ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ರೋಟರಿಯೊಂದಿಗೆ ಪಿಇಎಸ್‌ ವಿವಿ ಆಸ್ಪತ್ರೆ ಒಪ್ಪಂದ

PES University Hospital: ಪಿಇಎಸ್‌ ವಿಶ್ವವಿದ್ಯಾಲಯವು ಚಕ್ರದ ಮೇಲಿನ ಸ್ವಾಸ್ಥ್ಯ (ವೆಲ್‌ನೆಸ್‌ ಆನ್‌ ವೀಲ್ಸ್)‌ ಎಂಬ ಗುಣಮಟ್ಟದ ವೈದ್ಯಕೀಯ ಆರೈಕೆಗಾಗಿ ಬೆಂಗಳೂರಿನ ರೋಟರಿ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಕೇವಲ ಒಂದು ಒಪ್ಪಂದವಲ್ಲ, ಮಾನವೀಯತೆಗೆ ಸೇವೆ ಸಲ್ಲಿಸುವ ಭರವಸೆಗೆ ಸಹಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೋಟರಿಯೊಂದಿಗೆ ಪಿಇಎಸ್‌ ವಿವಿ ಆಸ್ಪತ್ರೆ ʼಚಕ್ರದ ಮೇಲಿನ ಸ್ವಾಸ್ಥ್ಯʼ ಒಪ್ಪಂದ

-

Profile Siddalinga Swamy Oct 16, 2025 11:09 PM

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯ‌ ಆಸ್ಪತ್ರೆಯುು (PES University Hospital) ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಚಕ್ರದ ಮೇಲಿನ ಸ್ವಾಸ್ಥ್ಯ (ವೆಲ್‌ನೆಸ್‌ ಆನ್‌ ವೀಲ್ಸ್)‌ ಎಂಬ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ನೀಡಲು ಬೆಂಗಳೂರು ರೋಟರಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಪೆಸು ಐಎಂಎಸ್‌ಆರ್‌ನ ಪ್ರಾಚಾರ್ಯ ಮತ್ತು ಡೀನ್‌ ಡಾ.ಟಿ. ಹರಿಪ್ರಸಾದ್‌ ಮತ್ತು ರೋಟರಿ ಇಂಟರ್‌ನ್ಯಾಷನಲ್‌ ಬೆಂಗಳೂರು ಜಿಲ್ಲೆಯ ಮಾಜಿ ಗವರ್ನರ್‌, ರೋಟರಿ ಸದಸ್ಯ ಸತೀಶ್‌ ಮಾಧವನ್‌ ಮತ್ತು ರೋಟರಿ ಎಚ್‌ಎಸ್‌ಆರ್‌ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ, ರೋಟರಿ ಸದಸ್ಯ ವೀರೇಶ್‌ ದಾಖಲೆಗೆ ಸಹಿ ಹಾಕಿದರು. ಇದು ಕೇವಲ ಒಂದು ಒಪ್ಪಂದವಲ್ಲ, ಮಾನವೀಯತೆಗೆ ಸೇವೆ ಸಲ್ಲಿಸುವ ಭರವಸೆಗೆ ಸಹಿ ಹಾಕಲಾಗಿದೆ ಎಂದು ಅವರು ಕರೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಪಿಇಎಸ್‌ ವಿಶ್ವವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್‌ ಕೃಷ್ಣಮೂರ್ತಿ, ಈ ಸಹಯೋಗವು ಕಾಗದದ ಮೇಲಿನ ಒಪ್ಪಂದಕ್ಕಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತದೆ. ಸಮಾನ ಮನಸ್ಕರ ಸಂಸ್ಥೆಗಳು ಹೆಚ್ಚಿನ ಒಳಿತಿಗಾಗಿ ಒಗ್ಗೂಡಿದಾಗ ಸಾಧಿಸಬಹುದಾದ ಜೀವಂತ ಸಂಕೇತವಾಗಿದೆ ಎಂದು ತಿಳಿಸಿದರು.

PES University Hospital 1

ವೆಲ್‌ನೆಸ್‌ ಆನ್‌ ವೀಲ್ಸ್‌ನ ಕಲ್ಪನೆಯು ಸರಳ ಆದರೆ ಶಕ್ತಿಯುತ ನಂಬಿಕೆಯಿಂದ ಹುಟ್ಟಿಕೊಂಡಿದೆ. ಗುಣಮಟ್ಟದ ಆರೋಗ್ಯ ಸೇವೆಯು ಪ್ರಯಾಣಿಸಲು ಸಾಧ್ಯವಾಗದವರೆಡೆಗೆ ಪ್ರಯಾಣಿಸುವಂತಿರಬೇಕು. ಆಸ್ಪತ್ರೆಯ ಪ್ರವೇಶವು ಆರೋಗ್ಯದ ಫಲಿತಾಂಶಗಳನ್ನು ನಿರ್ಧರಿಸುವ ಜಗತ್ತಿನಲ್ಲಿನಲ್ಲಿ, ಈ ವಾಹನವು ಕೇವಲ ಉಪಕರಣಗಳನ್ನು ಹೊಂದಿದ ಬಸ್‌ ಅಲ್ಲ, ಇದು ನಮ್ಮ ಸಮಾಜದ ಬಡ ಜನರೊಂದಿಗೆ ಆಧುನಿಕ ವೈದ್ಯಕೀಯ ಆರೈಕೆಯನ್ನು ಸಂಪರ್ಕಿಸುವ ಭರವಸೆಯ ಚಲಿಸುವ ಸೇತುವೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Utthana Prabandha Spardhe 2025: ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳ ಆಹ್ವಾನ

ಪಿಇಎಸ್‌ಯುಈಎಂಎಸ್‌ಆರ್‌ನ ಸಹಾಯಕ ವೈದ್ಯಕೀಯ ನಿರ್ದೇಶಕ ಡಾ.ಭರತ್‌ ಸುರೇಶ್‌, ವೆಲ್‌ನೆಸ್‌ ಆನ್‌ ವೀಲ್ಸ್‌ ವಾಹನಕ್ಕೆ ಹಸಿರು ನಿಶಾನೆ ತೋರಿದರು. ರೋಟೆರೀಯನ್‌ಗಳು ಮತ್ತು ವೈದ್ಯರು ಉಪಸ್ಥಿತರಿದ್ದರು.