ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬವೇರಿಯಾದ ಸಚಿವರ ಜತೆಗೆ ಮಾತುಕತೆ ನಡೆಸಿ ಕಿಯಾನಿಕ್ಸ್‌ಗೆ ಜಾಗತಿಕ ಬೆಳವಣಿಗೆಯ ದಾರಿ ಸೂಚಿಸಿದ ಅಧ್ಯಕ್ಷ ಶರತ್‌ ಬಚ್ಚೇಗೌಡ

ಕರ್ನಾಟಕದ ಜತೆಗೆ ಸುಸ್ಥಿರವಾದ, ಡಿಜಿಟಲ್‌ ಪರಿಹಾರಗಳನ್ನು ಕಂಡುಕೊಳ್ಳುವ ದಿಸೆಯಲ್ಲಿ ಕರ್ನಾ ಟಕದ ಜತೆಗೆ ಸಹಯೋಗ ಹೊಂದುವ ಕುರಿತು ಬವೇರಿಯಾದ ನಿಯೋಗ ಬಲವಾದ ಆಸಕ್ತಿಯನ್ನು ವ್ಯಕ್ತಪಡಿಸಿತು. ಪ್ರಾದೇಶಿಕವಾದ ಸಾಮರ್ಥ್ಯಗಳನ್ನು ಮತ್ತು ಪರಸ್ಪರರ ಆವಿಷ್ಕಾರಗಳನ್ನು ಬಳಸಿ ಕೊಳ್ಳಲು ಬವೇರಿಯಾ ತನ್ನ ಇಂಗಿತವನ್ನು ವ್ಯಕ್ತಪಡಿಸಿತು

ಬವೇರಿಯಾದ ಸಚಿವರ ಜತೆಗೆ ಮಾತುಕತೆ ನಡೆಸಿದ ಶರತ್‌ ಬಚ್ಚೇಗೌಡ

Profile Ashok Nayak Apr 20, 2025 11:25 PM

ಬೆಂಗಳೂರು : ಕಿಯೊನಿಕ್ಸ್‌ ಅಧ್ಯಕ್ಷರೂ ಮತ್ತು ಹೊಸಕೋಟೆಯ ಶಾಸಕರೂ ಆದ ಶರತ್‌ ಬಚ್ಚೇ ಗೌಡರು ಕಿಯೊನಿಕ್ಸ್‌ ಪ್ರಧಾನ ಕಚೇರಿಯಲ್ಲಿ ಜರ್ಮನಿಯ ಬವೇರಿಯಾದ ಹಣಕಾಸು, ಪ್ರಾದೇಶಿಕ ಅಭಿವೃದ್ದಿ ಮತ್ತು ಇಂಧನ ಖಾತೆ ಸಚಿವ ಟೊಬಾಯಿಸ್‌ ಗೊಟ್ಟಾರ್ಡ್ಟ್‌ ಅವರ ಜತೆಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿ ಕರ್ನಾಟಕವನ್ನು ಜಾಗತಿಕ ವೇದಿಕೆ ಮೇಲೆ ತರುವ ದಿಸೆಯಲ್ಲಿ ದಿಟ್ಟ ಹೆಜ್ಜೆಯನ್ನು ಇರಿಸಿದರು. ಬೆಂಗಳೂರಿನ ಆಚೆ ಎರಡನೇ ಹಂತದ ನಗರಗಳ ಮೂಲ ಸೌಕರ್ಯ ಗಳನ್ನು ಬಳಸಿಕೊಂಡು, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಸಮೂಹಗಳನ್ನು ನಿರ್ಮಿಸುವುದು ಮತ್ತು ಕರ್ನಾಟಕ ಹಾಗೂ ಬವೆರಿಯಾ ನಡುವೆ ಸ್ಟಾರ್ಟ್‌ ಅಪ್‌ ಕಾರಿಡಾರ್‌ ನಿರ್ಮಿಸುವ ದಿಸೆಯಲ್ಲಿ ಕಿಯಾನಿಕ್ಸ್‌ ಸಂಸ್ಥೆಯು ವಹಿಸುವ ಮಹತ್ತರ ಪಾತ್ರ ಕುರಿತು ಉಭಯ ನಾಯಕರು ಚರ್ಚೆ ನಡೆಸಿ ದರು.

