50 ಸಾವಿರಕ್ಕೂ ಹೆಚ್ಚು ಜನರು ಭಾಗಿ; ಬೆಂಗಳೂರು ಕಾಮಿಕ್ ಕಾನ್ ಅದ್ದೂರಿ ಸಮಾರೋಪ
ಎರಡು ದಿನಗಳ ಕಾಲ ಬೆಂಗಳೂರಿನ ವೈಟ್‌ಫೀಲ್ಡ್ ನ ಕೆಟಿಪಿಓದಲ್ಲಿ ನಡೆದ ಬೆಂಗಳೂರು ಕಾಮಿಕ್ ಕಾನ್ ಅದ್ದೂರಿಯಾಗಿ ಸಮಾರೋಪಗೊಂಡಿದೆ. ಈ ಆವೃತ್ತಿಯಲ್ಲಿ 50,000ಕ್ಕೂ ಹೆಚ್ಚು ಜನರು ಈ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದು, ಈ ವರ್ಷದ ಕಾಮಿಕ್ ಕಾನ್ ಭಾರತದ ಅತ್ಯಂತ ಜನಪ್ರಿಯ ಪಾಪ್ ಕಲ್ಚರ್ ಕೇಂದ್ರ ಗಳಲ್ಲಿ ಒಂದಾಗಿರುವ ಬೆಂಗಳೂರಿನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿತು.
-
ಈ ಆವೃತ್ತಿಯಲ್ಲಿ 500ಕ್ಕೂ ಹೆಚ್ಚು ಕಾಸ್‌ಪ್ಲೇಯರ್‌ಗಳು, ಅಂತರರಾಷ್ಟ್ರೀಯ ಕ್ರಿಯೇಟರ್ ಗಳು ಭಾಗಿಯಾಗಿದ್ದು, ಗೇಮಿಂಗ್ ಅರೆನಾಗಳು ಮತ್ತು ಸಂವಾದಾತ್ಮಕ ಕಾರ್ಯಕ್ರಮಗಳು ನೆರೆದವರ ಮನಸೂರೆಗೊಂಡವು.
ಬೆಂಗಳೂರು: ಮಾರುತಿ ಸುಜುಕಿ ಅರೆನಾ ಪ್ರಾಯೋಜಕತ್ವದ, ಕ್ರಂಚಿರೋಲ್ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ಬೆಂಗಳೂರಿನ ವೈಟ್‌ಫೀಲ್ಡ್ ನ ಕೆಟಿಪಿಓದಲ್ಲಿ ನಡೆದ ಬೆಂಗಳೂರು ಕಾಮಿಕ್ ಕಾನ್ ಅದ್ದೂರಿಯಾಗಿ ಸಮಾರೋಪಗೊಂಡಿದೆ. ಈ ಆವೃತ್ತಿಯಲ್ಲಿ 50,000ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ವರ್ಷದ ಕಾಮಿಕ್ ಕಾನ್ ಭಾರತದ ಅತ್ಯಂತ ಜನಪ್ರಿಯ ಪಾಪ್ ಕಲ್ಚರ್ ಕೇಂದ್ರಗಳಲ್ಲಿ ಒಂದಾಗಿರುವ ಬೆಂಗಳೂರಿನ ಸ್ಥಾನವನ್ನು ಮತ್ತೊಮ್ಮೆ ದೃಢ ಪಡಿಸಿತು.
ವೇದಿಕೆಯಲ್ಲಿ ಕ್ರಿಯೇಟರ್ ಗಳ ನೇತೃತ್ವದಲ್ಲಿ ಹಲವಾರು ಪ್ಯಾನೆಲ್ ಚರ್ಚೆಗಳು, ಸಂವಾದಾತ್ಮಕ ಗೋಷ್ಠಿಗಳು, ಆಕರ್ಷಕ ಆಟಗಳು, ಅನಿಮೆ ಕ್ವಿಜ್‌ಗಳು ಮತ್ತು ಕಥೆ ಹೇಳುವಿ ಹಾಗೂ ಇಲ್ಲಸ್ಟ್ರೇಷನ್ ಪ್ರಕ್ರಿಯೆಯ ಕುರಿತು ಆಳವಾದ ಮಾತುಕತೆಗಳು ನಡೆದವು.
