ ನಿಗದಿ ಸಮಯಕ್ಕಿಂತ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ತಡವಾಗಿ ಆರಂಭ ವಾದ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ತಮ್ಮ ಸ್ಥಾನಗಳಲ್ಲಿ ಎದ್ದು ನಿಂತು ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ದರು. ‘ನಾಗೇಂದ್ರ ಅವರು ರಾಜೀನಾಮೆ ನೀಡಲೇಬೇಕು’ ಎಂದು ಘೊಷಣೆ ಕೂಗಿದರು.

ಸಚಿವ ನಾಗೇಂದ್ರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು : ಸದನ ʼಕದನʼ

-

Profile
Ashok Nayak Aug 22, 2026 7:50 AM

ಐದನೇ ದಿನವೂ ಉಭಯ ಸದನಗಳ ಕಲಾಪ ಬಲಿ

ವಾಲ್ಮೀಕಿ ನಿಗಮ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡು ವಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿರುವುದರಿಂದ ಸತತ 5ನೇ ದಿನವೂ ವಿಧಾನಸಭೆ ಹಾಗೂ ಪರಿಷತ್ ಕಲಾಪಕ್ಕೆ ಅಡ್ಡಿ ಉಂಟಾಗಿದೆ. ವಿಧಾನಸೌಧಕ್ಕೆ ಕಪ್ಪು ಟೀ-ಶರ್ಟ್ ಧರಿಸಿ ಬಂದಿದ್ದ ಬಿಜೆಪಿ ಸದಸ್ಯರನ್ನು ತಡೆಯಲು ಮುಂದಾದಾಗ ಮಾರ್ಷಲ್‌ಗಳೊಂದಿಗೆ ಮಾತಿನ ಚಕಮಕಿ ನಡೆಯಿತು.

ವಿಪಕ್ಷಗಳ ಹೋರಾಟದ ಮಧ್ಯೆ ಸಚಿವ ನಾಗೇಂದ್ರಗೆ ಮತ್ತೊಂದು ಇಲಾಖೆ ಜವಾಬ್ದಾರಿ ನೀಡಲಾಗಿದೆ. ಶುಕ್ರವಾರ ನಿಗದಿ ಸಮಯಕ್ಕಿಂತ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ತಡವಾಗಿ ಆರಂಭ ವಾದ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ತಮ್ಮ ಸ್ಥಾನಗಳಲ್ಲಿ ಎದ್ದು ನಿಂತು ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿದರು. ‘ನಾಗೇಂದ್ರ ಅವರು ರಾಜೀನಾಮೆ ನೀಡಲೇಬೇಕು’ ಎಂದು ಘೊಷಣೆ ಕೂಗಿದರು.

ಘೋಷಣೆ ಜತೆಗೆ ತಮ್ಮ ಮುಂದಿನ ಮೇಜು ಕುಟ್ಟಿದರು. ಹೀಗಾಗಿ ಸದನದ ಕಲಾಪಗಳಿಗೆ ಅಡ್ಡಿ ಆಗಿತ್ತಲ್ಲದೇ ಸದನ ಗದ್ದಲ, ಗೊಂದಲದ ಗೂಡಾಯಿತು. ಹೀಗಿದ್ದರೂ ನೋಟಿಸ್ ನೀಡಿ ಚರ್ಚೆಗೆ ಬನ್ನಿ ಎಂದು ಪ್ರತಿಪಕ್ಷಗಳಿಗೆ ಸಿಎಂ ಆಗ್ರಹಿಸಿದ್ದಾರೆ. ಈ ನಡುವೆಯೇ ಸಭಾಧ್ಯಕ್ಷ ಜಿ.ಎಸ್.ಪಾಟೀಲರು ಪ್ರಶ್ನೊತ್ತರಗಳನ್ನು ಸದನಕ್ಕೆ ಮಂಡಿಸಿ ಶಾಸನ ರಚನಾ ಕಲಾಪ ಕೈಗೆತ್ತಿಕೊಂಡರು. ಗೊಂದಲದ ನಡುವೆಯೇ ಕಾರ್ಯಕಲಾಪ ಗಳು ಜರುಗಿದವು.