ರಾಜ್ಯದ ಅನೇಕ ಎರಡನೇ ಹಂತದ ನಗರಗಳಲ್ಲಿ ಕಿಯೊನಿಕ್ಸ್‌ ಸಂಸ್ಥೆಯು ಭೌತಿಕ ಮೂಲ ಸೌಕರ್ಯಗಳನ್ನು ಹೊಂದಿದ್ದು ಅದನ್ನು ಭವಿಷ್ಯದ ಕೈಗಾರಿಕಾ ಬೆಳವಣಿಗೆಗೆ ಬಳಸಿಕೊಳ್ಳಬೇಕಾಗಿದೆ ಎಂದು ಶರತ್ ಬಚ್ಚೇಗೌಡರು ಈ ಸಮಯದಲ್ಲಿ ತಿಳಿಸಿದರು. ಪ್ರತಿಯೊಂದು ಪ್ರದೇಶದಲ್ಲಿ ಇರುವ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಂಡು ಸುಸ್ಥಿರವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯ ಕಡೆ ನಾವು ದಾಪುಗಾಲಿನ ಹೆಜ್ಜೆ ಇಡಬೇಕಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

ಈ ಆಲೋಚನೆಯ ಮುಂದುವರಿಕೆಯಾಗಿ ಬೆಳಗಾವಿ ನಗರವನ್ನು ಅಟೊಮೊಬೈಲ್‌ ಉದ್ಯಮದ ಬೆಳವಣಿಗೆ ಕೇಂದ್ರವಾಗಿ, ಫಿನ್‌ಟೆಕ್‌, ಸಾಗರ ತಂತ್ರಜ್ಞಾನ ಮತ್ತು ಬಯೋ ಟೆಕ್ನಾಲಜಿಯಲ್ಲಿ ಮಂಗ ಳೂರನ್ನು, ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕೆ ಮತ್ತು ನಾವೀನ್ಯ ಕೇಂದ್ರವಾಗಿ ಮೈಸೂರನ್ನು ಹಾಗೂ ಕೃಷಿ ತಂತ್ರಜ್ಞಾನ ಬೆಳವಣಿಗೆಗೆ ಕಲಬುರ್ಗಿಯನ್ನು ಕೇಂದ್ರವಾಗಿ ಹೊಂದುವ ಮೂಲಕ ಕೈಗಾರಿಕಾ ಬೆಳವಣಿಗೆಯಲ್ಲಿ ವಿಕೇಂದ್ರೀಕರಣ ತರುವ ದೃಷ್ಟಿಯಲ್ಲಿ ಉಭಯ ಮುಖಂಡರ ನಡುವೆ ಚರ್ಚೆಗಳು ನಡೆದುವು ಎಂದು ಕಿಯೊನಿಕ್ಸ್‌ ಪ್ರಕಟಣೆ ತಿಳಿಸಿದೆ. ಬೆಂಗಳೂರು ಹೇಗೂ ಐಟಿ-ಬಿಟಿ ಉದ್ಯಮಗಳ ಕೇಂದ್ರವಾಗಿದ್ದರೂ ವಿಸ್ತೃತವಾದ ತಂತ್ರಜ್ಞಾನ ಬೆಂಬಲಿತ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಸಮೂಹದ ಜಾಲವನ್ನು ವಿಸ್ತರಿಸಲು ನೆರವಾಗುತ್ತದೆ ಎಂದು ಆಶಿಸಲಾಗಿದೆ.

ಬೆಂಗಳೂರು ನಗರವು ಐಟಿ-ಬಿಟಿ ಆಧಾರಿತ ಸ್ಟಾರ್ಟ್‌ ಅಪ್‌ ಕಂಪೆನಿಗಳ ಸಮೂಹವನ್ನು ಹೊಂದಿ ದಾಗಲೂ ಇನ್ನೂ ಹೊಸ ಸ್ಟಾರ್ಟ್‌ ಅಪ್‌ ಉದ್ಯಮಗಳ ಪ್ರಾರಂಭಕ್ಕೆ ಉತ್ತೇಜನ ಒದಗಿಸಲಿದೆ. ಬವೇರಿಯಾ ಮತ್ತು ಕರ್ನಾಟಕದ ನಡುವೆ ಇಂಥ ಸ್ಟಾರ್ಟ್‌ ಅಪ್‌ಗಳ ಕಾರಿಡಾರ್‌ ನಿರ್ಮಿಸುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.