ಈ ವರ್ಷ 500ಕ್ಕೂ ಹೆಚ್ಚು ಕಾಸ್‌ಪ್ಲೇಯರ್‌ಗಳು ಭಾಗವಹಿಸಿದ್ದರು. ಅವರು ಅದ್ಭುತ ಪಾತ್ರಗಳ ವೇಷಭೂಷಣ ಧರಿಸಿ ಕಾರ್ಯಕ್ರಮವನ್ನು ರಂಗೇರಿಸಿದರು. ಬಾರ್ಡರ್‌ಲ್ಯಾಂಡ್ಸ್ 4ರ ಎಕ್ಸೋ ಸೈನಿಕ ರಾಫಾ ಪಾತ್ರದ ವೇಷ ಧರಿಸಿದ್ದ ಭಾರತೀಯ ಕಾಸ್‌ಪ್ಲೇ ಚಾಂಪಿಯನ್‌ಶಿಪ್‌ನ ಬೆಂಗಳೂರು ಕ್ವಾಲಿ ಫೈಯರ್ ತಂಡವು ಭಾನುವಾರ ಗೆದ್ದು ₹50,000 ನಗದು ಬಹುಮಾನ ಪಡೆದರು.
ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ
ಕಾರ್ಯಕ್ರಮದಲ್ಲಿ ಅತ್ಯಂತ ಆಕರ್ಷಕ ಕಾಸ್‌ಪ್ಲೇ, ಅನಿಮೆ, ಗೇಮಿಂಗ್ ಮತ್ತು ಪಾಪ್ ಕಲ್ಚರ್ ಕ್ಲಾಸಿಕ್‌ಗಳ ಪಾತ್ರಗಳನ್ನು ಧರಿಸಿದ್ದ ಕಲಾವಿದರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಈ ಆವೃತ್ತಿಯ ಮುಖ್ಯ ಆಕರ್ಷಣೆಯೆಂದರೆ ಮೂರು ಪ್ರಸಿದ್ಧ ಅಂತರರಾಷ್ಟ್ರೀಯ ಅತಿಥಿಗಳು ಉಪಸ್ಥಿತರಿದ್ದುದು. ಡೈರಿ ಆಫ್ ಎ ವಿಂಪಿ ಕಿಡ್ ಟ್ರಯಾಲಜಿಯ ‘ರೌಲಿ’ ಪಾತ್ರಕ್ಕೆ ಹೆಸರಾದ ನಟ ರಾಬರ್ಟ್ ಕ್ಯಾಪ್ರಾನ್, ಗಾಥಮ್ ಸಿಟಿ ಸೈರನ್ಸ್, ಡಿಟೆಕ್ಟಿವ್ ಕಾಮಿಕ್ಸ್, ಬ್ರೂಸ್ ವೇನ್: ದಿ ರೋಡ್ ಹೋಮ್ ಮತ್ತು ಡೆತ್ ಆಫ್ ವೂಲ್ವರೀನ್‌ಗಳಂತಹ ಕೃತಿಗಳಿಗೆ ಹೆಸರಾದ ಕಾಮಿಕ್ ಬುಕ್ ಕಲಾವಿದ ಪೀಟರ್ ನ್ಗುಯೆನ್ ಮತ್ತು ಓವರ್‌ವಾಚ್ ಮತ್ತು ಓವರ್‌ವಾಚ್ 2ರಲ್ಲಿ ವಿಡೋಮೇಕರ್ ಪಾತ್ರದ ಧ್ವನಿಗೆ ಹೆಸರಾಗಿರುವ ಫ್ರೆಂಚ್-ಆಸ್ಟ್ರೇಲಿಯನ್ ನಟಿ ಮತ್ತು ಧ್ವನಿ ಕಲಾವಿದೆ ಕ್ಲೋ ಹಾಲಿಂಗ್ಸ್ ಎರಡೂ ದಿನವೂ ಹಾಜರಿದ್ದು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಭಾರತೀಯ ಕ್ರಿಯೇಟರ್ ಗಳು ಭಾಗವಹಿಸಿದರು. ಹೊಸ ಮತ್ತು ಪ್ರಸಿದ್ಧ ಬರಹಗಾರರು ಹಾಗೂ ಚಿತ್ರಕಾರರು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು.
