ಪೊಲೀಸ್ ಮತ್ತು ನ್ಯಾಯಾಂಗ ಎರಡರಲ್ಲೂ ಕೋಟಾ: ಏಕೈಕ ರಾಜ್ಯ ಕರ್ನಾಟಕ
ನ್ಯಾಯವನ್ನು ಪಡೆದುಕೊಳ್ಳುವ ದಂಡ ಪ್ರಕ್ರಿಯೆಯು ವ್ಯಕ್ತಿಯು ವ್ಯವಸ್ಥೆಯೊಡನೆ ಮೊಟ್ಟಮೊದಲ ಬಾರಿಗೆ ಭೇಟಿಯಾಗುವುದರಿಂದ ಆರಂಭವಾಗುತ್ತದೆ. ಮುನ್ನೆಲೆ ನ್ಯಾಯ ಒದಗಿಸುವವರನ್ನು, ಅಂದರೆ, ಪೊಲೀಸ್ ಠಾಣೆಗಳು, ಕಾನೂನು ನೆರವು ಒದಗಿಸುವವರು, ಮತ್ತು ಜಿಲ್ಲಾ ನ್ಯಾಯಾಲಯಗಳನ್ನು ಸಜ್ಜುಗೊಳಿಸಿ ಅವರನ್ನು ಸರಿಯಾಗಿ ತರಬೇತುಗೊಳಿಸುವ ನಮ್ಮ ವೈಫಲ್ಯದೊಂದಿಗೆ ನಾವು ಸಾರ್ವ ಜನಿಕ ವಿಶ್ವಾಸವನ್ನು ಮುರಿಯುತ್ತಿದ್ದೇವೆ


ಇಂಡಿಯಾ ಜಸ್ಟಿಸ್ ರಿಪೋರ್ಟ್ 2025ನಲ್ಲಿ 18 ರಾಜ್ಯಗಳ ಪೈಕಿ ಮೊದಲನೇ ಸ್ಥಾನ ಉಳಿಸಿಕೊಂಡಿದೆ
ಬೆಂಗಳೂರು: ಇಂದು ಬಿಡುಗಡೆಯಾದ, ದೇಶದ ನ್ಯಾಯ ಒದಗಣೆಯ ಮೇಲೆ ರಾಜ್ಯ ಏಕೈಕ ಶ್ರೇಯಾಂಕ ವ್ಯವಸ್ಥೆಯಾದ 2025 ಇಂಡಿಯಾ ಜಸ್ಟಿಸ್ ರಿಪೋರ್ಟ್ (IJR), 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ(ತಲಾ ಒಂದು ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ) ಕರ್ನಾಟಕಕ್ಕೆ 1ನೆ ಶ್ರೇಯಾಂಕ ನೀಡಿದ್ದು, ಕರ್ನಾಟಕವು ಹಿಂದಿನ ಆವೃತ್ತಿಯಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕಾನೂನು ನೆರವಿನಲ್ಲೂ ರಾಜ್ಯಕ್ಕೆ 1ನೆ ಶ್ರೇಯಾಂಕ ದೊರಕಿದ್ದು (2022ರಲ್ಲಿದ್ದ 2ನೆ ಸ್ಥಾನದಿಂದ ಬಡ್ತಿ) ಸೆರೆಮನೆಗಳಲ್ಲೂ ತನ್ನ 2ನೆ ಸ್ಥಾನವನ್ನು ಉಳಿಸಿಕೊಂಡಿದೆ. ಒಟ್ಟಾರೆ ಶ್ರೇಯಾಂಕಗಳಲ್ಲಿ, ಇದರ ನಂತರ ಆಂಧ್ರಪ್ರದೇಶ ಬಂದಿದ್ದು, 2022ದಲ್ಲಿದ್ದ ಐದನೇ ಸ್ಥಾನದಿಂದ ಎರಡಕ್ಕೆ ಬಂದಿದ್ದರೆ, ತೆಲಂಗಾಣ (2022 ಶ್ರೇಯಾಂಕ: 3), ಮತ್ತು ಕೇರಳ (2022 ಶ್ರೇಯಾಂಕ: 6). ಸಿಕ್ಕಿಂ (2022: 1), ಏಳು ಸಣ್ಣ ರಾಜ್ಯಗಳ (ತಲಾ ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳು) ಪೈಕಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಹಿಮಾಚಲ ಪ್ರದೇಶ (2022: 6) ಮತ್ತು ಅರುಣಾಚಲಪ್ರದೇಶ (2022: 2)ನೆ ಸ್ಥಾನಗಳಲ್ಲಿ ಬರುತ್ತವೆ.
ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!
ಇಂಡಿಯಾ ಜಸ್ಟಿಸ್ ರಿಪೊರ್ಟ್(IJR)ಅನ್ನು ಟಾಟಾ ಟ್ರಸ್ಟ್ಸ್ ಪ್ರಾರಂಭಿಸಿತ್ತು ಮತ್ತು ಪ್ರಪ್ರಥಮ ಶ್ರೇಯಾಂಕವನ್ನು 2019ನಲ್ಲಿ ಪ್ರಕಾಶಿಸಲಾಗಿತ್ತ. ಇದು ವರದಿಯ ನಾಲ್ಕನೇ ಆವೃತ್ತಿಯಾಗಿದ್ದು, ಸಾಮಾಜಿಕ ನ್ಯಾಯ ಕೇಂದ್ರ, ಕಾಮನ್ ಕಾಸ್, ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶ್ಇ ಯೇಟಿವ್, DAKSH, TISS–ಪ್ರಯಾಸ್, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು IJR’ನ ಡೇಟಾ ಭಾಗೀದಾರನಾದ ಹೌ ಇಂಡಿಯಾ ಲಿವ್ಸ್(How India Lives)ನ ಸಹಯೋಗದ ಭಾಗೀದಾರತ್ವದಿಂದ ಇದು ಹೊರಹೊಮ್ಮಿದೆ.
ಕಠಿಣವಾದ 24-ತಿಂಗಳುಗಳ ಪ್ರಮಾಣೀಯ ಸಂಶೋಧನೆಯ ಮೂಲಕ IJR 2025, ಹಿಂದಿನ ಮೂರು ಆವೃತ್ತಿಗಳಂತೆಯೇ, ರಾಜ್ಯಗಳ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಿ, ಕಡ್ಡಾಯ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಅವುಗಳ ನ್ಯಾಯಾಂಗ ಒದಗಣೆ ರಚನೆಗಳ ಸಾಮರ್ಥ್ಯ ವನ್ನು ವಿಶ್ಲೇಷಿಸಿತು. ಅಧಿಕೃತ ಸರ್ಕಾರಿ ಮೂಲಗಳಿಂದ ಪಡೆದುಕೊಂಡ ಇತ್ತೀಚಿನ ಅಧಿಕೃತ ಅಂಕಿಅಂಶಗಳ ಆಧಾರದ ಮೇಲೆ ಅದು ನ್ಯಾಯಾಂಗ ಒದಗಣೆಯ ನಾಲ್ಕು ಸ್ತಂಭಗಳಾದ ಪೊಲೀಸ್, ನ್ಯಾಯಾಂಗ, ಸೆರೆಮನೆ ಹಾಗೂ ಕಾನೂನು ನೆರವಿನ ಕುರಿತಾದ ಪ್ರತ್ಯೇಕ ಗೊಳಿಸಿರಬಹುದಾದ, ಪ್ರವೇಶಾವಕಾಶವಿಲ್ಲದಿರಬಹುದಾದ ಡೇಟಾವನ್ನು ಒಟ್ಟಿಗೆ ತರುತ್ತದೆ. ಪ್ರತಿಯೊಂದು ಸ್ತಂಭವನ್ನೂ, ರಾಜ್ಯದ ಸ್ವಂತ ಘೋಷಿತ ಮಾನದಂಡಗಳು ಹಾಗೂ ಸ್ಥಿಗತಿಗಳ ವಿರುದ್ಧ, ಬಜೆಟ್‌ಗಳು, ಮಾನವ ಸಂಪನ್ಮೂಲಗಳು, ಕೆಲಸದಹೊರೆ, ವೈವಿಧ್ಯತೆ, ಮೂಲಸೌಕರ್ಯ ಮತ್ತು ಪ್ರವೃತ್ತಿಗಳ (ಐದು-ವರ್ಷ ಅವಧಿಯಲ್ಲಿ ಸುಧಾರಿಸುವ ಉದ್ದೇಶ) ಹೋಲಿಸುವ ತ್ರಿಭುಜದ ಮೂಲಕ ವಿಶ್ಲೇಷಿಸಲಾಗಿತ್ತು. ಈ ಆವೃತ್ತಿಯು, 25 ರಾಜ್ಯ ಮಾನವ ಹಕ್ಕುಗಳ ಆಯೋಗಗಳ (ಹೆಚ್ಚಿನ ವಿವರಗಳಿಗೆ SHRC brief ನೋಡಿ) ಸಾಮರ್ಥ್ಯವನ್ನು ಕೂಡ ಪ್ರತ್ಯೇಕವಾಗಿ ವಿಶ್ಲೇಷಿಸುತ್ತದೆ ಮತ್ತು ವೈಕಲ್ಯವಿರುವ ಜನರಿಗಾಗಿ ನ್ಯಾಯಕ್ಕೆ ಮಧ್ಯಸ್ಥಿಕೆ ಮತ್ತು ಪ್ರವೇಶಾವಕಾಶದ ಕುರಿತಾದ ಪ್ರಬಂಧಗಳನ್ನೂ ಒಳಗೊಂಡಿದೆ.
ಇಂಡಿಯಾ ಜಸ್ಟಿಸ್ ರಿಪೋರ್ಟ್ ಕುರಿತು ಚರ್ಚೆ ಮಾಡುತ್ತಾ, ನ್ಯಾಯಮೂರ್ತಿ (ನಿವೃತ್ತ) ಮದನ್ ಬಿ. ಲೋಕೂರ್ ಅವರು, “ನ್ಯಾಯವನ್ನು ಪಡೆದುಕೊಳ್ಳುವ ದಂಡ ಪ್ರಕ್ರಿಯೆಯು ವ್ಯಕ್ತಿಯು ವ್ಯವಸ್ಥೆಯೊಡನೆ ಮೊಟ್ಟಮೊದಲ ಬಾರಿಗೆ ಭೇಟಿಯಾಗುವುದರಿಂದ ಆರಂಭವಾಗುತ್ತದೆ. ಮುನ್ನೆಲೆ ನ್ಯಾಯ ಒದಗಿಸುವವರನ್ನು, ಅಂದರೆ, ಪೊಲೀಸ್ ಠಾಣೆಗಳು, ಕಾನೂನು ನೆರವು ಒದಗಿಸುವವರು, ಮತ್ತು ಜಿಲ್ಲಾ ನ್ಯಾಯಾಲಯಗಳನ್ನು ಸಜ್ಜುಗೊಳಿಸಿ ಅವರನ್ನು ಸರಿಯಾಗಿ ತರಬೇತುಗೊಳಿಸುವ ನಮ್ಮ ವೈಫಲ್ಯದೊಂದಿಗೆ ನಾವು ಸಾರ್ವಜನಿಕ ವಿಶ್ವಾಸವನ್ನು ಮುರಿಯುತ್ತಿದ್ದೇವೆ. ಸಮಾನ ನ್ಯಾಯಕ್ಕೆ ನಮ್ಮ ಬದ್ಧತೆಯನ್ನು ಅಳವಡಿಸಿಕೊಳ್ಳುವುದು ಈ ಸಂಸ್ಥೆಗಳ ಉದ್ದೇಶವಾಗಿರಬೇಕು. ನಮ್ಮ ಇಡೀ ನ್ಯಾಯಾಂಗ ಕಾರ್ಯಚೌಕಟ್ಟಿನ ಬಲವು ಸಂಪರ್ಕದ ಈ ಅತಿಮುಖ್ಯ ಮೊದಲ ಅಂಶಗಳ ಮೇಲೆ ನಿಂತಿದೆ. ಇಂಡಿಯಾ ಜಸ್ಟಿಸ್ ರಿಪೋರ್ಟ್‌ನ ನಾಲ್ಕನೇ ಆವೃತ್ತಿಯು ಸಂಪನ್ಮೂಲ ಗಳಿಗೆ ಸಮರ್ಪಕ ಗಮನ ಇಲ್ಲದ್ದರಿಂದ ಅತೀ ಕೆಲವು ಸುಧಾರಣೆಗಳು ಮಾತ್ರ ಏರ್ಪಟ್ಟಿರುವುದನ್ನು ತೋರಿಸುತ್ತದೆ. ದುರದೃಷ್ಟಾವಶಾತ್, ಹೊರೆಯು ನ್ಯಾಯವನ್ನು ಕೋರುತ್ತಿರುವ ವ್ಯಕ್ತಿಯ ಮೇಲೇ ಇದೆಯೇ ಹೊರತು, ರಾಜ್ಯವು ಅದನ್ನು ಒದಗಿಸುತ್ತಿಲ್ಲ.” ಎಂದು ಹೇಳಿದರು.
ಇಂಡಿಯಾ ಜಸ್ಟಿಸ್ ರಿಪೋರ್ಟ್‌ನ ಪ್ರಧಾನ ಸಂಪಾದಕಿ ಮಿಸ್ ಮಾಯಾ ದಾರುವಾಲ, “ಭಾರತವು ಪ್ರಜಾಸತ್ತಾತ್ಮಕವಾಗಿರುವ ನೂರು ವರ್ಷಗಳ ಅವಧಿಗೆ ಮುನ್ನಡೆಯುತ್ತಿರುವಂತಹ ಸಂದರ್ಭದಲ್ಲಿ, ಸುಧಾರಿತ ನ್ಯಾಯಾಂಗ ವ್ಯವಸ್ಥೆಯಿಲ್ಲದಿದ್ದರೆ, ಕಾನೂನು ರಾಷ್ಟ್ರದ ನಿಯಮ, ಕಾನೂನು ಮತ್ತು ಸಮಾನ ಹಕ್ಕುಗಳ ನಿಯಮದ ಭರವಸೆಯು ಟೊಳ್ಳಾಗಿಯೇ ಉಳಿಯುತ್ತದೆ. ಸುಧಾರಣೆ ಆಯ್ಕೆ ಯಲ್ಲ. ಅದು ಅತ್ಯವಸರ. ಉತ್ತಮವಾಗಿ ಸಂಪನ್ಮೂಲವಾದ ನ್ಯಾಯಾಂಗ ವ್ಯವಸ್ಥೆಯು ಸಾಂವಿ ಧಾನಿಕ ಅವಶ್ಯಕತೆಯಾಗಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕನಿಗೂ ಲಭ್ಯ ವಿರುವಂತಹ ಪ್ರತಿನಿತ್ಯದ ವಾಸ್ತವತೆಯಾಗಿ ಅನುಭವಿಸುವ ಅವಕಾಶವಿರಬೇಕು.” ಎಂದು ಹೇಳಿದರು.