ಪ್ರತಿಪಕ್ಷಗಳ ಶಾಸಕರ ಗದ್ದಲದ ನಡುವೆಯೇ ಸಭಾಧ್ಯಕ್ಷ ಜಿ.ಎಸ್.ಪಾಟೀಲರು ಪ್ರಶ್ನೊತ್ತರಗ ಳನ್ನು ಸದನಕ್ಕೆ ಮಂಡಿಸಿ ಶಾಸನ ರಚನಾ ಕಲಾಪ ಕೈಗೆತ್ತಿಕೊಂಡರು. ಗೊಂದಲದ ನಡುವೆಯೇ ಅಧಿಕೃತ ಕಾರ್ಯಕಲಾಪಗಳು ಜರುಗಿದವು.

ಇದನ್ನೂ ಓದಿ: B Nagendra: ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ಬಿ. ನಾಗೇಂದ್ರಗೆ ತುಸು ರಿಲೀಫ್‌; ಹೈಕೋರ್ಟ್‌ ಮಹತ್ವದ ಆದೇಶ

ಮಾರ್ಷಲ್‌ಗಳೊಂದಿಗೆ ಮಾತಿನ ಚಕಮಕಿ: ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ವಿಧಾನಸೌಧದಲ್ಲಿ ಪ್ರತಿಭಟನೆ ತೀವ್ರ ಗೊಳಿಸಿದವು. ‘ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸಬೇಕು ಹಾಗೂ ಪ್ರಕರಣ ದಲ್ಲಿ ಹೊಣೆಗಾರಿಕೆ ನಿಗದಿಚದು ಆಗ್ರಹಿಸಿದ ಪ್ರತಿಪಕ್ಷದ ಸದಸ್ಯರು ಕಪ್ಪು ಟೀ-ಶರ್ಟ್ ಧರಿಸಿ ವಿಧಾನಸಭೆ ಪ್ರವೇಶಿಸಲು ಮುಂದಾದ ವೇಳೆ ಮಾರ್ಷಲ್ ಗಳೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಸದನದ ಮೊಗಸಾಲೆಯಲ್ಲಿ ಕೆಲಕಾಲ ಹೈಡ್ರಾಮಾ ಸಷ್ಟಿಯಾಯಿತು.

ಬೆಳಗ್ಗೆ ವಿಧಾನಸೌಧದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆ ಮುಂಭಾಗದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಬಳಿಕ ಜಂಟಿಯಾಗಿ ಪಾದಯಾತ್ರೆ ಮೂಲಕ ವಿಧಾನಸಭೆಯತ್ತ ಆಗಮಿಸಿದರು. ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಹಾಗೂ ಮಾರ್ಷಲ್‌ಗಳು ಮುಂದಾ ದರೂ, ಪ್ರತಿಪಕ್ಷದ ಶಾಸಕರು ಘೊಷಣೆಗಳನ್ನು ಕೂಗುತ್ತಾ ವಿಧಾನಸಭೆ ಪ್ರವೇಶಿಸಲು ಪ್ರಯತ್ನಿಸಿ ದರು. ಕಪ್ಪು ಟೀ-ಶರ್ಟ್‌ಗಳ ಮೇಲೆ ‘ವಾಲ್ಮೀಕಿ ಹಗರಣ‘, ‘ನಾಗೇಂದ್ರ ರಾಜೀನಾಮೆ ನೀಡಲಿ’, ‘ದಲಿತರ 187 ಕೋಟಿ ಹಣಕ್ಕೆ ನ್ಯಾಯ ಸಿಗಲಿ’ ಸೇರಿದಂತೆ ಸರಕಾರದ ವಿರುದ್ಧದ ಘೊಷಣೆಗಳನ್ನು ಮುದ್ರಿಸಲಾಗಿತ್ತು.