ಅಮರ್ ಚಿತ್ರ ಕಥಾದ ಗ್ರೂಪ್ ಆರ್ಟ್ ಡೈರೆಕ್ಟರ್ ಮತ್ತು ಟಿಂಕಲ್‌ನ ಪ್ರಸಿದ್ಧ ಹೀರೋ ಮೇಕರ್ ಸ್ಯಾವಿಯೋ ಮಸ್ಕರೇನ್ಹಸ್, ಬಕರ್ ಮ್ಯಾಕ್ಸ್ ಸ್ಥಾಪಕ ಮತ್ತು ಖ್ಯಾತ ಕಾರ್ಟೂನಿಸ್ಟ್ ಸುಮಿತ್ ಕುಮಾರ್ (ಪ್ರಸಿದ್ಧ ಗ್ರಾಫಿಕ್ ನಾವೆಲ್‌ಗಳು ಮತ್ತು ಅನಿಮೇಟೆಡ್ ಸೀರೀಸ್‌ಗಳಿಗೆ ಹೆಸರಾದವರು), ಗಾರ್ಬೇಜ್ ಬಿನ್ ಕಾಮಿಕ್ಸ್ ನ ಕ್ರಿಯೇಟರ್ ಫೈಸಲ್ ಮೊಹಮ್ಮದ್ (ಗುಡ್ಡುವಿನ 90ರ ದಶಕದ ನಾಸ್ಟಾಲ್ಜಿಕ್ ಸಾಹಸಗಳನ್ನು ಒಂದು ಮಿಲಿಯನ್‌ಗೂ ಹೆಚ್ಚು ಅಭಿಮಾನಿಗಳಿಗೆ ಹತ್ತಿರಾಗಿಸಿದವರು) ಮತ್ತು ತನ್ನ ಗ್ರಾಫಿಕರ್ರಿ ಸ್ಟುಡಿಯೋ ಮೂಲಕ ಸಿಗ್ನೇಚರ್ ವೆಕ್ಟರ್ ಕ್ಯಾರಿಕೇಚರ್‌ಗಳಿಗೆ ಹೆಸರಾದ ಬೆಂಗಳೂರು ಮೂಲದ ಚಿತ್ರಕಾರ ಪ್ರಸಾದ್ ಭಟ್ ಕೂಡ ಭಾಗವಹಿಸಿದ್ದರು.
ಈ ಆವೃತ್ತಿಯಲ್ಲಿ ಸ್ನ್ಯಾಕ್ಸ್ ಗೇಮಿಂಗ್, ಟ್ರಿಗರ್ಡ್ ಇನ್ಸಾನ್, ಟೆಕ್ನೋ ಗೇಮರ್ಜ್, ಗೇಮರ್‌ಫ್ಲೀಟ್, ಪಯಲ್ ಗೇಮಿಂಗ್, ಮಿಥ್‌ಪ್ಯಾಟ್, ಅಂಕಿತಾ ಮತ್ತು ಜೊನಾಥನ್‌ನಂತಹ ಪ್ರಮುಖ ಭಾರತೀಯ ಗೇಮಿಂಗ್ ಕಂಟೆಂಟ್ ಕ್ರಿಯೇಟರ್ ಗಳು ಕೂಡ ಭಾಗವಹಿಸಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಡ್‌ವಿನ್ ಗೇಮಿಂಗ್‌ನ ಸಹ-ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಕ್ಷತ್ ರಾಠಿ ಅವರು, “ಬೆಂಗಳೂರಿಗೆ ಹಾಗೂ ಪಾಪ್ ಕಲ್ಚರ್ ಗೆ ಅವಿನಾಭಾವ ಸಂಬಂಧ ವಿದೆ. ಇಲ್ಲಿ ಟೆಕ್ಕಿಗಳು ಕೆಲಸದ ನಂತರ ಅನಿಮೆ ಬಗ್ಗೆ ಚರ್ಚಿಸುತ್ತಾರೆ, ಸ್ಟಾರ್ಟಪ್ ಸ್ಥಾಪಕರು ಕಾಮಿಕ್ಸ್ ಆಸಕ್ತಿ ಹೊಂದಿದ್ದಾರೆ, ಕುಟುಂಬಗಳು ಒಟ್ಟಾಗಿ ಅಭಿಮಾನ ತೋರುತ್ತಾರೆ. ಇಲ್ಲಿನ ಕಾಮಿಕ್ ಕಾನ್ ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಒಗ್ಗಟ್ಟಿನ ಸಂಭ್ರಮಾಚರಣೆ ಯಾಗಿದೆ.
