Chikkaballapur News: ನವವಿವಾಹಿತೆ ಸಾವಿಗೆ ಅಂಗನವಾಡಿ ಕಾರ್ಯಕರ್ತೆಯೇ ಕಾರಣವೆಂದು ಆರೋಪಿಸಿದ ಪೋಷಕರು
ನಮ್ಮ ಮಗಳ ಸಾವಿಗೆ ರಾಮಲಿಂಗಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕಲಾವತಿ.ಟಿ. ಬಿನ್ ತಿಮ್ಮಯ್ಯ ಅವರೇ ಕಾರಣ.ಇವರ ಮಾವನ ಮಗನಿಗೆ ನನ್ನ ಮಗಳನ್ನು ಪುಸಲಾಯಿಸಿ ಪ್ರೇಮ ವಿವಾಹ ಮಾಡಿಕೊಳ್ಳಲಾಗಿತ್ತು.ಮಧುವೆಯ ಸಂದರ್ಭದಲ್ಲಿ ನಮ್ಮ ಮಗಳಂತೆ ನೋಡಿಕೊಳ್ಳ ಲಾಗುವುದಾಗಿ ಇದೇ ಕಲಾವತಿ ಭರವಸೆ ನೀಡಿದ್ದಳು.

ಬಶೆಟ್ಟಿಹಳ್ಳಿ ಹೋಬಳಿ ರಾಮಲಿಂಗಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕಲಾವತಿಯೇ ನಮ್ಮ ಮಗಳ ಸಾವಿಗೆ ಕಾರಣ. ಈಕೆಯನ್ನು ಸೇವೆಯಿಂದ ವಜಾಮಾಡಿ ಎಂದು ಮೃತ ಸಿರಿಷಾ ಪೋಷಕರು ಮತ್ತು ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು. -

ಚಿಕ್ಕಬಳ್ಳಾಪುರ: ಬಶೆಟ್ಟಿಹಳ್ಳಿ ಹೋಬಳಿ ರಾಮಲಿಂಗಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕಲಾವತಿಯೇ ನಮ್ಮ ಮಗಳ ಸಾವಿಗೆ ಕಾರಣ. ಈಕೆಯನ್ನು ಸೇವೆಯಿಂದ ವಜಾ ಮಾಡಿ ಎಂದು ಮೃತ ಸಿರಿಷಾ ಪೋಷಕರು ಮತ್ತು ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ನಗರದ ಜಿಲ್ಲಾಡಳಿತ ಭವನದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿರ್ದೇಶಕರ ಕಚೇರಿಗೆ ಗುರುವಾರ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ನವವಿವಾಹಿತೆ ಮೃತ ಸಿರೀಷಾ ಕೋಂ ಶ್ರೀನಾಥ್ ಅವರ ಪೋಷಕರು ಮತ್ತು ಗ್ರಾಮಸ್ಥರು ನ್ಯಾಯಕ್ಕಾಗಿ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮಗಳ ಸಾವಿಗೆ ರಾಮಲಿಂಗಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕಲಾವತಿ.ಟಿ. ಬಿನ್ ತಿಮ್ಮಯ್ಯ ಅವರೇ ಕಾರಣ.ಇವರ ಮಾವನ ಮಗನಿಗೆ ನನ್ನ ಮಗಳನ್ನು ಪುಸಲಾಯಿಸಿ ಪ್ರೇಮ ವಿವಾಹ ಮಾಡಿಕೊಳ್ಳಲಾಗಿತ್ತು.ಮಧುವೆಯ ಸಂದರ್ಭದಲ್ಲಿ ನಮ್ಮ ಮಗಳಂತೆ ನೋಡಿಕೊಳ್ಳ ಲಾಗುವುದಾಗಿ ಇದೇ ಕಲಾವತಿ ಭರವಸೆ ನೀಡಿದ್ದಳು. ಆದರೆ ಈಕೆಯ ಕುಮ್ಮಕ್ಕಿಗೆ ಒಳಗಾಗಿ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ದೂರಿದರು.