ಇಂತಹ ಉಡುಪಿನಲ್ಲಿ ಸದನ ಪ್ರವೇಶಿಸದಂತೆ ಮಾರ್ಷಲ್‌ಗಳು ತಡೆಯಲು ಮುಂದಾದಾಗ ಬಿಜೆಪಿ-ಜೆಡಿಎಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಸಚಿವ ಪ್ರಭು ಚೌಹಾಣ್ ಸೇರಿದಂತೆ ಕೆಲ ಸದಸ್ಯರು ಮಾರ್ಷಲ್‌ಗಳೊಂದಿಗೆ ವಾಗ್ವಾದ ನಡೆಸಿದರು. ಆದರೂ ಪ್ರತಿಭಟನಾನಿರತ ಶಾಸಕರು ಕಪ್ಪು ಟೀ-ಶರ್ಟ್‌ಗಳ ಸದನದೊಳಗೆ ಪ್ರವೇಶಿಸಿದರು. ವಿಧಾನಸಭೆಯ ಕಲಾಪ ಆರಂಭಕ್ಕೂ ಮುನ್ನವೇ ಪ್ರತಿಪಕ್ಷದ ಸದಸ್ಯರು ಒಳಗೆ ಸೇರಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿತು. ಸಚಿವ ನಾಗೇಂದ್ರ ಮತ್ತಷ್ಟು ಸಂಕಷ್ಟ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆರೋಪ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ವಿರುದ್ಧ ಈಗಾಗಲೇ ಸಿಬಿಐ ತನಿಖೆ ನಡೆಸಿದ್ದು, ಇದೀಗ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ಅವರಿಗೆ ಸಿಬಿಐ ಪತ್ರ ಬರೆದಿದ್ದಾರೆ. ಈ ಸಂಬಂಧ ಲೋಕಭವನ ಸಹ ಕಾನೂನು ತಜ್ಞರ ಸಲಹೆ ಪಡೆಯುತ್ತಿದೆ ಎಂದು ತಿಳಿದುಬಂದಿದೆ. ಹೀಗಾಗಿ ಯಾವ ಸಂದರ್ಭದಲ್ಲೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ನೀಡಬಹುದಾಗಿದೆ.

ನಾಗೇಂದ್ರಗೆ ಮತ್ತೊಂದು ಇಲಾಖೆ ಜವಾಬ್ದಾರಿ: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ರಾಜ್ಯ ಸರಕಾರ ನಾಗೇಂದ್ರ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವುದು ರಾಜಕೀಯ ವಾಗ್ವಾದಕ್ಕೆ ಮತ್ತಷ್ಟು ಕಾರಣವಾಗಿದೆ.

ಯೋಜನೆ ಮತ್ತು ಸಾಂಖ್ಯಿಕ ಖಾತೆ ಹೊಂದಿರುವ ಸಚಿವ ನಾಗೇಂದ್ರ ಅವರ ಹೆಗಲಿಗೆ ಇದೀಗ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯದ ಜವಾಬ್ದಾರಿಯನ್ನೂ ವಹಿಸಲಾಗಿದೆ. ಈ ಕುರಿತು ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಕೇಳಿದ ಪ್ರಶ್ನೆಗೆ ಸಚಿವ ನಾಗೇಂದ್ರ ಲಿಖಿತ ಉತ್ತರ ನೀಡಿದ್ದಾರೆ. 2025ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯ ವನ್ನು ರಚಿಸಲಾಗಿದ್ದು, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರೇ ಈ ಸಚಿವಾಲಯದ ಸಚಿವರಾಗಿರುತ್ತಾರೆ ಎಂದು ಉತ್ತರದಲ್ಲಿ ಸ್ಪಷ್ಟಪಡಿಸಲಾಗಿದೆ. ಇದೇ ಸಚಿವಾಲಯದ ಅಧೀನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಾರ್ಯನಿರ್ವಹಿಸುತ್ತಿದೆ.

ಸಚಿವಾಲಯದ ಕಾರ್ಯನಿರ್ವಹಣೆಗೆ ಒಟ್ಟು 16 ಹುದ್ದೆಗಳನ್ನು ಸರಕಾರ ಮೀಸಲಿಟ್ಟಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಸಂಬಂಧಿತ ಆಡಳಿತಾತ್ಮಕ ಕಾರ್ಯಗಳನ್ನು ಈ ಸಚಿವಾಲಯದ ಮೂಲಕ ನಿರ್ವಹಿಸಲಾಗುತ್ತಿದೆ. ಸರಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಪಕ್ಷಗಳು ಏನೇನು ಕಂಡು ಹಿಡಿದಿದ್ದೀರಿ?: ಸಿಎಂ: ಸಚಿವ ನಾಗೇಂದ್ರ ಅವರಿಂದ ಇಂತಹ ಕಾರಣಕ್ಕೆ ರಾಜಿನಾಮೆ ಕೇಳುತ್ತಿದ್ದೇವೆ ಎಂದು ವಿಪಕ್ಷಗಳು ಹೋರಾಟ ಮಾಡಿದರೆ ಅದಕ್ಕೆ ಅರ್ಥ ವಿರುತ್ತದೆ. ನೋಟಿಸ್ ನೀಡದೇ, ಸದನದ ಬಾವಿಗೂ ಬರದೇ ರಾಜಿನಾಮೆ ಕೊಡಿ ಎಂದರೆ ಅರ್ಥ ವಿದೆಯೇ? ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಪಕ್ಷಗಳ ನಡೆಗೆ ಚಾಟಿ ಬೀಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಮಾತನಾಡಿದ ಸಿಎಂ, ಪ್ರತಿಪಕ್ಷಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ದರು.

ಅಲ್ಲದೆ, ಪ್ರತಿಪಕ್ಷದವರೂ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು. ಅವರುಗಳು ಯಾರೂ ಸರಿಯಾಗಿ ಚರ್ಚೆ ಮಾಡದೇ ಮುಂದುವರೆಯುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳ ಹೋರಾಟಕ್ಕೆ ನಮ್ಮ ತಕರಾರಿಲ್ಲ. ನಾನು ಈ ಹಿಂದೆ ಪಕ್ಷದ ಅಧ್ಯಕ್ಷನಾಗಿದ್ದಾಗ ಸಚಿವ ನಾಗೇಂದ್ರ ಅವರ ಬಳಿ ತೆರಳಿ ತನಿಖೆಯಾಗಲಿ ಎಂದು ರಾಜಿನಾಮೆ ಪಡೆದಿz. ಆನಂತರ ಸರಕಾರ ತನಿಖೆ ನಡೆಸಿದೆ. ಈಗ ಮತ್ತೆ ರಾಜಿನಾಮೆ ಕೇಳುತ್ತಿದ್ದಾರೆ.

ರಾಜಿನಾಮೆ ಕೇಳುವುದಕ್ಕೂ ಒಂದು ಮಾರ್ಗವಿದೆ. ವಿಪಕ್ಷಗಳು ಚರ್ಚೆ ನಡೆಸಲು ನೋಟಿಸ್ ನೀಡಿ ಅದರಂತೆ ನಡೆಯಲಿ ಎಂದು ಆಗ್ರಹಿಸಿದರು. ನಾಗೇಂದ್ರ ಅವರು ಏತಕ್ಕೆ ರಾಜಿನಾಮೆ ನೀಡಬೇಕು? ವಿಪಕ್ಷಗಳು ಏನೇನು ಕಂಡು ಹಿಡಿದರು. ಅವರ ಬಳಿ ಏನೇನು ಮಾಹಿತಿಯಿದೆ? ಸಿಬಿಐ, ಇಡಿ, ಎಸ್ ಐಟಿ ಅವರು ಏನು ಮಾಹಿತಿ ಕೊಟ್ಟರು ಎಂಬುದನ್ನು ಸದನದ ಮೂಲಕ ಜನರಿಗೆ ತಿಳಿಸಲಿ. ಯಾವುದೇ ನೋಟಿಸ್ ನೀಡದೇ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲು. ನೋಟಿಸ್ ನೀಡಿದರೆ ಚರ್ಚೆ ಮಾಡಬಹುದು. ಇಡೀ ದಿನ ಬೇರೆ ವಿಚಾರಗಳನ್ನು ತೆಗೆದುಕೊಳ್ಳದೇ ಇದನ್ನೇ ಚರ್ಚೆ ಮಾಡಬಹುದು ಎಂದರು.