ಬಾಗಿಲು ತೆರೆದ ಕ್ಷಣದಿಂದಲೇ ಜನರು ಕಲಾವಿದರ ಸಂವಾದ, ಗೇಮಿಂಗ್ ಝೋನ್‌ಗಳು ಮತ್ತು ಪ್ಯಾನಲ್‌ಗಳಲ್ಲಿ ಗಂಟೆಗಳ ಕಾಲ ಕಳೆಯುತ್ತಿರುವುದು ವಿಶೇಷವಾಗಿದೆ. ಉತ್ಸಾಹ, ಕುತೂಹಲ ಮತ್ತು ಹೊಸ ಸ್ವರೂಪಗಳು ಹಾಗೂ ಕ್ರಿಯೇಟರ್ ಗಳ ಆರಾಧಿಸುವ ಮನೋಭಾವನೆಯೇ ಈ ನಗರವನ್ನು ಕಾಮಿಕ್ ಕಾನ್ ಇಂಡಿಯಾಗೆ ಉತ್ತಮ ಆಯ್ಕೆಯಾಗಿಸಿದೆ” ಎಂದು ಹೇಳಿದರು.
ಕಾಮಿಕ್ ಕಾನ್ ಇಂಡಿಯಾದ ಸಿಇಓ ಶೆಫಾಲಿ ಜಾನ್ಸನ್ ಅವರು ಮಾತನಾಡಿ, “ಬೆಂಗಳೂರಿನ ಕಾಮಿಕ್ ಕಾನ್ ವಿಶೇಷತೆ ಎಂದರೆ ಇಲ್ಲಿನ ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆ. ಇಲ್ಲಿನ ಜನರು ಕೇವಲ ನೋಡಲು ಬರುವುದಿಲ್ಲ, ಕಲಿಯಲು, ಸಂಪರ್ಕ ಹೊಂದಲು ಮತ್ತು ಕಲಾನುಭೂತಿ ಅನುಭವಿ ಸಲು ಬರುತ್ತಾರೆ. ಈ ವರ್ಷ ಹೊಸ ಪ್ಯಾನಲ್ ಸ್ಟೇಜ್ ಪರಿಚಯಿಸಿದ್ದು, ಅಲ್ಲಿ ಅಭಿಮಾನಿಗಳು ಕಥೆ ಹೇಳುವುದು, ಇಲ್ಲಸ್ಟ್ರೇಷನ್, ಕಂಟೆಂಟ್ ಸೃಷ್ಟಿ ಮತ್ತು ಬೆಂಗಳೂರು ಕಾಮಿಕ್ ಕಾನ್‌ನ ಕುರಿತು ಸಂವಾದದಲ್ಲಿ ನಿರತರಾದರು. ವರ್ಷದಿಂದ ವರ್ಷಕ್ಕೆ ನಮ್ಮೊಂದಿಗೆ ಬೆಳೆಯುತ್ತಿರುವ ಕಾಸ್‌ಪ್ಲೇ ಸಮೂಹದ ಜೊತೆ ಸೇರಿ ವಿಶೇಷ ವಾತಾವರಣ ರೂಪುಗೊಂಡಿದ್ದು ನಮ್ಮೆಲ್ಲರಿಗೂ ಸಂತೋಷ ತಂದಿದೆ” ಎಂದರು.
ಬೆಂಗಳೂರು ಕಾಮಿಕ್ ಕಾನ್ ನಲ್ಲಿ ಮಾರುತಿ ಸುಜುಕಿ ಅರೆನಾ, ಕ್ರಂಚಿರೋಲ್, ಆಡಿಬಲ್ ಮುಂತಾ ದವುಗಳಿಂದ ಹಲವಾರು ಸಂವಾದಾತ್ಮಕ ಎಕ್ಸ್ ಪೀರಿಯನ್ಸ್ ಝೋನ್‌ಗಳು ರೂಪುಗೊಂಡಿ ದ್ದವು. ಅಮೆಜಾನ್ ಪ್ರೈಮ್ ವೀಡಿಯೋದ ಫಾಲ್‌ಔಟ್ ಎಕ್ಸ್ ಪೀರಿಯೆನ್ಸ್ ಝೋನ್ ಸೀಸನ್ 2 ವಾಲ್ಟ್ ಡ್ವೆಲ್ಲರ್‌ಗಳು ಮತ್ತು ಇತರ ಐಕಾನಿಕ್ ಪಾತ್ರಗಳ ವೇಷಧಾರಿಗಳೊಂದಿಗೆ ಅಭಿಮಾನಿಗಳನ್ನು ಪೋಸ್ಟ್-ಅಪೋಕ್ಯಾಲಿಪ್ಟಿಕ್ ಜಗತ್ತಿನೊಳಗೆ ನೇರವಾಗಿ ಕರೆದೊಯ್ಯಿತು.. ನಾಡ್‌ವಿನ್ ಗೇಮಿಂಗ್ ಅರೆನಾ ಆಂಡ್ರಾಯ್ಡ್ ಲ್ಯಾಂಡ್‌ನಲ್ಲಿ ಬಿಜಿಎಂಐ ಪ್ಯಾನ್ ಫೆಸ್ಟ್, ಐಕ್ಯೂಓ ಎಕ್ಸ್ ಪೀರಿಯನ್ಸ್ ಝೋನ್, ಪ್ಲೇಸ್ಟೇಷನ್ ಗೇಮಿಂಗ್ ಝೋನ್, ಸ್ಯಾಮ್‌ಸಂಗ್ ಗೇಮಿಂಗ್ ಸ್ಟೇಷನ್, ಟೈಮ್ ಝೋನ್ ಗೇಮಿಂಗ್ ಸ್ಟೇಷನ್ ಮುಂತಾದವುಗಳಿದ್ದುವು.