ಕೆಲವು ಪ್ರೋತ್ಸಾಹದಾಯಕ ಸುಧಾರಣೆಗಳು:
- ರಾಜ್ಯಗಳ ಒಟ್ಟಾರೆ ಶ್ರೇಯಾಂಕದಲ್ಲಿ ಬಿಹಾರ 13ನೆ ಸ್ಥಾನದಿಂದ 3 ಸ್ಥಾನ ಮೇಲಕ್ಕೇರಿದೆ
- ಪೊಲೀಸ್ ನಲ್ಲಿ ಪೊಲೀಸ್ ಶ್ರೇಯಾಂಕದಲ್ಲಿ ಸುಧಾರಿಸಿದೆ 16ನೆ ಸ್ಥಾನದಿಂದ 10ನೆ ಸ್ಥಾನಕ್ಕೆ
- ಕಾನೂನು ನೆರವಿನಲ್ಲಿ ಸುಧಾರಿತ ಶ್ರೇಯಾಂಕ 16ನೆ ಸ್ಥಾನದಿಂದ 12ನೆ ಸ್ಥಾನಕ್ಕೆ
ಸತತ ಲೋಪದೋಷಗಳು:
- ಪೊಲೀಸ್ ಮತ್ತು ನ್ಯಾಯಾಂಗದಲ್ಲಿ ಬಿಹಾರ ಅತಿಕಡಿಮೆ ತಲಾವಾರು ವ್ಯಯ ಕಂಡಿದೆ
- ಜಿಲ್ಲಾ ನ್ಯಾಯಾಲಯಗಳಲ್ಲಿ 71% ಕೇಸ್‌ಗಳು 3 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಬಾಕಿ ಇದ್ದು, ದೇಶದಲ್ಲಿ ಇದು ಅತ್ಯಧಿಕವಾಗಿದೆ
ಕೆಲವು ಪ್ರೋತ್ಸಾಹದಾಯಕ ಸುಧಾರಣೆಗಳು:
- ಕೇವಲ 1.2%ನಲ್ಲಿ, ಎಲ್ಲಾ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ಅತಿಕಡಿಮೆ ಅಧಿಕಾರಿ ಮಟ್ಟದ ಖಾಲಿಸ್ಥಾನ ಹೊಂದಿದೆ
- ಪೊಲೀಸ್ ಮತ್ತು ನ್ಯಾಯಾಂಗ ಎರಡರಲ್ಲೂ ಪ.ಜಾ. ಪ.ವ. ಮತ್ತು ಇ.ಹಿ.ವ.ಗಳಿಗೆ ಮೀಸಲು ಕೋಟಾಗಳನ್ನು ಪೂರೈಸಿದೆ ಏಕೈಕ ರಾಜ್ಯ
- ದೇಶದಲ್ಲಿ ಅತ್ಯಧಿಕ ಸಂಖ್ಯೆಯ ಪ್ಯಾರಾಲೀಗಲ್ ಸ್ವಯಂಸೇವಕರು
ಸತತ ಲೋಪದೋಷಗಳು:
- ರಾಜ್ಯದ 80% ಸೆರೆಮನೆವಾಸಿಗಳು ವಿಚಾರಣಾಧೀನ ಖೈದಿಗಳು, 2015ರಿಂದಲೂ ಅತ್ಯಧಿಕ
- ಗ್ರಾಮಗಳಲ್ಲಿ ಗಣನೀಯವಾಗಿ ಕಡಿಮೆಯಾದ ಕಾನೂನು ಸೇವಾ ಕೇಂದ್ರಗಳು 157ರಿಂದ ಈಗ 32ಕ್ಕೆ.
- ಕರ್ನಾಟಕ ಪೊಲೀಸ್ ಇನ್ನೂಕೂಡ ಪುರುಷಪ್ರಧಾನವಾಗಿಯೇ ಇದ್ದು, ಪೊಲೀಸ್ ನಲ್ಲಿ ಕೇವಲ ಸರಿಸುಮಾರು 9% ಮಹಿಳೆಯರು ಮತ್ತು ಅಧಿಕಾರಿ ಮಟ್ಟದಲ್ಲಿ ಅತ್ಯಲ್ಪ 6% ಮಹಿಳೆಯರು ಇದ್ದಾರೆ