ನಾಗೇಂದ್ರಗೆ ಮತ್ತೊಂದು ಇಲಾಖೆಯ ಜವಾಬ್ದಾರಿ

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷ ಗಳ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ರಾಜ್ಯ ಸರಕಾರ ನಾಗೇಂದ್ರ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವುದು ರಾಜಕೀಯ ವಾಗ್ವಾದಕ್ಕೆ ಮತ್ತಷ್ಟು ಕಾರಣವಾಗಿದೆ. ಯೋಜನೆ ಮತ್ತು ಸಾಂಖ್ಯಿಕ ಖಾತೆ ಹೊಂದಿರುವ ಸಚಿವ ನಾಗೇಂದ್ರ ಅವರ ಹೆಗಲಿಗೆ ಇದೀಗ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯದ ಜವಾಬ್ದಾರಿಯನ್ನೂ ವಹಿಸಲಾಗಿದೆ.

image

ವಾಲ್ಮೀಕಿ ನಿಗಮದ ಹಣ ದುರುಪ ಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರುಪಾಯಿ ಮರು ವಸೂಲಿಯಾಗಿದ್ದು, ಈ ಪ್ರಕರಣದ ಆರೋಪಗಳಿಂದ ನಾನು ಮುಕ್ತನಾಗಿ ಹೊರಬರುತ್ತೇನೆ.

-ಬಿ.ನಾಗೇಂದ್ರ ಸಚಿವ
image

ದಯವಿಟ್ಟು ನೋಟಿಸ್ ಕೊಡಿ. ಎರಡು ದಿನ ಇದನ್ನೇ ಚರ್ಚೆ ಮಾಡೋಣ. ವಿಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ. ಯಾವ ಕೇಂದ್ರ ಸಚಿವರು, ರಾಜ್ಯದ ಸಚಿವರ ಮೇಲೆ ಏನೇನು ಪ್ರಕರಣ ನಡೆದವು, ಹೇಗೆ ತನಿಖೆ ನಡೆಯಿತು ಎಂದು ಅವರ ಹೆಸರು ಹೇಳಿದರೆ ನಿಮಗೆ ಬೇಸರ ವಾಗುತ್ತದೆ.

-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ
image

ಸಚಿವ ನಾಗೇಂದ್ರ ಅವರ ರಾಜೀನಾಮೆ ಕೇಳಲು ಬಿಜೆಪಿಯವರು ಯಾರು? ಈ ರೀತಿಯ ತೀರ್ಮಾನ ಕ್ಕೆ ಬರಲು ಬಿಜೆಪಿಯವರು ಹೈಕೋರ್ಟ್ ಅಥವಾ ಸುಪ್ರೀಂಕೋಟ್ ನವರೇ? ಅಸ್ಸಾಂ ಮತ್ತು ಬಿಹಾರದ ಮುಖ್ಯಮಂತ್ರಿಗಳು ಬಿಜೆಪಿಯವರಲ್ಲವೇ? ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಹಾಗೂ ಹಲವು ಆರೋಪಗಳಿಲ್ಲವೇ? ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಸಿಲುಕಿ ಬಂಧನಕ್ಕೊಳಗಾಗಿದ್ದ ಶಾಸಕ ಚಂದ್ರು ಲಮಾಣಿ ಕೂಡ ಬಿಜೆಪಿಯವರಲ್ಲವೇ? ಈವರೆಗೂ ಅವರನ್ನು ಪಕ್ಷದಲ್ಲಿ ಉಳಿಸಿಕೊಂಡಿರುವುದು ಏಕೆ?

- ಪ್ರಿಯಾಂಕ್ ಖರ್ಗೆ, ಗೃಹ ಸಚಿವ