ವಿವಿಧ ವಯೋಮಾನದ ಮಂದಿ ಭಾಗವಹಿಸಿದ್ದು, ತಮ್ಮ ಇಷ್ಟದ ಕ್ಯಾರಿಕೇಚರ್ ಡ್ರಾಯಿಂಗ್, ಕಾಸ್‌ಪ್ಲೇಯರ್‌ಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದು, ಮಾತುಕತೆ ನಡೆಸುವುದು ಮುಂತಾದ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಕುಟುಂಬಗಳು ಮತ್ತು ಸ್ನೇಹಿತರು ಸಂಗೀತ ಪ್ರದರ್ಶನಗಳಿಗೆ ತಾಳ ಹಾಕುತ್ತಾ ಸಂಭ್ರಮಿಸಿದರು.
ಹಲವಾರು ಲೈವ್ ಪ್ರದರ್ಶನಗಳು ನಡೆದವು. ಕರ್ಮ, ಫ್ಲೂಟ್‌ಬಾಕ್ಸರ್ಸ್, ಬೀಟ್‌ಬಾಕ್ಸ್ ಲೂಪ್ ಸ್ಟೇಷನ್ ಕಲಾವಿದ ಕೆವಿನ್ ನೋಯೆಲ್ ಸೀಕ್ವೇರಾ, ಸಂಗೀತ ಕಲಾವಿದ ಸ್ಮೋಕಿ ದಿ ಘೋಸ್ಟ್ ಮತ್ತು ಇತರ ಪ್ರತಿಭಾವಂತರು ಆಕರ್ಷಕ ಲೈವ್ ಪ್ರದರ್ಶಗಳನ್ನು ನೀಡಿದರು. ಜೊತೆಗೆ, ಪ್ರಸಿದ್ಧ ಭಾರತೀಯ ಕಾಮಿಡಿಯನ್ ಗಳಾದ ಕುಮಾರ್ ವರುಣ್ ಮತ್ತು ಸಾಹಿಲ್ ಷಾ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಪ್ರದರ್ಶನಗಳು ಪ್ರೇಕ್ಷಕರನ್ನು ನಗಿಸಿದವು.
ನಗರದ ಮತ್ತು ಹೊರಗಿನ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳು ಕಾಮಿಕ್ಸ್, ಅನಿಮೆ, ಗೇಮಿಂಗ್ ಅನ್ನು ಸಂಭ್ರಮಾಚರಿಸಿದರು. ಬೆಂಗಳೂರು ಕಾಮಿಕ್ ಕಾನ್ ಮತ್ತೊಮ್ಮೆ ಅಭಿಮಾನಿ ಗಳು ತಮ್ಮನ್ನು ಸ್ವತಂತ್ರವಾಗಿ ಅಭಿವ್ಯಕ್ತಿಗೊಳಿಸಬಹುದಾದ, ತಮ್ಮ ಅಭಿಮಾನ ತೋರಿಸಬಹು ದಾದ ಮತ್ತು ಸಮಾನ ಮನಸ್ಕರೊಂದಿಗೆ ಸಂಪರ್ಕ ಹೊಂದಬಹುದಾದ ಸ್ಥಳವೆಂದು ಸಾಬೀತಾ ಯಿತು.