ಕಲಾವತಿ ಕುಟುಂಬದವರು ನೀಡಿದ ಕಿರುಕುಳದಿಂದಾಗಿಯೇ ನಮ್ಮ ಮಗಳಾದ ಸಿರೀಷಾ ಇದೇ ಅಕ್ಟೋಬರ್ ೧೧ ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆಯಾದ ಕೂಡಲೇ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ಆಕೆ ತನಗಾಗುತ್ತಿರುವ ಕಿರುಕುಳವನ್ನು ತನ್ನ ಅಣ್ಣ ನಿಗೆ ಪೋನ್ ಮಾಡಿ ಹೇಳಿಕೊಂಡು ಗೋಳಿಟ್ಟಿದ್ದಾಳೆ.ಪೋಷಕರು ಮನೆಯ ಬಳಿ ಹೋದರೆ ಒಳಗೆ ಬಿಟ್ಟುಕೊಳ್ಳದೆ,ಅವಮಾನಿಸಿದ್ದಾರೆ.ಹೆಣ್ಣು ಮಗಳ ಬಾಳು ಹಾಳಾಗಬಾರದು ಎಂದು ನಾವು ಸಹಿಸಿ ಕೊಂಡಿದ್ದೆವು. ಇದೇ ಕಾರಣವಾಗಿ ಕಲಾವತಿ ಕುಟುಂಬ ನಮ್ಮ ಮಗಳ ಸಾವಿಗೆ ಕಾರಣವಾಗಿದೆ. ನಮಗೆ ನ್ಯಾಯಕೊಡಿ ಎಂದು ಅವಲತ್ತುಕೊಂಡರು.
ಕಲಾವತಿ ಬಶೆಟ್ಟಿಹಳ್ಳಿ ಹೋಬಳಿ ರಾಮಲಿಂಗಪುರ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆ ಯಾಗಿ ೧೫ ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ. ಈಕೆಯ ಮೇಲೆ ಹಲವು ಗುರುತರ ದೂರು ಗಳಿದ್ದರೂ ತಾಲೂಕು ಸಿಡಿಪಿಒ ಯಾವುದೇ ಕ್ರಮ ವಹಿಸದಿರುವುದರಿಂದ ಈಕೆಗೆ ಆಡಿದ್ದೇ ಆಟದಂತೆ ಆಗಿದೆ.
ನಮ್ಮ ಮಗಳ ಸಾವಿಗೆ ಕಾರಣವಾದ ಈಕೆಯ ಮೇಲೆ ಎಫ್‌ಐಆರ್ ದಾಖಲಾಗಿರುವುದರಿಂದ ಈಕೆಯನ್ನು ಸೇವೆಯಿಂದ ಬಿಡುಗಡೆಗೊಳಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿ ಮಾಡಿದರು.
ಉಪನಿರ್ದೇಶಕರ ಅನುಪಸ್ಥಿತಿಯಲ್ಲಿ ಜಿಲ್ಲಾನಿರೂಪಣಾಧಿಕಾರಿಗೆ ಮನವಿ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು ಕಾನೂನಿನಂತೆ ಕ್ರಮ ವಹಿಸಲಾಗುವುದು. ಗ್ರಾಮಸ್ಥರ ಒತ್ತಾಯದ ಮೇಲೆ ಈಕೆಯನ್ನು ಈಗ್ರಾಮದಿಂದ ಬೇರೆಡೆ ವರ್ಗಾಯಿಸಲಾಗುವುದು ಎಂದು ಭರವಸೆ ನೀಡಿದ ಪರಿಣಾಮ ಗ್ರಾಮಸ್ಥರು ವಾಪಸ್ಸಾದರು.
ಈ ವೇಳೆ ರಾಮಲಿಂಗಾಪುರ ಗ್ರಾಮದ ಮೃತ ಸಿರೀಷಾ ತಂದೆ ಶ್ರೀನಾಥ್, ಅವರ ತಾಯಿ, ಗ್ರಾಮಸ್ಥ ರಾದ ನಾರಾಯಣಸ್ವಾಮಿ,ವೆಂಕಟಸ್ವಾಮಿ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಜರಿದ್ದರು.