ಈ ಕಾರಿಡಾರ್‌ ಮೂಲಕ ಕಾರ್ಯಕ್ರಮಗಳ ವಿನಿಮಯ, ಜಂಟಿ ಆವಿಷ್ಕಾರಗಳು ಮತ್ತು ಎರಡೂ ಕಡೆಯ ಮಾರುಕಟ್ಟೆಗಳನ್ನು ಕಂಪೆನಿಗಳಿಗೆ ಒದಗಿಸುವ ಉದ್ದೇಶವೂ ಈ ಚರ್ಚೆಯ ಭಾಗವಾಗಿತ್ತು. ಜತೆಗೆ ಸ್ಥಳೀಯವಾದ ಈ ಸ್ಟಾರ್ಟ್‌ ಅಪ್‌ಗಳು ಜಾಗತಿಕ ಮಾರುಕಟ್ಟೆಯ ಪ್ರಯೋಜನವನ್ನು ಪಡೆದು ಅಭಿವೃದ್ಧಿ ಸಾಧಿಸುವ ಅವಕಾಶಗಳನ್ನೂ ಉಭಯತರು ಚರ್ಚಿಸಿದರು ಎಂದು ತಿಳಿದು ಬಂದಿದೆ.

ಕರ್ನಾಟಕದ ಜತೆಗೆ ಸುಸ್ಥಿರವಾದ, ಡಿಜಿಟಲ್‌ ಪರಿಹಾರಗಳನ್ನು ಕಂಡುಕೊಳ್ಳುವ ದಿಸೆಯಲ್ಲಿ ಕರ್ನಾಟಕದ ಜತೆಗೆ ಸಹಯೋಗ ಹೊಂದುವ ಕುರಿತು ಬವೇರಿಯಾದ ನಿಯೋಗ ಬಲವಾದ ಆಸಕ್ತಿ ಯನ್ನು ವ್ಯಕ್ತಪಡಿಸಿತು. ಪ್ರಾದೇಶಿಕವಾದ ಸಾಮರ್ಥ್ಯಗಳನ್ನು ಮತ್ತು ಪರಸ್ಪರರ ಆವಿಷ್ಕಾರಗಳನ್ನು ಬಳಸಿಕೊಳ್ಳಲು ಬವೇರಿಯಾ ತನ್ನ ಇಂಗಿತವನ್ನು ವ್ಯಕ್ತಪಡಿಸಿತು.

ಕಿಯೊನಿಕ್ಸ್‌ ಅಧ್ಯಕ್ಷರು ಇದೇ ಸಂದರ್ಭದಲ್ಲಿ ಮಾತನಾಡಿ, ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶ ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು ತಮ್ಮ ಸಂಸ್ಥೆಯು ಮಾನವ ಕೇಂದ್ರಿತ ವಾದ ತಾಂತ್ರಿಕ ಆವಿಷ್ಕಾರಕ್ಕೆ ಮಹತ್ವ ನೀಡುತ್ತದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಎರಡೂ ಕಡೆಯ ಅಧಿಕಾರಿಗಳು ಭಾಗವಹಿಸಿ ಭವಿಷ್ಯದ ಕಾರ್ಯತಂತ್ರ ಮತ್ತು ಮಾದರಿ ಸಹಯೋಗಗಳ ಕುರಿತು ಚರ್ಚೆ ನಡೆಸಿದರು.

ಕಿಯೊನಿಕ್ಸ್‌ ಸಂಸ್ಥೆಯನ್ನು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗು ವಲ್ಲಿ ಈ ಸಭೆಯು ಒಂದು ಮಹತ್ವದ ಹೆಜ್ಜೆ ಎನಿಸಿದೆ ಎಂದು ಶರತ್‌ ಬಚ್ಚೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.